ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಸ್ವಾವಲಂಬನೆ ಮತ್ತು ಅಭಿವೃದ್ಧಿಯ ಪ್ರಯಾಣದಲ್ಲಿ NEP 2020ರ ಮಹತ್ವದ ಕುರಿತಾದ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 05 SEP 2025 12:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು NEP 2020ರ ಮಹತ್ವದ ಕುರಿತಾಗಿ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ, ಇದು ಭಾರತದ ಸ್ವಾವಲಂಬನೆ ಮತ್ತು ಅಭಿವೃದ್ಧಿಯ ಕೇಂದ್ರ ಬಿಂದುವಾಗಿದೆ ಎಂದು ಪ್ರಧಾನಮಂತ್ರಿ ಅವರು ವಿವರಿಸಿದ್ದಾರೆ.

ಎಕ್ಸ ನಲ್ಲಿ ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಪೋಸ್ಟ್‌ ಗೆ ಶ್ರೀ ಮೋದಿ ಅವರು ಹೀಗೆ ಪ್ರತಿಕ್ರಿಯಿಸಿದರು:

"ಕೇಂದ್ರ ಸಚಿವರಾದ ಶ್ರೀ @dpradhanbjp ಅವರು NEP 2020ರ ಮಹತ್ವವನ್ನು ಪುನರುಚ್ಚರಿಸಿದರು, ಇದು ಭಾರತದ ಸ್ವಾವಲಂಬನೆ ಮತ್ತು ಅಭಿವೃದ್ಧಿಯ ಪ್ರಯಾಣಕ್ಕೆ ಕೇಂದ್ರ ಬಿಂದುವಾಗಿದೆ.

ಇಂದು ಶಿಕ್ಷಕರು ಡಿಜಿಟಲ್ ತರಗತಿ ಕೊಠಡಿಗಳು, ಕೃತಕ ಬುದ್ಧಿಮತ್ತೆ, ಬದಲಾಗುತ್ತಿರುವ ಪಠ್ಯಕ್ರಮ ಮತ್ತು ವೈವಿಧ್ಯಮಯ ಕಲಿಕಾ ಅಗತ್ಯಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ, ಇವುಗಳನ್ನು ಪಿ.ಎಂ ಈ-ವಿದ್ಯಾ, ದೀಕ್ಷ(DIKSHA) ಮತ್ತು ಸ್ವಯಂ(SWAYAM)ನಂತಹ ವೇದಿಕೆಗಳಿಂದ ದೃಡೀಕಸಲಾಗುತ್ತದೆ ಎಂದು ಅವರು ವಿವರಿಸುತ್ತಾರೆ."

 

***


(रिलीज़ आईडी: 2164336) आगंतुक पटल : 21
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali-TR , Bengali , Manipuri , Assamese , Punjabi , Gujarati , Odia , Tamil , Telugu , Malayalam