ಪ್ರಧಾನ ಮಂತ್ರಿಯವರ ಕಛೇರಿ
ಮನ್ ಕಿ ಬಾತ್ ನ 127ನೇ ಸಂಚಿಕೆಯ ಪ್ರಮುಖಾಂಶಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
Posted On:
26 OCT 2025 8:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ 127ನೇ ಸಂಚಿಕೆಯ ಪ್ರಮುಖಾಂಶಗಳನ್ನು ಹಂಚಿಕೊಂಡಿದ್ದಾರೆ.
ಶ್ರೀ ಮೋದಿ ಅವರು ಪ್ರತ್ಯೇಕ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ:
"ಛಠ್ ಮಹಾ ಉತ್ಸವವು ಸಂಸ್ಕೃತಿ, ಪ್ರಕೃತಿ ಮತ್ತು ಸಾಮಾಜಿಕ ಏಕತೆಯ ಪ್ರತಿಬಿಂಬವಾಗಿದೆ. ನೀವು ದೇಶ ಅಥವಾ ಪ್ರಪಂಚದ ಎಲ್ಲೇ ಇದ್ದರೂ, ಅವಕಾಶ ದೊರೆತರೆ ಛಠ್ ಹಬ್ಬದಲ್ಲಿ ಭಾಗವಹಿಸಿ, ಅದರ ವಿಶಿಷ್ಟ ಅನುಭೂತಿ ಪಡೆಯುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ."
#MannKiBaat”
"ದೃಢನಿಶ್ಚಯ ಹೊಂದಿದ್ದರೆ, ಯಾವುದೇ ಬದಲಾವಣೆ ಕ್ಲಿಷ್ಟಕರವಲ್ಲ ಎಂಬುದಕ್ಕೆ ಛತ್ತೀಸ್ ಗಢದ ಅಂಬಿಕಾಪುರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯ ವಿಶಿಷ್ಟ ಉಪಕ್ರಮ ಮತ್ತು ಬೆಂಗಳೂರಿನಲ್ಲಿ ಬಾವಿಗಳು ಮತ್ತು ಕೆರೆಗಳನ್ನು ಪುನರುಜ್ಜೀವಗೊಳಿಸುವ ಅಭಿಯಾನಗಳು ಸ್ಫೂರ್ತಿದಾಯಕ ಉದಾಹರಣೆಗಳಾಗಿವೆ.
#MannKiBaat”
'ವಂದೇ ಮಾತರಂ' ಗೀತೆಯಲ್ಲಿ ಅಡಕವಾಗಿರುವ ಅದ್ಭುತ ಭಾವನೆಯು ಭಾರತ ಮಾತೆಯ ಮಕ್ಕಳಾಗಿ ನಮ್ಮ ಜವಾಬ್ದಾರಿಗಳನ್ನು ನೆನಪಿಸುತ್ತದೆ. ನವೆಂಬರ್ 7 ರಂದು 'ವಂದೇ ಮಾತರಂ' ನ 150ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನನ್ನ ಸಹ ನಾಗರಿಕರಲ್ಲಿ ಈ ವಿಶೇಷ ವಿನಂತಿ...
#VandeMatram150
#MannKiBaat”
“ನಮ್ಮ ಸಂಸ್ಕೃತಿ ಮತ್ತು ಸಾಮಾಜಿಕ ಮಾಧ್ಯಮದಿಂದಾಗಿ ಸಂಸ್ಕೃತಕ್ಕೆ ಇಂದು ಹೊಸ ಜೀವ ಕಳೆ ಸಿಗುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಯುವಸಮೂಹದ ರೋಮಾಂಚಕಾರಿ ಪ್ರಯತ್ನಗಳು ಅತ್ಯಂತ ಪ್ರೇರಣಾದಾಯಕ.
#MannKiBaat”
“ಭಾರತೀಯ ಶ್ವಾನ ತಳಿಗಳ ಬಳಕೆ ಉತ್ತೇಜಿಸುವ, ಅವುಗಳ ತರಬೇತಿಯ ಮೇಲೆ ಕೇಂದ್ರೀಕರಿಸುವ ಮತ್ತು ಪ್ರಮುಖ ಕಾರ್ಯಾಚರಣೆಗಳಲ್ಲಿ ಅವುಗಳನ್ನು ತೊಡಗಿಸಿಕೊಳ್ಳುವ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್)ನ ಪ್ರಯತ್ನಗಳನ್ನು ಶ್ಲಾಘಿಸಿದೆ.
@BSF_India
@crpfindia
#MannKiBaat”
"ಸರ್ದಾರ್ ಪಟೇಲ್ ಅವರ 150ನೇ ಜಯಂತಿ ಹಿನ್ನೆಲೆಯಲ್ಲಿ ಈ ವರ್ಷದ ಅಕ್ಟೋಬರ್ 31 ವಿಶೇಷವಾಗಿರಲಿದೆ. ನೀವೆಲ್ಲರೂ, ವಿಶೇಷವಾಗಿ ನನ್ನ ಯುವ ಸ್ನೇಹಿತರು ಭಾರತದಾದ್ಯಂತದ ಏಕತಾ ಓಟ (‘ರನ್ ಫಾರ್ ಯೂನಿಟಿ') ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕರೆ ನೀಡುತ್ತೇನೆ.
