ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವದೆಹಲಿಯಲ್ಲಿ ನಡೆದ ಕೃಷಿ ಕಾರ್ಯಕ್ರಮದಲ್ಲಿ ರೈತರೊಂದಿಗೆ ಪ್ರಧಾನಮಂತ್ರಿ ಅವರು ನಡೆಸಿದ ಸಂವಾದದ ಕನ್ನಡ ಅವತರಣಿಕೆ

Posted On: 12 OCT 2025 6:45PM by PIB Bengaluru

ಪ್ರಧಾನಮಂತ್ರಿ - ರಾಮ್-ರಾಮ್!

ರೈತ - ರಾಮ್-ರಾಮ್! ನಾನು ಹರಿಯಾಣದ ಹಿಸಾರ್ ಜಿಲ್ಲೆಯವನು. ನಾನು ಕಾಬೂಲಿ ಚನಾ (ಕಡಲೆ) ಕೃಷಿಯೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದೆ. ಆರಂಭದಲ್ಲಿ, ಸ್ವಲ್ಪ ಮಾತ್ರ ಇತ್ತು...

ಪ್ರಧಾನಮಂತ್ರಿ - ನೀವು ಇದನ್ನು ಎಷ್ಟು ವರ್ಷಗಳ ಹಿಂದೆ ಪ್ರಾರಂಭಿಸಿದ್ದೀರಿ?

ರೈತ - ಈಗ ನಾಲ್ಕು ವರ್ಷಗಳಾಗಿವೆ. ನಾನು ಕಾಬೂಲಿ ಚನಾದಿಂದ ಎಕರೆಗೆ ಸುಮಾರು 10 ಕ್ವಿಂಟಾಲ್ ಇಳುವರಿಯನ್ನು ಪಡೆಯುತ್ತೇನೆ.

ಪ್ರಧಾನಮಂತ್ರಿ - ದ್ವಿದಳ ಧಾನ್ಯಗಳಂತೆ ಅಂತರ ಬೆಳೆಯಾಗಿ ಬೆಳೆಯುವ ಕೆಲವು ಬೆಳೆಗಳಿವೆ.

ರೈತ - ಹೌದು.

ಪ್ರಧಾನಮಂತ್ರಿ - ಅದರಿಂದ, ನೀವು ಹೆಚ್ಚುವರಿ ಆದಾಯವನ್ನು ಪಡೆಯುತ್ತೀರಿ, ಆದರೂ ಇದಕ್ಕೆ ಸ್ವಲ್ಪ ಹೆಚ್ಚು ಶ್ರಮ ಬೇಕಾಗುತ್ತದೆ. ಇದನ್ನು ನೋಡಿದಾಗ, ಇತರ ರೈತರು ತಮ್ಮ ಭೂಮಿ ಮತ್ತೆ ಪುನರುಜ್ಜೀವನಗೊಳ್ಳುತ್ತದೆ ಎಂಬ ಭಾವನೆಯಿಂದ  ದ್ವಿದಳ ಧಾನ್ಯಗಳ ಕಡೆಗೆ ಸಾಗಲು ಪ್ರೇರಣೆ ಪಡೆಯುವುದು ಸಾಧ್ಯವೇ?

ರೈತ – ಹೌದು ಸಾಧ್ಯವಿದೆ, ನಿಜಕ್ಕೂ. ನಾವು ಯೋಚಿಸುವುದೂ ಅದನ್ನೇ. ಕಡಲೆಯಂತೆ ದ್ವಿದಳ ಧಾನ್ಯಗಳನ್ನು ಬೆಳೆಸಿದರೆ, ನಮಗೆ ಬೆಳೆ ಸಿಗುವುದಲ್ಲದೆ, ಮುಂದಿನ ಬೆಳೆಗೂ ಪ್ರಯೋಜನವಾಗುತ್ತದೆ ಎಂದು ನಾನು ಇತರ ರೈತರಿಗೆ ಹೇಳುತ್ತೇನೆ. ಕಡಲೆ ಮತ್ತು ಇತರ ದ್ವಿದಳ ಧಾನ್ಯ ಬೆಳೆಗಳು ಮಣ್ಣಿನಲ್ಲಿ ಸಾರಜನಕವನ್ನು ಬಿಡುತ್ತವೆ, ಇದರಿಂದ ಮುಂದಿನ ಇಳುವರಿ ಸಮೃದ್ಧಗೊಳ್ಳುತ್ತದೆ.

ರೈತ - ನನ್ನ ಜೀವನದಲ್ಲಿ ನಾನು ಪ್ರಧಾನಮಂತ್ರಿಯವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲು. ಅವರು ತುಂಬಾ ಒಳ್ಳೆಯ ಪ್ರಧಾನಮಂತ್ರಿ, ರೈತರು ಮತ್ತು ಸಾಮಾನ್ಯ ಜನರೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆ.

ರೈತ - ನಾನು ರೈತ ಉತ್ಪಾದಕ ಸಂಸ್ಥೆ (ಎಫ್.ಪಿ.ಒ.-FPO) ಯೊಂದಿಗೆ ಕೂಡಾ ಸಂಬಂಧ ಹೊಂದಿದ್ದೇನೆ. ನಾನು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಆದರೆ ನಾನು ದ್ವಿದಳ ಧಾನ್ಯಗಳನ್ನು ಸಹ ಬೆಳೆಯುತ್ತೇನೆ. ನಮ್ಮ ಕುಟುಂಬವು 16 ಬಿಘಾ ಭೂಮಿಯನ್ನು ಹೊಂದಿದೆ, ಅಲ್ಲಿ ನಾನು ಕಡಲೆ ಬೆಳೆಯುತ್ತೇನೆ. ನಮ್ಮ ಗ್ರಾಮದಲ್ಲಿ ನಾವು ತಲಾ 20 ಮಹಿಳೆಯರ ಗುಂಪುಗಳನ್ನು ಸಹ ರಚಿಸಿದ್ದೇವೆ ಮತ್ತು ನಾವು ಒಟ್ಟಿಗೆ ಚನಾ-ಲಹ್ಸುನ್-ಪಾಪಡ್‌ನಂತಹ ಉತ್ಪನ್ನಗಳನ್ನು ತಯಾರಿಸುತ್ತೇವೆ. ನಮ್ಮ... (ಆಡಿಯೋ ಅಸ್ಪಷ್ಟವಾಗಿದೆ)... ಅದರಲ್ಲಿ ಬೆಳ್ಳುಳ್ಳಿ  ಅಂಶ ಇದೆ...

ಪ್ರಧಾನಮಂತ್ರಿ - ಓಹ್, ಹಾಗಾದರೆ ನೀವು ಅಲ್ಲಿಯೇ ಉತ್ಪನ್ನಗಳನ್ನು ತಯಾರಿಸುತ್ತಿದ್ದೀರಿ?  

ರೈತ - ಹೌದು, ಹೌದು, ಹೌದು.

ಪ್ರಧಾನಮಂತ್ರಿ - ನೀವು ನಿಮ್ಮ ಉತ್ಪನ್ನಕ್ಕೆ ಬ್ರಾಂಡ್ ಹೆಸರನ್ನು ನೀಡಿದ್ದೀರಾ?

ರೈತ - ಹೌದು, ನಮ್ಮ ಗ್ರಾಮವನ್ನು ದುಗಾರಿ ಎಂದು ಕರೆಯಲಾಗುತ್ತದೆ, ಆದ್ದರಿಂದ ನಾವು ಅದನ್ನು ದುಗಾರಿ ವಾಲೆ ಎಂದು ಬ್ರಾಂಡ್ ಮಾಡಿದ್ದೇವೆ.

ಪ್ರಧಾನಮಂತ್ರಿ – ಓ ನನಗೆ ಗೊತ್ತಾಯಿತು.

ರೈತ - ಹೌದು, ಚನಾ-ಲಹ್ಸುನ್-ಪಾಪಡ್, ದುಗಾರಿ ವಾಲೆ ಚನಾ-ಲಹ್ಸುನ್-ಪಪಾಡ್ ಎಂದು ಬ್ರಾಂಡ್ ಮಾಡಲಾಗಿದೆ.

ಪ್ರಧಾನಮಂತ್ರಿ - ಜನರು ಅವುಗಳನ್ನು ಖರೀದಿಸುತ್ತಾರೆಯೇ ?.

ರೈತ - ಹೌದು, ಸರ್. ನಾವು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್ ಜಿ.ಇ.ಎಂ. (GeM) ನಲ್ಲಿ ನೋಂದಾಯಿಸಿಕೊಂಡಿದ್ದೇವೆ. ಸೇನಾ ಸಿಬ್ಬಂದಿ ಅಲ್ಲಿಂದ ಖರೀದಿಸುತ್ತಾರೆ ಸರ್.

ಪ್ರಧಾನಮಂತ್ರಿ - ಹಾಗಾದರೆ, ಇದು ರಾಜಸ್ಥಾನದಾದ್ಯಂತ ಪ್ರಚಾರದಲ್ಲಿದೆಯೇ?

ರೈತ - ಸರ್, ಇದನ್ನು ಭಾರತದಾದ್ಯಂತ ಮಾರಾಟ ಮಾಡಲಾಗುತ್ತದೆ.

ಪ್ರಧಾನಮಂತ್ರಿ - ನಿಜವಾಗಿಯೂ?

ರೈತ - ಹೌದು.

ಪ್ರಧಾನಮಂತ್ರಿ - ಇದೇ ರೀತಿಯ ಉತ್ಪನ್ನಗಳನ್ನು ಉತ್ಪಾದಿಸುವ ಇತರರು ಇದ್ದಾರೆಯೇ?

ರೈತ - ಹೌದು, ಇತರರು ಸಹ ಇದ್ದಾರೆ. ಆದರೆ ಅವುಗಳನ್ನು ಮುಖ್ಯವಾಗಿ ಮಹಿಳೆಯರು ತಯಾರಿಸುತ್ತಾರೆ.

ಪ್ರಧಾನಮಂತ್ರಿ -ಹಾಗಿದ್ದರೆ ನೀವು ಎಲ್ಲರಿಗೂ ರುಚಿ ನೋಡಲು ಸ್ವಲ್ಪ ತರಬೇಕು!

ರೈತ – ಖಂಡಿತ, ಸರ್, ಖಂಡಿತ!

ರೈತ – ಪ್ರಧಾನಮಂತ್ರಿಯವರನ್ನು ಭೇಟಿಯಾಗುವುದು ಹೇಗೆ ಎಂದು ಯೋಚಿಸುತ್ತಾ ನಮಗೆ ತುಂಬಾ ರೋಮಾಂಚನವಾಯಿತು. ಅವರು ಬಂದಾಗ, ಅವರ ಪ್ರಭೆಯನ್ನು ನೋಡಿ ನಾವು ಮೂಕವಿಸ್ಮಿತರಾದೆವು. ಅದು ವರ್ಣನಾತೀತ ಕ್ಷಣವಾಗಿತ್ತು.

ರೈತ – ನಾನು 2013–14 ರಿಂದ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಿದ್ದೇನೆ. ನಾನು ಒಂದು ಎಕರೆಯಿಂದ ಪ್ರಾರಂಭಿಸಿ ಕ್ರಮೇಣ 13–14 ಎಕರೆಗೆ ಕಡಲೆ ಬೆಳೆಯನ್ನು  ವಿಸ್ತರಿಸಿದೆ.

ಪ್ರಧಾನಮಂತ್ರಿ – ಸರಿ. ಹಾಗಾದರೆ, ಮೊದಲು ನೀವು ಒಂದು ಎಕರೆಯಲ್ಲಿ ಕಡಲೆ ಬೆಳೆದಿರಿ ಮತ್ತು ಇತರ ಬೆಳೆಗಳನ್ನೂ ಬೆಳೆದಿರಾ?

ರೈತ – ಹೌದು, ಸರ್.

ಪ್ರಧಾನಮಂತ್ರಿ – ಮತ್ತು ನಿಧಾನವಾಗಿ, ನೀವು ಪ್ರದೇಶವನ್ನು ಹೆಚ್ಚಿಸಿದ್ದೀರಾ?

ರೈತ – ಹೌದು, ನಾನು ಅದನ್ನು ಸುಮಾರು 13–14 ಎಕರೆಗಳಿಗೆ ವಿಸ್ತರಿಸಿದೆ, ಮತ್ತು...

ಪ್ರಧಾನಮಂತ್ರಿ – ಇದು ನಿಮ್ಮ ಆದಾಯದ ಮೇಲೆ ಹೇಗೆ ಪರಿಣಾಮ ಬೀರಿತು?

ರೈತ – ನಾನು ವರ್ಷದಿಂದ ವರ್ಷಕ್ಕೆ ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡಿದ್ದರಿಂದ ಮತ್ತು ಉತ್ಪಾದಕತೆ ಹೆಚ್ಚುತ್ತಲೇ ಇದ್ದ ಕಾರಣ ನನ್ನ ಆದಾಯ ಸುಧಾರಿಸಿತು.

ಪ್ರಧಾನಮಂತ್ರಿ – ಸಸ್ಯಾಹಾರಿಗಳಿಗೆ, ದ್ವಿದಳ ಧಾನ್ಯಗಳು ಪ್ರೋಟೀನ್‌ನ ಮುಖ್ಯ ಮೂಲವಾಗಿವೆ, ಅಲ್ಲವೇ?

ರೈತ – ಹೌದು, ಸರ್.

ಪ್ರಧಾನಮಂತ್ರಿ - ಹಾಗಾದರೆ, ನೀವು ದ್ವಿದಳ ಧಾನ್ಯಗಳನ್ನು ಬೆಳೆಸುವಾಗ, ಅದು ನಿಮ್ಮ ಸ್ವಂತ ಜೇಬನ್ನು ತುಂಬಿಸಿಕೊಳ್ಳುವುದರ ಬಗ್ಗೆ ಮಾತ್ರವಲ್ಲ; ನೀವು ಸಮಾಜಕ್ಕೂ ದೊಡ್ಡ ಕೊಡುಗೆ ನೀಡುತ್ತಿದ್ದೀರಿ.

ರೈತ - ಹೌದು.

ಪ್ರಧಾನಮಂತ್ರಿ - ಇತ್ತೀಚಿನ ದಿನಗಳಲ್ಲಿ, ನಮ್ಮ ಹೊಲಗಳು ಚಿಕ್ಕದಾಗಿವೆ; ಭೂ ಹಿಡುವಳಿಗಳು ಛಿದ್ರವಾಗಿವೆ. ಅದಕ್ಕಾಗಿಯೇ, ಯಾರಾದರೂ ಒಂದು ಪ್ರಯೋಗವನ್ನು ಪ್ರಯತ್ನಿಸಿದಾಗ, ಅವರು ಆಗಾಗ್ಗೆ ಒಂಟಿತನವನ್ನು ಅನುಭವಿಸುತ್ತಾರೆ. ಆದರೆ ಊಹಿಸಿ, 200 ರೈತರು ಒಟ್ಟಿಗೆ ಬಂದರೆ...

ರೈತ - ಹೌದು.

ಪ್ರಧಾನಮಂತ್ರಿ - ...ಮತ್ತು 400 ಅಥವಾ 500 ಬಿಘಾ ಭೂಮಿಯನ್ನು ಒಳಗೊಂಡು ಎಲ್ಲಾ 200 ಜನರು ಒಟ್ಟಾಗಿ ಒಂದು ಅಥವಾ ಎರಡು ಆಯ್ದ ಬೆಳೆಗಳನ್ನು ಬೆಳೆದು ಅವುಗಳನ್ನು ಚೆನ್ನಾಗಿ ಮಾರಾಟ ಮಾಡುವುದೆಂದು  ನಿರ್ಧರಿಸಿದರೆ - ಅದು ರೈತರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆಯೇ?

ರೈತ - ಖಂಡಿತ, ಸರ್. ನಾವು ಕಾಬೂಲಿ ಚನಾಕ್ಕಾಗಿ ಸುಮಾರು 1,200 ಎಕರೆಗಳಲ್ಲಿ ತ್ಯಾಜ್ಯ ಮುಕ್ತ ಕೃಷಿ ಮಾಡುತ್ತಿದ್ದೇವೆ. ರೈತರು ಮೊದಲಿಗಿಂತ ಗಮನಾರ್ಹವಾಗಿ ಉತ್ತಮ ಪ್ರತಿಫಲವನ್ನು/ಆದಾಯವನ್ನು ಪಡೆಯುತ್ತಿದ್ದಾರೆ.

ಪ್ರಧಾನಮಂತ್ರಿ - ಹಾಗಾದರೆ, ಎಲ್ಲಾ ರೈತರು ಈಗ ಅದಕ್ಕೆ ಒಪ್ಪಿಕೊಂಡಿದ್ದಾರೆ, ಅದು ನಿಮ್ಮ ಶ್ರಮವನ್ನು ಕಡಿಮೆ ಮಾಡಿರಬೇಕು?

ರೈತ - ಹೌದು, ಏಕೆಂದರೆ ನಾವು ಅಂತಹ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ.

ರೈತ - ನಾನು ಬೀಡ್ ಜಿಲ್ಲೆಯವನು.

ಪ್ರಧಾನಮಂತ್ರಿ - ಎಲ್ಲಿಂದ? ಬೀಡ್ ಜಿಲ್ಲೆ. ಅಲ್ಲಿ ಸಾಮಾನ್ಯವಾಗಿ ನೀರಿನ ಕೊರತೆ ಇರುತ್ತದೆ, ಅಲ್ಲವೇ?

ರೈತ - ಅದಕ್ಕಾಗಿಯೇ ಸರ್, ಧನ್-ಧಾನ್ಯ ಯೋಜನೆಯನ್ನು ಪ್ರಾರಂಭಿಸಿದ್ದಕ್ಕಾಗಿ ನಾನು ನಿಮಗೆ ಅಪಾರ ಧನ್ಯವಾದ ಹೇಳಲು ಬಯಸುತ್ತೇನೆ.

ಪ್ರಧಾನಮಂತ್ರಿ - ಧನ್ಯವಾದಗಳು. ನಾವು ಎಲ್ಲೆಡೆ ಸಿರಿ ಧಾನ್ಯಗಳನ್ನು ಪ್ರಚಾರ ಮಾಡುತ್ತಿರುವಂತೆಯೇ - ನಮ್ಮ ಸಾಂಪ್ರದಾಯಿಕ ಧಾನ್ಯಗಳಾದ ಬಾಜ್ರಾ, ಜೋಳ ಮತ್ತು ಇತರವುಗಳು ಕೂಡಾ- ಅವು ಈಗ ದೊಡ್ಡ ಜಾಗತಿಕ ಮಾರುಕಟ್ಟೆಗಳನ್ನು ಹೊಂದಿವೆ. ನೀರಿನ ಕೊರತೆಯಿರುವ ಭೂಮಿಯಲ್ಲಿಯೂ ಸಹ, ರೈತರು ಉತ್ತಮ ಜೀವನೋಪಾಯವನ್ನು ಗಳಿಸಬಹುದು.

ರೈತ - ಹೌದು, ಸಿರಿ ಧಾನ್ಯಗಳಿಂದಾಗಿ

ಪ್ರಧಾನಮಂತ್ರಿ - ನೀವು ಸಿರಿ ಧಾನ್ಯಗಳನ್ನು ಸಹ ಬೆಳೆಯುತ್ತೀರಾ?

ರೈತ - ಹೌದು, ನಾನು ಬೆಳೆಯುತ್ತೇನೆ.

ಪ್ರಧಾನಮಂತ್ರಿ - ನೀವು ಯಾವ ಪ್ರಭೇದಗಳನ್ನು ಬೆಳೆಯುತ್ತೀರಿ?

ರೈತ - ಬಾಜ್ರಾ, ಜೋಳ ಮತ್ತು ಭುನಾ ಕಡಲೆ ಕೂಡ.

ಪ್ರಧಾನಮಂತ್ರಿ - ಹಾಗಾದರೆ, ಜನರು ಇನ್ನೂ ಅವುಗಳನ್ನು ಬಳಸುತ್ತಿದ್ದಾರೆಯೇ ?

ರೈತ - ಹೌದು, ಅವರು ಬಳಸುತ್ತಾರೆ, ಎಲ್ಲರೂ ಸೇವಿಸುತ್ತಾರೆ.

ಪ್ರಧಾನಮಂತ್ರಿ - ಅದು ಒಳ್ಳೆಯದು.

ರೈತ - ಮತ್ತು ಅದರ ಜೊತೆಗೆ, ನಾವು ಗ್ರಾಹಕರಿಗೆ ಸರಬರಾಜು ಮಾಡುತೇವೆ, ಅವರಲ್ಲಿ ಕೆಲವರು ಬಾಂಬೆಯಲ್ಲಿದ್ದಾರೆ.

ರೈತ – ತಮ್ಮೊಂದಿಗೆ  ಮಾತನಾಡಿದ ನಂತರ, ನಮಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದಂತೆ ಅನಿಸಲಿಲ್ಲ; ಬದಲು ನಮ್ಮ ಸ್ವಂತ ಕುಟುಂಬದವರೊಬ್ಬರನ್ನು ಭೇಟಿ ಮಾಡಿದಂತೆ ಭಾಸವಾಯಿತು.

ರೈತ - ನನ್ನ ಪ್ರದೇಶದಲ್ಲಿ, ನಾನು ಅರ್ಹರ್ ಅನ್ನು ಬೆಳೆಯುತ್ತೇನೆ. ಯುವಜನರು ಇದರಲ್ಲಿ ಆಸಕ್ತಿ ವಹಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಇದು ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಉತ್ತಮ ವ್ಯಾಪಾರ ಅವಕಾಶವನ್ನು ನೀಡುತ್ತದೆ.

ರೈತ ಮಹಿಳೆ- ನಾನು ಸ್ವ-ಸಹಾಯ ಗುಂಪಿನೊಂದಿಗೆ ಸಂಬಂಧ ಹೊಂದಿರುವ ಮಹಿಳೆ. ನಾನು 2023 ರಲ್ಲಿ ಗುಂಪಿಗೆ ಸೇರಿಕೊಂಡೆ ಮತ್ತು ನನ್ನ ಐದು ಬಿಘಾ ಭೂಮಿಯಲ್ಲಿ ಹೆಸರುಕಾಳು ಕೃಷಿ ಮಾಡಲು ಪ್ರಾರಂಭಿಸಿದೆ. ಸರ್, ನಿಮ್ಮ ಪ್ರಧಾನ ಮಂತ್ರಿ-ಕಿಸಾನ್ ಸಮ್ಮಾನ್ ನಿಧಿ ಯೋಜನೆ ನಮಗೆ ನಿಜವಾಗಿಯೂ ಆಶೀರ್ವಾದವಾಗಿದೆ. ನಾವು ವಾರ್ಷಿಕವಾಗಿ ಪಡೆಯುವ ₹6,000 ಅಪಾರವಾಗಿ ಸಹಾಯ ಮಾಡುತ್ತದೆ - ಬೀಜಗಳನ್ನು ಖರೀದಿಸಲು, ಭೂಮಿಯನ್ನು ಉಳುಮೆ ಮಾಡಲು ಮತ್ತು ಇತರ ಕೃಷಿ ಅಗತ್ಯಗಳಿಗೆ ಇದು ಬಳಕೆಯಾಗುತ್ತದೆ. ಇದು ನಿಜಕ್ಕೂ ನಮಗೆ ದೊಡ್ಡ ಬೆಂಬಲವಾಗಿದೆ.

ಪ್ರಧಾನಮಂತ್ರಿ - ನೀವು ಎಂದಾದರೂ ರಸಗೊಬ್ಬರಗಳ ಬಳಕೆಯನ್ನು ಕ್ರಮೇಣ ಕಡಿಮೆ ಮಾಡಲು ಬಯಸುತ್ತೀರಾ?

ರೈತ ಮಹಿಳೆ - ಹೌದು, ಮಹಿಳೆಯರು...

ಪ್ರಧಾನಮಂತ್ರಿ - ಏಕೆಂದರೆ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಭೂಮಿ ನಮ್ಮ ತಾಯಿ. ನಾವು ಅವಳಿಗೆ ಅಂತಹ ರಾಸಾಯನಿಕಗಳನ್ನು ನೀಡುತ್ತಲೇ ಇದ್ದರೆ, ಅವಳು ಎಷ್ಟು ಕಾಲ ಬದುಕುತ್ತಾಳೆ?

ರೈತ - ಅದು ನಿಜ, ಸರ್.

ಪ್ರಧಾನಮಂತ್ರಿ - ರೈತರು ಇದರ ಬಗ್ಗೆ ಚರ್ಚಿಸುತ್ತಾರೆಯೇ?

ರೈತ - ಹೌದು, ಅವರು ಚರ್ಚಿಸುತ್ತಾರೆ.

ಪ್ರಧಾನಮಂತ್ರಿ - ಅವರು ತಮ್ಮ ಮಕ್ಕಳಿಗೆ ಫಲವತ್ತಾದ ಮಣ್ಣನ್ನು ಉಳಿಸಬೇಕು, ಬಂಜರು ಭೂಮಿಯನ್ನು ಬಿಡಬಾರದು ಎಂದು ಅರಿತುಕೊಂಡ ನಂತರ, ಅವರು ಸ್ವಯಂಪ್ರೇರಣೆಯಿಂದ ಅದಕ್ಕೆ ಹಾನಿ ಮಾಡದಿರಲು ಪ್ರಯತ್ನಿಸುತ್ತಾರೆ. ರೈತರು ಇದರಲ್ಲಿ ಸಹಾಯ ಮಾಡಬಹುದು. ಉದಾಹರಣೆಗೆ, ಯಾರಾದರೂ ನಾಲ್ಕು ಬಿಘಾ ಭೂಮಿಯನ್ನು ಹೊಂದಿದ್ದರೆ...

ರೈತ - ಹೌದು.

ಪ್ರಧಾನಮಂತ್ರಿ - ...ಮತ್ತು ನೀವು ಅವರಿಗೆ ಸಂಪೂರ್ಣವಾಗಿ ನೈಸರ್ಗಿಕ ಕೃಷಿಗೆ ಬದಲಾಯಿಸಲು ಹೇಳಿದರೆ, ಅವರು ಹಿಂಜರಿಯುತ್ತಾರೆ.

ರೈತ - ಹೌದು, ಅವರು ಧೈರ್ಯ ಮಾಡುವುದಿಲ್ಲ.

ಪ್ರಧಾನಮಂತ್ರಿ - ಅವರು "ನಾನು ಹಸಿವಿನಿಂದ ಸಾಯುತ್ತೇನೆ" ಎಂದು ಭಾವಿಸುತ್ತಾರೆ. ಆದ್ದರಿಂದ, ಅದಕ್ಕೆ ಬದಲಾಗಿ, ಅವರಿಗೆ ಹೇಳಿ - ನಮ್ಮ ಮಾತನ್ನು ಕುರುಡಾಗಿ ಕೇಳಬೇಡಿ. ನಿಮ್ಮ ಭೂಮಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ. ಒಂದು ಬಿಘಾದಲ್ಲಿ ನಮ್ಮ ವಿಧಾನವನ್ನು ಪ್ರಯತ್ನಿಸಿ; ಇತರ ಮೂರರಲ್ಲಿ ನಿಮ್ಮ ಸಾಮಾನ್ಯ ಮಾರ್ಗವನ್ನು ಮುಂದುವರಿಸಿ.

ರೈತ - ಸರಿ.

ಪ್ರಧಾನಮಂತ್ರಿ - ನಮ್ಮೊಂದಿಗೆ ಎರಡು ವರ್ಷಗಳ ಕಾಲ ಕೆಲಸ ಮಾಡಿ. ಅವರು ಯಶಸ್ಸನ್ನು ಕಂಡ ನಂತರ, ಅವರು ಒಂದು ಬಿಘಾದಿಂದ ಒಂದೂವರೆ, ನಂತರ ಎರಡು, ಹೀಗೆ ಮುಂದುವರಿಯುತ್ತಾರೆ. ಹೀಗೆಯೇ ಆತ್ಮವಿಶ್ವಾಸ ಬೆಳೆಯುತ್ತದೆ. ನಾಲ್ಕು ಬಿಘಾಗಳನ್ನು ಒಂದೇ ಬಾರಿಗೆ ಪರಿವರ್ತಿಸಲು ನಾವು ಅವರನ್ನು ಕೇಳಿದರೆ, ಅವರು ಹಾಗೆ ಮಾಡುವುದಿಲ್ಲ – ಅವರು  ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಭಯಕ್ಕೆ ಬೀಳುತ್ತಾರೆ.

ರೈತ - ನಾನು ಕಡಲೆ, ಮಸೂರ್ ಮತ್ತು ಗೌರ್ ಬೆಳೆಯುತ್ತೇನೆ. ನನ್ನ ಬಳಿ ಕೇವಲ ಎರಡು ಎಕರೆ ಭೂಮಿ ಇದ್ದರೂ, ನಾನು ಸಣ್ಣ ಪ್ರಮಾಣದ ಕೃಷಿಯನ್ನು ನಿರ್ವಹಿಸುತ್ತೇನೆ.

ಪ್ರಧಾನಮಂತ್ರಿ - ನೀವು ನೋಡಿ, ಎರಡು ಎಕರೆ ಹೊಂದಿರುವ ರೈತ ಕೂಡ ಪವಾಡಗಳನ್ನು ಮಾಡಬಹುದು.

ರೈತ - ಹೌದು, ಸ್ವಲ್ಪ ಸ್ವಲ್ಪ...

ಪ್ರಧಾನಮಂತ್ರಿ - ಭೂಮಿ ಚಿಕ್ಕದಾಗಿರಬಹುದು, ಆದರೆ ರೈತರ ಮನಸ್ಸು ವಿಶಾಲವಾಗಿದೆ, ಧೈರ್ಯ ಮತ್ತು ದೃಢಸಂಕಲ್ಪದಿಂದ ತುಂಬಿದೆ.

ರೈತ - ಹೌದು, ಸರ್.

ಪ್ರಧಾನಮಂತ್ರಿ - ನಿಮ್ಮ ಹೊಲಗಳ ಸುತ್ತಲೂ ಬೇಲಿ ಹಾಕುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಸಾಮಾನ್ಯವಾಗಿ, ನೆರೆಹೊರೆಯವರು ಸಹ ಬೇಲಿ ಹಾಕುತ್ತಾರೆ, ಮತ್ತು ಎರಡರ ನಡುವೆ, ಸ್ವಲ್ಪ ಭೂಮಿ ವ್ಯರ್ಥವಾಗುತ್ತದೆ. ಆದರೆ ಎರಡೂ ಕಡೆಯವರು ಸೌರ ಫಲಕಗಳನ್ನು ಸ್ಥಾಪಿಸಿದರೆ, ಅಲ್ಲಿ ಸ್ವಲ್ಪ ಓರೆ ಕೋರೆ ಇರಬಹುದು,  ನೀವಿಬ್ಬರೂ ವಿದ್ಯುತ್ ಉತ್ಪಾದಿಸಬಹುದು, ಅದನ್ನು ಬಳಸಬಹುದು ಮತ್ತು ಹೆಚ್ಚುವರಿಯನ್ನು ಮಾರಾಟ ಮಾಡಬಹುದು.

ರೈತ – ಅದು ಅದ್ಭುತವಾದ ಐಡಿಯಾ ಸರ್. ಅದು ಸಾಧ್ಯ...

ಪ್ರಧಾನಮಂತ್ರಿ – ಹೌದು, ನಾವು ದಿಕ್ಕಿನಲ್ಲಿ ಸಾಗಬೇಕು. ಸರ್ಕಾರ ಈಗ ಇದಕ್ಕಾಗಿ ಹಣವನ್ನು ಒದಗಿಸುತ್ತದೆ.

ರೈತ  – ಜನರು ಇದನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಮತ್ತು ಉತ್ತಮ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಪ್ರಧಾನಮಂತ್ರಿ - ಇನ್ನೊಂದು ವಿಷಯ - ಮಳೆನೀರು ನೆಲದಡಿಯಲ್ಲಿ ಇಂಗುವಂತೆ ಮಾಡಲು ನಾವು ಬಾವಿಗಳನ್ನು ಪುನರ್ಭರ್ತಿ ಮಾಡುವುದನ್ನು ಉತ್ತೇಜಿಸಬೇಕು. ಅದು ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ.

ರೈತ - ಹೌದು, ಖಂಡಿತ.

ಪ್ರಧಾನಮಂತ್ರಿ - ನಿಮ್ಮೆಲ್ಲರೊಂದಿಗೆ ಮಾತನಾಡುವುದು ಅದ್ಭುತ ಅನುಭವವಾಗಿದೆ. ನೀವು ಹೊಸ ವಿಧಾನಗಳನ್ನು ಪ್ರಯೋಗಿಸುತ್ತಿರುವ ಧೈರ್ಯಶಾಲಿ ಮತ್ತು ಶ್ರಮಶೀಲ ರೈತರು - ಅದು ನನಗೆ ತುಂಬಾ ಸಂತೋಷವನ್ನು ತರುತ್ತದೆ. ಆಗಾಗ್ಗೆ, ಜನರು "ನನ್ನ ತಂದೆ ಇದನ್ನು ಮಾಡಿದರು, ನನ್ನ ಚಿಕ್ಕಪ್ಪ ಇದನ್ನು ಮಾಡಿದರು, ಆದ್ದರಿಂದ ನಾನು ಅದೇ ರೀತಿ ಮಾಡುತ್ತೇನೆ" ಎಂದು ಹೇಳುತ್ತಾರೆ. ಆದರೆ ಯುವಜನರು ಮನಸ್ಥಿತಿಯನ್ನು ಮೀರಿ ಮುಂದುವರೆಯುವಂತೆ ನಾವು ಪ್ರೋತ್ಸಾಹಿಸಬೇಕಾಗಿದೆ.

ರೈತ - ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯಕ್ಕೆ ಧನ್ಯವಾದಗಳು, ನಮಗೆ 50% ಸಬ್ಸಿಡಿ ಸಿಕ್ಕಿತು. ಮೊದಲು, ನನ್ನ ಬಳಿ ಕೆಲವು ಹಸುಗಳಿದ್ದವು, ಆದರೆ ಈಗ ನಾನು 250 ಕ್ಕೂ ಹೆಚ್ಚು ಗಿರ್ ಹಸುಗಳನ್ನು ಹೊಂದಿದ್ದೇನೆ. 2010 ರಲ್ಲಿ, ನಾನು ಹೋಟೆಲ್‌ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದೆ. ಇಂದು, ನಾನು ಕೋಟಿ ಮೌಲ್ಯದ ಗೋಶಾಲೆಯನ್ನು ಹೊಂದಿದ್ದೇನೆ. ಕೇಂದ್ರ ಸರ್ಕಾರವು ಅಪಾರ ಬೆಂಬಲವನ್ನು ನೀಡಿದೆ.

ಪ್ರಧಾನಮಂತ್ರಿ - ನೀವು ರೂಮ್ ಬಾಯ್‌ನಿಂದ ಸ್ಥಾನಕ್ಕೆ ಹೇಗೆ ಬಂದಿದ್ದೀರಿ?

ರೈತ - ಅದು ಸರ್ಕಾರದ ಉಪಕ್ರಮಗಳಿಂದಾಗಿ ಸರ್.

ಪ್ರಧಾನಮಂತ್ರಿ - ಇಷ್ಟೊಂದು ಹಸುಗಳಿದ್ದರೂ, ನೀವು ಅವೆಲ್ಲವನ್ನೂ ಇಟ್ಟುಕೊಳ್ಳುತ್ತೀರಾ ಅಥವಾ ಕೆಲವನ್ನು ಇತರರಿಗೆ ಹಂಚುತ್ತೀರಾ?

ರೈತ - ನಾನು ಕರುಗಳು ಸೇರಿದಂತೆ 63 ಹಸುಗಳನ್ನು ಸಾವಯವ ಕೃಷಿಯನ್ನು ಅಭ್ಯಾಸ ಮಾಡುತ್ತಿರುವ ಮತ್ತು ಬಡತನದಲ್ಲಿ ವಾಸಿಸುವ ಆದಿವಾಸಿ ಮಹಿಳೆಗೆ ಉಡುಗೊರೆಯಾಗಿ ನೀಡಿದ್ದೇನೆ.

ಪ್ರಧಾನಮಂತ್ರಿ - ಓ ಅರ್ಥವಾಯಿತು. ನಾನು ಕಾಶಿಯ ಸಂಸದ. ನಾನು ಅಲ್ಲಿಯೂ ಇದೇ ರೀತಿಯ ಪ್ರಯೋಗವನ್ನು ಮಾಡಿದ್ದೇನೆ: ಮೊದಲ ಕರುವನ್ನು ನನಗೆ ಹಿಂತಿರುಗಿಸಬೇಕು ಎಂಬ ಷರತ್ತಿನೊಂದಿಗೆ ಸುಮಾರು 100 ಕುಟುಂಬಗಳಿಗೆ ಗಿರ್ ಹಸುಗಳನ್ನು ವಿತರಿಸಿದೆ. ನಂತರ ನಾನು ಅದನ್ನು ಇನ್ನೊಂದು ಕುಟುಂಬಕ್ಕೆ ಕೊಟ್ಟೆ.

ರೈತ - 2020ರಲ್ಲಿ, ಜಾಗತಿಕ ಲಾಕ್‌ಡೌನ್ ಸಮಯದಲ್ಲಿ, ನಾನು ಸಂಶೋಧನೆ ನಡೆಸಿದೆ ಮತ್ತು ನಂತರ ಹರಿದ್ವಾರದಲ್ಲಿರುವ ಇಲಾಖೆಗೆ ಭೇಟಿ ನೀಡಿದೆ, ಅಲ್ಲಿ ನಾನು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಬಗ್ಗೆ ತಿಳಿದುಕೊಂಡೆ. ಇದು ಜೀವನವನ್ನು ಬದಲಾಯಿಸುವಂತಿತ್ತು. ಈ ಯೋಜನೆಯ ಸಬ್ಸಿಡಿಗಳು ಮತ್ತು ಸಹಾಯಕ್ಕೆ ಧನ್ಯವಾದಗಳು, ನನಗೆ ಗಮನಾರ್ಹ ಬೆಂಬಲ ಸಿಕ್ಕಿತು.

ಪ್ರಧಾನಮಂತ್ರಿ - ನೀವು ಎಷ್ಟು ಜನರನ್ನು ನೇಮಿಸಿಕೊಂಡಿದ್ದೀರಿ?

ರೈತ - ಉತ್ತರಾಖಂಡದ ಸಣ್ಣ ಹಳ್ಳಿಗಳ ಸುಮಾರು 25 ಯುವಜನರು ನಮ್ಮೊಂದಿಗೆ ಕೆಲಸ ಮಾಡುತ್ತಾರೆ, ಸರ್. ಅವರು ಇಲ್ಲಿ ಬಹಳಷ್ಟು ಕಲಿಯುತ್ತಾರೆ.

ಪ್ರಧಾನಮಂತ್ರಿ - ಅತ್ಯುತ್ತಮ.

ರೈತ - ಕೆಲವರು ಬೇರೆ ಬೇರೆ ಸ್ಥಳಗಳಿಗೆ ಹೋಗಿ ತಮ್ಮ ಕೌಶಲ್ಯಗಳನ್ನು ಸ್ವತಂತ್ರವಾಗಿ ಅನ್ವಯಿಸುತ್ತಿದ್ದಾರೆ.

ರೈತ - ನಾನು ಅಲಂಕಾರಿಕ ಮೀನುಗಳ ಮೇಲೂ ಗಮನಹರಿಸಿದ್ದೇನೆ.

ಪ್ರಧಾನಮಂತ್ರಿ - ಆಹ್, ಜಲಚರ ಸಾಕಣೆ.

ರೈತ - ನಾನು ಇದನ್ನು ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಪ್ರಾರಂಭಿಸಿದೆ, ಸರ್.

ಪ್ರಧಾನಮಂತ್ರಿ - ಸರಿ, ನೀವು ಅದನ್ನು ಹೇಗೆ ಮಾಡಿದ್ದೀರಿ? ನೀವು ಎಲ್ಲಿ ತರಬೇತಿ ಪಡೆದಿದ್ದೀರಿ?

ರೈತ - ಸರ್, ನಾನು ಪಿಎಚ್‌ಡಿ ಪದವಿ ಪಡೆದಿದ್ದೇನೆ ಮತ್ತು ನನ್ನ ವಿಷಯ ಇದೇ ಕ್ಷೇತ್ರಕ್ಕೆ ಸಂಬಂಧಿಸಿದೆ. ನಾನು ಉದ್ಯೋಗಾಕಾಂಕ್ಷಿಯಾಗುವುದಕ್ಕಿಂತ ಹೆಚ್ಚಾಗಿ ಉದ್ಯೋಗ ಒದಗಿಸುವವನಾಗಲು ನಿರ್ಧರಿಸಿದೆ. ಅದಕ್ಕಾಗಿಯೇ ನಾನು ಉದ್ಯಮವನ್ನು ಪ್ರಾರಂಭಿಸಿದೆ (ಸ್ಥಳ ಸ್ಪಷ್ಟವಾಗಿಲ್ಲ).

ಪ್ರಧಾನಮಂತ್ರಿ - ಜಲಚರ ಸಾಕಣೆ ವಿಶ್ವಾದ್ಯಂತ ಅಪಾರ ಸಾಮರ್ಥ್ಯವನ್ನು ಹೊಂದಿದೆ.

ರೈತ - ಹೌದು, ನಿಜಕ್ಕೂ.

ಪ್ರಧಾನಮಂತ್ರಿ - ಭಾರತ ವಲಯದಲ್ಲಿ ವಿಶೇಷ ಸಾಧ್ಯತೆಗಳನ್ನು ಹೊಂದಿದೆ. ಇದರತ್ತ ಗಮನಹರಿಸುವುದರಿಂದ ದೊಡ್ಡ ಮಾರುಕಟ್ಟೆ ಅವಕಾಶಗಳು ತೆರೆಯುತ್ತವೆ.

ರೈತ - ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ನವೋದ್ಯಮ ರೈತರಿಗೆ ಉತ್ತಮ ಭರವಸೆಯಾಗಿದೆ.

ರೈತ - ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ದೇಶವು ಅಭಿವೃದ್ಧಿ ಹೊಂದುತ್ತದೆ ಎಂಬ ನಿಮ್ಮ ದೃಷ್ಟಿಕೋನ ನನಗೆ ಸ್ಫೂರ್ತಿ ನೀಡಿತು. ಸರೈಕೇಲಾದಲ್ಲಿ, ನಾನು 125 ಬಡ ಬುಡಕಟ್ಟು ಕುಟುಂಬಗಳನ್ನು ದತ್ತು ತೆಗೆದುಕೊಂಡು ಅಲ್ಲಿ ಸಮಗ್ರ ಕೃಷಿಯನ್ನು ಪ್ರಾರಂಭಿಸಿದೆ.

ಪ್ರಧಾನಮಂತ್ರಿ - ನಿಮ್ಮ ಶಿಕ್ಷಣವು ನಿಮ್ಮನ್ನು ಇದಕ್ಕೆ ಸಿದ್ಧಪಡಿಸಿತೋ  ಅಥವಾ ನೀವು ಕ್ಷೇತ್ರಕಾರ್ಯದ ಮೂಲಕ  ತರಬೇತಿ ಪಡೆದಿರಾ?

ರೈತ - ಸರ್, ನೀವು ನನಗೆ  ಆದರ್ಶಪ್ರಾಯರು. 

ಪ್ರಧಾನಮಂತ್ರಿ - ಓಹ್, ನಿಜವಾಗಿಯೂ?

ರೈತ - ನೀವು ಉದ್ಯೋಗಾಕಾಂಕ್ಷಿಗಳ ಬದಲು ಉದ್ಯೋಗ ನೀಡುವವರಾಗಲು ರಾಷ್ಟ್ರಕ್ಕೆ ಕರೆ ನೀಡಿದ್ದೀರಿ. ಜಾಗತಿಕವಾಗಿ, ಟಾಟಾ ಸ್ಟೀಲ್ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ - ನನ್ನ ಉತ್ಪನ್ನಗಳನ್ನು ಟಾಟಾ ಸ್ಟೀಲ್ ಸಹ ಮಾರಾಟ ಮಾಡುತ್ತದೆ.

ಪ್ರಧಾನಮಂತ್ರಿ - ಅದ್ಭುತ.

ರೈತ - ಸರ್, ನೀವು ನನ್ನ ಮಾರ್ಗದರ್ಶಿ ಮತ್ತು ಸ್ಫೂರ್ತಿಯಾಗಿದ್ದೀರಿ. ನಿಮ್ಮಿಂದ ಬಂದ ಸಣ್ಣ ಸಲಹೆಗಳು ಮತ್ತು ಸಂವಹನಗಳು ನನ್ನ ಜೀವನವನ್ನು ನಿರಂತರವಾಗಿ ಪರಿವರ್ತಿಸಿವೆ.

ರೈತ - ನಾನು ಸಖಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದೇನೆ. ನಮ್ಮ ಪ್ರಯಾಣವು 20 ಮಹಿಳೆಯರೊಂದಿಗೆ ಪ್ರಾರಂಭವಾಯಿತು ಮತ್ತು ಈಗ 90,000 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.

ಪ್ರಧಾನಮಂತ್ರಿ - 90,000 !

ರೈತ - ಹೌದು, ಸರ್. ಈ ಮಹಿಳೆಯರು ಹಾಲು ಮಾರಾಟ ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಾರೆ ಮತ್ತು ನಾವು ಇಲ್ಲಿಯವರೆಗೆ 14,000 ಕ್ಕೂ ಹೆಚ್ಚು ಲಕ್ಷಪತಿ ದೀದಿಗಳನ್ನು ರೂಪಿಸಿದ್ದೇವೆ.

ಪ್ರಧಾನಮಂತ್ರಿ - ಅದು ಅದ್ಭುತ!

ರೈತ - ನನಗೆ ಇಲ್ಲಿ ಅತ್ಯುತ್ತಮ ಮೀನುಗಾರಿಕೆ ಕಾರ್ಯಾಚರಣೆಗಳೂ ಇವೆ.

ಪ್ರಧಾನಮಂತ್ರಿ - ಹೌದೇ.

ರೈತ - ನಿಮ್ಮ ಪಿ.ಎಂ.ಎಂ.ಎಸ್.ವೈ. (PMMSY)  ಯೋಜನೆಗೆ ಧನ್ಯವಾದಗಳು, ನಮಗೆ  ಮಂಜುಗಡ್ಡೆ ಯೋಜನೆ ಮತ್ತು ಸರಿಯಾದ ಜಲಚರ ಸಾಕಣೆ ನಿರ್ವಹಣೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿದೆ.

ಪ್ರಧಾನಮಂತ್ರಿ - ನಿಮ್ಮೊಂದಿಗೆ ಎಷ್ಟು ಜನರು ಕೆಲಸ ಮಾಡುತ್ತಾರೆ?

ರೈತ - ಸುಮಾರು 100 ಜನರು.

ಪ್ರಧಾನಮಂತ್ರಿ - ಇದೇ ರೀತಿಯ ಉಪಕ್ರಮಗಳನ್ನು ಹೊಂದಿರುವ ಇತರರು ಇದ್ದಾರೆಯೇ?

ರೈತ - ಹೌದು, ಸರ್. ಇತ್ತೀಚೆಗೆ ಮತ್ತೊಂದು ಗುಂಪು ಅಂಡಮಾನ್‌ನಿಂದ ಬಂದಿತ್ತು. ಹಿಂದೆ, ನಮಗೆ  ಅವರನ್ನು ಸರಿಯಾಗಿ ತಲುಪಲು ಸಾಧ್ಯವಾಗಿರಲಿಲ್ಲ, ಆದರೆ ಪಿ.ಎಂ.ಎಂ.ಎಸ್.ವೈ.  ಯೋಜನೆಗೆ ಧನ್ಯವಾದಗಳು, ಮಂಡಳಿಯು ಕಾರ್ಯನಿರ್ವಹಿಸುತ್ತಿದೆ ಮತ್ತು ಐಸ್ ಸರಬರಾಜು ಲಭ್ಯವಿದೆ. ಮೀನು ಇಡಲು ಸ್ಥಳವೂ ಇದೆ.

ಪ್ರಧಾನಮಂತ್ರಿ - ಓಹ್, ಅತ್ಯುತ್ತಮ.

ರೈತ - ನಾನು ಕಾಶ್ಮೀರದಿಂದ ಬಂದಿದ್ದೇನೆ. ನಾನು ನಿಮ್ಮ ಪಿ.ಎಂ.ಎಂ.ಎಸ್.ವೈ.  ಯೋಜನೆಯ ಬಗ್ಗೆ ಒಂದು ಕಾರ್ಯಕ್ರಮದ ಮೂಲಕ ಕಲಿತೆ, ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಕೃಷಿಯನ್ನು ಪ್ರಾರಂಭಿಸಿದೆ. ನನ್ನ ಬಳಿ  ಈಗ 14 ಉದ್ಯೋಗಿಗಳಿದ್ದಾರೆ.

ಪ್ರಧಾನಮಂತ್ರಿ – ಓ, ಆಗಲಿ.

ರೈತ - ಹೌದು, 14 ಉದ್ಯೋಗಿಗಳು, ಮತ್ತು ನಾನು ವಾರ್ಷಿಕವಾಗಿ ಸುಮಾರು ₹15 ಲಕ್ಷ ಲಾಭವನ್ನು ಗಳಿಸುತ್ತೇನೆ. ಮಾರುಕಟ್ಟೆ ಉತ್ತಮವಾಗಿದೆ ಮತ್ತು ಇತರರು ಸಹ ಪ್ರಯೋಜನ ಪಡೆಯುತ್ತಾರೆ.

ಪ್ರಧಾನಮಂತ್ರಿ - ಈಗ ನೀವು ರೈಲಿನ ಮೂಲಕ ಸರಕುಗಳನ್ನು ಸಾಗಿಸಬಹುದು, ನಿಮ್ಮ ಉತ್ಪನ್ನಗಳು ಮಾರುಕಟ್ಟೆಗಳನ್ನು ವೇಗವಾಗಿ ತಲುಪುತ್ತವೆ.

ರೈತ - ನಿಮ್ಮ ಬೆಂಬಲಕ್ಕೆ ಧನ್ಯವಾದಗಳು, ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಬೇರೆ ಯಾವುದೇ ಪ್ರಧಾನಮಂತ್ರಿಯ ಆಡಳಿತಾವಧಿಯಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ.

ಪ್ರಧಾನಮಂತ್ರಿ - ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಳ ಸಮರ್ಥ ಯುವಜನರಿದ್ದಾರೆ.

ರೈತ - ಹೌದು, ಇದೆಲ್ಲವೂ ನಿಮ್ಮ ಸರ್ಕಾರದ ಅಡಿಯಲ್ಲಿ ಸಾಧ್ಯವಾಗಿದೆ, ಇಲ್ಲದಿದ್ದರೆ ಅದು ಸಾಧ್ಯವಿರಲಿಲ್ಲ..

ರೈತ – ತಮ್ಮನ್ನು  ಭೇಟಿ ಮಾಡಿ ಜಲಚರ ಸಾಕಣೆಯ ಬಗ್ಗೆ ಚರ್ಚಿಸುವುದು ನೈಸರ್ಗಿಕ ಚಿಕಿತ್ಸೆಯಂತೆ ಭಾಸವಾಯಿತು.

ರೈತ - ನಮಸ್ಕಾರಂ.

ಪ್ರಧಾನಮಂತ್ರಿ - ನಮಸ್ಕಾರ.

ರೈತ - ಸರ್, ನಾನು ವಾಸ್ತವವಾಗಿ 2014 ರಲ್ಲಿ ಯುಎಸ್ ನಿಂದ ಹಿಂತಿರುಗಿದೆ.

ಪ್ರಧಾನಮಂತ್ರಿ - ಮತ್ತು ನೀವು ಯುಎಸ್ಎ ತೊರೆದಿದ್ದೀರಾ?

ರೈತ - ಹೌದು, ನಾನು ನನ್ನ ಸ್ವಂತ ಜನರಿಗೆ ಉದ್ಯೋಗ ನೀಡಲು ಯುಎಸ್ಎ ತೊರೆದಿದ್ದೇನೆ. ನಾನು 10 ಎಕರೆ ಕೃಷಿಯನ್ನು ಸಣ್ಣ ಜಮೀನಿನೊಂದಿಗೆ ಪ್ರಾರಂಭಿಸಿದೆ. ಈಗ, ನಾನು 300 ಎಕರೆಗಳಿಗೂ ಹೆಚ್ಚು ಕೃಷಿಯನ್ನು ನಿರ್ವಹಿಸುತ್ತೇನೆ, ಜೊತೆಗೆ 10,000 ಎಕರೆಗಳಿಗೂ ಹೆಚ್ಚು ಬೀಜಗಳನ್ನು ಉತ್ಪಾದಿಸುವ ಕೇಂದ್ರಗಳನ್ನು ನಿರ್ವಹಿಸುತ್ತೇನೆ. ನಾನು ಸುಮಾರು 7% ಬಡ್ಡಿಯಲ್ಲಿ ಎಫ್‌ಐಡಿಎಫ್‌ನಿಂದ ಪ್ರಯೋಜನ ಪಡೆದಿದ್ದೇನೆ, ಇದು ಗಮನಾರ್ಹ ವಿಸ್ತರಣೆಗೆ ಅವಕಾಶ ಮಾಡಿಕೊಟ್ಟಿತು. ಪ್ರಸ್ತುತ, ನನ್ನ ಬಳಿ ಸುಮಾರು 200 ಉದ್ಯೋಗಿಗಳಿದ್ದಾರೆ, ಸರ್.

ಪ್ರಧಾನಮಂತ್ರಿ - ವಾವ್! ಅದ್ಭುತ!

ರೈತ - ನರೇಂದ್ರ ಮೋದಿ ಜೀ ನಮ್ಮ ಕಡೆಗೆ ನಡೆದು ಬರುತ್ತಿದ್ದರು- ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ  ಕ್ಷಣ. ಅದು "ವಾವ್" ಎನ್ನುವಂತಹ ಪರಿಸ್ಥಿತಿಯಾಗಿತ್ತು.

ಪ್ರಧಾನಮಂತ್ರಿ - ನಮಸ್ತೆ, ಸಹೋದರ.

ರೈತ - ನಾನು ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಧಾರಿಯಿಂದ ಬಂದವನು. ನನ್ನ ಹೆಸರು ಭಾವ್ನಾ ಗೊಂಡ್ವಿಯಾ. ನನ್ನ ಎಫ್‌ಪಿಒದಲ್ಲಿ 1,700 ರೈತರು ಇದ್ದಾರೆ. ನಾವು ನಾಲ್ಕು ವರ್ಷಗಳಿಂದ ನಿರಂತರವಾಗಿ 20% ಲಾಭಾಂಶವನ್ನು ಪಾವತಿಸುತ್ತಿದ್ದೇವೆ.

ಪ್ರಧಾನಮಂತ್ರಿ - 1,700 ರೈತರು?

ರೈತ - ಹೌದು, ಸರ್.

ಪ್ರಧಾನಮಂತ್ರಿ - ಸಾಗುವಳಿ ಮಾಡಲಾಗುತ್ತಿರುವ ಒಟ್ಟು ಭೂಮಿ ಎಷ್ಟು?

ರೈತ - ನಾವು 1,500 ಎಕರೆಗಳಲ್ಲಿ ಕೃಷಿ ಮಾಡುತ್ತಿದ್ದೇವೆ ಮತ್ತು ನಾಲ್ಕು ವರ್ಷಗಳ ಕಾಲ ನಿರಂತರವಾಗಿ 20% ಲಾಭಾಂಶವನ್ನು ನೀಡುತ್ತಿದ್ದೇವೆ, ಇದು ₹ 200 ಕೋಟಿಗೂ ಹೆಚ್ಚು.

ಪ್ರಧಾನಮಂತ್ರಿ - ಅವರು ವಿಭಿನ್ನ ಬೆಳೆಗಳನ್ನು ಬೆಳೆಯುತ್ತಾರೆಯೇ ಅಥವಾ ನಿಗದಿತ ಯೋಜನೆಯನ್ನು ಅನುಸರಿಸುತ್ತಾರೆಯೇ?

ರೈತ - ನಾವು ಎಂ.ಎಸ್.ಪಿ.  ಅಡಿಯಲ್ಲಿಯೂ ಕೆಲಸ ಮಾಡುತ್ತೇವೆ. ನಮ್ಮ ಪ್ರಮುಖ ಸಾಧನೆಯೆಂದರೆ ನಮ್ಮ ಎಫ್.ಪಿ.ಒ. ಗೆ ಹಣದ ಕೊರತೆಯಿದ್ದಾಗ, ಸರ್ಕಾರವು ಖಾತರಿ ಇಲ್ಲದೆ ₹ 2 ಕೋಟಿ ಒದಗಿಸಿತು. ಅದು ಮಹತ್ವದ ಮೈಲಿಗಲ್ಲು.

ರೈತ - ನಮಸ್ಕಾರ್, ಪ್ರಧಾನಮಂತ್ರಿ ಜೀ. ನನ್ನ ಹೆಸರು ಸುನಿಲ್ ಕುಮಾರ್, ರಾಜಸ್ಥಾನದ ಜೈಸಲ್ಮೇರ್‌ನಿಂದ. ನಾವು ಮುಖ್ಯವಾಗಿ ಸಮಗ್ರ ಕೀಟ ನಿರ್ವಹಣೆ (ಐ.ಪಿ.ಎಂ.-IPM)  ಬಳಸಿ ಸಾವಯವವಾಗಿ ಬಳಸಿ ಜೀರಿಗೆಯನ್ನು ಬೆಳೆಸುತ್ತೇವೆ.

ಪ್ರಧಾನಮಂತ್ರಿ – ಓ  ಅರ್ಥವಾಯಿತು.

ರೈತ - ನನ್ನ ಎಫ್.ಪಿ.ಒ.ನಲ್ಲಿ  ಜೀರಿಗೆ ಮತ್ತು ಇಸಾಬ್ಗೋಲ್ ಬೆಳೆಯುವ 1,035 ರೈತರಿದ್ದಾರೆ.

ಪ್ರಧಾನಮಂತ್ರಿ - ಜೀರಿಗೆಗೆ ಮಾರುಕಟ್ಟೆ ಎಲ್ಲಿದೆ?

ರೈತ - ನಾವು ಗುಜರಾತ್‌ನೊಳಗಿನ ವಿವಿಧ ರಫ್ತುದಾರರಿಗೆ ಸರಬರಾಜು ಮಾಡುತ್ತೇವೆ, ನಂತರ ಅವರು ಅದನ್ನು ಮತ್ತಷ್ಟು ಮುಂದುವರಿಸುತ್ತಾರೆ.

ಪ್ರಧಾನಮಂತ್ರಿ - ಯಾರಾದರೂ ಇಸಾಬ್ಗೋಲ್ ಐಸ್ ಕ್ರೀಮ್ ತಯಾರಿಸಲು ಪ್ರಯತ್ನಿಸಿದ್ದೀರಾ?

