ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಸ್ವಾವಲಂಬನೆ ಮತ್ತು ಬೆಳವಣಿಗೆಯ ಹಾದಿಯನ್ನು ಎತ್ತಿ ತೋರಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
13 OCT 2025 12:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೇಂದ್ರ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿಯವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ, ಈ ಲೇಖನವು ಪ್ರಮಾಣ, ಕೌಶಲ್ಯ ಮತ್ತು ಸ್ವಾವಲಂಬನೆಯ ಮೂಲಕ ಭಾರತದ ಅಭಿವೃದ್ಧಿಯನ್ನು ವಿಶಿಷ್ಟ ವಿಧಾನದಲ್ಲಿ ದೃಷ್ಟಾಂತಗೊಳಿಸುತ್ತದೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಒಳಮುಖವಾಗಿ ಮುದುರುತ್ತಿರುವ ಈ ಸಂದರ್ಭದಲ್ಲಿ, ಭಾರತವು ಸುಧಾರಣೆಗಳು, ಡಿಜಿಟಲ್ ನಾವೀನ್ಯತೆ ಮತ್ತು ಅದರ ಯುವ ಕಾರ್ಯಪಡೆಯ ಬಲದಿಂದ ನಡೆಸಲ್ಪಡುವ ವಿಭಿನ್ನ ಹಾದಿಯಲ್ಲಿ ಸಾಗುತ್ತಿದ್ದು, ಇವು ವಿಶ್ವದ ಬೆಳವಣಿಗೆಯ ಚಾಲಕನಾಗಿ ರಾಷ್ಟ್ರದ ಉನ್ನತೀಕರಣಕ್ಕೆ ಶಕ್ತಿ ತುಂಬುವ ಅಂಶಗಳಾಗಿವೆ ಎಂದು ಶ್ರೀ ಹರ್ ದೀಪ್ ಸಿಂಗ್ ಪುರಿಯವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಈ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರ ಕಚೇರಿಯು, Xನಲ್ಲಿ:
“ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಒಳಮುಖ ತಿರುವನ್ನು ಪಡೆಯುತ್ತಿರುವ ಈ ಸಂದರ್ಭದಲ್ಲಿ, ಭಾರತವು ಪ್ರಮಾಣ, ಕೌಶಲ್ಯ ಮತ್ತು ಸ್ವಾವಲಂಬನೆಯ ಮೂಲಕ ವಿಭಿನ್ನ ಹಾದಿಯನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವರಾದ ಶ್ರೀ @HardeepSPuri ಎತ್ತಿ ತೋರಿಸಿದ್ದಾರೆ. ಸುಧಾರಣೆಗಳು, ಡಿಜಿಟಲ್ ನಾವೀನ್ಯತೆ ಮತ್ತು ಯುವ ಕಾರ್ಯಪಡೆಯು ವಿಶ್ವದ ಬೆಳವಣಿಗೆಯ ಎಂಜಿನ್ ಆಗಿ ಭಾರತದ ಅಭಿವೃದ್ದಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಲೇಖನವನ್ನು ನಮೋ ಅಪ್ಲಿಕೇಶನ್ ಮೂಲಕ ಓದಿ.
https://indianexpress.com/article/opinion/columns/developed-world-is-building-walls-indias-answer-lies-in-scale-skill-and-self-reliance-10303095/
via NaMo App”
*****
(Release ID: 2178487)
Visitor Counter : 6
Read this release in:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam