ಪ್ರಧಾನ ಮಂತ್ರಿಯವರ ಕಛೇರಿ
ಎನ್.ಎಸ್.ಜಿ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಎನ್.ಎಸ್.ಜಿ ಸಿಬ್ಬಂದಿಗೆ ಪ್ರಧಾನಮಂತ್ರಿ ಶುಭಾಶಯ
प्रविष्टि तिथि:
16 OCT 2025 9:09PM by PIB Bengaluru
ಇಂದು ರಾಷ್ಟ್ರೀಯ ಭದ್ರತಾ ಪಡೆ(NSG) ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಎನ್.ಎಸ್.ಜಿ ಸಿಬ್ಬಂದಿಯ ಅಪ್ರತಿಮ ಶೌರ್ಯ ಮತ್ತು ಸಮರ್ಪಣಾ ಮನೋಭಾವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. “ಭಯೋತ್ಪಾದನೆಯ ಭೀತಿಯಿಂದ ರಾಷ್ಟ್ರವನ್ನು ರಕ್ಷಿಸುವಲ್ಲಿ, ನಮ್ಮ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ರಾಷ್ಟ್ರೀಯ ಆಸ್ತಿಗಳನ್ನು ರಕ್ಷಿಸುವಲ್ಲಿ ಎನ್.ಎಸ್.ಜಿ ಪ್ರಮುಖ ಪಾತ್ರ ವಹಿಸಿದೆ”, ಎಂದು ಶ್ರೀ ಮೋದಿ ಹೇಳಿದ್ದಾರೆ.
ಈ ಕುರಿತು ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಇಂದು ರಾಷ್ಟ್ರೀಯ ಭದ್ರತಾ ಪಡೆಯ ಸ್ಥಾಪನಾ ದಿನಾಚರಣೆಯಂದು, ಎಲ್ಲಾ ಎನ್‌ಎಸ್‌ಜಿ ಸಿಬ್ಬಂದಿಗೆ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಪಡೆ ತನ್ನ ಅಪ್ರತಿಮ ಶೌರ್ಯ ಮತ್ತು ಸಮರ್ಪಣೆಗೆ ಒಂದು ಗುರುತು ಮೂಡಿಸಿದೆ. ಭಯೋತ್ಪಾದನೆಯ ಭೀತಿಯಿಂದ ರಾಷ್ಟ್ರವನ್ನು ರಕ್ಷಿಸುವಲ್ಲಿ, ನಮ್ಮ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ನಿರ್ಣಾಯಕ ರಾಷ್ಟ್ರೀಯ ಆಸ್ತಿಗಳನ್ನು ರಕ್ಷಿಸುವಲ್ಲಿ ಎನ್‌ಎಸ್‌ಜಿ ಪ್ರಮುಖ ಪಾತ್ರ ವಹಿಸಿದೆ."
@nsgblackcats
****
(रिलीज़ आईडी: 2180211)
आगंतुक पटल : 21
इस विज्ञप्ति को इन भाषाओं में पढ़ें:
Malayalam
,
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu