ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಶ್ರೀ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಮಂತ್ರಿ ಧನ್ಯವಾದ ಹೇಳಿದ್ದು, ಪ್ರಜಾಪ್ರಭುತ್ವ ಆದರ್ಶಗಳು ಮತ್ತು ಜಾಗತಿಕ ಶಾಂತಿಯ ಬದ್ಧತೆಯನ್ನು ಪುನರುಚ್ಚರಿಸಿದರು

Posted On: 22 OCT 2025 8:25AM by PIB Bengaluru

ದೀಪಗಳ ಹಬ್ಬದ ಸಂದರ್ಭದಲ್ಲಿ ಆತ್ಮೀಯ ದೀಪಾವಳಿ ಶುಭಾಶಯ ಮತ್ತು ದೂರವಾಣಿ ಕರೆಗಾಗಿ ಅಮೆರಿಕ ಅಧ್ಯಕ್ಷ ಘನತೆವೆತ್ತ ಶ್ರೀ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಭಾರತ-ಅಮೆರಿಕ ಸಹಭಾಗಿತ್ವದ ನಿರಂತರ ಶಕ್ತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಭಯೋತ್ಪಾದನೆಯನ್ನು ಎದುರಿಸಲು ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಮುಂದುವರಿಸಲು ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ:

"ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರೇ ನಿಮ್ಮ ದೂರವಾಣಿ ಕರೆ ಮತ್ತು ದೀಪಾವಳಿಯ ಶುಭಾಶಯಗಳಿಗಾಗಿ ಧನ್ಯವಾದಗಳು. ಬೆಳಕಿನ ಈ ಹಬ್ಬದಂದು, ನಮ್ಮ ಎರಡು ಮಹಾನ್ ಪ್ರಜಾಪ್ರಭುತ್ವ ದೇಶಗಳು ಜಗತ್ತಿನಲ್ಲಿ ಭರವಸೆಯನ್ನು ಬೆಳಗಿಸುವುದನ್ನು ಮುಂದುವರಿಸಲಿ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲಿ.

@realDonaldTrump 

@POTUS"

 

****


(Release ID: 2181426) Visitor Counter : 10