ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾರ್ಚ್ 1, 2025 ರಂದು ನಡೆಯಲಿರುವ "ಕೃಷಿ ಮತ್ತು ಗ್ರಾಮೀಣ ಸಮೃದ್ಧಿ" ಕುರಿತ ಬಜೆಟ್ ನಂತರದ ವೆಬಿನಾರ್‌ ನಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ


ಈ ವರ್ಷದ ಬಜೆಟ್‌ ನ ದೃಷ್ಟಿಕೋನವನ್ನು ಕ್ರಿಯಾಶೀಲ ಫಲಿತಾಂಶಗಳಾಗಿ ಬದಲಾಯಿಸಲು  ಸಹಯೋಗವನ್ನು ವೆಬಿನಾರ್ ಉತ್ತೇಜಿಸುತ್ತದೆ

Posted On: 28 FEB 2025 7:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 1, 2025 ರಂದು ಮಧ್ಯಾಹ್ನ 12:30 ಕ್ಕೆ ವಿಡಿಯೊ ಸಮಾವೇಶ ಮೂಲಕ "ಕೃಷಿ ಮತ್ತು ಗ್ರಾಮೀಣ ಸಮೃದ್ಧಿ" ಕುರಿತು ನಡೆಯುವ ಬಜೆಟ್ ನಂತರದ ವೆಬಿನಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಭಾಷಣಮಾಡಲಿದ್ದಾರೆ.

ಈ ವರ್ಷದ ಬಜೆಟ್ ಪ್ರಕಟಣೆಗಳ ಪರಿಣಾಮಕಾರಿ ಅನುಷ್ಠಾನದ ಕಾರ್ಯತಂತ್ರದ ಮೇಲೆ ಕೇಂದ್ರೀಕೃತ ಚರ್ಚೆಗಾಗಿ ಪ್ರಮುಖ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವ ಗುರಿಯನ್ನು ಈ ವೆಬಿನಾರ್ ಹೊಂದಿದೆ.  ಕೃಷಿ ಬೆಳವಣಿಗೆ ಮತ್ತು ಗ್ರಾಮೀಣ ಸಮೃದ್ಧಿಯ ಮೇಲೆ ಬಲವಾಗಿ ಒತ್ತು ನೀಡುವುದರೊಂದಿಗೆ, ಈ ಅಧಿವೇಶನವು ಬಜೆಟ್‌ ನ ದೃಷ್ಟಿಕೋನವನ್ನು ಕ್ರಿಯಾಶೀಲ ಫಲಿತಾಂಶಗಳಾಗಿ ಬದಲಾಯಿಸಲು ಸಾರ್ವತ್ರಿಕ ಸಹಯೋಗವನ್ನು ಉತ್ತೇಜಿಸುತ್ತದೆ.  ಈ ವೆಬಿನಾರ್,  ಖಾಸಗಿ ವಲಯದ ತಜ್ಞರು, ಉದ್ಯಮ ಪ್ರತಿನಿಧಿಗಳು ಮತ್ತು ವಿಷಯ ತಜ್ಞರನ್ನು ಅವರುಗಳ ಅನುಭವಗಳನ್ನು ಒಂದು ಕಡೆ ಜೋಡಿಸಲು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಚಾಲನೆ ನೀಡುತ್ತದೆ.

 

*****
 


(Release ID: 2158704) Visitor Counter : 5