#MannKiBaat”
“ಕೊರಾಪುಟ್ ಕಾಫಿ ಅತ್ಯಂತ ಸ್ಬಾದಿಷ್ಟವಾಗಿದೆ. ಇದು ಒಡಿಶಾದ ಗರಿಮೆ!
#MannKiBaat”
“ಭಾರತದ ಕಾಫಿ ಪೇಯ ಅತ್ಯುತ್ತಮ ಕಾಫಿ.
ಇದನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಇಡೀ ವಿಶ್ವಕ್ಕೆ ಅದರ ಮೇಲೆ ಒಲವಿದೆ!
#MannKiBaat”
“ಕೊರಾಪುಟ್ ಕಾಫಿ ತುಂಬಾ ರುಚಿಕರವಾಗಿದೆ. ಇದು ಒಡಿಶಾದ ಹೆಮ್ಮೆ।
#MannKiBaat”
“ಬೆಂಗಳೂರಿನಲ್ಲಿ ಸುಸ್ಥಿರ ಜೀವನವನ್ನು ಮತ್ತಷ್ಟು ಹೆಚ್ಚಿಸುವ ಶ್ಲಾಘನೀಯ ಪ್ರಯತ್ನದ ಪ್ರಮುಖಾಂಶಗಳು.
#MannKiBaat”
“छठ महापर्व संस्कृति, प्रकृति आरो सामाजिक एकता केरो प्रतिबिंब छेकै। हमरो आग्रह छै कि तोहं देश- दुनिया म कहीं भी रहो, मौका मिलैय त छठ के उत्सव म शामिल होय क एकरो अनूठा अनुभव के आनंद जरूर ल।
#MannKiBaat”
“छठ महापर्व संस्कृति , प्रकृति आऊर सामाजिक एकता के प्रतिबिम्ब बा । हमर आग्रह बा कि रऊआ लोगन देश-दुनिया में कहीं भी रही आ जब भी मौक़ा मिले त छठ के उत्सव में शामिल होके एकर अनूठा अनुभव के आनंद ज़रूर ली।
#MannKiBaat”
“छठि महापर्व संस्कृति, प्रकृति ओ सामाजिक एकताक प्रतिबिंब थिक। हमर आग्रह अछि जे अपने देश-दुनिया मे कतहु होइ, अवसर भेटय तऽ छठिक उत्सव मे सम्मिलित भऽकऽ एकर अनुपम अनुभवक आनंद अवश्य ली।
#MannKiBaat”
"ಥೈಲ್ಯಾಂಡ್‌ನ ರಾಜಮಾತೆ ರಾಣಿ ಸಿರಿಕಿತ್ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಸಾರ್ವಜನಿಕ ಸೇವೆಗೆ ಅವರ ಜೀವಮಾನದ ಸಮರ್ಪಣೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರಲಿದೆ. ಈ ತೀವ್ರ ದುಃಖದ ಸಮಯದಲ್ಲಿ ದೊರೆ, ರಾಜಮನೆತನದ ಸದಸ್ಯರು ಮತ್ತು ಥಾಯ್ಲೆಂಡ್ ಜನರಿಗೆ ನನ್ನ ಸಂತಾಪಗಳು."
“एषः अतीव मोदावहः यत् अस्माकं संस्कृतेः माध्यमेन सामाजिकसञ्जालपटलानां च माध्यमेन संस्कृतं साम्प्रतं किञ्चन नवं प्राणवायुं प्राप्नोति। एतस्यां दिशि अस्माकं युवानः यथाविधान् रोचकप्रयासान् समाचरन्ति, तेषां प्रयासाः अतीव प्रेरणाप्रदायकाः सन्ति।
#MannKiBaat”
“ವೀರ ಕೊಮರಂ ಭೀಮ್ ಅವರಿಗೆ ಗೌರವ ನಮನ ಸಲ್ಲಿಸಿದೆ. ವಸಾಹತುಶಾಹಿ ಆಡಳಿತಗಾರರು ಮತ್ತು ದಬ್ಬಾಳಿಕೆಯ ನಿಜಾಮರ ವಿರುದ್ಧ ಅವರ ಹೋರಾಟದ ಪ್ರಯತ್ನಗಳನ್ನು ನೆನಪು ಮಾಡಿಕೊಂಡೆ.
#MannKiBaat”
“సాహసవీరుడైన కొమరం భీమ్కు నివాళులర్పించి, వలస పాలకులకు, నిరంకుశుడైన నిజాంకు వ్యతిరేకంగా ఆయన చేసిన పోరాటాన్ని స్మరించుకున్నాను.
#MannKiBaat”
"ನವೆಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆ. ಈ ದಿನವನ್ನು ನಾವು ಜಂಜಾತೀಯ ಗೌರವ ದಿನವೆಂದು ಆಚರಿಸುತ್ತೇವೆ. ಬುಡಕಟ್ಟು ಸಮುದಾಯಗಳ ಹಕ್ಕುಗಳಿಗಾಗಿ ಅವರ ಧೈರ್ಯ ಮತ್ತು ಹೋರಾಟವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರಲಿದೆ.
#MannKiBaat”
*****
(Release ID: 2183002)
Visitor Counter : 5
Read this release in:
Malayalam
,
Telugu
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia