ಪಂಚಾಯತ್ ರಾಜ್ ಸಚಿವಾಲಯ
"ಸಬ್ಕಿ ಯೋಜನೆ, ಸಬ್ಕಾ ವಿಕಾಸ್" ಕುರಿತ ಸಾರ್ವಜನಿಕ ಸೇವಾ ಜಾಗೃತಿ ಚಲನಚಿತ್ರದ ರಾಷ್ಟ್ರವ್ಯಾಪಿ ಪ್ರದರ್ಶನ ಇಂದಿನಿಂದ ಪ್ರಾರಂಭವಾಗಿದೆ
Posted On:
24 OCT 2025 10:12AM by PIB Bengaluru
ಜನರ ಯೋಜನಾ ಅಭಿಯಾನ - ಸಬ್ ಕಿ ಯೋಜನೆ, ಸಬ್ ಕಾ ವಿಕಾಸ್ ಕುರಿತು ಎರಡು ನಿಮಿಷಗಳ ಸಾರ್ವಜನಿಕ ಸೇವಾ ಜಾಗೃತಿ (ಪಿಎಸ್ಎ) ಚಲನಚಿತ್ರವನ್ನು ಇಂದಿನಿಂದ ದೇಶದ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 24 ರಿಂದ 2025ರ ನವೆಂಬರ್ 6 ರವರೆಗೆ ಪ್ರಧಾನ ಮಂತ್ರಿಯವರ ಜನರ ಪಾಲ್ಗೊಳ್ಳುವಿಕೆ ಮತ್ತು ಸರ್ಕಾರಿ ಯೋಜನೆಗಳ ಪರಿಪೂರ್ಣತೆಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಅಭಿಯಾನವು 2026-27ರ ಆರ್ಥಿಕ ವರ್ಷಕ್ಕೆ ಪಂಚಾಯತ್ ಅಭಿವೃದ್ಧಿ ಯೋಜನೆಗಳ ತಯಾರಿಕೆಯಲ್ಲಿ ಸಾರ್ವಜನಿಕ ಜಾಗೃತಿ ಮತ್ತು ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ತಳಮಟ್ಟದಲ್ಲಿ ಅಭಿವೃದ್ಧಿಯ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಪ್ರಮುಖ ಪಾತ್ರವಿದೆ ಎಂಬ ಸಂದೇಶವನ್ನು ಇದು ಬಲಪಡಿಸುತ್ತದೆ. ಪ್ರಸ್ತುತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ರಾಜ್ಯಗಳನ್ನು ಹೊರತುಪಡಿಸಿ, ಸಾರ್ವಜನಿಕ ಸೇವಾ ಜಾಗೃತಿ ಚಲನಚಿತ್ರಗಳ ಪ್ರದರ್ಶನದ ಮಾರ್ಗಸೂಚಿಗಳ ಪ್ರಕಾರ ಈ ಕಿರುಚಿತ್ರವನ್ನು ರಾಷ್ಟ್ರವ್ಯಾಪಿ ಸಿನೆಮಾ ಮಂದಿರಗಳಲ್ಲಿ ಪ್ರದರ್ಶಿಸಲಾಗುವುದು. ಕಿರುಚಿತ್ರವನ್ನು ಚಲನಚಿತ್ರ ಪ್ರಾರಂಭವಾಗುವ ಮೊದಲು ಮತ್ತು ಮಧ್ಯಂತರದ ಅವಧಿಯ ಕೊನೆಯ ಐದು ನಿಮಿಷಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಪೀಪಲ್ಸ್ ಪ್ಲ್ಯಾನ್ ಕ್ಯಾಂಪೇನ್ (ಪಿಪಿಸಿ) 2025-26 ಅನ್ನು 2025ರ ಅಕ್ಟೋಬರ್ 2 ರಂದು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಲಾಯಿತು. ಇದು ವಿಶೇಷ ಗ್ರಾಮ ಸಭಾ ಸಭೆಗಳ ಮೂಲಕ ರಾಷ್ಟ್ರೀಯ ಗುರಿಗಳೊಂದಿಗೆ ಹೊಂದಾಣಿಕೆಯಾಗುವಾಗ ಸ್ಥಳೀಯ ಆದ್ಯತೆಗಳನ್ನು ಪ್ರತಿಬಿಂಬಿಸುವ ಸಾಕ್ಷ್ಯಾಧಾರಿತ ಮತ್ತು ಅಂತರ್ಗತ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಲು ಪಂಚಾಯತ್ ಗಳಿಗೆ ಅನುವು ಮಾಡಿಕೊಡುತ್ತದೆ. 2018ರಲ್ಲಿ ಪ್ರಾರಂಭವಾದಾಗಿನಿಂದ, ಜನರ ಯೋಜನಾ ಅಭಿಯಾನ - ಸಬ್ಕಿ ಯೋಜನೆ, ಸಬ್ಕಾ ವಿಕಾಸ್ ಒಂದು ಪ್ರಮುಖ ಉಪಕ್ರಮವಾಗಿ ವಿಕಸನಗೊಂಡಿದೆ. ಇದು ತಳಮಟ್ಟದ ಪ್ರಜಾಪ್ರಭುತ್ವವನ್ನು ಗಾಢವಾಗಿಸಲು, ಭಾಗವಹಿಸುವ ಯೋಜನೆಯನ್ನು ಸಾಂಸ್ಥಿಕಗೊಳಿಸುವಲ್ಲಿ ಮತ್ತು ಗ್ರಾಮೀಣ ಭಾರತದಾದ್ಯಂತ ಸ್ವಯಂ-ಆಡಳಿತದ ಅಡಿಪಾಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಗ್ರಾಮ್ ಸ್ವರಾಜ್ ಪೋರ್ಟಲ್ ಪ್ರಕಾರ, ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳು (ಜಿಪಿಡಿಪಿಗಳು), ಬ್ಲಾಕ್ ಪಂಚಾಯತ್ ಅಭಿವೃದ್ಧಿ ಯೋಜನೆಗಳು (ಬಿಪಿಡಿಪಿಗಳು) ಮತ್ತು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಯೋಜನೆಗಳು (ಡಿಪಿಡಿಪಿಗಳು) ಒಳಗೊಂಡಿರುವ 18.13 ಲಕ್ಷಕ್ಕೂ ಹೆಚ್ಚು ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು 2019-20 ರಿಂದ ಅಪ್ಲೋಡ್ ಮಾಡಲಾಗಿದೆ, ಇದರಲ್ಲಿ 2025-26ರ ನಡೆಯುತ್ತಿರುವ ಕಸರತ್ತಿಗೆ 2.52 ಲಕ್ಷ ಯೋಜನೆಗಳು ಸೇರಿವೆ.
ಜನರ ಯೋಜನಾ ಅಭಿಯಾನದ ಸಾರ್ವಜನಿಕ ಸೇವಾ ಜಾಗೃತಿ ಚಲನಚಿತ್ರದ ಈ ರಾಷ್ಟ್ರವ್ಯಾಪಿ ಸಿನಿಮಾ ಪ್ರದರ್ಶನದ ಮೂಲಕ, ಸಚಿವಾಲಯವು ಪಿ ಆರ್ ಐಗಳೊಂದಿಗೆ ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಆಳಗೊಳಿಸಲು ಮತ್ತು ಸ್ಥಳೀಯ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತದೆ. ಕಿರುಚಿತ್ರವನ್ನು ವೀಕ್ಷಿಸಲು ಕೆಳಗೆ ಕ್ಲಿಕ್ ಮಾಡಿ: https://drive.google.com/file/d/1udnbqnCI6C9nc03QuRfLfsaaBdR0S4Lt/view?usp=sharing
*****
(Release ID: 2182121)
Visitor Counter : 7