ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸರ್ಕಾರದ ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ಯೋಜನೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಉದ್ಯಮದಿಂದ ಅಭೂತಪೂರ್ವ ಪ್ರತಿಕ್ರಿಯೆ; ರೂ. 1,15, 351 ಕೋಟಿ ಹೂಡಿಕೆಯ ಅರ್ಜಿಗಳನ್ನು ಸ್ವೀಕರಿಸಲಾಗಿದೆ


ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ದೇಶದಾದ್ಯಂತ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಲಭ್ಯ ಅವಕಾಶವನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ ಉತ್ಪಾದನಾ ಉದ್ಯಮವನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದಾರೆ, ಇದು ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ನೀಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ

ಭಾರತದ ಸ್ವಾವಲಂಬಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ದೃಷ್ಟಿಕೋನಕ್ಕೆ ದೇಶೀಯ ಉದ್ಯಮದ ಆಳವಾದ ಬದ್ಧತೆಯನ್ನು ಮತ್ತು ಭಾರತ ಬಗ್ಗೆ ಬೆಳೆಯುತ್ತಿರುವ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ

Posted On: 02 OCT 2025 4:57PM by PIB Bengaluru

ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ಯೋಜನೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಉದ್ಯಮ ನಾಯಕರಿಂದ ಅಗಾಧ ಪ್ರತಿಕ್ರಿಯೆ ದೊರೆತಿದೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಬಲವಾದ ಆಸಕ್ತಿಯನ್ನು ತೋರಿಸಿರುವ ಎಂ.ಎಸ್.ಎಂ.ಇ.ಗಳು ಸೇರಿದಂತೆ ದೇಶೀಯ ಉದ್ಯಮ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

ಈ ಯೋಜನೆಯು ಈಗಾಗಲೇ ಹೊಂದಿರುವ 91,600 ಗುರಿಗಿಂತ ಹೆಚ್ಚಿನ 1,42,000 ನೇರ ಉದ್ಯೋಗಗಳನ್ನು ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಇದು ದೊಡ್ಡ ಪ್ರಮಾಣದ ಉದ್ಯೋಗವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಉತ್ಸಾಹಭರಿತ ಪ್ರತಿಕ್ರಿಯೆಯಿಂದ ಸಂತೋಷವನ್ನು ವ್ಯಕ್ತಪಡಿಸಿದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ರಾಜ್ಯಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳುವಂತೆ ಮತ್ತು ತಮ್ಮ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅನುಕೂಲಕರ ಚೌಕಟ್ಟನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು. ನವದೆಹಲಿಯ ಎಲೆಕ್ಟ್ರಾನಿಕ್ಸ್ ನಿಕೇತನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮವು ಯುವಕರಿಗೆ ಗಮನಾರ್ಹ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಒತ್ತಿ ಹೇಳಿದರು.

ಮೇ 1, 2025 ರಂದು ಕೇಂದ್ರ ಸಚಿವ ಸಂಪುಟವು 22,919 ಕೋಟಿ ರೂ.ಗಳ ಆರ್ಥಿಕ ವೆಚ್ಚದೊಂದಿಗೆ ಅನುಮೋದಿಸಿದ ಈ ಯೋಜನೆಯು ಈಗಾಗಲೇ 249 ಅರ್ಜಿಗಳನ್ನು ಸ್ವೀಕರಿಸಿದೆ ಮತ್ತು ರೂ.1,15,351 ಕೋಟಿಗಳ ನಿರೀಕ್ಷಿತ ಹೂಡಿಕೆ ಬದ್ಧತೆಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ ಗುರಿಯಿಟ್ಟಿರುವ ರೂ.59,350 ಕೋಟಿಗಿಂತ ಪ್ರತಿಕ್ರಿಯೆ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಮುಂದಿನ ಆರು ವರ್ಷಗಳಲ್ಲಿ ಈ ಯೋಜನೆಯಡಿಯಲ್ಲಿ ಎಲೆಕ್ಟ್ರಾನಿಕ್ಸ್ ಘಟಕಗಳ ಅಂದಾಜು ಉತ್ಪಾದನೆಯು ಸುಮಾರು ರೂ.10,34,700 ಕೋಟಿಗಳಷ್ಟಿರುತ್ತದೆ.  ಈ ಯೋಜನೆಯಡಿಯಲ್ಲಿ ಉದ್ದೇಶಿತ ರೂ. 4,56,000 ಕೋಟಿ ಮೌಲ್ಯದ ಉತ್ಪಾದನೆಯ 2.2 ಪಟ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಬೃಹತ್ ಪ್ರತಿಕ್ರಿಯೆಯು ದೇಶದ ಜನರಿಗೆ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅರ್ಜಿ ಸಲ್ಲಿಸುವ ಅವಕಾಶವನ್ನು ಮೇ 1, 2025 ರಿಂದ ಪ್ರಾರಂಭವಾಗಿ 3 ತಿಂಗಳ ಆರಂಭಿಕ ಅವಧಿಗೆ ತೆರೆಯಲಾಗಿತ್ತು ಮತ್ತು ನಂತರ ಸೆಪ್ಟೆಂಬರ್ 30, 2025 ರವರೆಗೆ ವಿಸ್ತರಿಸಲಾಯಿತು.

ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಾಗಿದೆ

ಈ.ಸಿ.ಎಂ.ಎಸ್. ಯೋಜನೆಯ ಯಶಸ್ವಿ ಚಾಲನೆಯು 2030-31 ರ ವೇಳೆಗೆ 500 ಬಿಲಿಯನ್ ಡಾಲರ್ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಗೌರವಾನ್ವಿತ ಪ್ರಧಾನಮಂತ್ರಿಯವರು ಹೊಂದಿರುವ ದೃಷ್ಟಿಕೋನವನ್ನು ಸಾಧಿಸಲು ರಾಷ್ಟ್ರವನ್ನು ಪ್ರೇರೇಪಿಸುತ್ತದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ಅವರು ತಿಳಿಸಿದರು. ಇ.ಎಂ.ಸಿ., ಸ್ಪೆಕ್ಸ್  ಮತ್ತು ಮೊಬೈಲ್ ಫೋನ್‌ಗಳು ಮತ್ತು ಐಟಿ ಹಾರ್ಡ್‌ವೇರ್‌ಗಾಗಿ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿ.ಎಲ್.ಐ.) ಯೋಜನೆಯಂತಹ ಯೋಜನೆಗಳಿಂದ ಉತ್ಪತ್ತಿಯಾಗುವ ಆವೇಗದ ಮೇಲೆ ನಿರ್ಮಿಸುವ ಮೂಲಕ, ಈ.ಸಿ.ಎಂ.ಎಸ್. ಸರ್ಕಾರದ ಕಾರ್ಯತಂತ್ರದ ದೃಷ್ಟಿಕೋನದ ನೈಸರ್ಗಿಕ ಪ್ರಗತಿಯನ್ನು ಪ್ರತಿನಿಧಿಸುತ್ತದೆ.

ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಪ್ರತಿ ಸತತ ಯೋಜನೆಯು ಬಲಪಡಿಸಿದೆ ಮತ್ತು ಭಾರತವನ್ನು ಸಮಗ್ರ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಇರಿಸುವ ಮೌಲ್ಯ ಸರಪಳಿ ಏಕೀಕರಣವನ್ನು ಪೂರ್ಣಗೊಳಿಸಲು ಈ.ಸಿ.ಎಂ.ಎಸ್. ಈಗ ಸರ್ವ ರೀತಿಯಲ್ಲೂ ಸಜ್ಜಾಗಿದೆ ಎಂದು ಸಚಿವರು ಹೇಳಿದರು.

ದೇಶೀಯ ಮೌಲ್ಯ ಸರಪಳಿಗಳನ್ನು ವಿಸ್ತರಿಸುವುದು

ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಮೌಲ್ಯ ಸರಪಳಿಯನ್ನು ಆಳಗೊಳಿಸುವುದು ಮತ್ತು ಒಟ್ಟಾರೆಯಾಗಿ, ದೇಶೀಯ ಮೌಲ್ಯವರ್ಧಿತ ಘಟಕವನ್ನು ಗಣನೀಯವಾಗಿ ಹೆಚ್ಚಿಸುವುದನ್ನು ಖಚಿತಪಡಿಸಿಕೊಳ್ಳುವುದು ಮೂಲ ಆಲೋಚನೆಯಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಅವರು ವರದಿ ಮಾಡಿದರು. ನಂತರ ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಏಕೀಕರಣವು ಗಮನ ಸೆಳೆಯುವ ಕ್ಷೇತ್ರವಾಗಿರುತ್ತದೆ.

ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಅಪಾರ ವಿಶ್ವಾಸ ಹೊಂದಿದ್ದಕ್ಕಾಗಿ ಎಲ್ಲಾ ದೇಶೀಯ ಮತ್ತು ಜಾಗತಿಕ ಉದ್ಯಮ ಭಾಗವಹಿಸುವವರನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶ್ಲಾಘಿಸಿದೆ. ಈ ಅಭೂತಪೂರ್ವ ಪ್ರಮಾಣದ ಹೂಡಿಕೆಗಳು ಭಾರತದ ಉತ್ಪಾದನಾ ಸಾಮರ್ಥ್ಯ, ನೀತಿ ಸ್ಥಿರತೆ ಮತ್ತು ಸ್ಪರ್ಧಾತ್ಮಕ ಅನುಕೂಲಗಳಲ್ಲಿ ವ್ಯಾಪಾರ ಸಮುದಾಯದ ಬೆಳೆಯುತ್ತಿರುವ ನಂಬಿಕೆಯನ್ನು ಪ್ರತಿನಿಧಿಸುತ್ತವೆ. ಈ ಸಾಧನೆಯು ಭಾರತದಲ್ಲಿ ದೃಢವಾದ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ನೆಲೆಯನ್ನು ನಿರ್ಮಿಸಲು ನಮ್ಮ ಉದ್ಯಮ ಪಾಲುದಾರರ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಹಾಗೂ ಈ ನಿಟ್ಟಿನಲ್ಲಿ ಅರ್ಹ ಅರ್ಜಿದಾರರಿಗೆ ಸಚಿವಾಲಯವು ಈಗಾಗಲೇ ಅನುಮೋದನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

 

*****
 


(Release ID: 2174207) Visitor Counter : 6