ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಕ್ಟೋಬರ್‌ 16ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಕರ್ನೂಲ್‌ನಲ್ಲಿ ಸುಮಾರು 13,430 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

ಕೈಗಾರಿಕೆ, ವಿದ್ಯುತ್‌ ಪ್ರಸರಣ, ರಸ್ತೆಗಳು, ರೈಲ್ವೆ, ರಕ್ಷಣಾ ಉತ್ಪಾದನೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಅನೇಕ ವಲಯಗಳನ್ನು ವ್ಯಾಪಿಸಿರುವ ಯೋಜನೆಗಳು

ಶ್ರೀಶೈಲಂನ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲಾ ದೇವಸ್ಥಾನದಲ್ಲಿ ಪೂಜೆ ಮತ್ತು ದರ್ಶನ ನೆರವೇರಿಸಲಿರುವ ಪ್ರಧಾನಮಂತ್ರಿ

ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯ ಸ್ಮರಣಾರ್ಥ ಶ್ರೀಶೈಲಂನಲ್ಲಿರುವ ಶ್ರೀ ಶಿವಾಜಿ ಸಮೃದ್ಧಿ ಕೇಂದ್ರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

Posted On: 14 OCT 2025 5:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್‌ 16ರಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.15ರ ಸುಮಾರಿಗೆ ನಂದ್ಯಾಳ ಜಿಲ್ಲೆಯ ಶ್ರೀಶೈಲಂನ ಶ್ರೀ ಬ್ರಹ್ಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲಾ ದೇವಸ್ಥಾನದಲ್ಲಿ ಪೂಜೆ ಮತ್ತು ದರ್ಶನ ನೆರವೇರಿಸಲಿದ್ದಾರೆ. ನಂತರ, ಮಧ್ಯಾಹ್ನ 12:15 ರ ಸುಮಾರಿಗೆ ಅವರು ಶ್ರೀಶೈಲಂನ ಶ್ರೀ ಶಿವಾಜಿ ಸ್ಪೂರ್ಣಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.

ನಂತರ ಪ್ರಧಾನಮಂತ್ರಿಯವರು ಕರ್ನೂಲ್‌ಗೆ ಪ್ರಯಾಣಿಸಲಿದ್ದಾರೆ. ಅಲ್ಲಿಅವರು ಮಧ್ಯಾಹ್ನ 2:30 ರ ಸುಮಾರಿಗೆ ಸುಮಾರು 13,430 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಶ್ರೀಶೈಲಂನಲ್ಲಿ ಪ್ರಧಾನಮಂತ್ರಿ

12 ಜ್ಯೋತಿರ್ಲಿಂಗಗಳಲ್ಲಿಒಂದಾದ ಮತ್ತು 52 ಶಕ್ತಿ ಪೀಠಗಳಲ್ಲಿಒಂದಾದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ವರ್ಲಾ ದೇವಸ್ಥಾನದಲ್ಲಿ ಪ್ರಧಾನಮಂತ್ರಿಯವರು ಪೂಜೆ ಮತ್ತು ದರ್ಶನ ನೆರವೇರಿಸಲಿದ್ದಾರೆ. ಈ ದೇವಾಲಯದ ವಿಶಿಷ್ಟ ಲಕ್ಷಣವೆಂದರೆ ಒಂದೇ ದೇವಾಲಯದ ಆವರಣದಲ್ಲಿ ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠದ ಸಹಬಾಳ್ವೆ, ಇದು ಇಡೀ ದೇಶದಲ್ಲೇ ವಿಶಿಷ್ಟವಾಗಿದೆ.

ನಾಲ್ಕು ಮೂಲೆಗಳಲ್ಲಿಇರಿಸಲಾಗಿರುವ ಪ್ರತಾಪಗಢ, ರಾಜಗಢ, ರಾಯಗಢ ಮತ್ತು ಶಿವನೇರಿ ಎಂಬ ನಾಲ್ಕು ಅಪ್ರತಿಮ ಕೋಟೆಗಳ ಮಾದರಿಗಳನ್ನು ಒಳಗೊಂಡಿರುವ ಧ್ಯಾನ ಮಂದಿರ (ಧ್ಯಾನ ಸಭಾಂಗಣ) ಒಳಗೊಂಡಿರುವ ಶ್ರೀ ಶಿವಾಜಿ ಸ್ಫೂರ್ತಿ ಕೇಂದ್ರಕ್ಕೂ ಪ್ರಧಾನಿ ಭೇಟಿ ನೀಡಲಿದ್ದಾರೆ. ಇದರ ಮಧ್ಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಆಳವಾದ ಧ್ಯಾನದಲ್ಲಿರುವ ಪ್ರತಿಮೆ ಇದೆ. 1677 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪವಿತ್ರ ದೇವಾಲಯಕ್ಕೆ ಐತಿಹಾಸಿಕ ಭೇಟಿ ನೀಡಿದ ನೆನಪಿಗಾಗಿ ಶ್ರೀಶೈಲಂನಲ್ಲಿ ಸ್ಥಾಪಿಸಲಾದ ಶ್ರೀ ಶಿವಾಜಿ ಸ್ಮಾರಕ ಸಮಿತಿಯು ಈ ಕೇಂದ್ರವನ್ನು ನಡೆಸುತ್ತಿದೆ.

