ಪ್ರಧಾನ ಮಂತ್ರಿಯವರ ಕಛೇರಿ
ತ್ರಿಪುರದ ಉದಯಪುರದಲ್ಲಿರುವ ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ
ಮಾತಾ ತ್ರಿಪುರ ಸುಂದರಿ ದೇವಾಲಯ ಸಂಕೀರ್ಣದ ಕಾಮಗಾರಿಗಳನ್ನು ಪ್ರಧಾನಮಂತ್ರಿ ಅವರು ಪರಿಶೀಲಿಸಿದರು
Posted On:
22 SEP 2025 9:13PM by PIB Bengaluru
ತ್ರಿಪುರಾದ ಉದಯಪುರದಲ್ಲಿರುವ ಮಾತಾ ತ್ರಿಪುರ ಸುಂದರಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಾರ್ಥನೆ ಸಲ್ಲಿಸಿದರು. "ನಮ್ಮ ಎಲ್ಲಾ ಭಾರತೀಯ ಬಂಧುಗಳ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಈ ಪ್ರಾರ್ಥನೆ" ಎಂದು ಶ್ರೀ ಮೋದಿಯವರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಶ್ರೀ ಮೋದಿಯವರು ಮಾತಾ ತ್ರಿಪುರ ಸುಂದರಿ ದೇವಾಲಯ ಸಂಕೀರ್ಣದ ಕಾಮಗಾರಿಗಳನ್ನು ಕೂಡಾ ಈ ಸಮಯದಲ್ಲಿ ಪರಿಶೀಲಿಸಿದರು. ಹೆಚ್ಚಿನ ಯಾತ್ರಿಕರು ಮತ್ತು ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ತ್ರಿಪುರದ ಸೌಂದರ್ಯವನ್ನು ಆಸ್ವಾದಿಸಲು ಈ ಪ್ರಯತ್ನ ಮಾಡಲಾಗಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು Xನಲ್ಲಿ ಪೋಸ್ಟ್ ಮಾಡಿ:
"ನವರಾತ್ರಿಯ ಮೊದಲ ದಿನವಾದ ಇಂದು, ದೈವಿಕ ದುರ್ಗಾ ಪೂಜೆಯ ಈ ಶುಭ ಸಂದರ್ಭದಲ್ಲಿ, ತ್ರಿಪುರಾದ ಉದಯಪುರದಲ್ಲಿರುವ ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ದೊರಕಿತು. ನನ್ನ ಎಲ್ಲಾ ಭಾರತೀಯರ ಬಂಧುಗಳ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ್ದೇನೆ."
"ಮಾತಾ ತ್ರಿಪುರ ಸುಂದರಿ ದೇವಾಲಯ ಸಂಕೀರ್ಣದಲ್ಲಿನ ಕಾರ್ಯಗಳನ್ನು ಕೂಡಾ ಪರಿಶೀಲಿಸಲಾಗಿದೆ. ಹೆಚ್ಚಿನ ಯಾತ್ರಿಕರು ಮತ್ತು ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಹಾಗೂ ತ್ರಿಪುರದ ಸೌಂದರ್ಯವನ್ನು ಆಸ್ವಾದಿಸುವ ನಿಟ್ಟಿನಲ್ಲಿ ನಮ್ಮ ಒತ್ತು" ಎಂದು ಟ್ವೀಟ್ ಮಾಡಿದ್ದಾರೆ.
*****
(Release ID: 2170054)
Read this release in:
English
,
Urdu
,
Marathi
,
Hindi
,
Bengali-TR
,
Bengali
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam