ಪ್ರಧಾನ ಮಂತ್ರಿಯವರ ಕಛೇರಿ
ಕೆವಾಡಿಯಾದಲ್ಲಿರುವ 'ಏಕತಾ ಪ್ರತಿಮೆ'ಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ
Posted On:
31 OCT 2025 12:41PM by PIB Bengaluru
ಕೆವಾಡಿಯಾದಲ್ಲಿರುವ 'ಏಕತಾ ಪ್ರತಿಮೆ'ಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಏಕತಾ ಪ್ರತಿಮೆಯು ಸರ್ದಾರ್ ಪಟೇಲ್ ಅವರಿಗೆ ಹಾಗೂ ಭಾರತದ ಏಕತೆ ಮತ್ತು ಶಕ್ತಿಯ ಬಗ್ಗೆ ಪಟೇಲ್ ಅವರ ದೃಷ್ಟಿಕೋನಕ್ಕೆ ಒಂದು ಸ್ಮರಣೀಯ ಗೌರವವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ. ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿ ನಿಲ್ಲುವುದು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ ಮತ್ತು ಸರ್ದಾರ್ ಪಟೇಲ್ ಅವರ ಕನಸುಗಳನ್ನು ನನಸಾಗಿಸುವ ರಾಷ್ಟ್ರದ ಸಾಮೂಹಿಕ ಸಂಕಲ್ಪವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ತಮ್ಮ ಎಕ್ಸ್ ತಾಣದ ಖಾತೆಯಲ್ಲಿ ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ;
“ಕೆವಾಡಿಯಾದಲ್ಲಿರುವ 'ಏಕತಾ ಪ್ರತಿಮೆ'ಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.
'ಏಕತಾ ಪ್ರತಿಮೆಯು ಸರ್ದಾರ್ ಪಟೇಲ್ ಅವರಿಗೆ ಹಾಗೂ ಭಾರತದ ಏಕತೆ ಮತ್ತು ಶಕ್ತಿಯ ಬಗ್ಗೆ ಪಟೇಲ್ ಅವರ ದೃಷ್ಟಿಕೋನಕ್ಕೆ ಒಂದು ಸ್ಮರಣೀಯ ಗೌರವವಾಗಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿ ನಿಲ್ಲುವುದು ರಾಷ್ಟ್ರೀಯ ಹೆಮ್ಮೆ ಮತ್ತು ಸರ್ದಾರ್ ಪಟೇಲ್ ಅವರ ಕನಸುಗಳನ್ನು ನನಸಾಗಿಸುವ ಸಾಮೂಹಿಕ ಸಂಕಲ್ಪದ ಸಂಕೇತವಾಗಿದೆ.”
“केवड़िया में ‘स्टैच्यू ऑफ यूनिटी’ पर सरदार वल्लभभाई पटेल को श्रद्धांजलि अर्पित की।
स्टैच्यू ऑफ यूनिटी सरदार पटेल को समर्पित एक भव्य स्मारक है, जो भारत की एकता को लेकर उनकी संकल्पना का सशक्त प्रतीक है। विश्व की सबसे ऊंची प्रतिमा के रूप में यह हमारे राष्ट्रीय गौरव और सरदार पटेल के सपनों को साकार करने के सामूहिक संकल्प की प्रेरणाशक्ति भी है।”
*****
(Release ID: 2184625)
Visitor Counter : 3
Read this release in:
English
,
Urdu
,
हिन्दी
,
Marathi
,
Bengali
,
Assamese
,
Gujarati
,
Odia
,
Tamil
,
Telugu
,
Malayalam