ಪ್ರಧಾನ ಮಂತ್ರಿಯವರ ಕಛೇರಿ
ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಕಾಲಿಡುತ್ತಿರುವ ಪ್ರಧಾನಮಂತ್ರಿ ಜನತೆಗೆ ಕೃತಜ್ಞತೆ ಸಲ್ಲಿಕೆ
2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ
ಸದಾ ಬಡವರಿಗಾಗಿ ಕೆಲಸ ಮಾಡು ಮತ್ತು ಎಂದಿಗೂ ಲಂಚ ಪಡೆಯಬೇಡ ಎಂಬ ತಾಯಿಯ ಸಲಹೆಯನ್ನು ಹಂಚಿಕೊಂಡ ಪ್ರಧಾನಮಂತ್ರಿ
ಬರಪೀಡಿತ ರಾಜ್ಯದಿಂದ ಉತ್ತಮ ಆಡಳಿತದ ಶಕ್ತಿ ಕೇಂದ್ರವಾಗಿ ಗುಜರಾತ್ ಪರಿವರ್ತನೆಗೊಂಡಿರುವುದನ್ನು ಸ್ಮರಿಸಿದ ಪ್ರಧಾನಮಂತ್ರಿ
ವಿಕಸಿತ ಭಾರತದ ಕನಸನ್ನು ನನಸಾಗಿಸಲು ಹೆಚ್ಚು ಶ್ರಮಿಸುವ ಬದ್ಧತೆ ಪುನರುಚ್ಚರಿಸಿದ ಪ್ರಧಾನಮಂತ್ರಿ
Posted On:
07 OCT 2025 10:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ದೇಶದ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. 2001ರ ಇದೇ ದಿನ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರದ ತಮ್ಮ ಪಯಣವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ , ಜನರ ಜೀವನವನ್ನು ಸುಧಾರಿಸಲು ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ನಿರಂತರ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ತುಂಬಾ ಸಂಕೀರ್ಣ ಸಂದರ್ಭದಲ್ಲಿ ತಾನು ಗುಜರಾತ್ ಮುಖ್ಯಮಂತ್ರಿಯಾಗುವ ಜವಾಬ್ದಾರಿಯನ್ನುವಹಿಸಿಕೊಂಡೆ ಎಂದು ಪ್ರಧಾನಮಂತ್ರಿ ಹೇಳಿದರು. ಆ ವರ್ಷ ರಾಜ್ಯವು ಭಾರಿ ಭೂಕಂಪಕ್ಕೆ ತುತ್ತಾಗಿತ್ತು ಮತ್ತು ಹಿಂದಿನ ವರ್ಷಗಳಲ್ಲಿ ಸೂಪರ್ ಚಂಡಮಾರತ, ಸತತ ಬರಗಾಲ ಮತ್ತು ರಾಜಕೀಯ ಅಸ್ಥಿರತೆಯನ್ನು ಸಹ ಎದುರಿಸಿತ್ತು. ಈ ಸವಾಲುಗಳು ಜನರಿಗೆ ಸೇವೆ ಸಲ್ಲಿಸುವ ಮತ್ತು ನವೀಕೃತ ಶಕ್ತಿ ಮತ್ತು ಹೊಸ ಭರವಸೆಯೊಂದಿಗೆ ಗುಜರಾತ್ ಅನ್ನು ಪುನರ್ ನಿರ್ಮಾಣ ಮಾಡುವ ಸಂಕಲ್ಪವನ್ನು ಮತ್ತಷ್ಟು ಬಲವರ್ಧನೆಗೊಳಿಸಿದವು ಎಂದು ಅವರು ಹೇಳಿದರು.
ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ತಮ್ಮ ತಾಯಿ ಹೇಳಿದ ಮಾತುಗಳನ್ನು ಶ್ರೀ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ. ಅವರು ಸದಾ ಬಡವರಿಗಾಗಿ ಕೆಲಸ ಮಾಡಬೇಕು ಮತ್ತು ಎಂದಿಗೂ ಲಂಚ ತೆಗೆದುಕೊಳ್ಳಬಾರದು ಎಂದು ಹೇಳಿದ್ದರು. ಆಗ ತಾವು ಏನೇ ಕೆಲಸ ಮಾಡಿದರೂ ಅದು ಉತ್ತಮ ಉದ್ದೇಶದಿಂದ ಮತ್ತು ಸಮಾಜದ ಕಟ್ಟಕಡೆಯಲ್ಲಿರುವ ವ್ಯಕ್ತಿಗೆ ಸೇವೆ ಸಲ್ಲಿಸುವ ದೂರದೃಷ್ಟಿಯಿಂದ ಪ್ರೇರಿತವಾಗಿರುತ್ತದೆಂದು ಜನರಿಗೆ ಭರವಸೆ ನೀಡಿದ್ದೆ ಎಂದು ಅವರು ಹೇಳಿದರು.
ಗುಜರಾತ್‌ನಲ್ಲಿನ ತಮ್ಮ ಅಧಿಕಾರಾವಧಿಯನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ , ಆ ಸಮಯದಲ್ಲಿ ರಾಜ್ಯವು ಮತ್ತೆ ಎಂದಿಗೂ ಮೇಲೇರಲು ಸಾಧ್ಯವಿಲ್ಲವೆಂದು ಜನರು ನಂಬಿದ್ದರೆದು ಹೇಳಿದರು. ರೈತರು ವಿದ್ಯುತ್ ಮತ್ತು ನೀರಿನ ಕೊರತೆ ಎದುರಿಸುತ್ತಿದ್ದವೆಂದು, ಕೃಷಿ ಕುಂಠಿತವಾಗಿದೆ ಮತ್ತು ಕೈಗಾರಿಕಾ ಬೆಳವಣಿಗೆ ಸ್ಥಿರವಾಗಿ ನಿಂತುಬಿಟ್ಟಿತ್ತು ಎಂಬ ದೂರಿತ್ತು. ಸಾಮೂಹಿಕ ಪ್ರಯತ್ನದ ಮೂಲಕ ಗುಜರಾತ್ ಉತ್ತಮ ಆಡಳಿತದ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿತು ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಬರಗಾಲಕ್ಕೆ ತುತ್ತಾಗಿದ್ದ ರಾಜ್ಯವು ಕೃಷಿಯಲ್ಲಿ ಅಗ್ರಗಣ್ಯ ಸಾಧನೆ ಮಾಡಿತು, ವ್ಯಾಪಾರವು ಉತ್ಪಾದನೆ ಮತ್ತು ಕೈಗಾರಿಕಾ ಸಾಮರ್ಥ್ಯಕ್ಕೆ ವಿಸ್ತರಿಸಿತು ಮತ್ತು ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯವು ಉತ್ತೇಜನವನ್ನು ಪಡೆಯಿತು ಎಂದು ಅವರು ಹೇಳಿದರು.
2013ರಲ್ಲಿ ದೇಶವು ನಂಬಿಕೆ ಮತ್ತು ಆಡಳಿತದ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಮಯದಲ್ಲಿ 2014ರ ಲೋಕಸಭಾ ಚುನಾವಣೆಗೆ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಜವಾಬ್ದಾರಿ ತನಗೆ ಹೊರಿಸಲಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಜನರು ತಮ್ಮ ಮೈತ್ರಿಕೂಟಕ್ಕೆ ಅಭೂತಪೂರ್ವ ಬಹುಮತದೊಂದಿಗೆ ತಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತವನ್ನು ನೀಡಿದರು, ಇದು ಹೊಸ ವಿಶ್ವಾಸ ಮತ್ತು ಉದ್ದೇಶದ ಯುಗಕ್ಕೆ ನಾಂದಿ ಹಾಡಿತು ಎಂದು ಅವರು ಹೇಳಿದರು.