ರೈತ - ಇಲ್ಲ, ಸರ್.

ಪ್ರಧಾನಮಂತ್ರಿ - ಮಾರುಕಟ್ಟೆ ಸಾಮರ್ಥ್ಯವನ್ನು ಊಹಿಸಿಕೊಳ್ಳಿ!

ರೈತ - ಹೌದು, ಸರ್. ಮೌಲ್ಯವರ್ಧನೆಯ ಕುರಿತು ಪ್ರಧಾನಮಂತ್ರಿಯವರ ಸಣ್ಣ ಕಲ್ಪನೆ ನಮಗೆ ಸ್ಫೂರ್ತಿ ನೀಡಿದೆ. ನಾವು ಮೊದಲು ಐಸ್ ಕ್ರೀಮ್ ಬಗ್ಗೆ ಯೋಚಿಸಿರಲಿಲ್ಲ, ಆದರೆ ಈಗ ನಾವು ಅದನ್ನು ಅನ್ವೇಷಿಸುತ್ತೇವೆ.

ರೈತ - ನಾನು ನಿಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯ ಬಳಿಯ ಮಿರ್ಜಾಪುರದ ಧರ್ಮೇಂದ್ರ ಕುಮಾರ್ ಮೌರ್. ನಾವು ಸಿರಿಧಾನ್ಯಗಳ ಮೇಲೆ ಕೆಲಸ ಮಾಡುತ್ತೇವೆ.

ಪ್ರಧಾನಮಂತ್ರಿ – ಸಿರಿ ಧಾನ್ಯಗಳು?

ರೈತ - ಹೌದು, ಸರ್.

ಪ್ರಧಾನಮಂತ್ರಿ - ಸೇಬುಗಳಿಗೆ ಸಾರಿಗೆ ಸೌಲಭ್ಯ ಸಿಕ್ಕಿದೆಯೇ?

ರೈತ - ಹೌದು, ವಾಹನದ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಮಂತ್ರಿ - ರೈಲು ಮೂಲಕ 60,000 ಟನ್ ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳು ದಿಲ್ಲಿಯನ್ನು ತಲುಪಿವೆ.

ರೈತ - ಹೌದು, ಅವು ದಿಲ್ಲಿ ಮತ್ತು ಇತರ ಸ್ಥಳಗಳನ್ನು ತಲುಪಿವೆ.

ಪ್ರಧಾನಮಂತ್ರಿ - ಅದು ಗಮನಾರ್ಹ ಸಾಧನೆ.

ರೈತ - ಆದರೆ...

ಪ್ರಧಾನಮಂತ್ರಿ - ಟ್ರಕ್‌ಗಳು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ.

ರೈತ - ನಾನು ಮಧ್ಯಪ್ರದೇಶದ ಜಬಲ್‌ಪುರದ ರೌಶಿಕ್ ಸುಖ್ಲಾಮ್ (ಹೆಸರು ಸ್ಪಷ್ಟವಾಗಿಲ್ಲ). ನಾವು ಏರೋಪೋನಿಕ್ಸ್ ಮೂಲಕ ಆಲೂಗಡ್ಡೆ ಬೀಜಗಳನ್ನು ಉತ್ಪಾದಿಸುತ್ತೇವೆ.

ಪ್ರಧಾನಮಂತ್ರಿ - ನಿಖರವಾಗಿ.

ರೈತ - ಹೌದು, ಸರ್. ನಾವು ಲಂಬ ಮತ್ತು ಅಡ್ಡ ಕೃಷಿಯನ್ನು ಬಳಸುತ್ತೇವೆ. ಇವು ಆಲೂಗಡ್ಡೆ ಬೀಜಗಳು. ಅವು ಚಿನ್ನವಲ್ಲದಿದ್ದರೂ, ಅವು ಚಿನ್ನದಷ್ಟೇ ಮೌಲ್ಯಯುತವಾಗಿವೆ ಏಕೆಂದರೆ ನಾವು ರೈತರ ಹೊಲದಲ್ಲಿ ಅವುಗಳು ಬಹುಪಾಲು ವೃದ್ಧಿಯಾಗುವಂತೆ ಮಾಡುತ್ತೇವೆ.

ಪ್ರಧಾನಮಂತ್ರಿ - ಆದ್ದರಿಂದ ನೀವು ಉನ್ನತ ಮಟ್ಟದ ಗುಣಾಕಾರವನ್ನು ಮಾಡುತ್ತೀರಿ...

ರೈತ - ಹೌದು, ಸರ್.

ಪ್ರಧಾನಮಂತ್ರಿ - ಆಲೂಗಡ್ಡೆ.

ರೈತ - ನೇತಾಡುವ ಆಲೂಗಡ್ಡೆ, ಸರ್.

ಪ್ರಧಾನಮಂತ್ರಿ - ಅದು ಜೈನ ಗ್ರಾಹಕರಿಗೆ ಸೂಕ್ತವಾಗಿದೆ. ಅದು ನೆಲದಡಿಯಲ್ಲಿ ಬೆಳೆದರೆ, ಅವರು ಅದನ್ನು ತಿನ್ನುವುದಿಲ್ಲ; ನೆಲದ ಮೇಲೆ ಬೆಳೆದರೆ, ಅವರು ತಿನ್ನುತ್ತಾರೆ.

ರೈತ - ನಾವು ನರೇಂದ್ರ ಮೋದಿ ಜೀ ಅವರನ್ನು ಭೇಟಿಯಾದಾಗ, ನಾವು ಅವರಿಗೆ ಮಿನಿ ಗೆಡ್ಡೆಗಳನ್ನು ತೋರಿಸಿದೆವು. ಅವರಿಗೆ ಅಡ್ಡ ಕೃಷಿ ಮತ್ತು ಏರೋಪೋನಿಕ್ಸ್ ಬಗ್ಗೆ ತಿಳಿದಿತ್ತು. ಅವರು ಇದನ್ನು "ಜೈನ ಆಲೂಗಡ್ಡೆ" ಎಂದು ತಕ್ಷಣ ಗುರುತಿಸಿದರು. ಅವರು ಆಲೂಗಡ್ಡೆಯನ್ನು 'ಜೈನ ಆಲೂಗಡ್ಡೆ' ಎಂದು ಕರೆದರು.

ರೈತ - ಸರ್, ಶುಭಾಶಯಗಳು. ನಾನು, ರಾಜಸ್ಥಾನದ ಬರಾನ್ ಜಿಲ್ಲೆಯ ಮೊಹಮ್ಮದ್ ಅಸ್ಲಾಂ. ನಾವು ಬೆಳ್ಳುಳ್ಳಿಯ ಮೇಲೆ ಕೆಲಸ ಮಾಡುತ್ತೇವೆ.

ಪ್ರಧಾನಮಂತ್ರಿ - ನೀವು ಎಲ್ಲಿಯವರು?

ರೈತ - ಬರಾನ್ ಜಿಲ್ಲೆ, ರಾಜಸ್ಥಾನ.

ಪ್ರಧಾನಮಂತ್ರಿ - ಬರಾನ್, ರಾಜಸ್ಥಾನ.

ರೈತ - ಹೌದು, ಸರ್. ನಾವು ಬೆಳ್ಳುಳ್ಳಿಗೆ ಮೌಲ್ಯವರ್ಧನೆ ಮಾಡುತ್ತೇವೆ - ಪುಡಿ, ಪೇಸ್ಟ್, ಮತ್ತು ರಫ್ತು ಪರವಾನಗಿಗಳಿಗಾಗಿ ಅರ್ಜಿ ಸಲ್ಲಿಸಿದ್ದೇವೆ.

ಪ್ರಧಾನಮಂತ್ರಿ - ನಾನು ಬೇಸನ್ ಮತ್ತು ಬೆಳ್ಳುಳ್ಳಿಯಿಂದ ಪಾಪಡ್ ತಯಾರಿಸುವ ಯುವಕನನ್ನು ಭೇಟಿಯಾಗಿದ್ದೆ.

ರೈತ - ಸರ್, ಮನ್ ಕಿ ಬಾತ್ ಮೂಲಕ ಇದನ್ನು ನಿಮ್ಮೊಂದಿಗೆ ಹಂಚಿಕೊಂಡದ್ದು ನನಗೆ ಅಪಾರ ಗೌರವದ ಸಂಗತಿಯಾಗಿದೆ.

ಪ್ರಧಾನಮಂತ್ರಿ - ಅದ್ಭುತ! ತುಂಬಾ ಧನ್ಯವಾದಗಳು ಸಹೋದರ.

 

*****


(Release ID: 2179362) Visitor Counter : 6