ಪ್ರಧಾನ ಮಂತ್ರಿಯವರ ಕಛೇರಿ
ಸೆಪ್ಟೆಂಬರ್ 2ರಂದು ನವದೆಹಲಿಯ ಯಶೋಭೂಮಿಯಲ್ಲಿ 'ಸೆಮಿಕಾನ್ ಇಂಡಿಯಾ - 2025' ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಸೆಪ್ಟೆಂಬರ್ 3ರಂದು ಸೆಮಿಕಾನ್ ಇಂಡಿಯಾದಲ್ಲಿ ಸಿಇಓಗಳ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ
ಸೆಮಿಕಾನ್ ಇಂಡಿಯಾ - 2025 ಭಾರತದಲ್ಲಿ ದೃಢವಾದ ಮತ್ತು ಸುಸ್ಥಿರ ಅರೆವಾಹಕ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸಲಿದೆ
ಸೆಮಿಕಂಡಕ್ಟರ್ ಫ್ಯಾಬ್ಸ್, ಅಡ್ವಾನ್ಸ್ಡ್ ಪ್ಯಾಕೇಜಿಂಗ್, ಎಐ, ಆರ್ ಮತ್ತು ಡಿ, ಸ್ಮಾರ್ಟ್ ಉತ್ಪಾದನೆ ಮತ್ತು ಹೂಡಿಕೆ ಅವಕಾಶಗಳ ಮೇಲೆ ಕೇಂದ್ರೀಕರಿಸುವ ಸಮ್ಮೇಳನ
48ಕ್ಕೂ ಹೆಚ್ಚು ದೇಶಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ
Posted On:
01 SEP 2025 3:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2ರಂದು ಬೆಳಗ್ಗೆ 10 ಗಂಟೆಗೆ ನವದೆಹಲಿಯ ಯಶೋಭೂಮಿಯಲ್ಲಿ ಭಾರತದ ಅರೆವಾಹಕ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸುವ ಗುರಿಯನ್ನು ಹೊಂದಿರುವ 'ಸೆಮಿಕಾನ್ ಇಂಡಿಯಾ - 2025' ಅನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಸೆಪ್ಟೆಂಬರ್ 3ರಂದು ಬೆಳಗ್ಗೆ 9:30ರಿಂದ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಅವರು ಸಿಇಒಗಳ ದುಂಡುಮೇಜಿನ ಸಭೆಯಲ್ಲೂ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 2ರಿಂದ 4 ರವರೆಗೆ ಮೂರು ದಿನಗಳ ಸಮ್ಮೇಳನವು ಭಾರತದಲ್ಲಿ ದೃಢವಾದ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಅರೆವಾಹಕ ಪರಿಸರ ವ್ಯವಸ್ಥೆಯನ್ನು ಮುನ್ನಡೆಸುವತ್ತ ಗಮನ ಹರಿಸುತ್ತದೆ. ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಪ್ರಗತಿ, ಅರೆವಾಹಕ ಫ್ಯಾಬ್ ಮತ್ತು ಸುಧಾರಿತ ಪ್ಯಾಕೇಜಿಂಗ್ ಯೋಜನೆಗಳು, ಮೂಲಸೌಕರ್ಯ ಸಿದ್ಧತೆ, ಸ್ಮಾರ್ಟ್ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯ ಆವಿಷ್ಕಾರಗಳು, ಹೂಡಿಕೆ ಅವಕಾಶಗಳು, ರಾಜ್ಯ ಮಟ್ಟದ ನೀತಿ ಅನುಷ್ಠಾನ ಮುಂತಾದ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಹೆಚ್ಚುವರಿಯಾಗಿ, ಈ ಕಾರ್ಯಕ್ರಮವು ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಡಿಎಲ್ಐ) ಯೋಜನೆಯಡಿ ಉಪಕ್ರಮಗಳು, ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ಬೆಳವಣಿಗೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ಭಾರತದ ಅರೆವಾಹಕ ವಲಯದ ಭವಿಷ್ಯದ ಮಾರ್ಗಸೂಚಿಯನ್ನು ಬಿಂಬಿಸುತ್ತದೆ.
48 ದೇಶಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು, 50ಕ್ಕೂ ಹೆಚ್ಚು ಜಾಗತಿಕ ನಾಯಕರು ಸೇರಿದಂತೆ 150ಕ್ಕೂ ಹೆಚ್ಚು ಭಾಷಣಕಾರರು ಮತ್ತು 350ಕ್ಕೂ ಹೆಚ್ಚು ಪ್ರದರ್ಶಕರು ಸೇರಿದಂತೆ 20,750ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ 6 ದೇಶಗಳ ದುಂಡು ಮೇಜಿನ ಚರ್ಚೆಗಳು, ದೇಶದ ಪೆವಿಲಿಯನ್ ಗಳು ಮತ್ತು ಕಾರ್ಯಪಡೆ ಅಭಿವೃದ್ಧಿ ಮತ್ತು ನವೋದ್ಯಮಗಳಿಗಾಗಿ ಮೀಸಲಾದ ಪೆವಿಲಿಯನ್ ಗಳು ಸೇರಿವೆ.
ಪ್ರಪಂಚದಾದ್ಯಂತ ಆಯೋಜಿಸಲಾದ ಸೆಮಿಕಾನ್ ಸಮ್ಮೇಳನಗಳು, ಅರೆವಾಹಕ ಕ್ಷೇತ್ರದಲ್ಲಿನ ತಾಂತ್ರಿಕ ಪ್ರಗತಿಯ ವ್ಯಾಪ್ತಿಯನ್ನು ಮತ್ತು ತಮ್ಮ ಅರೆವಾಹಕ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ದೇಶಗಳ ನೀತಿಗಳನ್ನು ಗರಿಷ್ಠಗೊಳಿಸುವ ಗುರಿಯನ್ನು ಹೊಂದಿವೆ. ಭಾರತವನ್ನು ಅರೆವಾಹಕ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಕೇಂದ್ರವಾಗಿ ಪ್ರದರ್ಶಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಮುಂದುವರಿಸಲು, 2022ರಲ್ಲಿ ಬೆಂಗಳೂರಿನಲ್ಲಿ, 2023ರಲ್ಲಿ ಗಾಂಧಿನಗರದಲ್ಲಿ ಮತ್ತು 2024ರಲ್ಲಿ ಗ್ರೇಟರ್ ನೋಯ್ಡಾದಲ್ಲಿ ಸಮ್ಮೇಳನಗಳನ್ನು ಆಯೋಜಿಸಲಾಗಿದೆ.
*****
(Release ID: 2162701)
Visitor Counter : 2
Read this release in:
Malayalam
,
English
,
Urdu
,
Marathi
,
Hindi
,
Assamese
,
Bengali-TR
,
Bengali
,
Manipuri
,
Punjabi
,
Gujarati
,
Odia
,
Tamil
,
Telugu