ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುರು ಚರಣ ಯಾತ್ರೆಯಲ್ಲಿ ಪಾಲ್ಗೊಂಡು ಪವಿತ್ರ ‘ಜೋರೆ ಸಾಹಿಬ್’ ದರ್ಶನ ಪಡೆಯುವಂತೆ ಪ್ರಧಾನಮಂತ್ರಿ ಮನವಿ

Posted On: 22 OCT 2025 6:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುರು ಚರಣ ಯಾತ್ರೆಯ ಅಂಗವಾಗಿ ಶುಭಾಶಯ ಕೋರಿದ್ದಾರೆ. ಶ್ರೀ ಗುರು ಗೋವಿಂದ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಕಾಲಾತೀತ ಬೋಧನೆಗಳು ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಯಾತ್ರೆ ಮುನ್ನಡೆಸಲಿದೆ ಎಂದು ಮೋದಿ ಅವರು ಹೇಳಿದ್ದಾರೆ.

ನಾಗರಿಕರು, ಅದರಲ್ಲೂ ಯಾತ್ರೆಯ ಮಾರ್ಗದಲ್ಲಿ ವಾಸಿಸುವವರು, ಈ ಆಧ್ಯಾತ್ಮಿಕ ಪಯಣದಲ್ಲಿ ಭಾಗವಹಿಸಿ ಪವಿತ್ರ ' ಜೋರೆ ಸಾಹಿಬ್' ದರ್ಶನ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಹರ್ದಿಪ್ ಸಿಂಗ್ ಪುರಿ ಅವರ ಎಕ್ಸ್ ಪೋಸ್ಟ್‌ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:

“ಗುರುಚರಣ ಯಾತ್ರೆಯು ಶ್ರೀ ಗುರುಗೋವಿಂದ ಸಿಂಗ್ ಮತ್ತು ಮಾತಾ ಸಾಹಿಬ್ ಕೌರ್ ಅವರ ಆದರ್ಶದೊಂದಿಗಿನ ನಮ್ಮ ಸಂಪರ್ಕವನ್ನು ಗಾಢಗೊಳಿಸಲಿ. ಈ ಯಾತ್ರೆಯ ಮಾರ್ಗದಲ್ಲಿರುವ ಜನರು ಪವಿತ್ರ ‘ಜೋರೆ ಸಾಹಿಬ್’ ದರ್ಶನ ಪಡೆಯುವಂತೆ ನಾನು ಮನವಿ ಮಾಡುತ್ತೇನೆ.”

“मेरी कामना है कि गुरु चरन यात्रा के साथ श्री गुरु गोबिंद सिंह जी और माता साहिब कौर जी के महान आदर्शों से हमारा जुड़ाव और गहरा हो। यह यात्रा जहां-जहां से गुजरेगी, वहां के लोगों से मेरा आग्रह है कि वे पवित्र 'जोड़े साहिब' के दर्शन करने अवश्य आएं।”

ਕਾਮਨਾ ਹੈ ਕਿ ਗੁਰੂ ਚਰਨ ਯਾਤਰਾ ਸ੍ਰੀ ਗੁਰੂ ਗੋਬਿੰਦ ਸਿੰਘ ਜੀ ਅਤੇ ਮਾਤਾ ਸਾਹਿਬ ਕੌਰ ਜੀ ਦੇ ਮਹਾਨ ਆਦਰਸ਼ਾਂ ਨਾਲ ਸਾਡਾ ਨਾਤਾ ਹੋਰ ਡੂੰਘਾ ਕਰੇ। ਜਿੱਥੋਂ ਇਹ ਯਾਤਰਾ ਗੁਜ਼ਰੇਗੀ, ਮੈਂ ਉਨ੍ਹਾਂ ਖੇਤਰਾਂ ਦੇ ਲੋਕਾਂ ਨੂੰ ਅਪੀਲ ਕਰਾਂਗਾ ਕਿ ਉਹ ਪਵਿੱਤਰ 'ਜੋੜੇ ਸਾਹਿਬ' ਦੇ ਦਰਸ਼ਨ ਕਰਨ।

****


(Release ID: 2181698) Visitor Counter : 7