ಕರ್ನೂಲ್‌ ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಮಾರು 13,430 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳು ಕೈಗಾರಿಕೆ, ವಿದ್ಯುತ್‌ ಪ್ರಸರಣ, ರಸ್ತೆಗಳು, ರೈಲ್ವೆ, ರಕ್ಷ ಣಾ ಉತ್ಪಾದನೆ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ವ್ಯಾಪಿಸಿವೆ. ಇದು ಪ್ರಾದೇಶಿಕ ಮೂಲಸೌಕರ್ಯಗಳನ್ನು ಹೆಚ್ಚಿಸುವ, ಕೈಗಾರಿಕೀಕರಣವನ್ನು ವೇಗಗೊಳಿಸುವ ಮತ್ತು ರಾಜ್ಯದಲ್ಲಿಅಂತರ್ಗತ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಕರ್ನೂಲ್‌-3 ಪೂಲಿಂಗ್‌ ಸ್ಟೇಷನ್‌ನಲ್ಲಿ2,880 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯಲ್ಲಿ ಪ್ರಸರಣ ವ್ಯವಸ್ಥೆಯನ್ನು ಬಲಪಡಿಸುವ ಕಾಮಗಾರಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು 765 ಕೆವಿ ಡಬಲ್‌-ಸಕ್ರ್ಯೂಟ್‌ ಕರ್ನೂಲ್‌-3 ಪೂಲಿಂಗ್‌ ಸ್ಟೇಷನ್‌-ಚಿಲಕಲೂರಿಪೇಟೆ ಪ್ರಸರಣ ಮಾರ್ಗದ ನಿರ್ಮಾಣವನ್ನು ಒಳಗೊಂಡಿದೆ, ಇದು ಪರಿವರ್ತನೆ ಸಾಮರ್ಥ್ಯ‌ವನ್ನು 6,000 ಎಂವಿಎ ಹೆಚ್ಚಿಸುತ್ತದೆ ಮತ್ತು ರಾಷ್ಟ್ರದ ಬೆಳವಣಿಗೆಯನ್ನು ಬೆಂಬಲಿಸಲು ನವೀಕರಿಸಬಹುದಾದ ಇಂಧನದ ದೊಡ್ಡ ಪ್ರಮಾಣದ ಪ್ರಸರಣವನ್ನು ಸಕ್ರಿಯಗೊಳಿಸುತ್ತದೆ.

ಕರ್ನೂಲ್‌ನ ಓರ್ವಕಲ್‌ ಕೈಗಾರಿಕಾ ಪ್ರದೇಶ ಮತ್ತು ಕಡಪದ ಕೊಪ್ಪಾರ್ಥಿ ಕೈಗಾರಿಕಾ ಪ್ರದೇಶಕ್ಕೆ ಒಟ್ಟು 4,920 ಕೋಟಿ ರೂ.ಗಳ ಹೂಡಿಕೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನ್ಯಾಷನಲ್‌ ಇಂಡಸ್ಟ್ರಿಯಲ್‌ ಕಾರಿಡಾರ್‌ ಡೆವಲಪ್ಮೆಂಟ್‌ ಅಂಡ್‌ ಇಂಪ್ಲಿಮೆಂಟೇಶನ್‌ ಟ್ರಸ್ಟ್‌ (ಎನ್‌ಐಸಿಡಿಐಟಿ) ಮತ್ತು ಆಂಧ್ರಪ್ರದೇಶ ಇಂಡಸ್ಟ್ರಿಯಲ್‌ ಇನಾಧ್ರಿಸ್ಟ್ರಕ್ಚರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಎಪಿಐಐಸಿ) ಜಂಟಿಯಾಗಿ ಅಭಿವೃದ್ಧಿಪಡಿಸಿದ ಈ ಆಧುನಿಕ, ಬಹು-ವಲಯ ಕೈಗಾರಿಕಾ ಕೇಂದ್ರಗಳು ಪ್ಲಗ್‌-ಅಂಡ್‌-ಪ್ಲೇ ಮೂಲಸೌಕರ್ಯ ಮತ್ತು ವಾಕ್‌-ಟು-ವರ್ಕ್‌ ಪರಿಕಲ್ಪನೆಯನ್ನು ಹೊಂದಿವೆ. ಇವು 21,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ ಮತ್ತು ಸುಮಾರು ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.

ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸಲು, ಪ್ರಧಾನಮಂತ್ರಿ ಅವರು ವಿಶಾಖಪಟ್ಟಣಂನಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ವ್ಯಾಪಾರ ಮತ್ತು ಉದ್ಯೋಗವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ 960 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಸಬ್ಬಾವರಂನಿಂದ ಶೀಲಾನಗರದವರೆಗಿನ ಆರು ಪಥಗಳ ಗ್ರೀನ್‌ಫೀಲ್ಡ್ ಹೆದ್ದಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಲ್ಲದೆ, ಪಿಲೇರು-ಕಲೂರು ವಿಭಾಗದ ಚತುಷ್ಪಥ, ಕಡಪ/ನೆಲ್ಲೂರು ಗಡಿಯಿಂದ ಸಿ.ಎಸ್‌.ಪುರಂವರೆಗೆ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿ -165ರಲ್ಲಿ ಗುಡಿವಾಡ ಮತ್ತು ನುಜೇಲಾ ರೈಲ್ವೆ ನಿಲ್ದಾಣಗಳ ನಡುವಿನ ಚತುಷ್ಪಥ ರೈಲ್ವೆ ಮೇಲ್ಸೇತುವೆ (ಆರ್‌ಒಬಿ), ರಾಷ್ಟ್ರೀಯ ಹೆದ್ದಾರಿ 716 ರಲ್ಲಿಪಾಪಗ್ನಿ ನದಿಗೆ ಅಡ್ಡಲಾಗಿ ನಿರ್ಮಿಸುವ ಪ್ರಮುಖ ಸೇತುವೆ, ರಾಷ್ಟ್ರೀಯ ಹೆದ್ದಾರಿ 565 ರಲ್ಲಿ ಕಣಿಗಿರಿ ಬೈಪಾಸ್‌ ಮತ್ತು ರಾಷ್ಟ್ರೀಯ ಹೆದ್ದಾರಿ 544 ಡಿಡಿಯಲ್ಲಿಎನ್‌.ಗುಂಡ್ಲಪಲ್ಲಿ ಪಟ್ಟಣದ ಬೈಪಾಸ್‌ ವಿಭಾಗದ ಸುಧಾರಣೆ ಸೇರಿದಂತೆ ಒಟ್ಟು 1,140 ಕೋಟಿ ರೂ.ಗಳ ಆರು ರಸ್ತೆ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಈ ಯೋಜನೆಗಳು ಸುರಕ್ಷತೆಯನ್ನು ಸುಧಾರಿಸುತ್ತವೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ ಮತ್ತು ಆಂಧ್ರಪ್ರದೇಶದಾದ್ಯಂತ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತವೆ.

ಪ್ರಧಾನಮಂತ್ರಿಯವರು 1,200 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವಾರು ಪ್ರಮುಖ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಕೊಟ್ಟವಲಸ-ವಿಜಯನಗರಂ ನಾಲ್ಕನೇ ರೈಲು ಮಾರ್ಗ ಮತ್ತು ಪೆಂಡುರ್ತಿ ಮತ್ತು ಸಿಂಹಾಚಲಂ ಉತ್ತರ ನಡುವಿನ ರೈಲು ಮೇಲ್ಸೇತುವೆಗೆ ಶಂಕುಸ್ಥಾಪನೆ ಮತ್ತು ಕೊಟ್ಟವಲಸ-ಬೊಡ್ಡವರ ವಿಭಾಗ ಮತ್ತು ಶಿಮಿಲಿಗುಡ-ಗೋರಾಪುರ ವಿಭಾಗದ ದ್ವಿಗುಣಗೊಳಿಸುವಿಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದು ಈ ಯೋಜನೆಗಳಲ್ಲಿ ಸೇರಿವೆ. ಈ ಯೋಜನೆಗಳು ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ವೇಗದ ಮತ್ತು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುತ್ತವೆ, ಪ್ರಯಾಣಿಕರು ಮತ್ತು ಸರಕು ಸಾಗಣೆಯ ಸುಗಮ ಸಂಚಾರವನ್ನು ಸುಗಮಗೊಳಿಸುತ್ತವೆ ಮತ್ತು ಈ ಪ್ರದೇಶದಾದ್ಯಂತ ಕೈಗಾರಿಕಾ, ವ್ಯಾಪಾರ ಮತ್ತು ಪ್ರವಾಸೋದ್ಯಮ ಬೆಳವಣಿಗೆಯನ್ನು ಉತ್ತೇಜಿಸುತ್ತವೆ, ಆದರೆ ಸ್ಥಳೀಯ ಸಮುದಾಯಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.

