ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತದಾದ್ಯಂತ ದೇಶೀಯ ಚಿಪ್ ತಯಾರಿಕೆ ಮತ್ತು ಪ್ಯಾಕೇಜಿಂಗ್ ಸಾಮರ್ಥ್ಯಗಳಿಗಾಗಿ ಪ್ರತಿಭಾನ್ವಿತ ಗುಂಪನ್ನು ಅಭಿವೃದ್ಧಿಪಡಿಸಲು ಐ.ಐ.ಟಿ ಭುವನೇಶ್ವರದಲ್ಲಿ 'ನಮೋ ಸೆಮಿಕಂಡಕ್ಟರ್ ಪ್ರಯೋಗಾಲಯ' ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ


ಯುವಜನರನ್ನು ಉದ್ಯಮಕ್ಕೆ ಸಿದ್ಧವಾದ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಮೂಲಕ ನಮೋ ಸೆಮಿಕಂಡಕ್ಟರ್ ಪ್ರಯೋಗಾಲಯವು 'ಮೇಕ್ ಇನ್ ಇಂಡಿಯಾ' ಮತ್ತು 'ಡಿಸೈನ್ ಇನ್ ಇಂಡಿಯಾ' ಉಪಕ್ರಮಗಳನ್ನು ಉತ್ತೇಜಿಸುತ್ತದೆ

ಈ ಪ್ರಯೋಗಾಲಯವು ಐ.ಐ.ಟಿ ಭುವನೇಶ್ವರವನ್ನು ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಕೌಶಲ್ಯ ಕೇಂದ್ರವಾಗಿ ಸ್ಥಾಪಿಸುತ್ತದೆ

Posted On: 05 OCT 2025 12:06PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಐ.ಐ.ಟಿ ಭುವನೇಶ್ವರದಲ್ಲಿ "ನಮೋ ಸೆಮಿಕಂಡಕ್ಟರ್ ಪ್ರಯೋಗಾಲಯ" ಸ್ಥಾಪನೆಗೆ ಅನುಮೋದನೆ ನೀಡಿದ್ದಾರೆ. ಅಂದಾಜು ₹4.95 ಕೋಟಿ ವೆಚ್ಚದ ಈ ಯೋಜನೆಗೆ ಸಂಸದರ ಪ್ರದೇಶಾಭಿವೃದ್ಧಿ (MPLADS) ಯೋಜನೆಯಡಿಯಲ್ಲಿ ಹಣಕಾಸು ಒದಗಿಸಲಾಗುವುದು.

ನಮೋ ಸೆಮಿಕಂಡಕ್ಟರ್ ಲ್ಯಾಬ್ ಯುವಜನರಿಗೆ ಉದ್ಯಮ-ಸಂಬಂಧಿತ ಕೌಶಲ್ಯಗಳನ್ನು ಒದಗಿಸುವ ಮೂಲಕ ಭಾರತದ ವಿಶಾಲ ಪ್ರತಿಭಾನ್ವಿತ ಗುಂಪಿಗೆ ಕೊಡುಗೆ ನೀಡುತ್ತದೆ. ಈ ಪ್ರಯೋಗಾಲಯವು ಐ.ಐ.ಟಿ ಭುವನೇಶ್ವರವನ್ನು ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಯ ಕೇಂದ್ರವಾಗಿ ಸ್ಥಾಪಿಸುತ್ತದೆ. ಭಾರತದಾದ್ಯಂತ ಸ್ಥಾಪಿಸಲಾಗುವ ಚಿಪ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಘಟಕಗಳಿಗೆ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ. 

ಹೊಸ ಪ್ರಯೋಗಾಲಯವು 'ಮೇಕ್ ಇನ್ ಇಂಡಿಯಾ' ಮತ್ತು 'ಡಿಸೈನ್ ಇನ್ ಇಂಡಿಯಾ' ಉಪಕ್ರಮಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ. ಇದು ಭಾರತದ ವೇಗವಾಗಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ಜಾಗತಿಕ ಚಿಪ್ ವಿನ್ಯಾಸ ಪ್ರತಿಭೆಗಳಲ್ಲಿ ಶೇ. 20 ರಷ್ಟು ಭಾರತಕ್ಕೆ ನೆಲೆಯಾಗಿದೆ. ದೇಶಾದ್ಯಂತ 295 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಉದ್ಯಮವು ಒದಗಿಸಿದ ಇತ್ತೀಚಿನ ಇ.ಡಿ.ಎ ಪರಿಕರಗಳನ್ನು ಬಳಸುತ್ತಿದ್ದಾರೆ. 20 ಸಂಸ್ಥೆಗಳಿಂದ ಇಪ್ಪತ್ತೆಂಟು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಚಿಪ್‌ ಗಳನ್ನು ಎಸ್‌.ಸಿ.ಎಲ್‌ ಮೊಹಾಲಿಯಲ್ಲಿ ಅಂತಿಮಗೊಳಿಸಲಾಯಿತು.

..ಟಿ ಭುವನೇಶ್ವರ ಏಕೆ?

ಒಡಿಶಾ ಇತ್ತೀಚೆಗೆ ಭಾರತ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಎರಡು ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ಪಡೆದಿದೆ. ಇವುಗಳಲ್ಲಿ ಒಂದು ಸಿಲಿಕಾನ್ ಕಾರ್ಬೈಡ್ (SiC) ಆಧಾರಿತ ಸಂಯುಕ್ತ ಸೆಮಿಕಂಡಕ್ಟರ್ ಗಳಿಗೆ ಸಂಯೋಜಿತ ಸೌಲಭ್ಯವಾಗಿದೆ. ಎರಡನೆಯದು ಸುಧಾರಿತ 3ಡಿ ಗ್ಲಾಸ್‌ ಪ್ಯಾಕೇಜಿಂಗ್ ಸೌಲಭ್ಯವಾಗಿದೆ.

ಐ.ಐ.ಟಿ ಭುವನೇಶ್ವರ ಈಗಾಗಲೇ ಸಿಲಿಕಾನ್ ಕಾರ್ಬೈಡ್ ಸಂಶೋಧನೆ ಮತ್ತು ನಾವೀನ್ಯತೆ ಕೇಂದ್ರವನ್ನು (SiCRIC) ಹೊಂದಿದೆ. ಹೊಸ ಪ್ರಯೋಗಾಲಯವು ಸಂಸ್ಥೆಯ ಅಸ್ತಿತ್ವದಲ್ಲಿರುವ ಕ್ಲೀನ್‌ರೂಮ್ ಸೌಲಭ್ಯಗಳಿಗೆ ಸೇರ್ಪಡೆಯಾಗಲಿದೆ. ಇದು ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮವನ್ನು ಬೆಂಬಲಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಒದಗಿಸುತ್ತದೆ.

ನಮೋ ಸೆಮಿಕಂಡಕ್ಟರ್ ಪ್ರಯೋಗಾಲಯದ ಬಗ್ಗೆ

ಪ್ರಸ್ತಾವಿತ ಪ್ರಯೋಗಾಲಯವು ಸೆಮಿಕಂಡಕ್ಟರ್ ತರಬೇತಿ, ವಿನ್ಯಾಸ ಮತ್ತು ತಯಾರಿಕೆಗೆ ಅಗತ್ಯವಾದ ಉಪಕರಣಗಳು ಮತ್ತು ಸಾಫ್ಟ್‌ವೇರ್‌ ಗಳನ್ನು ಹೊಂದಿರುತ್ತದೆ. ಉಪಕರಣಗಳಿಗೆ 4.6 ಕೋಟಿ ರೂ. ಮತ್ತು ಸಾಫ್ಟ್‌ವೇರ್‌ ಗೆ 35 ಲಕ್ಷ ರೂ. ವೆಚ್ಚವನ್ನು ಅಂದಾಜಿಸಲಾಗಿದೆ.

 

****


(Release ID: 2174985) Visitor Counter : 9