ವಾರ್ತಾ ಮತ್ತು ಪ್ರಸಾರ ಸಚಿವಾಲಯ  
                
                
                
                
                
                    
                    
                        ಭಾರತದ ಭವ್ಯ ಸಂಗೀತ ಪಯಣ ಮತ್ತೆ ಬಂದಿದೆ: 2025ರ ನವೆಂಬರ್ 2 ರಿಂದ 29 ರವರೆಗೆ 67ನೇ ಆಕಾಶವಾಣಿ ಸಂಗೀತ ಸಮ್ಮೇಳನ 24 ನಗರಗಳಲ್ಲಿ ಅನುರಣನ
                    
                    
                        
ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಮತ್ತು ಜಾನಪದ ಸಂಗೀತದ ಶ್ರೇಷ್ಠ ಕಲಾವಿದರನ್ನು ಒಂದುಗೂಡಿಸುತ್ತಾ 1954 ರಿಂದ ಭಾರತದ ಸಂಗೀತ ಕ್ಷೇತ್ರದ ಶ್ರೀಮಂತ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ದೇಶಾದ್ಯಂತದ ಆಚರಣೆ
2025ರ ಡಿಸೆಂಬರ್ 26 ರಿಂದ 2026ರ ಜನವರಿ 23 ರವರೆಗೆ ಆಕಾಶವಾಣಿ, ಡಿಡಿ ಭಾರತಿ, ವೇವ್ಸ್ ಒಟಿಟಿ ಮತ್ತು ಇತರ ಡಿಜಿಟಲ್ ವೇದಿಕೆಗಳ ಮೂಲಕ ದೇಶಾದ್ಯಂತ ಪ್ರತಿಧ್ವನಿಸಲಿವೆ ಸಂಗೀತ ಕಛೇರಿಗಳ ನಾದ
                    
                
                
                    Posted On:
                30 OCT 2025 6:56PM by PIB Bengaluru
                
                
                
                
                
                
                ಪ್ರಸಾರ ಭಾರತಿಯು ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ, ತನ್ನ ಪ್ರತಿಷ್ಠಿತ ವಾರ್ಷಿಕ ಸಂಗೀತ ಉತ್ಸವ  “ಆಕಾಶವಾಣಿ ಸಂಗೀತ ಸಮ್ಮೇಳನ 2025” ಅನ್ನು ಘೋಷಿಸಿದೆ. 2025ರ ನವೆಂಬರ್ 2 ರಿಂದ ನವೆಂಬರ್ 29 ರವರೆಗೆ ದೇಶಾದ್ಯಂತ 24 ಕೇಂದ್ರಗಳಲ್ಲಿ ಈ ಸಂಗೀತೋತ್ಸವದ 67ನೇ ಆವೃತ್ತಿ ನಡೆಯಲಿದೆ. 
ಆಕಾಶವಾಣಿ ಸಂಗೀತ ಸಮ್ಮೇಳನವು 1954 ರಲ್ಲಿ ಆರಂಭವಾದಾಗಿನಿಂದ, ಭಾರತದ ಅತ್ಯಂತ ಅಮರ ಮತ್ತು ಗೌರವಯುತ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಒಂದಾಗಿದೆ. ದೇಶಾದ್ಯಂತದ ಪ್ರೇಕ್ಷಕರಿಗೆ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಲಘು ಮತ್ತು ಜಾನಪದ ಸಂಗೀತದ ಅತ್ಯುತ್ತಮ ಪ್ರಸ್ತುತಿಗಳನ್ನು ನೀಡುವ ಉದ್ದೇಶದಿಂದ ಆರಂಭಿಸಲಾದ ಸಮ್ಮೇಳನವು ಭಾರತದ ಶ್ರೀಮಂತ ಸಂಗೀತ ಪರಂಪರೆಯನ್ನು ಸಂರಕ್ಷಿಸುವಲ್ಲಿ, ಉತ್ತೇಜಿಸುವಲ್ಲಿ ಮತ್ತು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಲಾವಿದರು ಮತ್ತು ಕೇಳುಗರು ಪ್ರತಿವರ್ಷ ಕಾತರದಿಂದ ಕಾಯುವ, ಮೆಲುಕು ಹಾಕುವ ಕಾರ್ಯಕ್ರಮ ಇದಾಗಿದೆ. ಸಮ್ಮೇಳನವು ಖ್ಯಾತ ಗಾಯಕರು ಮಾತ್ರವಲ್ಲದೇ ಉದಯೋನ್ಮುಖ ಸಂಗೀತಗಾರರಿಗೂ ರಾಷ್ಟ್ರೀಯ ಮನ್ನಣೆ ಮತ್ತು ಗೌರವವನ್ನು ನೀಡುವ ಅಪೇಕ್ಷಿತ ವೇದಿಕೆಯಾಗಿ ಮುಂದುವರಿದಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಕೆಲ ವರ್ಷಗಳ ಅಡಚಣೆಯ ನಂತರ, ಈ ವರ್ಷ ಈ ಭವ್ಯ ಉತ್ಸವವು ಹೊಸ ಹುರುಪಿನಿಂದ ಮರಳುತ್ತಿದೆ ಎಂದು ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ ಅವರು ಸಮ್ಮೇಳನದ ವಿವರಗಳನ್ನು ನೀಡಿದ್ದಾರೆ.  2025 ರ ಆವೃತ್ತಿಯಲ್ಲಿ ಪ್ರತಿ ಸ್ಥಳದಲ್ಲಿ ಎರಡು ಸಂಗೀತ ಕಛೇರಿಗಳಿರಲಿವೆ. ಒಂದು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ (ಗಾಯನ/ವಾದ್ಯಸಂಗೀತ) ಮೀಸಲಾದರೆ ಇನ್ನೊಂದು ಲಘು/ಜಾನಪದ ಸಂಗೀತಕ್ಕೆ ಮೀಸಲಾಗಿರುತ್ತದೆ. ಪಣಜಿ ಮತ್ತು ಶಿಲ್ಲಾಂಗ್ ಗಳು ಪಾಶ್ಚಾತ್ಯ ಶಾಸ್ತ್ರೀಯ ಪ್ರಸ್ತುತಿಗಳನ್ನು ಪ್ರತ್ಯೇಕವಾಗಿ ಆಯೋಜಿಸುತ್ತಿದ್ದು ಭಾರತದ ಪ್ರಾದೇಶಿಕ ಸಂಗೀತ ವೈವಿಧ್ಯತೆಯನ್ನು ಪ್ರತಿಬಿಂಬಿಸಲಿವೆ. 
ಉದ್ಘಾಟನಾ ದಿನದ ಸಂಗೀತ ಕಛೇರಿಗಳು 2025 ರ ನವೆಂಬರ್ 2 ರಂದು ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಆಹ್ವಾನಿತ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯಲಿವೆ. ನಂತರದ ಸಂಗೀತ ಕಾರ್ಯಕ್ರಮಗಳು ನವೆಂಬರ್ 8 ರಂದು ಉದಯಪುರ, ತಿರುವನಂತಪುರಂ ಮತ್ತು ಕಟಕ್ ಗಳಲ್ಲಿ ನಡೆಯಲಿದ್ದು, ಧಾರವಾಡ, ಹೈದರಾಬಾದ್ ಮತ್ತು ಜಲಂಧರ್ ನಲ್ಲಿ ನವೆಂಬರ್ 29 ರವರೆಗೆ ಮುಂದುವರಿಯಲಿವೆ. 
ಎಲ್ಲಾ ಸಂಗೀತ ಕಛೇರಿಗಳಿಗೆ ಸಾರ್ವಜನಿಕರಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಮುಕ್ತ ಪ್ರವೇಶವಿರಲಿದೆ. ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಆಯಾ ಆಕಾಶವಾಣಿ ಕೇಂದ್ರಗಳಿಂದ ಆಹ್ವಾನ ಪತ್ರಿಕೆಗಳನ್ನು ಪಡೆಯಬಹುದಾಗಿದೆ. 
ಸಮ್ಮೇಳನದ ಮುಖ್ಯಾಂಶಗಳು
• 67ನೇ ವರ್ಷದ ಕಾಲಾತೀತ ಪರಂಪರೆ - 1954 ರಿಂದ ಸಂಗೀತ ಶ್ರೇಷ್ಠತೆಯ ಪರಂಪರೆಯನ್ನು ಎತ್ತಿಹಿಡಿಯಲಾಗುತ್ತಿದೆ
• ಎರಡು ಬಗೆಯ ಸಂಗೀತಗಳ ಸ್ವರೂಪ - ಪ್ರತಿ ಕೇಂದ್ರದಿಂದ ಶಾಸ್ತ್ರೀಯ ಹಾಗೂ ಲಘು/ಜಾನಪದ ಪ್ರದರ್ಶನಗಳು
• ಶ್ರೇಷ್ಠ ಕಲಾವಿದರ ಪಾಲ್ಗೊಳ್ಳುವಿಕೆ
• ಸಂಗೀತ ಕಛೇರಿಗಳಲ್ಲಿ ಗಾಯನ ಪ್ರಸ್ತುತಿಯ ನಂತರ, ಪ್ರದರ್ಶನಗಳನ್ನು ಆಕಾಶವಾಣಿ ಜಾಲಗಳಲ್ಲಿ 2025ರ ಡಿಸೆಂಬರ್ 26 ರಿಂದ 2026ರ  ಜನವರಿ 23 ರವರೆಗೆ ಪ್ರತಿದಿನ ರಾತ್ರಿ 10:00 ರಿಂದ 11:00 ರವರೆಗೆ ಪ್ರಸಾರ ಮಾಡಲಾಗುವುದು.
ಈ ಕಾರ್ಯಕ್ರಮ ಈ ಕೆಳಗಿನವುಗಳಲ್ಲಿಯೂ ಲಭ್ಯವಿರಲಿವೆ:
• ರಾಗಂ ವಾಹಿನಿ (DTH)
• ಡಿಡಿ ಭಾರತಿ
• ರಾಗಂ ಯೂಟ್ಯೂಬ್ ಚಾನೆಲ್
• ವೇವ್ಸ್ ಒಟಿಟಿ ಪ್ಲಾಟ್ಫಾರ್ಮ್
• ನ್ಯೂಸ್ ಆನ್ ಏರ್ ಅಪ್ಲಿಕೇಶನ್
·         
ಆಕಾಶವಾಣಿ ಸಂಗೀತ ಸಮ್ಮೇಳನ - 2025
ಪ್ರಮುಖ ಕಲಾವಿದರು – ದಿನಾಂಕವಾರು ವೇಳಾಪಟ್ಟಿ 
2025ರ ನವೆಂಬರ್ 2
•  ದೆಹಲಿ: ಪಂಡಿತ್. ರಾಕೇಶ್ ಚೌರಾಸಿಯಾ (ಕೊಳಲು), ಶ್ರೀ ನಂದೇಶ್ ಉಮಾಪ್ (ಜಾನಪದ) 
•  ಮುಂಬೈ: ಪಂ. ವೆಂಕಟೇಶ್ ಕುಮಾರ್ (ಗಾಯನ), ಶ್ರೀ ಹಮೀದ್ ಅಮಿನ್ ಭಾಯಿ ಸಯ್ಯದ್ ಮತ್ತು ತಂಡ (ಭಾರುದ್)
•  ಚೆನ್ನೈ: ಪುಷ್ಪವನಂ ಶ್ರೀ ಕುಪ್ಪುಸ್ವಾಮಿ (ಜಾನಪದ), ಉದಯಲೂರು ಶ್ರೀ ಕೆ. ಕಲ್ಯಾಣರಾಮನ್ (ಭಕ್ತಿ)
2025ರ ನವೆಂಬರ್ 8
• ಉದಯಪುರ: ಮೊಹಮ್ಮದ್ ಅಮಾನ್ ಖಾನ್ (ಗಾಯನ), ಡಾ. ವಿಜಯೇಂದ್ರ ಗೌತಮ್ (ಲಘು ಸಂಗೀತ)
• ತಿರುವನಂತಪುರಂ: ಕುಡಮಲೂರು ಮುರಳೀಧರ ಮಾರರ್ (ಪಂಚವಾದ್ಯಂ), ವಿದುಷಿ ಡಾ. ಎನ್. ಜೆ. ನಂದಿನಿ (ಕರ್ನಾಟಕ ಶಾಸ್ತ್ರೀಯ ಸಂಗೀತ), ಅಜಿತ್ ಜಿ. ಕೃಷ್ಣನ್ ಮತ್ತು ಎಸ್. ಆರ್. ಶ್ರೀಕುಟ್ಟಿ (ಲಘು ಸಂಗೀತ)
• ಕಟಕ್: ಪ್ರದೀಪ್ತ ಶೇಖರ್ ಮೊಹಾಪಾತ್ರ (ಕೊಳಲು), ಡಾ. ನಾಜಿಯಾ ಸಯೀದ್ ಮತ್ತು ಸಂತೋಷಿ ಪ್ರಸಾದ್ ಮಿಶ್ರಾ (ಲಘು ಸಂಗೀತ)
2025ರ ನವೆಂಬರ್ 9
• ಪುಣೆ: ವಿದುಷಿ ಜ್ಯೋತಿ ಹೆಗ್ಡೆ (ರುದ್ರವೀಣೆ), ವಿಜಯಕುಮಾರ್ ಗಾಯಕವಾಡ್ ಮತ್ತು ತಂಡ (ಜಾನಪದ)
• ಪಣಜಿ: ದೇಬ್ ಶಂಕರ್ ರಾಯ್ ಮತ್ತು ಜ್ಯೋತಿ ಶಂಕರ್ ರಾಯ್ (ಪಾಶ್ಚಿಮಾತ್ಯ ಶಾಸ್ತ್ರೀಯ), ಪ್ರಾಚಿಜಾತರ್, ಶ್ರೀಮತಿ. ಶಕುಂತಲಾ ಭಾರ್ಣೆ (ಲಘು ಸಂಗೀತ)
2025ರ ನವೆಂಬರ್ 15 ಮತ್ತು 16
• ಕೋಲ್ಕತ್ತಾ: ಪಂ. ಅಶಿಮ್ ಚೌಧರಿ (ಸಿತಾರ್), ಸಬೀನಾ ಮುಮ್ತಾಜ್ ಇಸ್ಲಾಂ (ಖಯಾಲ್ / ಖ್ಯಾಲ್), ಅಗ್ನಿಭ ಬಂಧೋಪಾಧ್ಯಾಯ, ಶ್ರೀರಾಧಾ ಬಂಧೋಪಾಧ್ಯಾಯ (ಲಘು ಸಂಗೀತ), ಸೋಮ ದಾಸ್ ಮೋಂಡಲ್, ಕಾರ್ತಿಕ್ ದಾಸ್ (ಜಾನಪದ)
2025ರ ನವೆಂಬರ್ 15 ಮತ್ತು 16
• ತಿರುಚಿರಾಪಳ್ಳಿ: ಶ್ರೀಮತಿ. ವಿಶಾಖ ಹರಿ (ಕರ್ನಾಟಕ ಶಾಸ್ತ್ರೀಯ), ಶ್ರೀ ಎನ್. ಶಿವಾಜಿ ರಾವ್ ಮತ್ತು ತಂಡ (ಕರಗಟ್ಟಂ)
• ಭೋಪಾಲ್: ಪಂ. ಸಂತೋಷ್ ನಹರ್ (ಪಿಟೀಲು), ಡಾ. ದೀಪಾಲಿ ವಾಟಲ್ (ಗಜ಼ಲ್)
• ವಾರಾಣಸಿ: ಶ್ರೀ ಶುಭಂಕರ್ ದೇಯ್ (ಖಯಾಲ್), ಶ್ರೀ ಮನ್ನಾ ಲಾಲ್ ಯಾದವ್ ಮತ್ತು ತಂಡ (ಜಾನಪದ)
• ಲಕ್ನೋ: ಪಂಡಿತ್ ಧರ್ಮನಾಥ್ ಮಿಶ್ರಾ (ತುಮ್ರಿ/ದಾದ್ರಾ), ಡಾ. ಮೆಂಕಾ ಮಿಶ್ರಾ (ಲಘು ಸಂಗೀತ)
• ವಿಜಯವಾಡ: ವಿದುಷಿ ಕೊಲ್ಲೂರು ವಂದನಾ (ಕರ್ನಾಟಕ ಶಾಸ್ತ್ರೀಯ ಸಂಗೀತ), ಮೋದುಮುಡಿ ಸುಧಾಕರ್ (ಲಘು ಸಂಗೀತ)
2025ರ ನವೆಂಬರ್ 21
• ಜೈಪುರ: ಪಂಡಿತ್ ವಿಶ್ವಮೋಹನ್ ಭಟ್ (ಗಿಟಾರ್), ಪಂಡಿತ್ ಸೀತಾ ರಾಮ್ ಸಿಂಗ್ (ಲಘು ಸಂಗೀತ)
2025ರ ನವೆಂಬರ್ 22
• ಬೆಂಗಳೂರು: ಬೆಂಗಳೂರು ಸಹೋದರರು (ಕರ್ನಾಟಕ ಶಾಸ್ತ್ರೀಯ ಯುಗಳ ಗೀತೆ), ಲಕ್ಷ್ಮೀ ನಾಗರಾಜ್ (ಲಘು ಸಂಗೀತ)
• ಗುವಾಹಟಿ: ಶ್ರೀ ಮನೋಜ್ ಬರುಆ (ಪಿಟೀಲು), ಶ್ರೀಮತಿ. ಜಾಬಾ ಚಕ್ರಬರ್ತಿ ದಾಸ್ (ಜಾನಪದ)
2025ರ ನವೆಂಬರ್ 23
• ಮೈಸೂರು: ಡಾ.ಸಹನಾ ಎಸ್.ವಿ (ವೀಣೆ), ಶ್ರೀ ಎಚ್.ಎಲ್.ಶಿವಶಂಕರಸ್ವಾಮಿ (ಮೃದಂಗ ತರಂಗ)
• ಅಹಮದಾಬಾದ್: ಪಂ. ಮಹೇಂದ್ರ ತೋಕೆ (ಗಾಯನ), ಪಂ. ನಕುಲ್ ಮಿಶ್ರಾ (ತಬಲಾ), ರಫೀಕ್ ಖಾನ್ (ಪಿಟೀಲು), ಕಲ್ಯಾಣಿ ಕೌತಾಲ್ಕರ್, ಹಸ್ಮುಖ್ ಪಟಾಡಿಯಾ (ಲಘು ಸಂಗೀತ)
2025ರ ನವೆಂಬರ್ 27
• ಶಿಲ್ಲಾಂಗ್: ನಾ ರಿಂಪೈ (ಬ್ಯಾಂಡ್), ಕು. ಗ್ವಿನೆತ್ ಮಾವ್ಲಾಂಗ್, ಕಲರ್ಸ್ (ಬ್ಯಾಂಡ್), ಖೋರ್ಶಾ ಕೋರ್ದರ್ ಮಾರ್ಬನಿಯಾಂಗ್, ಸಿಲ್ಬಿ ಪಾಶಾ ಮತ್ತು ತಂಡ, ಲೌವ್ರೆ ವಿ. ಮರಕ್ ಮತ್ತು ತಂಡ (ಜಾನಪದ)
• ಪಾಟ್ನಾ: ಸ್ಮಿತ್ ತಿವಾರಿ (ಸರೋದ್), ಮನೋರಂಜನ್ ಓಝಾ಼ (ಜಾನಪದ)
2025ರ ನವೆಂಬರ್ 29
• ಧಾರವಾಡ: ಪಂ. ಭೀಮಣ್ಣ ಜಾಧವ್ (ಸುಂದರಿ), ವೆಂಕಟೇಶ್ ಅಲ್ಕೋಡ್, ಆರಾಧನಾ ಹೆಗಡೆ (ಲಘು ಸಂಗೀತ), ಮಹಾಂತೇಶ್ ಹೂಗಾರ (ಜಾನಪದ)
• ಹೈದರಾಬಾದ್: ವಿದ್ವಾನ್ ಶ್ರೀ ಡಿ.ವಿ. ಮೋಹನ ಕೃಷ್ಣ (ಕರ್ನಾಟಕ ಶಾಸ್ತ್ರೀಯ ಗಾಯನ), ಶ್ರೀಮತಿ. ಅರುಣ ಸುಬ್ಬರಾವ್, ಶ್ರೀ ಪತ್ರಿ ಕುಮಾರ ಸ್ವಾಮಿ (ಜಾನಪದ)
• ಜಲಂಧರ್: ಭಾಯಿ ಗುರ್ಮೀತ್ ಸಿಂಗ್ ಶಾಂತ್ (ಶಬ್ದಕೀರ್ತನ್), ಕು. ಗ್ಲೋರಿ ಬಾವಾ (ಲೋಕಗೀತೆ)
 
*****
                
                
                
                
                
                (Release ID: 2184517)
                Visitor Counter : 3