ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಶಾ ಅವರು, 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಕಳೆದ 11 ವರ್ಷಗಳ ಪ್ರಗತಿ, ವರ್ತಮಾನದ ಶಕ್ತಿ ಮತ್ತು ಸಮೃದ್ಧ ಭಾರತಕ್ಕಾಗಿ ಕಾರ್ಯತಂತ್ರದ ಮಾರ್ಗಸೂಚಿ ಎಂದು ಬಣ್ಣಿಸಿದ್ದಾರೆ


Posted On: 15 AUG 2025 4:40PM by PIB Bengaluru

'ಆಪರೇಷನ್ ಸಿಂದೂರ'ದ ಮೂಲಕ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವುದಾಗಿರಲಿ, 'ಮಿಷನ್ ಸುದರ್ಶನ ಚಕ್ರ'ದ ಮೂಲಕ ರಾಷ್ಟ್ರದ ಮೂಲಸೌಕರ್ಯವನ್ನು ಭದ್ರಪಡಿಸುವುದಾಗಿರಲಿ ಅಥವಾ 'ಉನ್ನತ ಅಧಿಕಾರದ ಜನಸಂಖ್ಯಾ ಮಿಷನ್' ಮೂಲಕ ಒಳನುಸುಳುವಿಕೆ ಮುಕ್ತ ಭಾರತವನ್ನು ರಚಿಸುವ ಸಂಕಲ್ಪವಾಗಿರಲಿ ಮೋದಿ ಸರ್ಕಾರವು ದೇಶವನ್ನು ಬಲಪಡಿಸಲು ಮತ್ತು ಸುಭದ್ರವಾಗಿಸಲು ಬದ್ಧವಾಗಿದೆ

 

ಕೆಂಪು ಕೋಟೆಯ ಕೊತ್ತಲಗಳಿಂದ, ಪ್ರಧಾನಮಂತ್ರಿ ಮೋದಿ ಅವರು ದೇಶದ ರೈತರ ಕಲ್ಯಾಣಕ್ಕಾಗಿ ಸರ್ಕಾರದ ಅಚಲ ಬೆಂಬಲವನ್ನು ಒತ್ತಿ ಹೇಳಿದರು

 

ಪರಮಾಣು ಶಕ್ತಿ, ನಿರ್ಣಾಯಕ ಖನಿಜಗಳು, ಇಂಧನ, ಬಾಹ್ಯಾಕಾಶ ಮತ್ತು ಜೆಟ್ ಎಂಜಿನ್ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಧಾನಮಂತ್ರಿ ಮೋದಿ ಕರೆ ನೀಡಿದರು

 

ಮುಂಬರುವ ದೀಪಾವಳಿ ವೇಳೆಗೆ, ಜನತೆಗೆ ತೆರಿಗೆ ನಿರಾಳತೆಯನ್ನು ಒದಗಿಸಲು, ನಾಗರಿಕರ ಜೀವನವನ್ನು ಸುಲಭಗೊಳಿಸಲು ಮತ್ತು ಸಣ್ಣ ಉದ್ಯಮಗಳನ್ನು ಉತ್ತೇಜಿಸಲು ಪ್ರಧಾನಮಂತ್ರಿ ಮೋದಿ ಅವರು ʻಮುಂದಿನ ಪೀಳಿಗೆಯ ಜಿ.ಎಸ್‌.ಟಿʼ ಸುಧಾರಣೆಗಳನ್ನು ಘೋಷಿಸಿದರು

 

1 ಲಕ್ಷ ಕೋಟಿ ರೂ.ಗಳ 'ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆ'ಯನ್ನು ಪ್ರಾರಂಭಿಸುವ ಮೂಲಕ ಪ್ರಧಾನಮಂತ್ರಿ ಮೋದಿ ಯುವಕರಿಗೆ ಉಡುಗೊರೆ ನೀಡಿದರು, ಇದರ ಅಡಿಯಲ್ಲಿ ಖಾಸಗಿ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಿಗೆ 15,000 ರೂ. ನೀಡಲಾಗುವುದು

 

ಕೆಂಪು ಕೋಟೆಯಿಂದ, ಪ್ರಧಾನಮಂತ್ರಿ ಮೋದಿ ಅವರು ʻಆರ್‌.ಎಸ್‌.ಎಸ್‌ʼನ 100 ವರ್ಷಗಳ ಶ್ರೀಮಂತ ಇತಿಹಾಸ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅದರ ಕೊಡುಗೆಗಳನ್ನು ಎತ್ತಿ ತೋರಿದರು, ಅದರ ಎಲ್ಲಾ ಸ್ವಯಂಸೇವಕರಿಗೆ ಗೌರವ ಸಲ್ಲಿಸಿದರು

 

