ವಾರ್ತಾ ಮತ್ತು ಪ್ರಸಾರ ಸಚಿವಾಲಯ
ನವೋದ್ಯಮ ವೇಗವರ್ಧಕವಾದ ವೇವ್‌ಎಕ್ಸ್ ಮತ್ತು ವಿಶ್ವದ ಅತಿದೊಡ್ಡ ಸ್ಟಾರ್ಟ್ಅಪ್ ಹಬ್ ಟಿ-ಹಬ್, ಭಾರತದಲ್ಲಿ ಮಾಧ್ಯಮ-ತಂತ್ರಜ್ಞಾನ ಉದ್ಯಮಿಗಳ ಭವಿಷ್ಯವನ್ನು ರೂಪಿಸಲು ಒಪ್ಪಂದಕ್ಕೆ ಹಾಕಿವೆ
ಭಾರತದ ಎವಿಜಿಸಿ-ಎಕ್ಸ್ ಆರ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ದೇಶಾದ್ಯಂತ 10 ನಾವೀನ್ಯತೆ ಕೇಂದ್ರಗಳನ್ನು ಸ್ಥಾಪಿಸಲಿರುವ ವೇವ್‌ಎಕ್ಸ್ ಗೆ, ಟಿ-ಹಬ್ ಬೆಂಬಲ ಸಂಸ್ಥೆಯಾಗಿರುತ್ತದೆ
ಈ ಒಪ್ಪಂದವು ಭಾರತದ ಮಾಧ್ಯಮ-ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ನವೋದ್ಯಮಗಳು, ಸೃಷ್ಟಿಕರ್ತರು ಮತ್ತು ಹೂಡಿಕೆದಾರರನ್ನು ಸಂಪರ್ಕಿಸುವ ಹೊಸ ಅಲೆಯ ನಾವೀನ್ಯತೆಗೆ ನಾಂದಿ ಹಾಡಲಿದೆ
ಈ ಸಹಯೋಗವು ಭಾರತದ ಮುಂದಿನ ಪೀಳಿಗೆಯ ಸೃಷ್ಟಿಕರ್ತರು ಮತ್ತು ನಾವೀನ್ಯಕಾರರಿಗೆ ಮಾರ್ಗದರ್ಶನ, ಜಾಗತಿಕ ಮಾರುಕಟ್ಟೆ ಪ್ರವೇಶ ಮತ್ತು ಪರಿಸರ ವ್ಯವಸ್ಥೆಯನ್ನು ಮುನ್ನಡೆಸಲಿದೆ
Posted On:
28 OCT 2025 7:44PM by PIB Bengaluru
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ನವೋದ್ಯಮ ವೇಗವರ್ಧಕ ಉಪಕ್ರಮವಾದ ವೇವ್‌ಎಕ್ಸ್, ಭಾರತದ ಸೃಜನಶೀಲ, ವಿಷಯ ಮತ್ತು ಮಾಧ್ಯಮ-ತಂತ್ರಜ್ಞಾನ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ವಿಶ್ವದ ಅತಿದೊಡ್ಡ ನವೋದ್ಯಮ ಕೇಂದ್ರವಾದ ಟಿ-ಹಬ್ ಜೊತೆಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ವೇವ್‌ಎಕ್ಸ್ ಮತ್ತು ಟಿ-ಹಬ್ ನಡುವಿನ ಒಪ್ಪಂದಕ್ಕೆ ವೇವ್‌ಎಕ್ಸ್ ಮತ್ತು ಟಿ-ಹಬ್ ನ ಸಿಇಒಗಳು ಔಪಚಾರಿಕವಾಗಿ ಸಹಿ ಹಾಕಿ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ತೆಲಂಗಾಣ ಸರ್ಕಾರದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಭಾರತದ ಎವಿಜಿಸಿ-ಎಕ್ಸ್ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ) ವಲಯವು ವೇಗವಾಗಿ ಬೆಳೆಯುತ್ತಿದೆ ಮತ್ತು ಸೃಜನಶೀಲ ಆರ್ಥಿಕತೆಯ ಪ್ರಮುಖ ಚಾಲಕನಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. ನವೋದ್ಯಮಗಳನ್ನು ಬೆಳೆಸಲು ಮತ್ತು ಮಾಧ್ಯಮ, ಮನರಂಜನೆ ಮತ್ತು ತಲ್ಲೀನಗೊಳಿಸುವ ತಂತ್ರಜ್ಞಾನದಲ್ಲಿ ಸೃಷ್ಟಿಕರ್ತರನ್ನು ಸಬಲೀಕರಣಗೊಳಿಸಲು ವೇವ್‌ಎಕ್ಸ್ ಅನ್ನು ರಾಷ್ಟ್ರೀಯ ವೇಗವರ್ಧಕ ವೇದಿಕೆಯಾಗಿ ರೂಪಿಸಲಾಗಿದೆ ಎಂದು ಅವರು ಹೇಳಿದರು.

ತೆಲಂಗಾಣ ಸರ್ಕಾರದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್, ವೇವ್‌ಎಕ್ಸ್ ಮತ್ತು ಟಿ-ಹಬ್ ನಡುವಿನ ಸಹಯೋಗವು ಸೃಜನಶೀಲ ಉದ್ಯಮಶೀಲತೆಗಾಗಿ ರಾಷ್ಟ್ರವ್ಯಾಪಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಇದು ಯುವ ಸೃಷ್ಟಿಕರ್ತರು ವೈಯಕ್ತಿಕ ಭಾಗವಹಿಸುವವರಿಂದ ಸಂಘಟಿತ ವ್ಯವಹಾರ ಘಟಕಗಳಾಗಿ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ ಮತ್ತು ಜಾಗತಿಕವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಈ ಸಹಯೋಗವು ರಚನಾತ್ಮಕ ಇನ್‌ಕ್ಯುಬೇಶನ್, ಮಾರ್ಗದರ್ಶನ ಮತ್ತು ಮೂಲಸೌಕರ್ಯ ಮತ್ತು ನೆಟ್‌ವರ್ಕ್ ಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಭಾರತೀಯ ನವೋದ್ಯಮಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಟಿ-ಹಬ್ ನ ಬೆಂಬಲದೊಂದಿಗೆ, ವೇವ್‌ಎಕ್ಸ್ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಭಾರತದಾದ್ಯಂತ 10 ಇನ್‌ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸುತ್ತದೆ. ಈ ಕೇಂದ್ರಗಳು ಎವಿಜಿಸಿ-ಎಕ್ಸ್ ಆರ್ ಪರಿಸರ ವ್ಯವಸ್ಥೆಯಲ್ಲಿ ನವೋದ್ಯಮಗಳು ಮತ್ತು ಸೃಷ್ಟಿಕರ್ತರಿಗೆ ನಾವೀನ್ಯತೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ.
ವೇವ್‌ಎಕ್ಸ್ ಬಗ್ಗೆ
ವೇವ್‌ಎಕ್ಸ್ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೇವ್ಸ್ ಉಪಕ್ರಮದ ಅಡಿಯಲ್ಲಿ ಪ್ರಾರಂಭಿಸಲಾದ ವಿಶಿಷ್ಟ ಸ್ಟಾರ್ಟ್‌ಅಪ್ ಆಕ್ಸಿಲರೇಟರ್ ಪ್ಲಾಟ್‌ಫಾರ್ಮ್ ಆಗಿದೆ. ಇದು ಮಾಧ್ಯಮ ಮತ್ತು ಮನರಂಜನಾ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮೇ 2025 ರಲ್ಲಿ ಮುಂಬೈನಲ್ಲಿ ನಡೆದ ವೇವ್ಸ್ ಶೃಂಗಸಭೆಯಲ್ಲಿ, ವೇವ್‌ಎಕ್ಸ್ 100 ಕ್ಕೂ ಹೆಚ್ಚು ಉದಯೋನ್ಮುಖ ನವೋದ್ಯಮಗಳಿಗೆ ಪಿಚಿಂಗ್ ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಒದಗಿಸಿತು, ಇದು ಸರ್ಕಾರಿ ಸಂಸ್ಥೆಗಳು, ಹೂಡಿಕೆದಾರರು ಮತ್ತು ಉದ್ಯಮದ ನಾಯಕರೊಂದಿಗೆ ನೇರ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸಿತು. ವೇವ್‌ಎಕ್ಸ್ ಉದ್ದೇಶಿತ ಹ್ಯಾಕಥಾನ್ ಗಳು, ಇನ್‌ಕ್ಯುಬೇಶನ್, ಮಾರ್ಗದರ್ಶನ ಮತ್ತು ರಾಷ್ಟ್ರೀಯ ವೇದಿಕೆಗಳೊಂದಿಗೆ ಏಕೀಕರಣದ ಮೂಲಕ ಹೊಸ ಆಲೋಚನೆಗಳನ್ನು ಬೆಂಬಲಿಸುವುದನ್ನು ಮುಂದುವರೆಸಿದೆ.
ಟಿ-ಹಬ್ ಬಗ್ಗೆ
ಟಿ-ಹಬ್ ವಿಶ್ವದ ಅತಿದೊಡ್ಡ ಸ್ಟಾರ್ಟ್ಅಪ್ ಹಬ್ ಆಗಿದ್ದು, ಕ್ಯುರೇಟೆಡ್ ಕಾರ್ಯಕ್ರಮಗಳು, ಮಾರುಕಟ್ಟೆ ಪ್ರವೇಶ, ಹಣಕಾಸಿನ ಅವಕಾಶಗಳು ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯಗಳ ಮೂಲಕ 2,000 ಕ್ಕೂ ಹೆಚ್ಚು ನವೋದ್ಯಮಗಳನ್ನು ಬೆಂಬಲಿಸುತ್ತಿದೆ. ಟಿ-ಹಬ್ ಇನ್‌ಕ್ಯುಬೇಟರ್ ಗಳ ಪ್ರಮುಖ ಇನ್‌ಕ್ಯುಬೇಟರ್ ಆಗಿಯೂ ಕಾರ್ಯನಿರ್ವಹಿಸುತ್ತದೆ, ಐಡೆಕ್ಸ್ (ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್) ನಂತಹ ಕಾರ್ಯಕ್ರಮಗಳನ್ನು ಬೆಂಬಲಿಸುತ್ತದೆ, ಜೊತೆಗೆ ಎಐಸಿ (ಅಟಲ್ ಇನ್‌ಕ್ಯುಬೇಷನ್ ಸೆಂಟರ್) ಮತ್ತು ಮ್ಯಾಥ್ (ಮೆಷಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಹಬ್) ನಂತಹ ಸಂಸ್ಥೆಗಳನ್ನು ಬೆಂಬಲಿಸುತ್ತದೆ ಮತ್ತು ಪೋಷಿಸುತ್ತದೆ.
*****
(Release ID: 2183580)
Visitor Counter : 7