ಪ್ರಧಾನ ಮಂತ್ರಿಯವರ ಕಛೇರಿ
2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮಿನಾಕ್ಷಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
Posted On:
14 SEP 2025 7:39PM by PIB Bengaluru
ಲಿವರ್ ಪೂಲ್ ನಲ್ಲಿ ನಡೆದ 2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 48 ಕೆಜಿ ವಿಭಾಗದಲ್ಲಿ ಅಸಾಧಾರಣ ಗೆಲುವು ಸಾಧಿಸಿದ ಭಾರತೀಯ ಬಾಕ್ಸರ್ ಮಿನಾಕ್ಷಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನ ಖಾತೆಯಲ್ಲಿ ಮಾಡಿದ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದರು:
“ಲಿವರ್ ಪೂಲ್ ನಲ್ಲಿ ನಡೆದ 2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಿನಾಕ್ಷಿ ಅವರ ಅತ್ಯುತ್ತಮ ಪ್ರದರ್ಶನದ ಬಗ್ಗೆ ಹೆಮ್ಮೆಯಾಗುತ್ತದೆ! ಅವರು 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮನೆಗೆ ತಂದಿದ್ದಾರೆ. ಅವರ ಯಶಸ್ಸು ಮತ್ತು ದೃಢಸಂಕಲ್ಪವು ಭಾರತೀಯ ಕ್ರೀಡಾಪಟುಗಳಿಗೆ ಬಹಳಷ್ಟು ಪ್ರೇರಣಾದಾಯಕವಾಗಿದೆ. ಅವರ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.”
*****
(Release ID: 2166625)
Visitor Counter : 2