ಪ್ರಧಾನ ಮಂತ್ರಿಯವರ ಕಛೇರಿ
ಸಾಮಾನ್ಯ ಜನರು, ರೈತರು, ಎಂ.ಎಸ್.ಎಂ.ಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಅನುಕೂಲವಾಗಬಲ್ಲ ಜಿ.ಎಸ್.ಟಿ ದರ ಕಡಿತ ಮತ್ತು ಸುಧಾರಣೆಗಳ ಕೇಂದ್ರ ಸರ್ಕಾರದ ಪ್ರಸ್ತಾವನೆಗಳಿಗೆ ಸಂಘಟಿತ ಸಹಮತ ನೀಡಿದ ಜಿ.ಎಸ್.ಟಿ ಮಂಡಳಿಯ ನಡೆಗೆ ಪ್ರಧಾನಮಂತ್ರಿ ಶ್ಲಾಘನೆ
Posted On:
03 SEP 2025 11:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾನ್ಯ ಜನರು, ರೈತರು, ಎಂ.ಎಸ್.ಎಂ.ಇ ಗಳು, ಸಣ್ಣ ಮತ್ತು ಮಧ್ಯಮ ವರ್ಗದವರು, ಮಹಿಳೆಯರು ಮತ್ತು ಯುವಕರಿಗೆ ಅನುಕೂಲವಾಗಬಲ್ಲ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ದರ ಕಡಿತ ಮತ್ತು ಸುಧಾರಣೆಗಳ ಕೇಂದ್ರ ಸರ್ಕಾರದ ಪ್ರಸ್ತಾವನೆಗಳಿಗೆ ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿ.ಎಸ್.ಟಿ ಮಂಡಳಿಯು ಸಂಘಟಿತ ಸಮ್ಮತಿ ಸೂಚಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. "ಈ ವ್ಯಾಪಕ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಉನ್ನತೀಕರಿಸಲಿದೆ ಮತ್ತು ಎಲ್ಲರಿಗೂ ವಿಶೇಷವಾಗಿ ಸಣ್ಣ ವರ್ತಕರಿಗೆ ಮತ್ತು ಉದ್ಯಮಿಗಳಿಗೆ ಸುಲಲಿತ ವ್ಯಾಪಾರ ಖಚಿತಪಡಿಸಲಿದೆ" ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ನನ್ನ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಜಿ.ಎಸ್.ಟಿಯಲ್ಲಿ ಭವಿಷ್ಯದ ಪೀಳಿಗೆಯ ಸುಧಾರಣೆಗಳನ್ನು ತರುವ ನಮ್ಮ ಉದ್ದೇಶದ ಬಗ್ಗೆ ಮಾತನಾಡಿದ್ದೆ.
ಆರ್ಥಿಕತೆಯನ್ನು ಬಲಪಡಿಸುವ ಮತ್ತು ಸಾಮಾನ್ಯ ಜನರಿಗೆ ಸುಲಲಿತ ಜೀವನ ಒದಗಿಸುವ ಗುರಿಯನ್ನು ಹೊಂದಿರುವ ವಿಶಾಲ ವ್ಯಾಪ್ತಿಯ ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆ ಮತ್ತು ಸುಧಾರಣೆಗಳ ಪ್ರಕ್ರಿಯೆಗಳ ಬಗ್ಗೆ ಕೇಂದ್ರ ಸರ್ಕಾರವು ವಿಸ್ತೃತ ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು.
ಕೇಂದ್ರ ಮತ್ತು ರಾಜ್ಯಗಳನ್ನೊಳಗೊಂಡ @GST_Council ಯು, ಸಾಮಾನ್ಯ ಜನರು, ರೈತರು, ಎಂ.ಎಸ್.ಎಂ.ಇ ಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನಕಾರಿಯಾಗುವ ಜಿ.ಎಸ್.ಟಿ ದರ ಕಡಿತ ಮತ್ತು ಸುಧಾರಣೆಗಳ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಸಾಮೂಹಿಕವಾಗಿ ಸಮ್ಮತಿ ನೀಡಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ವ್ಯಾಪಕ ಶ್ರೇಣಿಯ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಮೇಲ್ದರ್ಜೆಗೇರಿಸಲಿವೆ ಮತ್ತು ಎಲ್ಲರಿಗೂ, ವಿಶೇಷವಾಗಿ ಸಣ್ಣ ವರ್ತಕರು ಮತ್ತು ಉದ್ಯಮಗಳಿಗೆ ಸುಲಲಿತ ವ್ಯಾಪಾರ ವ್ಯವಹಾರವನ್ನು ಖಚಿತಪಡಿಸಲಿದೆ. "
#NextGenGST
*****
(Release ID: 2163562)
Visitor Counter : 2
Read this release in:
Odia
,
English
,
Urdu
,
Marathi
,
Hindi
,
Assamese
,
Bengali
,
Manipuri
,
Bengali-TR
,
Punjabi
,
Gujarati
,
Tamil
,
Telugu
,
Malayalam