ಸಹಕಾರ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಮುಂಬೈನ ಮಜ಼ಗಾಂವ್ ಡಾಕ್‌ನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 'ಆಳ ಸಮುದ್ರ ಮೀನುಗಾರಿಕೆ ಹಡಗು'ಗಳ ಉದ್ಘಾಟನೆ
ಸಹಕಾರಿ ಕ್ಷೇತ್ರದ ಸಾಮರ್ಥ್ಯದ ಸಮರ್ಥ ಬಳಕೆ ಮೂಲಕ 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು ನೀಲಿ ಆರ್ಥಿಕತೆಯನ್ನು ಬಲಪಡಿಸಲು ಮೋದಿ ಸರ್ಕಾರ ಬದ್ಧ
ಮೀನುಗಾರಿಕಾ ವಲಯದಲ್ಲಿ ಸಹಕಾರಿ ಆಂದೋಲನವು ಬಡ ಮೀನುಗಾರರಿಗೆ ಸಮೃದ್ಧಿಯ ಸಾಧನ
ಮುಂಬರುವ ದಿನಗಳಲ್ಲಿ ಭಾರತದ ಮೀನುಗಾರಿಕೆ ಸಂಪತ್ತಿನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಾಮರ್ಥ್ಯ ಇಂದು ಒದಗಿಸಲಾದ ಟ್ರಾಲರ್ ದೋಣಿಯಿಂದ ಹೆಚ್ಚಳವಾಗಲಿದೆ ಮತ್ತು ಇದರಿಂದ ದೊರೆಯುವ ಲಾಭವು ಸಹಕಾರಿ ಆಧಾರದ ಮೇಲೆ ಪ್ರತಿಯೊಬ್ಬ ಮೀನುಗಾರರ ಮನೆಯನ್ನು ತಲುಪಲಿದೆ
ಮೀನುಗಾರಿಕೆಗಾಗಿ ಮುಂದಿನ ವರ್ಷಗಳಲ್ಲಿ ಸಹಕಾರಿ ಸಂಘಗಳ ಮೂಲಕ ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟಾಗಿ ಮೀನುಗಾರರಿಗೆ ಹೆಚ್ಚಿನ ಟ್ರಾಲರ್‌ಗಳ ಪೂರೈಕೆ
ಕಷ್ಟಪಟ್ಟು ದುಡಿಯುವ ಬಡವರು ಲಾಭದ ಮಾಲೀಕರಾಗಿರಬೇಕು - ಇದು ಸಹಕಾರದ ಯಶಸ್ವಿ ಮಾದರಿ
ಬಡವರು ಆರ್ಥಿಕವಾಗಿ ಸಬಲರಾದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ
ಮೋದಿ ಸರ್ಕಾರದಿಂದ ಮೀನುಗಾರರಿಗಾಗಿ ಡೈರಿ, ಸಕ್ಕರೆ ಕಾರ್ಖಾನೆಗಳು ಮತ್ತು ಮಾರುಕಟ್ಟೆ ಸಮಿತಿಗಳಂತೆಯೇ ಕೆಲಸ ಮಾಡುವ ವ್ಯವಸ್ಥೆ ರಚನೆ ಮತ್ತು ಅವರ ಆರ್ಥಿಕ ಸಮೃದ್ಧಿಗೆ ಪೂರಕ
ಸಹಕಾರ ಸಚಿವಾಲಯದಿಂದ ದೇಶಾದ್ಯಂತ ಸಾಗರ ವಲಯದಲ್ಲಿನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮೂಲಕ ಮೀನುಗಾರ ಸಹೋದರ ಸಹೋದರಿಯರಿಗೆ ಸಹಕಾರಿ ಆಧಾರದ ಮೇಲೆ ಲಾಭವನ್ನು ತಲುಪಿಸುವ ಗುರಿ
ಮೋದಿ ಸರ್ಕಾರದಿಂದ ಸಹಕಾರಿ ಸಂಘಗಳ ಮೂಲಕ ಮೀನು ಸಂಸ್ಕರಣೆ ಮತ್ತು ಶೈತ್ಯಾಗಾರ ಕೇಂದ್ರಗಳು ಹಾಗೂ ರಫ್ತು ಮತ್ತು ಸಂಗ್ರಹಣಾ ಹಡಗುಗಳ ಪೂರೈಕೆ
Posted On:
27 OCT 2025 7:00PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮುಂಬೈನ ಮಜ಼ಗಾಂವ್ ಡಾಕ್‌ನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 'ಆಳ ಸಮುದ್ರ ಮೀನುಗಾರಿಕೆ ಹಡಗು'ಗಳನ್ನು ಉದ್ಘಾಟಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾದ ಶ್ರೀ ಏಕನಾಥ್ ಶಿಂಧೆ ಮತ್ತು ಶ್ರೀ ಅಜಿತ್ ಪವಾರ್ ಹಾಗೂ ಕೇಂದ್ರ ಸಹಕಾರ ಖಾತೆ ರಾಜ್ಯ ಸಚಿವರಾದ ಶ್ರೀ ಮುರಳೀಧರ್ ಮೊಹೋಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಸಾಗರ ಮೀನುಗಾರಿಕೆ ವಲಯವನ್ನು ಆಧುನೀಕರಿಸುವ ಮತ್ತು ಕರಾವಳಿ ಪ್ರದೇಶಗಳಲ್ಲಿ ಸಹಕಾರಿ ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಸಹಕಾರಿ ಕ್ಷೇತ್ರದ ಸಾಮರ್ಥ್ಯದ ಸಮರ್ಥ ಬಳಕೆ ಮೂಲಕ 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು ನೀಲಿ ಆರ್ಥಿಕತೆಯನ್ನು ಬಲಪಡಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಇಂದಿನ ಎರಡು ಟ್ರಾಲರ್ ದೋಣಿಗಳ ಉದ್ಘಾಟನೆಯು ಮುಂಬರುವ ದಿನಗಳಲ್ಲಿ ಭಾರತದ ಮೀನುಗಾರಿಕೆ ಸಂಪತ್ತಿನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಸಹಕಾರಿ ಸಂಘಗಳ ಮೂಲಕ ಮೀನುಗಾರಿಕೆ ಉದ್ಯಮದ ಲಾಭವು ನಮ್ಮ ಶ್ರಮಿಕ ಬಡ ಮೀನುಗಾರರ ಮನೆಗಳನ್ನು ತಲುಪುವುದನ್ನು ಖಚಿತಪಡಿಸಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ.
ಪ್ರಸ್ತುತ ಮೀನುಗಾರಿಕೆಗಾಗಿ ಟ್ರಾಲರ್‌ಗಳಲ್ಲಿ ಸಂಬಳದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಈಗ ಸಹಕಾರಿ ಆಧಾರಿತ ಮೀನುಗಾರಿಕೆಯೊಂದಿಗೆ, ಟ್ರಾಲರ್‌ಗಳಿಂದ ಬರುವ ಸಂಪೂರ್ಣ ಲಾಭವು ಈ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಮೀನುಗಾರನ ಮನೆಯನ್ನು ತಲುಪಲಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದ್ದಾರೆ. ಆರಂಭಿಕವಾಗಿ ಇಂತಹ 14 ಟ್ರಾಲರ್‌ಗಳನ್ನು ಒದಗಿಸಲಾಗುವುದು, ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ, ಸಹಕಾರ ಸಚಿವಾಲಯ ಮತ್ತು ಮೀನುಗಾರಿಕೆ ಇಲಾಖೆಯು ಸಹಕಾರಿ ಆಧಾರದ ಮೇಲೆ ಮೀನುಗಾರರಿಗೆ ಇಂತಹ ಹೆಚ್ಚಿನ ಟ್ರಾಲರ್‌ಗಳನ್ನು ಒದಗಿಸಲು ಯೋಜಿಸಿದೆ ಎಂದು ಶ್ರೀ ಶಾ ಅವರು ಹೇಳಿದ್ದಾರೆ. ಈ ಟ್ರಾಲರ್‌ಗಳು 25 ದಿನಗಳವರೆಗೆ ಆಳ ಸಮುದ್ರದಲ್ಲಿ ಇರಬಹುದಾಗಿದ್ದು 20 ಟನ್‌ಗಳಷ್ಟು ಮೀನುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ. ಹೆಚ್ಚುವರಿಯಾಗಿ, ಕಾರ್ಯಾಚರಣೆಗಳ ಸಂಘಟನೆಗೆ ಮತ್ತು ಸಮುದ್ರದಿಂದ ದಡಕ್ಕೆ ಮೀನುಗಳನ್ನು ಸಾಗಿಸಲು ದೊಡ್ಡ ಹಡಗುಗಳು ಇರಲಿವೆ. ವಾಸಿಸಲು ಮತ್ತು ಆಹಾರ ಸೇವನೆಗೆ ಅನುಕೂಲಕರ ಸೌಲಭ್ಯಗಳನ್ನು ಟ್ರಾಲರ್‌ಗಳು ಹೊಂದಿವೆ ಎಂದು ಅವರು ವಿವರಿಸಿದರು.

ಸುಮಾರು 11,000 ಕಿಲೋಮೀಟರ್ ಉದ್ದದ ಕರಾವಳಿಯಲ್ಲಿ ಮೀನುಗಾರಿಕೆಯಿಂದ ಜೀವನೋಪಾಯ ಕಂಡುಕೊಳ್ಳುವ ಬಡ ಸಹೋದರ ಸಹೋದರಿಯರಿಗಾಗಿ ಮುಂಬರುವ ದಿನಗಳಲ್ಲಿ ಒಂದು ಪ್ರಮುಖ ಯೋಜನೆಯನ್ನು ಯೋಜಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದ್ದಾರೆ. ಹಾಲು ಉತ್ಪಾದನೆಯಾಗಿರಲಿ, ಕೃಷಿ ಮಾರುಕಟ್ಟೆಯಾಗಿರಲಿ ಅಥವಾ ಮೀನುಗಾರಿಕೆಯೇ ಆಗಿರಲಿ, ಲಾಭವು ಶ್ರಮಪಡುವ ವ್ಯಕ್ತಿಗೆ ಸೇರಬೇಕು ಎಂಬುದು ಸಹಕಾರಿ ತತ್ವದ ಪರಿಕಲ್ಪನೆಯಾಗಿದೆ. ಗ್ರಾಮೀಣ ಪ್ರದೇಶದ ಬಡ ವ್ಯಕ್ತಿಯು ಆರ್ಥಿಕವಾಗಿ ಸಬಲನಾದಾಗ ಮಾತ್ರ ದೇಶವು ನಿಜವಾಗಿಯೂ ಅಭಿವೃದ್ಧಿ ಹೊಂದಲಿದೆ ಎಂದು ಅವರು ಹೇಳಿದರು. ದೇಶದ ಸಮೃದ್ಧಿಯನ್ನು ಕೇವಲ ಜಿ.ಡಿ.ಪಿಯ ಆಧಾರದ ಮೇಲೆ ವಿಶ್ಲೇಷಿಸುವವರು ಇಷ್ಟು ವಿಶಾಲ ರಾಷ್ಟ್ರದ ಸಾಮಾಜಿಕ ರಚನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಶ್ರೀ ಶಾ ಅಭಿಪ್ರಾಯಪಟ್ಟಿದ್ದಾರೆ. 130 ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ, ಕೇವಲ ಜಿ.ಡಿ.ಪಿ ಬೆಳವಣಿಗೆಯು ಅದನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವುದಿಲ್ಲ; ಮಾನವ ಕೇಂದ್ರಿತ ದೃಷ್ಟಿಕೋನವನ್ನು ಸಹ ಸಂಯೋಜಿಸಬೇಕು. ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಕುಟುಂಬವನ್ನು ಸಮೃದ್ಧಗೊಳಿಸುವ ಗುರಿಯಿಲ್ಲದೆ, ರಾಷ್ಟ್ರವು ನಿಜವಾಗಿಯೂ ಸಮೃದ್ಧಿಯಾಗಲು ಸಾಧ್ಯವಿಲ್ಲ.
ಮೀನುಗಾರಿಕೆ ಕ್ಷೇತ್ರದಲ್ಲಿ ಸಹಕಾರವು ನಮ್ಮ ಎಲ್ಲಾ ಸಹೋದರ ಸಹೋದರಿಯರ ಜೀವನದ ಅಡಿಪಾಯವಾಗಲಿದೆ ಮತ್ತು ನಾವು ಈ ದಿಶೆಯಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. ಭವಿಷ್ಯದಲ್ಲಿ ಸಂಸ್ಕರಣೆ, ರಫ್ತು ಮತ್ತು ದೊಡ್ಡ ಸಂಗ್ರಹಣಾ ಹಡಗುಗಳ ನಿಯೋಜನೆಗೆ ಯೋಜನೆಗಳ ಜಾರಿಗೆ ಸಿದ್ಧತೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಸಂಸ್ಕರಣೆಯನ್ನು ಅವರೇ ಮಾಡುವರು, ಶೀತಲೀಕರಣ ಕೇಂದ್ರಗಳು ಅವರದ್ದೇ ಆಗಿರಲಿವೆ ಮತ್ತು ನಮ್ಮ ಬಹು-ರಾಜ್ಯ ರಫ್ತು ಸಹಕಾರದ ಮೂಲಕ ರಫ್ತುಗಳನ್ನು ಸಹ ಸುಗಮಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೀನುಗಾರಿಕೆಗಾಗಿ ಪ್ರಾರಂಭಿಸಿರುವ ಹಲವಾರು ಕಾರ್ಯಕ್ರಮಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದ್ದಾರೆ. 2014-15ರಲ್ಲಿ ಭಾರತದ ಒಟ್ಟು ಮೀನುಗಾರಿಕೆ ಉತ್ಪಾದನೆ 102 ಲಕ್ಷ ಟನ್‌ಗಳಷ್ಟದ್ದು, ಈಗ ಅದು 195 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ. 67 ಲಕ್ಷ ಟನ್‌ಗಳಷ್ಟಿದ್ದ ದೇಶೀಯ ಉತ್ಪಾದನೆಯು ಈಗ 147 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಕಡಲ ಉತ್ಪಾದನೆಯು 35 ಲಕ್ಷ ಟನ್‌ಗಳಿಂದ 48 ಲಕ್ಷ ಟನ್‌ಗಳಿಗೆ ಬೆಳವಣಿಗೆ ಕಂಡಿದೆ. ಸಿಹಿನೀರಿನ ಮೀನುಗಾರಿಕೆಯು 67 ಲಕ್ಷ ಟನ್‌ಗಳಿಂದ 147 ಲಕ್ಷ ಟನ್‌ಗಳಿಗೆ ಏರಿಕೆಯಾಗಿ ಶೇ. 119 ರಷ್ಟು ಹೆಚ್ಚಳ ಕಂಡಿದೆ. ಅದೇ ರೀತಿ ಜನನ ಕಡಲ ಉತ್ಪಾದನೆಯು 35 ಲಕ್ಷ ಟನ್‌ಗಳಿಂದ 48 ಲಕ್ಷ ಟನ್‌ಗಳಿಗೆ ಹೆಚ್ಚಳವಾಗಿದೆ. ನಮ್ಮ ಸರಿಸುಮಾರು 11,000 ಕಿಲೋಮೀಟರ್ ಉದ್ದದ ಕರಾವಳಿಯು ಕಡಲ ಉತ್ಪಾದನೆಯನ್ನು ಹೆಚ್ಚಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿರುವ ಅವರು, ಸಹಕಾರ ಸಚಿವಾಲಯವು ಈ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮತ್ತು ಸಹಕಾರಿ ಆಧಾರಿತ ವಿಧಾನದ ಮೂಲಕ ನಮ್ಮ ಮೀನುಗಾರ ಸಹೋದರ ಸಹೋದರಿಯರಿಗೆ ಲಾಭ ತಲುಪುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ.