ಇಂಧನ ಕ್ಷೇತ್ರದಲ್ಲಿಆಂಧ್ರಪ್ರದೇಶದಲ್ಲಿಸುಮಾರು 124 ಕಿ.ಮೀ ಮತ್ತು ಒಡಿಶಾದಲ್ಲಿ298 ಕಿ.ಮೀ. ವ್ಯಾಪಿಸಿರುವ ಸುಮಾರು 1,730 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಗೇಲ್‌ ಇಂಡಿಯಾ ಲಿಮಿಟೆಡ್‌ನ ಶ್ರೀಕಾಕುಳಂ-ಅಂಗುಲ್‌ ನೈಸರ್ಗಿಕ ಅನಿಲ ಪೈಪ್‌ಲೈನ್‌ಅನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸುಮಾರು 200 ಕೋಟಿ ರೂ.ಗಳ ಹೂಡಿಕೆಯಲ್ಲಿ ಸ್ಥಾಪಿಸಲಾದ ಇಂಡಿಯನ್‌ ಆಯಿಲ್‌ನ 60 ಟಿಎಂಟಿಪಿಎ (ವಾರ್ಷಿಕ ಸಾವಿರ ಮೆಟ್ರಿಕ್‌ ಟನ್‌) ಎಲ್‌ಪಿಜಿ ಬಾಟ್ಲಿಂಗ್‌ ಘಟಕವನ್ನು ಅವರು ಉದ್ಘಾಟಿಸಲಿದ್ದಾರೆ. ಈ ಘಟಕವು ಆಂಧ್ರಪ್ರದೇಶದ ನಾಲ್ಕು ಜಿಲ್ಲೆಗಳು, ತಮಿಳುನಾಡಿನ ಎರಡು ಜಿಲ್ಲೆಗಳು ಮತ್ತು ಕರ್ನಾಟಕದ ಒಂದು ಜಿಲ್ಲೆಯ 80 ವಿತರಕರ ಮೂಲಕ 7.2 ಲಕ್ಷ ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಲಿದೆ. ಈ ಪ್ರದೇಶದ ಮನೆಗಳು ಮತ್ತು ವ್ಯವಹಾರಗಳಿಗೆ ವಿಶ್ವಾಸಾರ್ಹ ಎಲ್‌ಪಿಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ.

ರಕ್ಷಣಾ ಉತ್ಪಾದನೆಯನ್ನು ಬಲಪಡಿಸಲು, ಸುಮಾರು 360 ಕೋಟಿ ರೂ.ಗಳ ಹೂಡಿಕೆಯಲ್ಲಿಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸ್ಥಾಪಿಸಿದ ಕೃಷ್ಣ ಜಿಲ್ಲೆಯ ನಿಮ್ಮಲೂರಿನಲ್ಲಿಸುಧಾರಿತ ನೈಟ್‌ ವಿಷನ್‌ ಪ್ರಾಡಕ್ಟ್ ಕಾರ್ಖಾನೆಯನ್ನು ಪ್ರಧಾನಮಂತ್ರಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಈ ಸೌಲಭ್ಯವು ಭಾರತೀಯ ರಕ್ಷಣಾ ಪಡೆಗಳಿಗೆ ಸುಧಾರಿತ ಎಲೆಕ್ಟ್ರೋ-ಆಪ್ಟಿಕಲ್‌ ವ್ಯವಸ್ಥೆಗಳನ್ನು ತಯಾರಿಸುತ್ತದೆ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಬಲಪಡಿಸುತ್ತದೆ ಮತ್ತು ಈ ಪ್ರದೇಶದಲ್ಲಿನುರಿತ ಉದ್ಯೋಗವನ್ನು ಉತ್ತೇಜಿಸುತ್ತದೆ.


(Release ID: 2179286) Visitor Counter : 30