ಕಳೆದ 11 ವರ್ಷಗಳಲ್ಲಿ ಭಾರತವು ಅನೇಕ ಪರಿವರ್ತನೆಗಳನ್ನು ಮಾಡಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. 25 ಕೋಟಿಗೂ ಅಧಿಕ ಜನರನ್ನು ಬಡತನ ರೇಖೆಯಿಂದ ಹೊರತರಲಾಗಿದೆ ಮತ್ತು ದೇಶವು ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ತಾಣವಾಗಿ ರೂಪುಗೊಂಡಿದೆ. ದೇಶಾದ್ಯಂತ ಜನರು, ವಿಶೇಷವಾಗಿ ನಾರಿ ಶಕ್ತಿ, ಯುವ ಶಕ್ತಿ ಮತ್ತು ಶ್ರಮಶೀಲ ಅನ್ನದಾತರನ್ನು ಹೊಸ ಪಥದತ್ತ ಸಾಗುವ ಪ್ರಯತ್ನಗಳು ಮತ್ತು ಸುಧಾರಣೆಗಳ ಮೂಲಕ ಸಬಲೀಕರಣಗೊಳಿಸಲಾಗಿದೆ ಎಂದು ಅವರು ಹೇಳಿದರು.
ಇಂದಿನ ಜನಪ್ರಿಯ ಭಾವನೆಯೆಂದರೆ, ಭಾರತವನ್ನು ಎಲ್ಲಾ ವಲಯಗಳಲ್ಲಿ ಆತ್ಮನಿರ್ಭರಗೊಳಿಸುವುದು ಅದು 'ಗರ್ವ್ ಸೆ ಕಹೋ, ಯೇ ಸ್ವದೇಶಿ ಹೈ' ಎಂಬ ಕರೆಯಲ್ಲಿ ಪ್ರತಿಫಲನಗೊಳ್ಳುತ್ತಿದೆ.
ಭಾರತದ ಜನರ ನಿರಂತರ ನಂಬಿಕೆ ಮತ್ತು ವಾತ್ಸಲ್ಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಪುನರುಚ್ಚರಿಸಿದ ಪ್ರಧಾನಮಂತ್ರಿ, ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ಅತ್ಯುನ್ನತ ಗೌರವ ಎಂದು ಹೇಳಿದರು. ಸಂವಿಧಾನದ ಮೌಲ್ಯಗಳ ಮಾರ್ಗದರ್ಶನದಿಂದ ತಾವು ವಿಕಸಿತ ಭಾರತದ ಸಾಮೂಹಿಕ ಕನಸನ್ನು ನನಸಾಗಿಸಲು ಇನ್ನಷ್ಟು ಶ್ರಮಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನ ಸರಣಿಯಲ್ಲಿ ಹೀಗೆ ಹೇಳಿದ್ದಾರೆ.
“2001ರ ಇದೇ ದಿನದಂದು ನಾನು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ನನ್ನೆಲ್ಲಾ ಆತ್ಮೀಯ ಭಾರತೀಯರ ನಿರಂತರ ಆಶೀರ್ವಾದದಿಂದ ನಾನು ಸರ್ಕಾರದ ಮುಖ್ಯಸ್ಥನಾಗಿ 25 ನೇ ವರ್ಷವನ್ನು ಪ್ರವೇಶಿಸುತ್ತಿದ್ದೇನೆ. ಭಾರತದ ಜನರಿಗೆ ನನ್ನ ಕೃತಜ್ಞತೆಗಳು. ಈ ಎಲ್ಲಾ ವರ್ಷಗಳಲ್ಲಿ ನಮ್ಮ ಜನರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ನಮ್ಮೆಲ್ಲರನ್ನೂ ಪೋಷಿಸುತ್ತಿರುವ ಈ ಶ್ರೇಷ್ಠ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ನಾನು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇನೆ’’
“ಬಹಳ ಕಠಿಣ ಪರೀಕ್ಷೆಯ ಸಂದರ್ಭದಲ್ಲಿ ನನ್ನ ಪಕ್ಷವು ನನಗೆ ಗುಜರಾತ್ ಮುಖ್ಯಮಂತ್ರಿಯಾಗುವ ಜವಾಬ್ದಾರಿಯನ್ನು ವಹಿಸಿತ್ತು. ಅದೇ ವರ್ಷದಲ್ಲಿ ರಾಜ್ಯವು ಭಾರಿ ಭೂಕಂಪದಿಂದ ತುತ್ತಾಗಿತ್ತು. ಅದರ ಹಿಂದಿನ ವರ್ಷಗಳು ಸೂಪರ್ ಚಂಡಮಾರುತ, ಸತತ ಬರಗಾಲ ಮತ್ತು ರಾಜಕೀಯ ಅಸ್ಥಿರತೆಗೆ ಸಾಕ್ಷಿಯಾಗಿದ್ದವು. ಆ ಸವಾಲುಗಳು ಜನರಿಗೆ ಸೇವೆ ಸಲ್ಲಿಸುವ ಮತ್ತು ಹೊಸ ಚೈತನ್ಯ ಮತ್ತು ಭರವಸೆಯೊಂದಿಗೆ ಗುಜರಾತ್ ಅನ್ನು ಪುನರ್ ನಿರ್ಮಾಣ ಸಂಕಲ್ಪವನ್ನು ನನ್ನಲ್ಲಿ ಬಲಪಡಿಸಿತು’’
“ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ನನ್ನ ತಾಯಿ ನನಗೆ ಹೇಳಿದ್ದು ನೆನಪಿದೆ -ನಿನ್ನ ಕೆಲಸದ ಬಗ್ಗೆ ನನಗೆ ಹೆಚ್ಚು ತಿಳುವಳಿಕೆ ಇಲ್ಲ, ಆದರೆ ನಾನು ಎರಡು ವಿಷಯಗಳನ್ನು ಮಾತ್ರ ತಿಳಿಸ ಬಯಸುತ್ತೇನೆ. ಮೊದಲನೆಯದಾಗಿ, ನೀನು ಸದಾ ಬಡವರಿಗಾಗಿ ಕೆಲಸ ಮಾಡುತ್ತಿರು ಮತ್ತು ಎರಡನೆಯದಾಗಿ, ನೀನು ಎಂದಿಗೂ ಲಂಚ ತೆಗೆದುಕೊಳ್ಳಬೇಡ ಎಂದು. ಹಾಗಾಗಿ ನಾನು ಏನೇ ಮಾಡಿದರೂ ಅದು ಉತ್ತಮ ಉದ್ದೇಶದಿಂದ ಮತ್ತು ಸಮಾಜದಲ್ಲಿ ಕಟ್ಟಕಡೆಯಲ್ಲಿರುವ ವ್ಯಕ್ತಿಗೆ ಸೇವೆ ಸಲ್ಲಿಸುವ ದೂರದೃಷ್ಟಿಯೊಂದಿಗೆ ಪ್ರೇರಿತವಾಗಿರುತ್ತದೆಂದು ನಾನು ಜನರಿಗೆ ಭರವಸೆ ನೀಡಿದ್ದೇನೆ’’
“ಈ 25 ವರ್ಷಗಳು ಹಲವು ಅನುಭವಗಳಿಂದ ಕೂಡಿವೆ. ಒಟ್ಟಾರೆ ನಾವು ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ನನಗೆ ಚೆನ್ನಾಗಿ ನೆನೆಪಿದೆ ಗುಜರಾತ್ ಮತ್ತೆ ಎಂದಿಗೂ ಮೇಲೇರಲು ಸಾಧ್ಯವಿಲ್ಲ ಎಂದು ನಂಬಲಾಗಿತ್ತು. ರೈತರು ಸೇರಿದಂತೆ ಸಾಮಾನ್ಯ ನಾಗರಿಕರು ವಿದ್ಯುತ್ ಮತ್ತು ನೀರಿನ ಕೊರತೆಯ ಬಗ್ಗೆ ದೂರುತ್ತಿದ್ದರು. ಕೃಷಿ ಡೋಲಾಯಮಾನವಾಗಿತ್ತು ಮತ್ತು ಕೈಗಾರಿಕಾ ಬೆಳವಣಿಗೆ ನಿಂತು ಹೋಗಿತ್ತು. ಅಲ್ಲಿಂದ, ನಾವೆಲ್ಲರೂ ಗುಜರಾತ್ ಅನ್ನು ಉತ್ತಮ ಆಡಳಿತದ ಶಕ್ತಿ ಕೇಂದ್ರವನ್ನಾಗಿ ಮಾಡಲು ಸಾಮೂಹಿಕವಾಗಿ ಕೆಲಸ ಮಾಡಿದೆವು’’
“ಬರಪೀಡಿತ ರಾಜ್ಯವಾಗಿದ್ದ ಗುಜರಾತ್, ಕೃಷಿಯಲ್ಲಿ ಅಗ್ರ ಸಾಧನೆ ಮಾಡುವ ರಾಜ್ಯವಾಯಿತು. ವ್ಯಾಪಾರ ಸಂಸ್ಕೃತಿಯು ಸದೃಢವಾದ ಕೈಗಾರಿಕಾ ಮತ್ತು ಉತ್ಪಾದನಾ ಸಾಮರ್ಥ್ಯಗಳಾಗಿ ವಿಸ್ತರಿಸಿತು. ನಿಯಮಿತ ಕರ್ಫ್ಯೂಗಳು ಹಿಂದಿನ ವಿಷಯವಾಗಿದ್ದವು. ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯ ವೃದ್ಧಿ ಕಾರ್ಯಗಳು ಉತ್ತೇಜನವನ್ನು ಪಡೆದವು. ಇಷ್ಟು ಫಲಿತಾಂಶಗಳನ್ನು ಸಾಧಿಸಲು ಜನರೊಂದಿಗೆ ಕೆಲಸ ಮಾಡಲು ಸಾಧ್ಯವಾಗಿದ್ದು ತುಂಬಾ ತೃಪ್ತಿಕರವಾಗಿದೆ’’
“2014ರ ಲೋಕಸಭಾ ಚುನಾವಣೆಗೆ 2013ರಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಜವಾಬ್ದಾರಿ ನನಗೆ ವಹಿಸಲಾಯಿತು. ಆ ದಿನಗಳಲ್ಲಿ, ದೇಶವು ನಂಬಿಕೆ ಮತ್ತು ಆಡಳಿತದ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಅಂದಿನ ಯುಪಿಎ ಸರ್ಕಾರವು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ನೀತಿ ಪಾರ್ಶ್ವವಾಯುವಿನ ಕೆಟ್ಟರೂಪಕಕ್ಕೆ ಸಮಾನಾರ್ಥಕವಾಗಿತ್ತು. ಜಾಗತಿಕ ವ್ಯವಸ್ಥೆಯಲ್ಲಿ ಭಾರತವನ್ನು ದುರ್ಬಲ ಕೊಂಡಿಯಾಗಿ ನೋಡಲಾಗುತ್ತಿತ್ತು. ಆದರೆ, ಭಾರತದ ಜನರ ಬುದ್ಧಿವಂತಿಕೆಯು ನಮ್ಮ ಮೈತ್ರಿಕೂಟಕ್ಕೆ ಭಾರಿ ಬಹುಮತವನ್ನು ನೀಡಿತು ಮತ್ತು ನಮ್ಮ ಪಕ್ಷವು 3 ದಶಕಗಳ ನಂತರ ಮೊದಲ ಬಾರಿಗೆ ಸಂಪೂರ್ಣ ಬಹುಮತ ಪಡೆಯುವುದನ್ನು ಖಾತ್ರಿಪಡಿಸಿಕೊಂಡಿತು’’.
“ಕಳೆದ 11 ವರ್ಷಗಳಲ್ಲಿ, ನಾವು ಭಾರತದ ಜನರು ಒಗ್ಗೂಡಿ ಕಾರ್ಯನಿರ್ವಹಿಸಿದ್ದೇವೆ ಮತ್ತು ಹಲವು ಮಹತ್ವದ ಪರಿವರ್ತನೆಗಳನ್ನು ಸಾಧಿಸಿದ್ದೇವೆ. ನಮ್ಮ ಪಥ ಪರಿವರ್ತಕ ಪ್ರಯತ್ನಗಳು ದೇಶಾದ್ಯಂತ ಜನರನ್ನು, ವಿಶೇಷವಾಗಿ ನಮ್ಮ ನಾರಿ ಶಕ್ತಿ, ಯುವ ಶಕ್ತಿ ಮತ್ತು ಶ್ರಮಶೀಲ ಅನ್ನದಾತರನ್ನು ಸಬಲೀಕರಣಗೊಳಿಸಿವೆ. 25 ಕೋಟಿಗೂ ಅಧಿಕ ಜನರನ್ನು ಬಡತನದರೇಖೆಯಿಂದ ಮುಕ್ತಗೊಳಿಸಲಾಗಿದೆ. ಪ್ರಮುಖ ಜಾಗತಿಕ ಆರ್ಥಿಕತೆಗಳಲ್ಲಿ ಭಾರತವು ಒಂದು ಪ್ರಕಾಶಮಾನವಾದ ತಾಣವಾಗಿ ಹೊಳೆಯುತ್ತಿದೆ. ನಾವು ವಿಶ್ವದ ಅತಿದೊಡ್ಡ ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಕ್ಕೆ ತವರೂರಾಗಿದ್ದೇವೆ. ನಮ್ಮ ರೈತರು ನಮ್ಮ ರಾಷ್ಟ್ರವು ಸ್ವಾವಲಂಬಿಯಾಗಿದೆ ಎಂದು ನಾವೇ ನಾವೀನತಯತೆಯಲ್ಲಿ ತೊಡಗಿದ್ದೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ನಾವು ವ್ಯಾಪಕವಾದ ಸುಧಾರಣೆಗಳನ್ನು ಕೈಗೊಂಡಿದ್ದೇವೆ ಮತ್ತು ಭಾರತವನ್ನು ಎಲ್ಲಾ ವಲಯಗಳಲ್ಲಿ ಆತ್ಮನಿರ್ಭರ ಮಾಡಬೇಕೆಂಬುದು ಜನಪ್ರಿಯ ಭಾವನೆ ಇದ್ದು, “ಗರ್ವ್ ಸೆ ಕಹೋ, ಯೇ ಸ್ವದೇಶಿ ಹೈ' ಎಂಬ ಸ್ಪಷ್ಟ ಕರೆ ಸ್ಪಷ್ಟವಾಗಿ ಪ್ರತಿಫಲಿಸುತ್ತಿದೆ’’
“ನಾನು ಭಾರತದ ಜನರ ನಿರಂತರ ನಂಬಿಕೆ ಮತ್ತು ವಾತ್ಸಲ್ಯಕ್ಕಾಗಿ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ. ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ಅತ್ಯುನ್ನತ ಗೌರವ, ಈ ಕರ್ತವ್ಯ ನನ್ನಲ್ಲಿ ಕೃತಜ್ಞತೆ ಮತ್ತು ಉದ್ದೇಶವನ್ನು ತುಂಬುತ್ತದೆ. ನಮ್ಮ ಸಂವಿಧಾನಿಕ ಮೌಲ್ಯಗಳು ನನಗೆ ನಿರಂತರ ಮಾರ್ಗದರ್ಶನ ನೀಡುತ್ತಿರುವುದರಿಂದ ವಿಕಸಿತ ಭಾರತದ ನಮ್ಮ ಸಾಮೂಹಿಕ ಕನಸನ್ನು ನನಸಾಗಿಸಲು ನಾನು ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಿಸುತ್ತೇನೆ’’.
*****
(Release ID: 2175737)
Visitor Counter : 7
Read this release in:
English
,
Urdu
,
Hindi
,
Nepali
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Malayalam