ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಚ್ಛತಾ ಯೋಜನೆಯನ್ನು ಸಾಂಸ್ಥಿಕಗೊಳಿಸುವ ಮತ್ತು ಸರ್ಕಾರದಲ್ಲಿ ಕೆಲಸ ಮತ್ತು ವ‌ಸ್ತುಗಳು ಬಾಕಿ ಇರುವಿಕೆ ಕಡಿಮೆ ಮಾಡುವ ದೃಷ್ಟಿಕೋನದಿಂದ ಪ್ರೇರಿತರಾಗಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಕೇಂದ್ರ ಗೃಹ ಸಚಿವಾಲಯವು ಈ ಯೋಜನೆಯಲ್ಲಿ ಸಕ್ರಿಯ ಭಾಗವಹಿಸುವ ಮೂಲಕ ವಿಶೇಷ ಅಭಿಯಾನವನ್ನು ನಡೆಸುತ್ತಿದೆ


ನವೆಂಬರ್ 2024 ರಿಂದ ಆಗಸ್ಟ್ 2025 ರವರೆಗೆ ಸಂಸದರಿಂದ 493 ಉಲ್ಲೇಖಗಳು, ಸಂಪುಟದಿಂದ 2 ಪ್ರಸ್ತಾವನೆಗಳು, ರಾಜ್ಯ ಸರ್ಕಾರಗಳಿಂದ 104 ಉಲ್ಲೇಖಗಳು ಮತ್ತು ಪ್ರಧಾನಮಂತ್ರಿ ಕಾರ್ಯಾಲಯದಿಂದ 30 ಉಲ್ಲೇಖಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ, 40880 ಸಾರ್ವಜನಿಕ ಕುಂದುಕೊರತೆಗಳ ಅರ್ಜಿಗಳನ್ನು ಮತ್ತು 1864 ಮೇಲ್ಮನವಿಗಳನ್ನು ಸಹ ವಿಲೇವಾರಿ ಮಾಡಲಾಗಿದೆ

ಕ್ಷೇತ್ರ/ಹೊರಠಾಣೆ ಬಾಹ್ಯ ಕಚೇರಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಒಟ್ಟು 2405 ಸ್ವಚ್ಛತಾ ಅಭಿಮಾನಿಗಳನ್ನು ಸಚಿವಾಲಯವು ನಡೆಸಿದೆ

ಎಂಎಚ್‌ಎ/ಸಿಎಪಿಎಫ್‌ಗಳ ಕಚೇರಿಗಳಲ್ಲಿ 79774 ಚದರ ಅಡಿ ಜಾಗವನ್ನು ತ್ಯಾಜ್ಯ ಮುಕ್ತಗೊಳಿಸಲಾಗಿದೆ

ಎಂಎಚ್‌ಎಯಲ್ಲಿ ಆಯೋಜಿಸಲಾದ ವಿಶೇಷ ಅಭಿಯಾನವು ಬಾಕಿ ಇರುವ ಉಲ್ಲೇಖಗಳ ವಿಲೇವಾರಿಯೊಂದಿಗೆ ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೆಲಸದ ಸ್ಥಳಗಳ ಮೇಲೆ ಕೇಂದ್ರೀಕರಿಸುತ್ತದೆ

Posted On: 07 OCT 2025 12:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಚ್ಛತಾ ಯೋಜನೆಯನ್ನು ಸಾಂಸ್ಥಿಕಗೊಳಿಸುವ ದೃಷ್ಟಿಕೋನದಿಂದ ಪ್ರೇರಿತವಾಗಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಸರ್ಕಾರದಲ್ಲಿ ಬಾಕಿ ಇರುವ, ಕೆಲಸ, ವಸ್ತು, ವಿಲೇವಾರಿ, ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಸಕ್ರಿಯವಾಗಿ ಭಾಗವಹಿಸುವ ಮೂಲಕ ತನ್ನದೇ ಆದ ವಿಶೇಷ ಅಭಿಯಾನವನ್ನು ನಡೆಸುತ್ತಿದೆ.

ಕೇಂದ್ರ ಗೃಹ ಸಚಿವಾಲಯ ಮತ್ತು ಅದರಡಿ ಬರುವ ಸಂಸ್ಥೆಗಳು ನವೆಂಬರ್ 2024 ರಿಂದ ಆಗಸ್ಟ್ 2025 ರವರೆಗೆ ಮಾಸಿಕವಾಗಿ ಬಾಕಿ ಇರುವ ವಿಷಯಗಳನ್ನು ಕಡಿಮೆ ಮಾಡಲು ವಿಶೇಷ ಅಭಿಯಾನವನ್ನು ಸಕ್ರಿಯವಾಗಿ ನಡೆಸುತ್ತಿವೆ.

ಈ ಅವಧಿಯಲ್ಲಿ ಸಚಿವಾಲಯವು ಮಾಡಿರುವ ಪ್ರಮುಖ ಸಾಧನೆಗಳು:

  • ಕ್ಷೇತ್ರ/ಹೊರಠಾಣಾ ಕಚೇರಿಗಳು ಸೇರಿದಂತೆ ಸಚಿವಾಲಯವು ವಿವಿಧ ಸ್ಥಳಗಳಲ್ಲಿ ನಡೆಸಿದ 2405 ಸ್ವಚ್ಛತಾ ಅಭಿಯಾನಗಳು
  • ಸಂಸದರಿಂದ 493 ಉಲ್ಲೇಖಗಳು, ಸಂಪುಟದಿಂದ 2 ಪ್ರಸ್ತಾವನೆಗಳು, ರಾಜ್ಯ ಸರ್ಕಾರಗಳಿಂದ 104 ಉಲ್ಲೇಖಗಳು ಮತ್ತು ಪ್ರಧಾನಮಂತ್ರಿ ಅವರ ಕಚೇರಿಯಿಂದ 30 ಉಲ್ಲೇಖಗಳ ವಿಲೇವಾರಿ
  • ನವೆಂಬರ್ 2024 ರಿಂದ ಆಗಸ್ಟ್ 2025 ರವರೆಗೆ ಸ್ವೀಕರಿಸಿದ ಒಟ್ಟು 40880 ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ನಿಟ್ಟಿನಲ್ಲಿ ಅರ್ಜಿ ಮತ್ತು
  • 1864 ಪರಿಹಾರ ನಿಟ್ಟಿನಲ್ಲಿ ಮೇಲ್ಮನವಿಗಳನ್ನು ಸಚಿವಾಲಯ ವಿಲೇವಾರಿ ಮಾಡಿದೆ.
  • ಕೇಂದ್ರ ಗೃಹ ಸಚಿವಾಲಯ /ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿ.ಎ.ಪಿ.ಎಫ್.ಗಳು) ಕಚೇರಿಗಳಲ್ಲಿ 79774 ಚದರ ಅಡಿ ಜಾಗವನ್ನು ತ್ಯಾಜ್ಯ ಮುಕ್ತಗೊಳಿಸಲಾಗಿದೆ.

ಸುಗಮ ದತ್ತಾಂಶ ಸಂಗ್ರಹಣೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು, ಸಚಿವಾಲಯದೊಳಗಿನ ಪೋರ್ಟಲ್ ಅನ್ನು ಕೇಂದ್ರ ಗೃಹ ಸಚಿವಾಲಯ ಬಳಸುತ್ತಿದೆ, ಇದರಲ್ಲಿ ಸಚಿವಾಲಯದೊಳಗಿನ ಎಲ್ಲಾ ವಿಭಾಗಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು/ದೆಹಲಿ ಪೊಲೀಸರು ಅಭಿಯಾನಕ್ಕೆ ಸಂಬಂಧಿಸಿದ ಮಾಹಿತಿ /ಡೇಟಾವನ್ನು ಅಧಿಕಾರಿಗಳು ಅಪ್‌ಲೋಡ್ ಮಾಡುತ್ತಾರೆ. ಇದು ವಿಭಾಗಗಳು/ಕಚೇರಿಗಳೊಂದಿಗೆ ಪರಸ್ಪರ ಪರಿಣಾಮಕಾರಿಯಾಗಿ ಸಮನ್ವಯಗೊಳಿಸಲು ಸಹಾಯ ಮಾಡಿದೆ, ಇದರಿಂದಾಗಿ, ಯಾವುದೇ ವಿಳಂಬವಿಲ್ಲದೆ ಸರಿಯಾದ ಮಾಹಿತಿ / ವಿವರ/ಡೇಟಾವನ್ನು ಪಡೆಯಲು ಅನುಕೂಲವಾಗುತ್ತದೆ.

ಕೇಂದ್ರ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ಡಿ.ಎ.ಎರ್.ಪಿ.ಜಿ.) ನಡೆಸುತ್ತಿರುವ ಪ್ರಸ್ತುತ ವಿಶೇಷ ಅಭಿಯಾನ 5.0 ಗಾಗಿ, ಕೇಂದ್ರ ಗೃಹ ಸಚಿವಾಲಯವು ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೆಲಸದ ಸ್ಥಳಗಳ ಮೇಲೆ ಕೇಂದ್ರೀಕರಿಸುವ ವಿಶೇಷ ಅಭಿಯಾನವನ್ನು ಸಕ್ರಿಯವಾಗಿ ಕೈಗೆತ್ತಿಕೊಳ್ಳುತ್ತಿದೆ, ಜೊತೆಗೆ ಸಂಸತ್ತಿನ ಸದಸ್ಯರ ಬಾಕಿ ಉಲ್ಲೇಖಗಳು, ರಾಜ್ಯ ಸರ್ಕಾರಗಳ ಉಲ್ಲೇಖಗಳು, ಸಂಸತ್ತಿನ ಭರವಸೆಗಳು, ಅಂತರ-ಸಚಿವಾಲಯ ಸಮಾಲೋಚನೆಗಳು, ಸಾರ್ವಜನಿಕ ಕುಂದುಕೊರತೆಗಳ ಅರ್ಜಿಗಳನ್ನು/ಮೇಲ್ಮನವಿಗಳು ಮತ್ತು ಸುಧಾರಿತ ದಾಖಲೆ ನಿರ್ವಹಣೆಯನ್ನು ಕೈಗೊಳ್ಳುತ್ತಿದೆ.

ವಿಶೇಷ ಅಭಿಯಾನ 5.0 ಅನ್ನು ಸಚಿವಾಲಯದಲ್ಲಿ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಕಾಪ್ಸ್ ಗಳು) ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳು (ಸಿ ಪಿ ಒ ಗಳು) ಹಾಗೂ ಸಚಿವಾಲಯದ ಇತರೇ ಸಂಸ್ಥೆಗಳಿಗೆ ವಿಶೇಷ ಅಭಿಯಾನದ ಮಹತ್ವವನ್ನು ಒತ್ತಿಹೇಳಲಾಗಿದೆ ಮತ್ತು ಗುರುತಿಸಲಾದ ನಿಯತಾಂಕಗಳ ಪ್ರಕಾರ ಅತ್ಯುತ್ತಮವಾದದ್ದನ್ನು ಸಾಧಿಸಲು ಅವರು ಹೆಚ್ಚುವರಿ ಉಪಕ್ರಮ ಅಳವಡಿಸಲು ಈಗಾಗಲೇ ಸಿದ್ಧರಾಗಿದ್ದಾರೆ. 

 

*****
 


(Release ID: 2175749) Visitor Counter : 6