ಪ್ರಧಾನ ಮಂತ್ರಿಯವರ ಕಛೇರಿ
ಹಿರಿಯ ನಟ ಶ್ರೀ ಗೋವರ್ಧನ್ ಅಸ್ರಾಣಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
21 OCT 2025 9:16AM by PIB Bengaluru
ಹಿರಿಯ ನಟರಾದ ಶ್ರೀ ಗೋವರ್ಧನ್ ಅಸ್ರಾಣಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಅವರು ತಮ್ಮ ಸಂದೇಶದಲ್ಲಿ, ಖ್ಯಾತ ದಂತಕಥೆ ಕಲಾವಿದರಿಗೆ ಗೌರವ ಸಲ್ಲಿಸಿದ್ದಾರೆ, ಭಾರತೀಯ ಚಿತ್ರರಂಗಕ್ಕೆ ಗೋವರ್ಧನ್ ಅಸ್ರಾಣಿಯವರ ಅಪಾರ ಕೊಡುಗೆ ಮತ್ತು ಪೀಳಿಗೆಯ ಪ್ರೇಕ್ಷಕರ ಮುಖದಲ್ಲಿ ಸಂತೋಷ ತರುವ ರೀತಿಯಲ್ಲಿ ನಟನೆ ಮಾಡುತ್ತಿದ್ದ ಅವರ ಸಾಮರ್ಥ್ಯವನ್ನು ಸ್ಮರಿಸಿಕೊಂಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
“ಶ್ರೀ ಗೋವರ್ಧನ್ ಅಸ್ರಾಣಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಮನರಂಜನೆ ನೀಡುವಲ್ಲಿ ಪ್ರತಿಭಾನ್ವಿತರಾಗಿದ್ದ ಬಹುಮುಖ ಕಲಾವಿದರಾಗಿದ್ದ ಅವರು ತಲೆಮಾರುಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ತಮ್ಮ ಮರೆಯಲಾಗದ ಅಭಿನಯ ಮೂಲಕ ಅಸಂಖ್ಯಾತ ಜನರ ಮುಖದಲ್ಲಿ ಸಂತೋಷ ಮತ್ತು ನಗುವನ್ನು ತರಿಸಿದ್ದರು. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿರುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.”
****
(Release ID: 2181073)
Visitor Counter : 9
Read this release in:
Odia
,
English
,
Urdu
,
Marathi
,
हिन्दी
,
Manipuri
,
Assamese
,
Bengali
,
Gujarati
,
Tamil
,
Telugu
,
Malayalam