ಪ್ರಧಾನ ಮಂತ್ರಿಯವರ ಕಛೇರಿ
ಐ.ಎನ್.ಎಸ್. ವಿಕ್ರಾಂತ್ ನಲ್ಲಿ ದೀಪಾವಳಿ ಆಚರಣೆಯ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
21 OCT 2025 9:30AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐ.ಎನ್.ಎಸ್. ವಿಕ್ರಾಂತ್ ನಲ್ಲಿ ಭಾರತೀಯ ನೌಕಾಪಡೆಯೊಂದಿಗೆ ಆಚರಿಸಿದ ದೀಪಾವಳಿ ಆಚರಣೆಯ ಕ್ಷಣಗಳನ್ನು ಹಂಚಿಕೊಂಡರು. ಈ ದಿನವು ಒಂದು ಗಮನಾರ್ಹ ದಿನ, ಒಂದು ಗಮನಾರ್ಹ ಕ್ಷಣ ಮತ್ತು ಒಂದು ಗಮನಾರ್ಹ ದೃಶ್ಯವಾಗಿತ್ತು ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಒಂದು ಕಡೆ ವಿಶಾಲ ಸಾಗರ ಮತ್ತು ಇನ್ನೊಂದು ಕಡೆ ಭಾರತ ಮಾತೆಯ ಧೈರ್ಯಶಾಲಿ ಸೈನಿಕರ ಅಗಾಧ ಶಕ್ತಿಯನ್ನು ಪ್ರದರ್ಶಿಸುತ್ತದೆ. ಒಂದು ಕಡೆ ಅನಂತ ದಿಗಂತ ಮತ್ತು ಮಿತಿಯಿಲ್ಲದ ಆಕಾಶವನ್ನು ಪ್ರಸ್ತುತಪಡಿಸಿದರೆ, ಇನ್ನೊಂದು ಕಡೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಐ.ಎನ್.ಎಸ್. ವಿಕ್ರಾಂತ್ ನ ಬೃಹತ್ ಶಕ್ತಿಯನ್ನು ಪ್ರದರ್ಶಿಸುತ್ತದೆ. ಸಮುದ್ರದ ಮೇಲಿನ ಸೂರ್ಯನ ಬೆಳಕಿನ ಹೊಳಪು ದೀಪಾವಳಿಯ ಸಮಯದಲ್ಲಿ ವೀರ ಸೈನಿಕರು ಬೆಳಗಿದ ದೀಪಗಳನ್ನು ಹೋಲುತ್ತದೆ, ಇದು ದೀಪಗಳ ದೈವಿಕ ಹಾರವನ್ನು ಸ್ಪಷ್ಟವಾಗಿ ರೂಪಿಸುತ್ತದೆ ಎಂದು ಹೇಳಿದರು. ಭಾರತೀಯ ನೌಕಾಪಡೆಯ ಧೈರ್ಯಶಾಲಿ ಸಿಬ್ಬಂದಿಯ ಜೊತೆಗೆ ಈ ದೀಪಾವಳಿ ಹಬ್ಬವನ್ನು ಆಚರಿಸಲು ದೊರಕಿದ ಅವಕಾಶವನ್ನು ಬಹುದೊಡ್ಡ ಸೌಭಾಗ್ಯವೆಂದು ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಗಳಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ಐ.ಎನ್.ಎಸ್. ವಿಕ್ರಾಂತ್ ನಲ್ಲಿ ನಮ್ಮ ಧೈರ್ಯಶಾಲಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸುವುದು."
“ಜನರು ತಮ್ಮ ಕುಟುಂಬಗಳೊಂದಿಗೆ ದೀಪಾವಳಿ ಆಚರಿಸಲು ಇಷ್ಟಪಡುತ್ತಾರೆ. ನನಗೂ ಅಷ್ಟೇ, ಅದಕ್ಕಾಗಿಯೇ ಪ್ರತಿ ವರ್ಷ ನಮ್ಮ ರಾಷ್ಟ್ರವನ್ನು ಸುರಕ್ಷಿತವಾಗಿಡುವ ನಮ್ಮ ಸೇನೆ ಮತ್ತು ಭದ್ರತಾ ಸಿಬ್ಬಂದಿಯನ್ನು ನಾನು ಭೇಟಿಯಾಗಿ ಹಬ್ಬ ಆಚರಿಸುತ್ತೇನೆ. ಗೋವಾ ಮತ್ತು ಕಾರವಾರದ ಪಶ್ಚಿಮ ಸಮುದ್ರ ತೀರದಲ್ಲಿ ತಂಗಿರುವ ಐ.ಎನ್.ಎಸ್. ವಿಕ್ರಾಂತ್ ಭಾರತೀಯ ನೌಕಾ ಹಡಗಿನಲ್ಲಿರುವ ನಮ್ಮ ಧೈರ್ಯಶಾಲಿ ನೌಕಾ ಸಿಬ್ಬಂದಿಗಳಲ್ಲಿ ಒಬ್ಬನಾಗಲು ನನಗೆ ಅತೀವ ಸಂತೋಷವಾಗಿದೆ.”
“ಐ.ಎನ್.ಎಸ್. ವಿಕ್ರಾಂತ್ ಯುದ್ದ ನೌಕೆಯ ಮುಖ್ಯಾಂಶಗಳು, ಏರ್ ಪವರ್ ಡೆಮೊ, ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ…”
“ಐ.ಎನ್.ಎಸ್. ವಿಕ್ರಾಂತ್ ಯುದ್ದ ನೌಕೆಯ ಭವ್ಯವಾದ ಫ್ಲೈಟ್ ಡೆಕ್ ನಲ್ಲಿ, ಮಿಗ್-29 ಫೈಟರ್‌ಗಳೊಂದಿಗೆ.”
“ಐ.ಎನ್.ಎಸ್. ವಿಕ್ರಾಂತ್ ಯುದ್ದ ನೌಕೆಯಲ್ಲಿ ನಿಖರತೆ ಮತ್ತು ಪರಾಕ್ರಮವನ್ನು ಪ್ರದರ್ಶಿಸುವ ವಿಸ್ಮಯಕಾರಿ ವಾಯುಶಕ್ತಿ ಪ್ರದರ್ಶನವನ್ನು ವೀಕ್ಷಿಸಿದೆ. ಸಣ್ಣ ರನ್ ವೇ ಯಲ್ಲಿ ಹಗಲು ಮತ್ತು ಕತ್ತಲೆಯ ರಾತ್ರಿ ಎರಡರಲ್ಲೂ ಎಂ.ಐ.ಜಿ-29 ಯುದ್ಧವಿಮಾನಗಳ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಗಳು ನಿಜವಾಗಿಯೂ ಕೌಶಲ್ಯ, ಶಿಸ್ತು ಮತ್ತು ತಾಂತ್ರಿಕ ಶ್ರೇಷ್ಠತೆಯ ಉಸಿರುಕಟ್ಟುವ ಪ್ರದರ್ಶನವಾಗಿತ್ತು.”
“ಬಾರಾ ಖಾನಾ ಸಶಸ್ತ್ರ ಪಡೆಗಳ ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ನಿನ್ನೆ ಸಂಜೆ ಐ.ಎನ್.ಎಸ್. ವಿಕ್ರಾಂತ್ ನಲ್ಲಿ, ನೌಕಾ ಸಿಬ್ಬಂದಿಯೊಂದಿಗೆ ಬಾರಾ ಖಾನಾದಲ್ಲಿ ಭಾಗವಹಿಸಿದೆ.”
“ಐ.ಎನ್.ಎಸ್ ವಿಕ್ರಾಂತ್ ಭಾರತದ ಹೆಮ್ಮೆ!
ಇದು ಸ್ಥಳೀಯವಾಗಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆ. ಕೊಚ್ಚಿಯಲ್ಲಿ ಕಾರ್ಯಾರಂಭ ಮಾಡಿದಾಗಿನ ಅಂದಿನ ಕಾರ್ಯಕ್ರಮವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಮತ್ತು ಈಗ, ಇಂದು, ದೀಪಾವಳಿಯನ್ನು ಆಚರಿಸಲು ನನಗೆ ಇಲ್ಲಿ ಅವಕಾಶ ಸಿಕ್ಕಿತು.”
“ನಿನ್ನೆ ಸಂಜೆ ಐ.ಎನ್.ಎಸ್. ವಿಕ್ರಾಂತ್ ನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಹುಶಃ ಇನ್ನು ಮುಂದೆ ನಾನೂ ಯಾವಾಗಲೂ ಸ್ಮರಿಸುತ್ತೇನೆ. ನೌಕಾ ಸಿಬ್ಬಂದಿ ನಿಜವಾಗಿಯೂ ಸೃಜನಶೀಲರು ಮತ್ತು ಬಹುಮುಖ ಪ್ರತಿಭೆಗಳು. ಅವರು ‘ಕಸಮ್ ಸಿಂಧೂರ್ ಕಿ’ ಹಾಡನ್ನು ಬರೆದಿದ್ದಾರೆ, ಅದು ನನ್ನ ನೆನಪಿನಲ್ಲಿ ಸದಾ ಉಳಿಯುತ್ತದೆ.”
“ಐ.ಎನ್.ಎಸ್. ವಿಕ್ರಾಂತ್ ನಲ್ಲಿ ನಡೆದ ವಾಯುಶಕ್ತಿ ಪ್ರದರ್ಶನದಿಂದ!”
“ಐ.ಎನ್.ಎಸ್ ವಿಕ್ರಾಂತ್ ನಲ್ಲಿ ಯೋಗ!
ಭಾರತದ ಹೆಮ್ಮೆಯ ಐ.ಎನ್.ಎಸ್. ವಿಕ್ರಾಂತ್ ನಲ್ಲಿರುವ ಧೈರ್ಯಶಾಲಿ ನೌಕಾ ಸಿಬ್ಬಂದಿ ಯೋಗ ಅಧಿವೇಶನದಲ್ಲಿ ಭಾಗವಹಿಸುವುದನ್ನು ನೋಡಲು ನನಗೆ ಬಹಳಷ್ಟು ಸಂತೋಷವಾಯಿತು.
ಯೋಗವು ನಮ್ಮನ್ನು ಒಗ್ಗೂಡಿಸುವುದನ್ನು ಮತ್ತು ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಬಲಪಡಿಸುವುದನ್ನು ಮುಂದುವರಿಸಲಿ.”
“आप सभी की तरह मुझे भी अपने परिवारवालों के साथ दिवाली मनाना बहुत पसंद है। यही वजह है कि इस पावन अवसर पर मैं देश की रक्षा में जुटे अपने सैनिकों और सुरक्षा बलों के जवानों से हर साल मिलता हूं। इस बार यह सौभाग्य मुझे गोवा और कारवार के पास पश्चिमी समुद्री सीमा पर अपने फ्लैगशिप INS विक्रांत पर मिला। अपने जांबाज नौसैनिकों के साथ यह अवसर मुझे नई ऊर्जा और नए उत्साह से भर गया है।“
“INS विक्रांत भारतवर्ष का गौरव है!
यह स्वदेशी टेक्नोलॉजी से बना हुआ भारत का सबसे बड़ा युद्धपोत है। मुझे वह कार्यक्रम याद है, जब इसे कोच्चि में नौसेना के बेड़े में शामिल किया गया था। आज दीपावली के पावन अवसर पर यहां आकर गौरवान्वित हूं।“
“पिछली शाम INS विक्रांत पर हुआ सांस्कृतिक कार्यक्रम अविस्मरणीय रहेगा। हमारे नौसैनिक प्रतिभाशाली और पराक्रमी होने के साथ-साथ बहुत क्रिएटिव भी हैं। उनका गीत 'कसम सिंदूर की' मेरी स्मृतियों में सदा बसा रहेगा।“
“ಇಂದಿನ ಸ್ಟೀಮ್ ಪಾಸ್ಟ್ ನಲ್ಲಿ ಭಾಗವಹಿಸಿದ ಯುದ್ಧನೌಕೆಗಳಲ್ಲಿ ಐ.ಎನ್.ಎಸ್. ವಿಕ್ರಾಂತ್ (ಪರಿಶೀಲನಾ ವೇದಿಕೆ), ಐ.ಎನ್.ಎಸ್. ವಿಕ್ರಮಾದಿತ್ಯ (ನಾನು ಹತ್ತು ವರ್ಷಗಳ ಹಿಂದೆ ಸಂಯೋಜಿತ ಕಮಾಂಡರ್ ಗಳ ಸಮ್ಮೇಳನಕ್ಕಾಗಿ ಈ ಯುದ್ದ ನೌಕೆಗೆ ಹೋಗಿದ್ದೆ), ಐ.ಎನ್.ಎಸ್. ಸೂರತ್ (ಈ ವರ್ಷದ ಆರಂಭದಲ್ಲಿ ಮುಂಬೈನಲ್ಲಿ ನಿಯೋಜಿಸಲಾಗಿತ್ತು), ಐ.ಎನ್.ಎಸ್. ಮೊರ್ಮುಗಾವೊ, ಐ.ಎನ್.ಎಸ್ ಚೆನ್ನೈ (ಇದು ಫ್ರಾನ್ಸ್ ನಲ್ಲಿ 2023 ರ ಬಾಸ್ಟಿಲ್ ದಿನಾಚರಣೆಯ ಭಾಗವಾಗಿತ್ತು), ಐ.ಎನ್.ಎಸ್ ಇಂಫಾಲ್ (ಇದು ಈ ವರ್ಷದ ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿತ್ತು), ಐ.ಎನ್.ಎಸ್ ಕೋಲ್ಕತ್ತಾ, ಐ.ಎನ್.ಎಸ್ ತುಶಿಲ್, ಐ.ಎನ್.ಎಸ್ ತಬರ್, ಐ.ಎನ್.ಎಸ್ ಟೆಗ್, ಐ.ಎನ್.ಎಸ್ ಬೆಟ್ವಾ, ಐ.ಎನ್.ಎಸ್ ದೀಪಕ್ ಮತ್ತು ಐ.ಎನ್.ಎಸ್ ಆದಿತ್ಯ ಸೇರಿವೆ.”
“ಐ.ಎನ್.ಎಸ್ ವಿಕ್ರಾಂತ್ ನಲ್ಲಿ ನಡೆದ ಫ್ಲೈಪಾಸ್ಟ್ ನಲ್ಲಿ ಧ್ವಜ ಮತ್ತು ನೌಕಾ ಧ್ವಜ ಹೊಂದಿರುವ ಚೇತಕ್, ಎಂಎಚ್ 60 ಆರ್, ಸೀಕಿಂಗ್, ಕಾಮೋವ್ 31, ಡಾರ್ನಿಯರ್, ಪಿ8ಐ ಮತ್ತು ಮಿಗ್ 29 ಕೆ ಸೇರಿವೆ.”
****
(Release ID: 2181220)
Visitor Counter : 7
Read this release in:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Gujarati
,
Odia
,
Tamil
,
Telugu
,
Malayalam