ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಮೋಹನ್ ಭಾಗವತ್ ಅವರ 75ನೇ ಹುಟ್ಟುಹಬ್ಬದಂದು ಅವರಿಗೆ ಶುಭಾಶಯಗಳನ್ನು ಸಲ್ಲಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 11 SEP 2025 8:57AM by PIB Bengaluru

ಶ್ರೀ ಮೋಹನ್ ಭಾಗವತ್ ಅವರ 75 ನೇ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅವರ ಸ್ಪೂರ್ತಿದಾಯಕ ಜೀವನ ಮತ್ತು ರಾಷ್ಟ್ರೀಯ ಸೇವೆಗೆ ಅವರ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ. ತಾಯಿ ಭಾರತಿಯ ನಿರಂತರ ಸೇವೆಗಾಗಿ ಶ್ರೀ ಮೋಹನ್ ಭಾಗವತ್ ಅವರಿಗೆ ಭಗವಂತ ದೀರ್ಘ ಮತ್ತು ಆರೋಗ್ಯಕರ ಜೀವನ ನೀಡಲಿ ಎಂದು ಪ್ರಧಾನಿಯವರು ಪ್ರಾರ್ಥಿಸಿದ್ದಾರೆ. ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯ ಹಾಗೂ ಭ್ರಾತೃತ್ವದ ಮನೋಭಾವವನ್ನು ಬಲಪಡಿಸಲು ಶ್ರೀ ಮೋಹನ್ ಭಾಗವತ್ ಅವರು ತಮ್ಮ ಇಡೀ ಜೀವನವನ್ನು ಸಮರ್ಪಿಸಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೆನಪಿಸಿಕೊಂಡರು.

Xನ ಪೋಸ್ಟ್‌ ನಲ್ಲಿ ಶ್ರೀ ಮೋದಿಯವರು:

“ವಸುಧೈವ ಕುಟುಂಬಕಂ" ತತ್ವದಿಂದ ಪ್ರೇರಿತರಾದ ಶ್ರೀ ಮೋಹನ್ ಭಾಗವತ್ ಅವರು ತಮ್ಮ ಇಡೀ ಜೀವನವನ್ನು ಸಾಮಾಜಿಕ ಸಮಾನತೆ, ಸಾಮರಸ್ಯ ಮತ್ತು ಭ್ರಾತೃತ್ವದ ಮನೋಭಾವವನ್ನು ಪ್ರಬುದ್ದಪಡಿಸಲು ಮುಡಿಪಾಗಿಟ್ಟಿದ್ದಾರೆ.”

nm-4.com/Cvvs0Y

ಮಾತೆ ಭಾರತಿಗೆ ಸೇವೆ ಸಲ್ಲಿಸಲು ಸದಾ ಸಿದ್ಧರಾಗಿರುವ ಮೋಹನ್ ಜೀ ಅವರ 75ನೇ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ಅವರ ಸ್ಪೂರ್ತಿದಾಯಕ ವ್ಯಕ್ತಿತ್ವದ ಬಗ್ಗೆ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಅವರಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ಹಾರೈಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ.

nm-4.com/Cvvs0Y

 

 

*****


(रिलीज़ आईडी: 2165563) आगंतुक पटल : 30
इस विज्ञप्ति को इन भाषाओं में पढ़ें: Odia , English , Urdu , हिन्दी , Marathi , Manipuri , Bengali , Assamese , Punjabi , Gujarati , Tamil , Telugu , Malayalam