ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆನಡಾದ ವಿದೇಶಾಂಗ ಸಚಿವರು


ದ್ವಿಪಕ್ಷೀಯ ಪಾಲುದಾರಿಕೆಗೆ ಕೆನಡಾದ ವಿದೇಶಾಂಗ ಸಚಿವರ ಭೇಟಿಯು ಹೊಸ ವೇಗವನ್ನು ನೀಡುತ್ತದೆ ಎಂದ ಪ್ರಧಾನಮಂತ್ರಿ

ಜಿ-7 ಶೃಂಗಸಭೆಗಾಗಿ ಕೆನಡಾಕ್ಕೆ ನೀಡಿದ ಭೇಟಿ ಮತ್ತು ಆ ಸಮಯದಲ್ಲಿ ಪ್ರಧಾನಮಂತ್ರಿ ಕಾರ್ನಿಯವರೊಂದಿಗಿನ ಮಾತುಕತೆಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ

ವ್ಯಾಪಾರ, ಇಂಧನ, ತಂತ್ರಜ್ಞಾನ, ಕೃಷಿ ಮತ್ತು ಜನರ ನಡುವಿನ ಸಂಬಂಧಗಳಲ್ಲಿ ಉಭಯ ದೇಶಗಳ ನಡುವಿನ ವರ್ಧಿತ ಸಹಕಾರದ ಮಹತ್ವವನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದ್ದಾರೆ

ಪ್ರಧಾನಮಂತ್ರಿ ಕಾರ್ನಿಯವರಿಗೆ ಪ್ರಧಾನಮಂತ್ರಿ ಮೋದಿ ಅವರು ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿ, ತಮ್ಮಿಬ್ಬರ ಮುಂಬರುವ ಭೇಟಿ ಕಾರ್ಯಕ್ರಮಗಳ ನಿರೀಕ್ಷಣೆಯಲ್ಲಿರುವುದಾಗಿ ಸಂದೇಶ ಕಳುಹಿಸಿದ್ದಾರೆ

Posted On: 13 OCT 2025 2:42PM by PIB Bengaluru

ಕೆನಡಾದ ವಿದೇಶಾಂಗ ಸಚಿವರಾದ ಶ್ರೀಮತಿ ಅನಿತಾ ಆನಂದ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಿಯವರು ವಿದೇಶಾಂಗ ಸಚಿವರಾದ ಶ್ರೀಮತಿ ಅನಿತಾ ಆನಂದ್ ಅವರನ್ನು ಸ್ವಾಗತಿಸಿ, ಉಭಯ ನಾಯಕರ ಭೇಟಿಯು ಭಾರತ ಹಾಗೂ ಕೆನಡಾದ ದ್ವಿಪಕ್ಷೀಯ ಪಾಲುದಾರಿಕೆಗೆ ಹೊಸ ಆವೇಗವನ್ನು ನೀಡುವ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಈ ವರ್ಷದ ಜೂನ್‌ನಲ್ಲಿ ಜಿ-7 ಶೃಂಗಸಭೆಗಾಗಿ ಕೆನಡಾಕ್ಕೆ ತಾವು ನೀಡಿದ್ದ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ ಅವರು, ಆ ಸಂದರ್ಭದಲ್ಲಿ ಪ್ರಧಾನಮಂತ್ರಿ ಮಾರ್ಕ್ ಕಾರ್ನಿಯವರೊಂದಿಗಿನ ಅತ್ಯಂತ ಫಲಪ್ರದ ಸಭೆಯನ್ನೂ ಕೂಡ ಮೆಲುಕುಹಾಕಿದರು.

ವ್ಯಾಪಾರ, ಇಂಧನ, ತಂತ್ರಜ್ಞಾನ, ಕೃಷಿ ಮತ್ತು ಉಭಯ ದೇಶದ ಜನರ ನಡುವಿನ ಸಂಬಂಧಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ವೃದ್ಧಿಯ ಮಹತ್ವವನ್ನು ಕೂಡಾ ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.

ಪ್ರಧಾನಮಂತ್ರಿ ಮಾರ್ಕ್ ಕಾರ್ನಿಯವರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿ, ತಮ್ಮಿಬ್ಬರ ಮುಂಬರುವ ಭೇಟಿ ಕಾರ್ಯಕ್ರಮಗಳ ನಿರೀಕ್ಷಣೆಯಲ್ಲಿರುವುದಾಗಿ ಪ್ರಧಾನಮಂತ್ರಿ ಮೋದಿ ಅವರು ಸಂದೇಶ ರವಾನಿಸಿದ್ದಾರೆ.

 

*****


(Release ID: 2178517) Visitor Counter : 5