ಪ್ರತಿಯೊಂದು ಕುಟುಂಬವು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದಾಗ, ಸಮತೋಲಿತ ಆಹಾರವನ್ನು ನೀಡಿದಾಗ, ವೃದ್ಧರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ ಮತ್ತು ಸ್ವಾವಲಂಬಿಯಾದಾಗ ಮಾತ್ರ ದೇಶವು ನಿಜವಾಗಿಯೂ ಸಮೃದ್ಧಿಯಾಗುತ್ತದೆ- ಆಗ ಮಾತ್ರ ರಾಷ್ಟ್ರವು ಸಮೃದ್ಧವಾಗಿದೆ ಎಂದು ಪರಿಗಣಿಸಬಹುದು ಎಂದು ಶ್ರೀ ಅಮಿತ್ ಶಾ ಅವರು ಪ್ರತಿಪಾದಿಸಿದ್ದಾರೆ. ಮಾನವ ಕೇಂದ್ರಿತ ವಿಧಾನದಿಂದ ಜಿ.ಡಿ.ಪಿ ಸಾಧಿಸಲು ಸಹಕಾರಿ ಸಂಘಗಳಿಗಿಂತ ದೊಡ್ಡ ಸಾಧನ ಇನ್ನೊಂದಿಲ್ಲ. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ರಾಜ್ಯದ ಹಳ್ಳಿಗಳನ್ನು ಶ್ರೀಮಂತಗೊಳಿಸುವಲ್ಲಿ ಹೆಚ್ಚಿನ ಕೊಡುಗೆ ನೀಡಿವೆ ಎಂದು ಅವರು ಹೇಳಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ ಬರುವ ಸಂಪೂರ್ಣ ಲಾಭವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ. ಅದೇ ರೀತಿ, ಗುಜರಾತ್ ನಲ್ಲಿ, ಇಂದು ಲಕ್ಷಾಂತರ ಮಹಿಳೆಯರು ಅಮುಲ್ ಮೂಲಕ 80,000 ಕೋಟಿ ಮೌಲ್ಯದ ವ್ಯವಹಾರವನ್ನು ನಡೆಸುತ್ತಿದ್ದಾರೆ. ಈ 80,000 ಕೋಟಿಯ ಸಂಪೂರ್ಣ ಲಾಭವು ಪಶುಸಂಗೋಪನೆಯಲ್ಲಿ ತೊಡಗಿರುವ ಅಶಿಕ್ಷಿತ ಮಹಿಳೆಯರ ಮನೆಗಳಿಗೆ ತಲುಪುತ್ತಿದ್ದು ಈಗ ಪದವೀಧರರು ಮತ್ತು ಉನ್ನತ ಶಿಕ್ಷಣ ಪಡೆದ ಮಹಿಳೆಯರು ಸಹ ವೃತ್ತಿಪರವಾಗಿ ಪಶುಸಂಗೋಪನಾ ವ್ಯವಹಾರ ವಲಯಕ್ಕೆ ದಾಪುಗಾಲಿಡುತ್ತಿದ್ದಾರೆ. ಇದು ನಮ್ಮ ಪೂರ್ವಜರ ದೃಷ್ಟಿಕೋನವಾಗಿತ್ತು ಮತ್ತು ಇದು ಭಾರತದ ಮೂಲ ತತ್ವಶಾಸ್ತ್ರವಾಗಿದೆ.
****
(Release ID: 2183153)
Visitor Counter : 6
Read this release in:
Telugu
,
English
,
Urdu
,
Marathi
,
हिन्दी
,
Assamese
,
Punjabi
,
Gujarati
,
Odia
,
Tamil
,
Malayalam