ಪ್ರಧಾನ ಮಂತ್ರಿಯವರ ಕಛೇರಿ
ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಕೆಡೆಟ್ ಗಳೊಂದಿಗೆ ಪ್ರಧಾನಮಂತ್ರಿ ಅವರ ಮಾತುಕತೆ
Posted On:
25 JAN 2025 3:52PM by PIB Bengaluru
ಭಾಗವಹಿಸುವವರು - ಸರ್, ಇಂದು ನಿಮ್ಮನ್ನು ನೋಡಿದ ನಂತರ ನನ್ನ ಕನಸು ನನಸಾಯಿತು.
ಪ್ರಧಾನಮಂತ್ರಿ - ಬಹಳ ಒಳ್ಳೆಯದು, ಹೌದು ನೀವು ಈಗಷ್ಟೇ ಮಲಗಿದ್ದಿರಿ.
ಭಾಗವಹಿಸುವವರು - ಇಲ್ಲ, ನಿಮ್ಮನ್ನು ನೋಡುವಾಗ ನಾವು ಅತಿದೊಡ್ಡ ನಾಯಕನನ್ನು ಭೇಟಿ ಮಾಡಿದಂತೆ ಭಾಸವಾಗುತ್ತದೆ.
ಭಾಗವಹಿಸುವವರು - ಇಲ್ಲಿಗೆ ಬಂದು ಎಲ್ಲಾ ರಕ್ಷಣಾ ಪಡೆಗಳನ್ನು ನೋಡುವುದು ನನ್ನ ದೊಡ್ಡ ಕನಸಾಗಿತ್ತು, ವಿಶೇಷವಾಗಿ ನಾನು ನಿಮ್ಮನ್ನು ನೋಡಲು ಬಂದಿದ್ದೇನೆ.
ಪ್ರಧಾನಮಂತ್ರಿ - ಹೌದು, ಹೌದು.
ಭಾಗವಹಿಸುವವರು - ಹಾಗಾಗಿ ನಾನು ನಿಮ್ಮೊಂದಿಗೆ ಮುಖಾಮುಖಿಯಾಗಿ ಮಾತನಾಡುತ್ತಿದ್ದೇನೆ ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ.
ಪ್ರಧಾನಮಂತ್ರಿ - ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿ.
ಭಾಗವಹಿಸುವವರು - ಬಹಳ ಧನ್ಯವಾದಗಳು ಸರ್.
ಪ್ರಧಾನಮಂತ್ರಿ - ಬೇರೆ ರಾಜ್ಯದ ಸ್ನೇಹಿತರಿಗೆ ನಿಮ್ಮನ್ನು ಪರಿಚಯಿಸಿಕೊಳ್ಳುವ ಮೂಲಕ, ನೀವು ಆ ರಾಜ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೀರಿ ಮತ್ತು ಆ ಭಾಷೆಯಲ್ಲಿ ಒಂದೆರಡು ವಾಕ್ಯಗಳನ್ನು ಮಾತನಾಡಲು ಕಲಿತಿದ್ದೀರಿ. ಅಂತವರು ಇಲ್ಲಿ ಯಾರಿದ್ದೀರಿ?
ಭಾಗವಹಿಸುವವರು - ಸರ್, ನಾವು ಇಲ್ಲಿ ಪಶ್ಚಿಮ ಬಂಗಾಳದಿಂದ ಕುಳಿತಿದ್ದೇವೆ, ನಾನು ಅವರಿಂದ ತಿಳಿದುಕೊಳ್ಳಲು ಪ್ರಯತ್ನಿಸಿದೆ ಮತ್ತು ನಾವು ಅನ್ನ ತಿನ್ನುತ್ತಿರುವಾಗ, ಅನ್ನಕ್ಕೆ ಸಂಬಂಧಿಸಿದ ಒಂದು ವಾಕ್ಯವಿತ್ತು, ಅವರು "ಏಕ್ತೋ ಏಕ್ತೋ ಭಾತ್ ಖಾವೇ" ಎಂದು ಹೇಳಿದರು.
ಪ್ರಧಾನಮಂತ್ರಿ - ಏಕ್ತೋ ಏಕ್ತೋ ಭಾತ್ ಖಾವೇ ಬೋಲಾ? ಖಾಬೇ ಬೋಲಾ?
ಭಾಗವಹಿಸುವವರು - ಖಾಬೋ.
ಪ್ರಧಾನಮಂತ್ರಿ - ಖಾಬೋ.ತಿನ್ನಿರಿ.
ಭಾಗವಹಿಸುವವರು - ಸರ್ ಜೋಲ್ ಖಾಬೋ, ಇನ್ನೇನು ಇತ್ತು?. ಅಮಿ ಕೆಮೋ ನಾಚೋ ಅಮಿ ಭಾಲೋ ಅಚಿ (ಇತರ ಭಾಷೆ)
ಭಾಗವಹಿಸುವವರು - ನಾನು ಮುಂಗೇರ್ ನವನು, ಮುಂಗೇರ್ನ ಎಲ್ಲಾ ಜನರ ಪರವಾಗಿ ನಾನು ನಿಮಗೆ ವಂದಿಸುತ್ತೇನೆ ಸರ್.
ಪ್ರಧಾನಮಂತ್ರಿ - ಮುಂಗೇರ್ ಭೂಮಿಗೆ ನನ್ನ ಪ್ರಣಾಮಗಳು. ಮುಂಗೇರ್ ಭೂಮಿ ಯೋಗಕ್ಕೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ.
ಭಾಗವಹಿಸುವವರು - ಹೌದು ಸರ್, ಹೌದು ಸರ್.
ಪ್ರಧಾನಮಂತ್ರಿ - ಹಾಗಾದರೆ ನೀವು ಇಲ್ಲಿ ಎಲ್ಲರ ಯೋಗ ಗುರುಗಳಾಗಿದ್ದೀರಿ.
ಭಾಗವಹಿಸುವವರು - ಅಂದರೆ ನಾನು ಎಲ್ಲರಿಗೂ ಆಗಲು ಸಾಧ್ಯವಾಗಲಿಲ್ಲ ಸರ್, ಆದರೆ ಶಾಲೆಯಲ್ಲಿರುವ ನಮ್ಮ ವಲಯದಲ್ಲಿದ್ದವರು,ಕೆಲವು ತಂಡಗಳದ್ದು ಆಗಿದ್ದೆ.
ಪ್ರಧಾನಮಂತ್ರಿ - ಈಗ ಇಡೀ ಜಗತ್ತು ಯೋಗದೊಂದಿಗೆ ಸಂಪರ್ಕ ಹೊಂದುತ್ತಿದೆ.
ಭಾಗವಹಿಸುವವರು - ಸರ್ ಸರ್.
ಪ್ರಧಾನಮಂತ್ರಿ - ಹೌದು.
ಭಾಗವಹಿಸುವವರು - ಮತ್ತು ನಾವು ನಿನ್ನೆ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ ನಿಮಗಾಗಿ ಎರಡು ಸಾಲುಗಳನ್ನು ಬರೆದಿದ್ದೇವೆ, ಜೈ ಹೋ, ಭಾರತ ಮಾತೆಗೆ ಜೈ ಹೋ, ಭಾರತದ ಜನರಿಗೆ ಜೈ ಹೋ, ಹಾರಾಡುತ್ತಿರುವ ಹೊಸ ಧ್ವಜಕ್ಕೆ ಜೈ ಹೋ, ಜೈ ಹೋ, ಜೈ ಹೋ, ಜೈ ಹೋ, ಭಯೋತ್ಪಾದನೆಯ ಭಯ ಬೇಡ, ಶತ್ರುಗಳ ನಾಶವಾಗಲಿ, ಎಲ್ಲರ ಹೃದಯದಲ್ಲಿ ಪ್ರೀತಿ ಮತ್ತು ವಿನಮ್ರತೆ ಇರಲಿ, ಜೈ ಹೋ, ಜೈ ಹೋ, ಜೈ ಹೋ.
ಪ್ರಧಾನಮಂತ್ರಿ - ಜೈ ಹೋ.
ಭಾಗವಹಿಸುವವರು - ಜೈ ಹೋ, ಬಹಳ ಬಹಳ ಧನ್ಯವಾದಗಳು.
ಭಾಗವಹಿಸುವವರು : ಸ್ವಚ್ಛ ಭಾರತ ಮಿಷನ್ ಮತ್ತು ಆರೋಗ್ಯಕರ ಭಾರತ ಮಿಷನ್ನಂತಹ ನೀವು ಪ್ರಾರಂಭಿಸಿದ ಪ್ರಯಾಣಗಳು ಖಂಡಿತವಾಗಿಯೂ ದೇಶದ ಪ್ರಗತಿಗೆ ಸಹಾಯ ಮಾಡಿವೆ. ಅದರ ಜೊತೆ ಜೊತೆಗೆ, ಎಲ್ಲಾ ಯುವಕರು ನಿಮ್ಮ ಕಡೆಗೆ ಆಕರ್ಷಿತರಾಗಿದ್ದಾರೆ ಮತ್ತು ಅಯಸ್ಕಾಂತದಂತೆ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ನಮ್ಮ ಪ್ರಧಾನಮಂತ್ರಿಗಳು ನಿಮ್ಮಂತಹ ವ್ಯಕ್ತಿತ್ವ ಹೊಂದಿದ್ದಾರೆ ಎನ್ನುವುದು ನಮಗೆಲ್ಲರಿಗೂ ಬಹಳ ಹೆಮ್ಮೆಯ ವಿಷಯ.
ಪ್ರಧಾನಮಂತ್ರಿ - ಸ್ವಚ್ಛ ಭಾರತವನ್ನು ನಿರ್ಮಿಸಲು ನಾವು ಯಾವುದೇ ಒಂದು ಸಿದ್ಧಾಂವನ್ನು ಜಾರಿಗೆ ತರಬೇಕಾದರೆ, ಅದು ಯಾವುದು?
ಭಾಗವಹಿಸುವವರು - ನವರಾತ್ರಿಯ ಸಮಯದಲ್ಲಿ ನಾನು ದೇವಸ್ಥಾನಕ್ಕೆ ಹೋದಂತೆ ನಾವು ಇತರರಿಗೂ ಸ್ಫೂರ್ತಿ ನೀಡಲು ಬಯಸುತ್ತೇವೆ.
ಪ್ರಧಾನಮಂತ್ರಿ - ನೋಡಿ, ನೀವು ಸರಿಯಾಗಿ ಹೇಳಿದ್ದೀರಿ, ಭಾರತವನ್ನು ಸ್ವಚ್ಛವಾಗಿಸಲು, 140 ಕೋಟಿ ಜನರು ಯಾವುದೇ ಕೊಳೆಯನ್ನು ಮಾಡುವುದಿಲ್ಲ ಎಂದು ನಿರ್ಧರಿಸಿದರೆ, ಯಾರು ಕೊಳೆಯನ್ನು ಮಾಡುತ್ತಾರೆ, ಆಗ ಅದು ಶುದ್ಧವಾಗುತ್ತದೆ.
ಭಾಗವಹಿಸುವವರು - ಜೈ ಹಿಂದ್ ಸರ್, ಸರ್ ನಾನು ಒಡಿಶಾದ ಸುಶ್ಮಿತಾ ರೋಹಿದಾಷ್.
ಪ್ರಧಾನಮಂತ್ರಿ - ಜಗ ಜಗನ್ನಾಥ್.
ಭಾಗವಹಿಸುವವರು - ಜಗ ಜಗನ್ನಾಥ ಸರ್. ನೀವು ನನ್ನ ಸ್ಫೂರ್ತಿ, ಆದ್ದರಿಂದ ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ, ಜೀವನದಲ್ಲಿ ಯಶಸ್ವಿಯಾಗಲು ನಾನು ಏನು ಮಾಡಬೇಕು ಮತ್ತು ಯಶಸ್ಸಿನ ನಿಜವಾದ ವ್ಯಾಖ್ಯಾನವೇನು ?
ಪ್ರಧಾನಮಂತ್ರಿ - ವೈಫಲ್ಯವನ್ನು ಎಂದಿಗೂ ಸ್ವೀಕರಿಸಬಾರದು. ವೈಫಲ್ಯವನ್ನು ಸ್ವೀಕರಿಸಿ ವೈಫಲ್ಯದಲ್ಲಿ ಆಶ್ರಯ ಪಡೆಯುವವರು ಎಂದಿಗೂ ಯಶಸ್ಸನ್ನು ಸಾಧಿಸುವುದಿಲ್ಲ, ಆದರೆ ವೈಫಲ್ಯದಿಂದ ಕಲಿಯುವವರು ಉನ್ನತ ಸ್ಥಾನವನ್ನು ತಲುಪುತ್ತಾರೆ, ಆದ್ದರಿಂದ ವೈಫಲ್ಯಕ್ಕೆ ಎಂದಿಗೂ ಹೆದರಬಾರದು, ವೈಫಲ್ಯದಿಂದ ಕಲಿಯುವ ಉತ್ಸಾಹವನ್ನು ಹೊಂದಿರಬೇಕು ಮತ್ತು ವೈಫಲ್ಯದಿಂದ ಕಲಿಯುವವರು ಸಹ ಉನ್ನತ ಸ್ಥಾನವನ್ನು ತಲುಪುತ್ತಾರೆ.
ಭಾಗವಹಿಸುವವರು - ಸರ್, ನಿಮಗೆ ನನ್ನ ಪ್ರಶ್ನೆ ಏನೆಂದರೆ, ನಿಮಗೆ ಕೇವಲ ಮೂರರಿಂದ ನಾಲ್ಕು ಗಂಟೆಗಳ ವಿಶ್ರಾಂತಿ ಸಿಗುತ್ತದೆ ಎಂದು ನಾನು ಕೇಳಿದ್ದೇನೆ, ಹಾಗಾದರೆ ಈ ವಯಸ್ಸಿನಲ್ಲಿ ನಿಮಗೆ ಪ್ರೇರಣೆ ಮತ್ತು ಶಕ್ತಿ ಎಲ್ಲಿಂದ ಸಿಗುತ್ತದೆ?
ಪ್ರಧಾನಮಂತ್ರಿ - ಈಗ ಇದು ಕಠಿಣ ಪ್ರಶ್ನೆ. ನಿಮ್ಮಂತಹ ಯುವಕರನ್ನು ನಾನು ಭೇಟಿಯಾದಾಗ, ನನಗೆ ಶಕ್ತಿ ಬರುತ್ತದೆ. ನಿಮ್ಮೆಲ್ಲರನ್ನು ನೋಡಿದಾಗ, ನನಗೆ ಸ್ಫೂರ್ತಿ ಸಿಗುತ್ತದೆ. ನಾನು ದೇಶದ ರೈತರನ್ನು ನೆನಪಿಸಿಕೊಂಡಾಗ, ಅವರು ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ನಾನು ಯೋಚಿಸುತ್ತೇನೆ. ನಾನು ದೇಶದ ಸೈನಿಕರನ್ನು ನೆನಪಿಸಿಕೊಂಡಾಗ, ಅವರು ಗಡಿಯಲ್ಲಿ ಎಷ್ಟು ಗಂಟೆಗಳ ಕಾಲ ನಿಲ್ಲುತ್ತಾರೆ ಎಂದು ನಾನು ಯೋಚಿಸುತ್ತೇನೆ. ಅಂದರೆ ಎಲ್ಲರೂ ಕೆಲಸ ಮಾಡುತ್ತಾರೆ ಮತ್ತು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನಾವು ಅವರ ಕಡೆ ಸ್ವಲ್ಪ ನೋಡಿದರೆ, ಅವರಂತೆ ಜೀವನವನ್ನು ನಡೆಸಲು ಪ್ರಯತ್ನಿಸಿದರೆ, ಅವರನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ, ನಮಗೆ ನಿದ್ರೆ ಮಾಡುವ ಹಕ್ಕಿಲ್ಲ, ವಿಶ್ರಾಂತಿ ಪಡೆಯುವ ಹಕ್ಕಿಲ್ಲ ಎಂದು ನಮಗೆ ಅನಿಸುತ್ತದೆ. ಅವರು ತಮ್ಮ ಕರ್ತವ್ಯಗಳಿಗಾಗಿ ಇಷ್ಟೊಂದು ಶ್ರಮಿಸುತ್ತಾರೆ, ಹಾಗಾಗಿ 140 ಕೋಟಿ ದೇಶವಾಸಿಗಳು ನನಗೂ ಒಂದು ಕರ್ತವ್ಯವನ್ನು ನೀಡಿದ್ದಾರೆ. ಸರಿ, ಮನೆಗೆ ಹಿಂದಿರುಗಿದ ನಂತರ, ಅವರಲ್ಲಿ ಎಷ್ಟು ಮಂದಿ ಬೆಳಿಗ್ಗೆ 4 ಗಂಟೆಗೆ ಏಳಲು ನಿರ್ಧರಿಸಿದ್ದೀರಿ? ನೀವು ಬೆಳಿಗ್ಗೆ 4 ಗಂಟೆಗೆ ಏಳಬೇಕೇ ಅಥವಾ ಎಬ್ಬಿಸಬೇಕೇ?
ಭಾಗವಹಿಸುವವರು - ಎದ್ದೇಳಬೇಕಾಗುತ್ತೆ ಸರ್.
ಪ್ರಧಾನಮಂತ್ರಿ - ಇಲ್ಲ ಇಲ್ಲ, ಈಗ ಯಾರೋ ವಿಸಲ್ ಹೊಡೆಯುತ್ತಿರಬೇಕು, ಆಗ ಅವನು ಹೋಗಲಿ 5 ನಿಮಿಷ ಬಿಡಬಿಡಬೇಕೆಂದು ಯೋಚಿಸುತ್ತಿರಬೇಕು. ಆದರೆ ನೋಡಿ, ಬೇಗನೆ ಏಳುವ ಅಭ್ಯಾಸ ಜೀವನದಲ್ಲಿ ತುಂಬಾ ಉಪಯುಕ್ತವಾಗಿದೆ ಮತ್ತು ನಾನು ನಿಮ್ಮಂತೆಯೇ ಎನ್.ಸಿ.ಸಿ. ಕೆಡೆಟ್ ಆಗಿದ್ದೆ ಎಂದು ನಾನು ಹೇಳಬಲ್ಲೆ, ಆದ್ದರಿಂದ ಇದು ಇಲ್ಲಿಯವರೆಗೆ ನನಗೆ ತುಂಬಾ ಉಪಯುಕ್ತವಾಗಿದೆ ಏಕೆಂದರೆ ನಾವು ಶಿಬಿರಕ್ಕೆ ಹೋಗುವಾಗ, ಬೇಗನೆ ಏಳಬೇಕಾಗಿತ್ತು, ಆದ್ದರಿಂದ ಸ್ವಲ್ಪ ಶಿಸ್ತನ್ನೂ ಕಲಿತಿದ್ದೇನೆ. ಆದರೆ ಬೇಗ ಏಳುವುದು ನನ್ನ ಅಭ್ಯಾಸ ಅದು ನನಗೆ ಒಂದು ದೊಡ್ಡ ಆಸ್ತಿಯಾಗಿದೆ . ಪ್ರಪಂಚ ಎಚ್ಚರಗೊಳ್ಳುವ ಮೊದಲೇ ನಾನು ನನ್ನ ಬಹಳಷ್ಟು ಕೆಲಸಗಳನ್ನು ಮುಗಿಸುತ್ತೇನೆ. ನೀವು ಕೂಡ ಬೇಗ ಏಳುವ ಅಭ್ಯಾಸವನ್ನು ಉಳಿಸಿಕೊಂಡರೆ, ಅದು ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ ಸ್ನೇಹಿತರೇ.
ಭಾಗವಹಿಸುವವರು - ನಾನು ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ, ಛತ್ರಪತಿ ಶಿವಾಜಿ ಮಹಾರಾಜರಂತೆ ಸ್ವರಾಜ್ಯವನ್ನು ಸೃಷ್ಟಿಸಬಹುದಾದವರು ಯಾರಾದರೂ ಇದ್ದರೆ, ಅದು ನರೇಂದ್ರ ಮೋದಿಜಿ ಮಾತ್ರ.
ಪ್ರಧಾನಮಂತ್ರಿ - ನಾವು ಎಲ್ಲರಿಂದಲೂ ಕಲಿಯಬೇಕು. ಛತ್ರಪತಿ ಶಿವಾಜಿ ಮಹಾರಾಜರಿಂದಲೂ ನಾವು ಕಲಿಯಬೇಕು, ನೀವು ಇಲ್ಲಿ ಏನು ಕಲಿತಿರೆಂದು ನಮಗೆ ಹೇಳಬಲ್ಲಿರಾ?
ಭಾಗವಹಿಸುವವರು - ಸರ್, ಇಲ್ಲಿ ವಿವಿಧ ನಿರ್ದೇಶನಾಲಯಗಳೊಂದಿಗೆ ಸ್ನೇಹ ಬೆಳೆಸುವುದು, ಅವರೊಂದಿಗೆ ಮಾತನಾಡುವುದು, ಅವರೊಂದಿಗೆ ಬೆರೆಯುವುದು, ಇದರರ್ಥ ಇಡೀ ಭಾರತವು ಒಟ್ಟಿಗೆ ಸೇರಿದಾಗ.
ಪ್ರಧಾನಮಂತ್ರಿ - ನೀವು ಮನೆಯಲ್ಲಿದ್ದಾಗ, ನೀವು ಎಂದಿಗೂ ತರಕಾರಿಯನ್ನು ಮುಟ್ಟುತ್ತಿರಲಿಲ್ಲ, ನಿಮ್ಮ ತಾಯಿಯೊಂದಿಗೆ ಜಗಳವಾಡುತ್ತಿದ್ದಿರಿ ಮತ್ತು ಇಲ್ಲಿ ನೀವು ತರಕಾರಿಗಳನ್ನು ತಿನ್ನಲು ಕಲಿತಿರಬೇಕು, ಅದು ಹೀಗಿರಬೇಕು, ಸಹೋದರ, ನಿಮ್ಮ ಜೀವನದಲ್ಲಿ ಎಂತಹ ಹೊಸ ವಿಷಯ ಬಂದಿದೆ ಎಂದು.
ಭಾಗವಹಿಸುವವರು - ನಾನು ಎಲ್ಲಾ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಕಲಿತಿದ್ದೇನೆ.
ಭಾಗವಹಿಸುವವರು - ಸರ್, ನಾನು ಮೂಲತಃ ಕಾಶ್ಮೀರಿ ಪಂಡಿತ್ ಕುಟುಂಬಕ್ಕೆ ಸೇರಿದವಳು. ನಾನು ಒಂಬತ್ತನೇ ತರಗತಿಯಲ್ಲಿದ್ದೇನೆ ಹಾಗಾಗಿ ನಾನು ಎಂದಿಗೂ ಯಾವುದೇ ಮನೆಕೆಲಸಗಳನ್ನು ಮಾಡಿಲ್ಲ ಏಕೆಂದರೆ ನಾನು ಮನೆಯಲ್ಲಿರುವಾಗಲೆಲ್ಲಾ ಶಾಲೆಗೆ ಹೋಗಬೇಕಾಗುತ್ತದೆ. ನಂತರ ಹಿಂತಿರುಗಿದ ನಂತರ, ನಾನು ಓದುತ್ತೇನೆ, ಟ್ಯೂಷನ್ ಇತ್ಯಾದಿಗಳಿಗೆ ಹೋಗುತ್ತೇನೆ. ಆದರೆ ಇಲ್ಲಿಗೆ ಬಂದ ನಂತರ ನಾನು ಕಲಿತ ದೊಡ್ಡ ವಿಷಯವೆಂದರೆ ಸ್ವಯಂ ಸ್ವತಂತ್ರಳಾಗಿರುವುದು. ನಾನು ಇಲ್ಲಿ ಎಲ್ಲಾ ಕೆಲಸಗಳನ್ನು ಕಲಿತಿದ್ದೇನೆ ಮತ್ತು ನಾನು ಮನೆಗೆ ಹೋದ ತಕ್ಷಣ, ಓದುವುದರ ಜೊತೆಗೆ ನನ್ನ ತಾಯಿಗೆ ಸಹಾಯ ಮಾಡುತ್ತೇನೆ.
ಪ್ರಧಾನಮಂತ್ರಿ - ನೋಡಿ, ನಿಮ್ಮ ಈ ವೀಡಿಯೊ ನಿಮ್ಮ ತಾಯಿಗೆ ತಲುಪಲಿದೆ, ನೀವು ಸಿಕ್ಕಿ ಹಾಕಿಕೊಳ್ಳುತ್ತೀರಿ.
ಭಾಗವಹಿಸುವವರು - ಇಲ್ಲಿಗೆ ಬಂದ ನಂತರ ನಾನು ಕಲಿತ ಮೊದಲ ವಿಷಯವೆಂದರೆ ಕುಟುಂಬ ಎಂದರೆ ಯಾವಾಗಲೂ ನಮ್ಮೊಂದಿಗೆ ಮನೆಯಲ್ಲಿ ವಾಸಿಸುವ ಜನರು ಅಲ್ಲ, ನಮ್ಮ ಸ್ನೇಹಿತರು, ಇಲ್ಲಿನ ಹಿರಿಯರು, ಅವರೆಲ್ಲರೂ ಸಹ ಒಂದು ದೊಡ್ಡ ಕುಟುಂಬವನ್ನು ರೂಪಿಸುತ್ತಾರೆ ಮತ್ತು ಇದನ್ನು ನಾನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಮತ್ತು ನಾನು ಇಲ್ಲಿಗೆ ಬಂದ ನಂತರ ಕಲಿತದ್ದು.
ಪ್ರಧಾನಮಂತ್ರಿ - ಒಂದು ಭಾರತ, ಶ್ರೇಷ್ಠ ಭಾರತ.
ಭಾಗವಹಿಸುವವರು - ಹೌದು ಸರ್.
ಪ್ರಧಾನಮಂತ್ರಿ - ಸರಿ, ಈ 30 ದಿನಗಳಲ್ಲಿ, ಕೆಲವರಿಗೆ ಪೆರೇಡ್ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರಬಹುದು, ಕೆಲವರಿಗೆ ಸಿಕ್ಕಿಲ್ಲ, ಸರಿಯೇ? ಹಾಗಾದರೆ ನೀವು ಏನನ್ನು ಯೋಚಿಸುತ್ತೀರಿ, ನೀವು ಏನೋ ಅನ್ನಿಸುತ್ತಿರಬೇಕು?
ಭಾಗವಹಿಸುವವರು - ಸರ್, ಆಯ್ಕೆಯಾಗುವುದು ಅಥವಾ ಇಲ್ಲದಿರುವುದು ಬೇರೆ ವಿಷಯ ಆದರೆ ಅದಕ್ಕಾಗಿ ಪ್ರಯತ್ನಿಸುವುದು ಬಹಳ ದೊಡ್ಡ ವಿಷಯ ಸರ್.
ಪ್ರಧಾನಮಂತ್ರಿ - ಇದೇ ದೊಡ್ಡ ವಿಷಯ, ನಾವು ಆಯ್ಕೆಯಾಗಲಿ ಅಥವಾ ಇಲ್ಲದಿರಲಿ ಆದರೆ ನಾನು ನನ್ನಿಂದ ಉತ್ತಮವಾಗುವಷ್ಟು ಮಾಡಿದ್ದೇನೆ. ಅದು ಎನ್.ಸಿ.ಸಿ. ಯೇ?
ಭಾಗವಹಿಸುವವರು - ಹೌದು ಸರ್.
ಪ್ರಧಾನಮಂತ್ರಿ - ಹಾಗಾದರೆ, ನೀವು ಜನರು ಸಮವಸ್ತ್ರ ಧರಿಸುವುದು ಖುಷಿ ಆಗುತ್ತಾ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ಖುಷಿ ಆಗುತ್ತಾ?
ಭಾಗವಹಿಸುವವರು - ಎರಡೂ.
ಪ್ರಧಾನಮಂತ್ರಿ - ಹಾಗಾದರೆ ನೀವು ಒಂದು ತಿಂಗಳಿನಿಂದ ಇಲ್ಲಿದ್ದೀರಿ, ಆದ್ದರಿಂದ ನೀವು ಮನೆಯಲ್ಲಿಯೇ ವೀಡಿಯೊ ಕಾನ್ಫರೆನ್ಸಿಂಗ್ ಮಾಡುತ್ತಿರಬೇಕು?
ಭಾಗವಹಿಸುವವರು - ಹೌದು ಸರ್.
ಪ್ರಧಾನಮಂತ್ರಿ - ಅವರಿಗೆ ಇದನ್ನು ಏಕೆ ಮಾಡಲು ಸಾಧ್ಯವಾಯಿತೆಂದು ನಿಮಗೆ ತಿಳಿದಿದೆಯೇ? ತಂತ್ರಜ್ಞಾನ, ಎರಡನೆಯದು ಡಿಜಿಟಲ್ ಇಂಡಿಯಾ, ಮೂರನೆಯದು ವಿಕಸಿತ ಭಾರತ. ಮತ್ತೆ ನೋಡಿ, ಡೇಟಾ ತುಂಬಾ ಅಗ್ಗವಾಗಿರುವ ದೇಶಗಳು ಜಗತ್ತಿನಲ್ಲಿ ಬಃಳ ಕಡಿಮೆ ಆದ್ದರಿಂದ ಅತ್ಯಂತ ಬಡವರು ಸಹ ತಮ್ಮ ಕುಟುಂಬ ಸದಸ್ಯರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸುಲಭವಾಗಿ ಮಾತನಾಡಬಹುದು. ನಿಮ್ಮಲ್ಲಿ ಎಷ್ಟು ಮಂದಿ ಡಿಜಿಟಲ್ ಪಾವತಿಗಾಗಿ ಯು.ಪಿ.ಐ ಬಳಸುತ್ತೀರಿ? ವಾಹ್, ಹೊಸ ಪೀಳಿಗೆಯವರ್ಯಾರೂ ತಮ್ಮ ಜೇಬಿನಲ್ಲಿ ಹಣವನ್ನು ಇಟ್ಟುಕೊಳ್ಳುವುದಿಲ್ಲ! ಎನ್.ಸಿ.ಸಿ. ನಿಮ್ಮ ಜೀವನದಲ್ಲಿ ನಿಮಗೆ ಬಹಳಷ್ಟು ಸೇವೆ ಸಲ್ಲಿಸಿದೆ, ನಿಮ್ಮಲ್ಲಿ ಮೊದಲು ಇಲ್ಲದಿದ್ದ ಒಂದು ತುಂಬಾ ಒಳ್ಳೆಯ ವಿಷಯ ಸಿಕ್ಕಿದೆ, ಏನದು?
ಭಾಗವಹಿಸುವವರು - ಜೈ ಹಿಂದ್ ಸರ್, ಸಮಯಪಾಲನೆ ಮತ್ತು ಸಮಯ ನಿರ್ವಹಣೆ ಮತ್ತು ಮೂರನೆಯದು ನಾಯಕತ್ವ.
ಪ್ರಧಾನಮಂತ್ರಿ - ಸರಿ, ಬೇರೆಯವರು.
ಭಾಗವಹಿಸುವವರು - ಸರ್, ಎನ್.ಸಿ.ಸಿ. ನನಗೆ ಕಲಿಸಿದ ಅತ್ಯುತ್ತಮ ವಿಷಯವೆಂದರೆ ರಕ್ತದಾನ ಶಿಬಿರಗಳಂತೆ ಸಾರ್ವಜನಿಕ ಸೇವೆ, ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು.
ಪ್ರಧಾನಮಂತ್ರಿ - ನೋಡಿ, ಮೈ ಭಾರತ್, ಮೇರಾ ಯುವ ಭಾರತ್, ʼಮೈ ಭಾರತ್ʼ ಭಾರತ ಸರ್ಕಾರವು ನಡೆಸುವ ವೇದಿಕೆಯಾಗಿದೆ. ಇಲ್ಲಿಯವರೆಗೆ, ದೇಶದ ಮೂರು ಕೋಟಿಗೂ ಹೆಚ್ಚು ಯುವಕರು ಮತ್ತು ಮಹಿಳೆಯರು ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಈಗ ʼಮೈ ಭಾರತ್ʼ ಜನರು ಉತ್ತಮ ಕೆಲಸ ಮಾಡಿದ್ದಾರೆ, ದೇಶಾದ್ಯಂತ ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಚರ್ಚೆ ನಡೆಸಿದ್ದಾರೆ, ರಸಪ್ರಶ್ನೆ ಸ್ಪರ್ಧೆಗಳು, ಪ್ರಬಂಧ ಬರವಣಿಗೆ, ಭಾಷಣ ಸ್ಪರ್ಧೆಗಳನ್ನು ನಡೆಸಿದ್ದಾರೆ ಮತ್ತು ದೇಶಾದ್ಯಂತ ಸುಮಾರು 30 ಲಕ್ಷ ಜನರು ಸೇರಿದ್ದಾರೆ. ನೀವು ಮೊದಲು ಏನು ಮಾಡುತ್ತೀರಿ?
ಭಾಗವಹಿಸುವವರು - ಹೌದು ಸರ್.
ಪ್ರಧಾನಮಂತ್ರಿ - ಮೈ ಭಾರತ್ ನಲ್ಲಿ ನೋಂದಾಯಿಸಿಕೊಳ್ಳುತ್ತೀರ.
ಭಾಗವಹಿಸುವವರು - ಹೌದು ಸರ್.
ಪ್ರಧಾನಮಂತ್ರಿ - ಆದ್ದರಿಂದ ನೀವು ಎನ್.ಸಿ.ಸಿ. ಯಲ್ಲಿ ಕಲಿತದ್ದೆಲ್ಲವೂ ಕೆಲವು ವರ್ಷಗಳವರೆಗೆ ನಿಮ್ಮೊಂದಿಗೆ ಇರುತ್ತದೆ, ಆದರೆ ಮೈ ಭಾರತ್ ನಿಮ್ಮೊಂದಿಗೆ ಜೀವನಪರ್ಯಂತ ಇರುತ್ತದೆ.
ಭಾಗವಹಿಸುವವರು - ಹೌದು ಸರ್.
ಪ್ರಧಾನಮಂತ್ರಿ - ಹಾಗಾದರೆ ನೀವು ಅದರ ಬಗ್ಗೆ ಏನಾದರೂ ಮಾಡುತ್ತೀರಾ?
ಭಾಗವಹಿಸುವವರು - ಹೌದು ಸರ್.
ಪ್ರಧಾನಮಂತ್ರಿ - ಭಾರತವು ಮುಂದಿನ 25 ವರ್ಷಗಳ ಗುರಿಯನ್ನು ನಿರ್ಧರಿಸಿದೆ. ಆ ಗುರಿ ಏನೆಂದು ತಿಳಿದಿದೆಯೇ? ದಯವಿಟ್ಟು ನಿಮ್ಮ ಕೈ ಎತ್ತಿ ಜೋರಾಗಿ ಹೇಳಿ.
ಭಾಗವಹಿಸುವವರು - ವಿಕಸಿತ ಭಾರತ.
ಪ್ರಧಾನಮಂತ್ರಿ - ಮತ್ತು ನೀವು ಯಾವ ವರ್ಷದ ಬಗ್ಗೆ ಹೇಳಿದಿರಿ?
ಭಾಗವಹಿಸುವವರು - 2047!
ಪ್ರಧಾನಮಂತ್ರಿ - ಸರಿ, ಈ 2047 ಎಂದು ಏಕೆ ನಿರ್ಧರಿಸಲಾಗಿದೆ?
ಭಾಗವಹಿಸುವವರು - 100 ವರ್ಷಗಳು ಪೂರ್ಣಗೊಳ್ಳುತ್ತವೆ.
ಪ್ರಧಾನಮಂತ್ರಿ - ಯಾರಿಗೆ?
ಭಾಗವಹಿಸುವವರು - ಸ್ವಾತಂತ್ರ್ಯಕ್ಕೆ.
ಪ್ರಧಾನಮಂತ್ರಿ - ಮೋದಿಜಿ ಗೆ , ಭಾರತದ ಸ್ವಾತಂತ್ರ್ಯಕ್ಕೆ
ಭಾಗವಹಿಸುವವರು - 100 ವರ್ಷಗಳು ಪೂರ್ಣಗೊಳ್ಳುತ್ತವೆ.
ಪ್ರಧಾನಮಂತ್ರಿ - ಮತ್ತು ಅಲ್ಲಿಯವರೆಗೆ ನಮ್ಮ ಗುರಿ ಏನು?
ಭಾಗವಹಿಸುವವರು - ವಿಕಸಿತ ಭಾರತ.
ಪ್ರಧಾನಮಂತ್ರಿ - ಈ ದೇಶ ಅಭಿವೃದ್ಧಿ ಹೊಂದಬೇಕು, ಇದನ್ನು ಯಾರು ಅಭಿವೃದ್ಧಿ ಪಡಿಸುತ್ತಾರೆ?
ಭಾಗವಹಿಸುವವರು - ನಾವು ಮಾಡುತ್ತೇವೆ.
ಪ್ರಧಾನಮಂತ್ರಿ - ಸರ್ಕಾರವು ಮಾಡುತ್ತದೆ ಎಂದೇ
ಭಾಗವಹಿಸುವವರು - ಇಲ್ಲ ಸರ್.
ಪ್ರಧಾನಮಂತ್ರಿ - 140 ಕೋಟಿ ನಾಗರಿಕರು ಇದನ್ನು ನಿರ್ಧರಿಸಿ ಅದಕ್ಕಾಗಿ ಸಕಾರಾತ್ಮಕವಾಗಿ ಮಾಡಿದಾಗ, ಈ ಕೆಲಸ ಕಷ್ಟಕರವಲ್ಲ. ನೋಡಿ, ನಾವು ನಮ್ಮ ಕರ್ತವ್ಯಗಳನ್ನು ಪಾಲಿಸಿದರೆ, ವಿಕಸಿತ ಭಾರತವನ್ನು ಮಾಡುವಲ್ಲಿ ನಾವು ದೊಡ್ಡ ಶಕ್ತಿಯಾಗಬಹುದು. ತಮ್ಮ ತಾಯಿಯನ್ನು ತುಂಬಾ ಪ್ರೀತಿಸುವವರು ಯಾರು? ಎಲ್ಲರೊಂದಿಗೂ ಒಳ್ಳೆಯದು! ಭೂಮಿ ತಾಯಿಯನ್ನು ತುಂಬಾ ಪ್ರೀತಿಸುವವರು ಅನೇಕರಿದ್ದಾರೆ, ಇದು ಕೂಡ ಬಹಳಷ್ಟು ಜನ ಇದ್ದಾರೆ̤ ಸರಿ, ನಾನು ನಿಮಗೆ ಒಂದು ಕಾರ್ಯಕ್ರಮದ ಬಗ್ಗೆ ಹೇಳಿದ್ದೆ, ಅದು ಒಬ್ಬರ ತಾಯಿಯ ಬಗ್ಗೆ ಮತ್ತು ಭೂಮಿ ತಾಯಿ ಬಗ್ಗೆ ಗೌರವವನ್ನು ವ್ಯಕ್ತಪಡಿಸುವ ಕಾರ್ಯಕ್ರಮ - ಏಕ್ ಪೆಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಮರ) . ಮತ್ತು ನನ್ನ ನಿರೀಕ್ಷೆಯೆಂದರೆ ನೀವು ನಿಮ್ಮ ತಾಯಿಯೊಂದಿಗೆ ಒಂದು ಮರವನ್ನು ನೆಡಬೇಕು ಮತ್ತು ಇದು ನನ್ನ ತಾಯಿಯ ಹೆಸರಿನಲ್ಲಿ ಇರುವ ಒಂದು ಮರ ಎಂದು ಯಾವಾಗಲೂ ನೆನಪಿಡಿ ಮತ್ತು ನಾನು ಅದನ್ನು ಎಂದಿಗೂ ಒಣಗಲು ಬಿಡುವುದಿಲ್ಲ ಮತ್ತು ಇದರಿಂದ ಮೊದಲು ಪ್ರಯೋಜನ ಪಡೆಯುವವರು ಭೂಮಿ ತಾಯಿಯಾಗಿರುತ್ತಾರೆ.
ಭಾಗವಹಿಸುವವರು - ನನ್ನ ಹೆಸರು ಬಟಾಮಿಪಿ. ಜಿಲ್ಲೆ ದಿವಾಂಗ್ ವ್ಯಾಲಿ ಅನಿನಿಯ ವಾಸಿ. ನಾನು ಇದು ಮಿಶ್ಮಿ, ಮತ್ತು ನಾನು ಅರುಣಾಚಲ ಪ್ರದೇಶದಿಂದ ಬಂದಿದ್ದೇನೆ. ಪ್ರಧಾನಿ ಮೋದಿ ಅವರು ಸರ್ಕಾರ ರಚಿಸಿದಾಗಿನಿಂದ, ಅದು ವೇಗವಾಗಿ ಮುಂದುವರಿಯುತ್ತಿದೆ ಮತ್ತು ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬರೂ ಅದನ್ನು ತಿಳಿದಿದ್ದಾರೆ ಮತ್ತು ನೋಡುತ್ತಿದ್ದಾರೆ.
ಪ್ರಧಾನಮಂತ್ರಿ - ಅರುಣಾಚಲಕ್ಕೆ ಒಂದು ವಿಶೇಷತೆ ಇದೆ, ಭಾರತದಲ್ಲಿ ಸೂರ್ಯನ ಮೊದಲ ಕಿರಣ ಬೀಳುವ ಸ್ಥಳ ನಮ್ಮ ಅರುಣಾಚಲ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅರುಣಾಚಲಕ್ಕೆ ಒಂದು ವಿಶೇಷತೆ ಇದೆ, ನಾವು ಎಲ್ಲೋ ಭೇಟಿಯಾದಾಗ, ನಾವು ರಾಮ್ ರಾಮ್ ಅಥವಾ ನಮಸ್ತೆ ಎಂದು ಹೇಳುತ್ತೇವೆ, ಅರುಣಾಚಲದವರಿಗೆ ಜೈ ಹಿಂದ್ ಎಂದು ಹೇಳುವ ಸ್ವಭಾವವಿದೆ, ಇಂದಿನಿಂದ ನಾನು ನಿಮ್ಮನ್ನು ವಿನಂತಿಸುತ್ತೇನೆ, ನೀವು ವೈವಿಧ್ಯತೆ, ಕಲೆ, ನೈಸರ್ಗಿಕ ಸೌಂದರ್ಯ, ಅಲ್ಲಿನ ಜನರ ಪ್ರೀತಿಯನ್ನು ನೋಡಲು ಬಯಸಿದರೆ, ಸ್ವಲ್ಪ ಸಮಯ ತೆಗೆದುಕೊಂಡು ಅರುಣಾಚಲ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಸ್ಸಾಂ, ನಮ್ಮ ಅಷ್ಟ ಲಕ್ಷ್ಮಿಯ ಈ ಇಡೀ ಪ್ರದೇಶ, ಮೇಘಾಲಯಕ್ಕೆ ಭೇಟಿ ನೀಡಿ, ಇದು ತುಂಬಾ ಸುಂದರವಾಗಿದೆ, ನೀವು ಎರಡು ಅಥವಾ ಮೂರು ತಿಂಗಳಲ್ಲಿ ಎಲ್ಲವನ್ನೂ ನೋಡಲು ಸಾಧ್ಯವಿಲ್ಲ, ನೋಡಲು ತುಂಬಾ ವಿಷಯಗಳಿವೆ.
ಪ್ರಧಾನಮಂತ್ರಿ - ನೀವು ನಿಮ್ಮ ಪ್ರದೇಶದಲ್ಲಿ ಕೆಲಸ ಮಾಡುವ ಎನ್.ಎಸ್.ಎಸ್. ತಂಡದಲ್ಲಿ ನಿಮ್ಮ ಘಟಕವು ಯಾವ ರೀತಿಯ ಕೆಲಸವನ್ನು ಮಾಡುತ್ತಿತ್ತು, ಅದರ ಬಗ್ಗೆ ಎಲ್ಲರೂ ಈ ಮಕ್ಕಳು ತುಂಬಾ ಚೆನ್ನಾಗಿ ಮಾಡುತ್ತಾರೆ ಎಂದು ಹೇಳುತ್ತಾರೆ, ಈ ಯುವಕರು ದೇಶಕ್ಕಾಗಿ ಏನಾದರೂ ಮಾಡಲಿದ್ದಾರೆ ಎಂದು ಹೇಳುತ್ತಾರೆ ಅಂತಹ ಯಾವುದೇ ಅನುಭವವನ್ನು ನೀವು ಹಂಚಿಕೊಳ್ಳುತ್ತೀರಾ?
ಭಾಗವಹಿಸುವವರು - ಸರ್, ನಾನು ಹೇಳಲು ಬಯಸುತ್ತೇನೆ!
ಪ್ರಧಾನಮಂತ್ರಿ - ನೀವು ಎಲ್ಲಿಂದ ಬಂದಿರುವಿರಿ?
ಭಾಗವಹಿಸುವವರು - ಸರ್ ನನ್ನ ಹೆಸರು ಅಜಯ್ ಮೋದಿ, ನಾನು ಜಾರ್ಖಂಡ್ನವನು ಮತ್ತು ಸರ್ ನಮ್ಮ ಘಟಕ ಎಂದು ನಾನು ಹೇಳಲು ಬಯಸುತ್ತೇನೆ
ಪ್ರಧಾನಮಂತ್ರಿ - ನೀವು ಮೋದಿನಾ? ಮೋತಿನಾ?
ಭಾಗವಹಿಸುವವರು - ಮೋದಿ ಸರ್.
ಪ್ರಧಾನಮಂತ್ರಿ - ಸರಿ.
ಭಾಗವಹಿಸುವವರು - ನಾನು ಮೋದಿ.
ಪ್ರಧಾನಮಂತ್ರಿ - ಅದಕ್ಕಾಗಿಯೇ ನೀವು ನನ್ನನ್ನು ಗುರುತಿಸಿದ್ದೀರಿ.
ಭಾಗವಹಿಸುವವರು - ಹೌದು ಸರ್.
ಪ್ರಧಾನಮಂತ್ರಿ - ಹೇಳಿ.
ಭಾಗವಹಿಸುವವರು - ಸರ್, ನನ್ನ ಘಟಕವು ಮಾಡಿದ ಅತ್ಯುತ್ತಮ ಕೆಲಸವೆಂದರೆ, ನೀವು ಹೇಳಿದಂತೆ, ಮೆಚ್ಚುಗೆ ಪಡೆದದ್ದು ಸರ್, ನಮ್ಮ ದುಮ್ಕಾದಲ್ಲಿ ಮಹಿರಿ ಸಮುದಾಯವಿದೆ, ಅವರು ಬಿದಿರಿನ ವಸ್ತುಗಳನ್ನು ಚೆನ್ನಾಗಿ ತಯಾರಿಸುತ್ತಾರೆ, ಆದರೆ ಅವುಗಳನ್ನು ಋತುಮಾನಕ್ಕೆ ಅನುಗುಣವಾಗಿ ಮಾತ್ರ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಸರ್, ಈ ರೀತಿಯ ಕೆಲಸ ಮಾಡುವ ಕೆಲವು ಜನರನ್ನು ನಾವು ಕಂಡುಕೊಂಡೆವು ಮತ್ತು ಅವರನ್ನು ಧೂಪದ್ರವ್ಯ ಕಡ್ಡಿಗಳನ್ನು ತಯಾರಿಸುವ ಕಾರ್ಖಾನೆಗಳಿಗೆ ಸಂಪರ್ಕಿಸಿದೆವು.
ಪ್ರಧಾನಮಂತ್ರಿ - ಅಗರಬತ್ತಿ ಎನ್ನುವ ಪದ ಎಲ್ಲಿಂದ ಬಂತು? ಇದು ತುಂಬಾ ಆಸಕ್ತಿದಾಯಕವಾಗಿದೆ, ನೀವು ಅದನ್ನು ನೋಡಬೇಕು. ತ್ರಿಪುರದ ರಾಜಧಾನಿಯ ಹೆಸರೇನು?
ಭಾಗವಹಿಸುವವರು - ಅಗರ್ತಲ ಸರ್.
ಪ್ರಧಾನಮಂತ್ರಿ - ಅದರಲ್ಲಿ ಒಂದು ಶಬ್ಧ ಇದೆ, ಮತ್ತು ನಾವು ಏನು ಮಾತನಾಡುತ್ತಿದ್ದೇವೆ?
ಭಾಗವಹಿಸುವವರು - ಅಗರಬತ್ತಿ..
ಪ್ರಧಾನಮಂತ್ರಿ - ಅಲ್ಲಿ ಅಗರಬತ್ತಿಯ ಕಾಡುಗಳಿವೆ ಮತ್ತು ಅದರ ಎಣ್ಣೆ ತುಂಬಾ ಪರಿಮಳ ಹೊಂದಿದೆ ಮತ್ತು ತುಂಬಾ ದುಬಾರಿಯಾಗಿದೆ, ಬಹುಶಃ ಜಗತ್ತಿನಲ್ಲಿ ಕೆಲವೇ ಕೆಲವು ಎಣ್ಣೆಗಳು ತುಂಬಾ ದುಬಾರಿಯಾಗಿದೆ, ಅದರ ಪರಿಮಳ ತುಂಬಾ ಚೆನ್ನಾಗಿದೆ ಮತ್ತು ಅದರಿಂದ ಸುವಾಸನೆಯನ್ನು ನೀಡುವ ಅಗರಬತ್ತಿಯನ್ನು ತಯಾರಿಸುವ ಸಂಪ್ರದಾಯವು ರೂಪುಗೊಂಡಿತು. ಸರ್ಕಾರವು ಜೆಮ್ ಪೋರ್ಟಲ್ ಅನ್ನು ಹೊಂದಿದೆ, ನಿಮ್ಮ ಪ್ರದೇಶದಲ್ಲಿಯೂ ಸಹ ಯಾರಾದರೂ ಜೆಮ್ ಪೋರ್ಟಲ್ನಲ್ಲಿ ತಮ್ಮ ಉತ್ಪನ್ನವನ್ನು ನೋಂದಾಯಿಸಿದರೆ, ಅದರ ಬೆಲೆ ಇತ್ಯಾದಿಗಳನ್ನು ಬರೆಯಬೇಕಾಗುತ್ತದೆ. ಸರ್ಕಾರಕ್ಕೆ ಆ ವಸ್ತುಗಳು ಬೇಕಾಗಬಹುದು, ನಂತರ ಅವರು ನಿಮಗೆ ಖರೀದಿ ಆದೇಶ ನೀಡುತ್ತಾರೆ, ಆದ್ದರಿಂದ ಅದರ ಕೆಲಸವು ತುಂಬಾ ವೇಗವಾಗಿ ನಡೆಯುತ್ತದೆ, ಆದ್ದರಿಂದ ಕೆಲವೊಮ್ಮೆ ನೀವು, ವಿದ್ಯಾವಂತ ಯುವಕರೇ, ಅಂತಹ ಜನರನ್ನು ಪರಿಚಯಿಸಿ ಅದನ್ನು ಪೂರ್ಣಗೊಳಿಸಬೇಕು. ಹಳ್ಳಿಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ನಡೆಸುವ ಮೂರು ಕೋಟಿ ಲಕ್ಷಪತಿ ದೀದಿಗಳನ್ನು ದೇಶದಲ್ಲಿ ಮಾಡುವುದು ನನ್ನ ಕನಸು. ನಾನು ಒಂದು ಕೋಟಿ ಮೂವತ್ತು ಲಕ್ಷ ತಲುಪಿದ್ದೇನೆ.
ಭಾಗವಹಿಸುವವರು - ನನ್ನ ತಾಯಿ ಹೊಲಿಗೆ ಕಲಿತಿದ್ದಾರೆ ಮತ್ತು ಇನ್ನೂ ಅದನ್ನು ಮಾಡುತ್ತಿದ್ದಾರೆ ಹಾಗು ಅವರು ತುಂಬಾ ಸಮರ್ಥರಾಗಿದ್ದಾರೆ, ಈಗ ಆ ಚನಿಯಾಗಳು, ನೀವು ತಿಳಿದಿರಬೇಕು ಸರ್ ಚನಿಯಾಗಳು ನವರಾತ್ರಿಯ ಸಮಯದಲ್ಲಿ ತುಂಬಾ ಬೇಡಿಕೆಯಲ್ಲಿರುತ್ತವೆ, ಅವರು ಆ ಚನಿಯಾಗಳನ್ನು ಮಾಡಿದ್ದಾರೆ ಮತ್ತು ಅವರು ವಿದೇಶಕ್ಕೂ ಹೋಗುತ್ತಾರೆ.
ಪ್ರಧಾನಮಂತ್ರಿ - ತುಂಬಾ ಚೆನ್ನಾಗಿದೆ.
ಭಾಗವಹಿಸುವವರು - ಆದ್ದರಿಂದ ಹೀಗೇ ಸರ್, ನೀವು ಒಂದು ಮಾದರಿಯನ್ನು ತೋರಿಸಿದ್ದೀರಿ ಮತ್ತು ಭವಿಷ್ಯದಲ್ಲಿ, ಲಕ್ ಪತಿ ದೀದಿ ಕಾರ್ಯಕ್ರಮವು ವಿಕಸಿತ ಭಾರತದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಸರ್.
ಪ್ರಧಾನಮಂತ್ರಿ - ಹಾಗಾದರೆ, ವಿದೇಶದ ಜನರ ಗುಂಪೊಂದು ನಿಮ್ಮೊಂದಿಗೆ ಇರುವುದು ಕಾಣಿಸುತ್ತಿದೆ, ಆದ್ದರಿಂದ ವಿದೇಶದ ಸ್ನೇಹಿತರೊಂದಿಗೆ ಬಲವಾದ ಸ್ನೇಹವನ್ನು ಬೆಳೆಸಿಕೊಂಡ ಅನೇಕ ಜನರಿದ್ದಾರೆ? ಸರಿ, ಅವರು ನಿಮ್ಮನ್ನು ಭೇಟಿಯಾದಾಗ ಅವರ ಪ್ರಶ್ನೆಗಳು ಏನಿರುತ್ತವೆ, ಅವರು ಭಾರತದ ಬಗ್ಗೆ ಏನು ತಿಳಿದುಕೊಳ್ಳಲು ಬಯಸುತ್ತಾರೆ, ಅವರು ಏನು ಕೇಳುತ್ತಾರೆ?
ಭಾಗವಹಿಸುವವರು - ಸರ್ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ನಂತರ ಸಂಪ್ರದಾಯ ಮತ್ತು ಧರ್ಮ ಮತ್ತು ರಾಜಕೀಯದ ಬಗ್ಗೆ ಕೇಳುತ್ತಾರೆ.
ಪ್ರಧಾನಮಂತ್ರಿ - ಹ್ಮ್ ರಾಜಕೀಯ ಕೂಡ, ಓಹ್.
ಭಾಗವಹಿಸುವವರು - ನಮಸ್ತೆ ಸರ್. ನಾನು ನೇಪಾಳದ ರೋಜಿನಾ ಬಾನ್. ಭಾರತಕ್ಕೆ ಭೇಟಿ ನೀಡಲು ಮತ್ತು ನಿಮ್ಮನ್ನು ನೋಡಲು ನಾವು ನಿಜವಾಗಿಯೂ ಬಹಳ ಉತ್ಸುಕರಾಗಿದ್ದೇವೆ. ನಿಮ್ಮ ಆತಿಥ್ಯಕ್ಕೆ ಮತ್ತು ನಿಮ್ಮ ಆತಿಥ್ಯಕ್ಕೆ ನಾನು ಈ ಸಮಯ ಉಪಯೋಗಿಸಿ ಧನ್ಯವಾದ ಹೇಳಲು ಬಯಸುತ್ತೇನೆ, ಅದಕ್ಕಾಗಿ ತುಂಬಾ ಧನ್ಯವಾದಗಳು.
ಭಾಗವಹಿಸುವವರು - ನಾವು ಹೊರಡುವ ಮುನ್ನಾದಿನ ಮಾರಿಷಸ್ಗೆ ಭಾರತದ ಹೈಕಮಿಷನ್ ನಮ್ಮನ್ನು ಭೇಟಿ ಮಾಡಿತು. ಆದ್ದರಿಂದ ಅವರು ನಮಗೆ ಭಾರತಕ್ಕೆ ಹೋಗಿ, ಇದು ನಿಮ್ಮ ಎರಡನೇ ಮನೆ ಎಂದು ಹೇಳಿದ್ದರು. ಅವರು ಹೇಳಿದ್ದು ಸರಿ.
ಪ್ರಧಾನಮಂತ್ರಿ - ವಾಹ್.
ಭಾಗವಹಿಸುವವರು - ನಾವು ಮನೆಯಲ್ಲಿರುವಂತೆ ಭಾವಿಸುತ್ತೇವೆ ಮತ್ತು ಇದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಮಾರಿಷಸ್ ಮತ್ತು ಭಾರತದ ನಡುವಿನ ಸಹಕಾರ ಹಾಗು ಸಹೋದರ ಸಂಬಂಧಗಳು ಚಿರಾಯುವಾಗಲಿ.
ಪ್ರಧಾನಮಂತ್ರಿ - ಇದು ನಿಮ್ಮ ಎರಡನೇ ಮನೆ ಮತ್ತು ನಿಮ್ಮ ಎಲ್ಲಾ ಪೂರ್ವಜರ ಮೊದಲ ಮನೆಯಾಗಿದೆ.
ಭಾಗವಹಿಸುವವರು - ಹೌದು, ಖಂಡಿತಾ!.
ಭಾಗವಹಿಸುವವರು - ಕೇಸರಿಯಾ...ನನ್ನ ದೇಶಕ್ಕೆ ಬನ್ನಿ
ಪ್ರಧಾನಮಂತ್ರಿ - ಶಭಾಷ್!
ಭಾಗವಹಿಸುವವರು - ಸಾರೇ ಜಹಾಂ ಸೆ ಅಚ್ಛಾ ಹಿಂದೂಸ್ತಾ ಹಮಾರಾ ಹಮಾರಾ, ಸಾರೇ ಜಹಾಂ ಸೆ ಅಚ್ಛಾ, ಹಮಾರಾ ಇಸಕೆ, ಯೇ ಗುಲಸಿತಾಂ ಹಮಾರಾ ಹಮಾರಾ ಸಾರೇ ಜಹಾಂ ಸೆ ಅಚ್ಛಾ.
ಪ್ರಧಾನಮಂತ್ರಿ - ತುಂಬಾ ತುಂಬಾ ಅಭಿನಂದನೆಗಳು ಸಹೋದರ.
ಭಾಗವಹಿಸುವವರು - ಧನ್ಯವಾದಗಳು ಸರ್.
ಪ್ರಧಾನಮಂತ್ರಿ - ತುಂಬಾ ಧನ್ಯವಾದಗಳು, ತುಂಬಾ ಧನ್ಯವಾದಗಳು.
*****
(Release ID: 2158745)
Visitor Counter : 15
Read this release in:
Tamil
,
English
,
Urdu
,
हिन्दी
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Telugu
,
Malayalam