ರಾಷ್ಟ್ರೀಯ ಸ್ವಯಂಸೇವಕ ಸಂಘವು ವೈಯಕ್ತಿಕ ಅಭಿವೃದ್ಧಿ, ಸೇವೆ, ಸಮರ್ಪಣೆ, ಸಂಘಟನೆ ಮತ್ತು ಶಿಸ್ತಿನ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ತನ್ನ ಬದ್ಧತೆಯನ್ನು ಪೂರೈಸುತ್ತಲೇ ಇದೆ

 

 

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಕಳೆದ 11 ವರ್ಷಗಳ ಪ್ರಗತಿ, ವರ್ತಮಾನದ ಶಕ್ತಿ ಮತ್ತು ಸಮೃದ್ಧ ಭಾರತದ ಕಾರ್ಯತಂತ್ರವನ್ನು ಪ್ರದರ್ಶಿಸುವ ಮಾರ್ಗಸೂಚಿ ಎಂದು ಬಣ್ಣಿಸಿದ್ದಾರೆ.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು 'ಎಕ್ಸ್' ವೇದಿಕೆಯ ಸರಣಿ ಪೋಸ್ಟ್‌ಗಳ ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 'ಆಪರೇಷನ್ ಸಿಂದೂರ'ದ ಮೂಲಕ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುದಾಗಿರಲಿ, 'ಮಿಷನ್ ಸುದರ್ಶನ ಚಕ್ರ' ಮೂಲಕ ದೇಶದ ಮೂಲಸೌಕರ್ಯವನ್ನು ಭದ್ರಪಡಿಸುವ ಯೋಜನೆಯಾಗಿರಲಿ ಅಥವಾ 'ಉನ್ನತ ಅಧಿಕಾರದ ಜನಸಂಖ್ಯಾ ಮಿಷನ್' ಮೂಲಕ ಒಳನುಸುಳುವಿಕೆ ಮುಕ್ತ ಭಾರತವನ್ನು ರಚಿಸುವ ಸಂಕಲ್ಪವಾಗಲಿ, ಮೋದಿ ಸರ್ಕಾರವು ದೇಶವನ್ನು ಬಲಪಡಿಸಲು ಮತ್ತು ಸುಭದ್ರವಾಗಿಸಲು ಬದ್ಧವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.  ರೈತರ ಹಿತಾಸಕ್ತಿಗಳಿಗೆ ಸರ್ಕಾರದ ಅಚಲ ಬದ್ಧತೆಯನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿ ಮೋದಿ ಅವರು ಪರಮಾಣು ಶಕ್ತಿ, ನಿರ್ಣಾಯಕ ಖನಿಜಗಳು, ಇಂಧನ, ಬಾಹ್ಯಾಕಾಶ ವಲಯ ಮತ್ತು ಜೆಟ್ ಎಂಜಿನ್‌ಗಳಲ್ಲಿ ಸ್ವಾವಲಂಬನೆಗೆ ಕರೆ ನೀಡಿದರು. ಇದಲ್ಲದೆ, ಮುಂಬರುವ ದೀಪಾವಳಿಯ ಸಮಯದಲ್ಲಿ 'ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆ' ಮತ್ತು ಗಮನಾರ್ಹ ಜಿ.ಎಸ್‌.ಟಿ ನಿರಾಳತೆ ಕ್ರಮಗಳ ಘೋಷಣೆಯು ನಾಗರಿಕರ ಜೀವನವನ್ನು ಸುಲಭಗೊಳಿಸುತ್ತದೆ. ಜೊತೆಗೆ ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.

1 ಲಕ್ಷ ಕೋಟಿ ರೂ.ಗಳ ನಿಧಿಯೊಂದಿಗೆ 'ಪ್ರಧಾನ ಮಂತ್ರಿ ವಿಕಸಿತ  ಭಾರತ್ ರೋಜ್‌ಗಾರ್‌ ಯೋಜನೆ' ಅನುಷ್ಠಾನವನ್ನು ಘೋಷಿಸುವ ಮೂಲಕ ಪ್ರಧಾನಮಂತ್ರಿ ಮೋದಿ ಸ್ವಾತಂತ್ರ್ಯ ದಿನದಂದು ರಾಷ್ಟ್ರದ ಯುವಕರಿಗೆ ಉಡುಗೊರೆ ನೀಡಿದ್ದಾರೆ ಎಂದು ಶ್ರೀ ಅಮಿತ್ ಶಾ ಬಣ್ಣಿಸಿದ್ದಾರೆ. ಈ ಯೋಜನೆಯಡಿ, ಖಾಸಗಿ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಿಗಳಿಗೆ 15,000 ರೂ. ನೀಡಲಾಗುವುದು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಕಂಪನಿಗಳು ಸಹ ಪ್ರೋತ್ಸಾಹಧನವನ್ನು ಪಡೆಯುತ್ತವೆ. ಈ ಉಪಕ್ರಮವು ಸರಿಸುಮಾರು 3.5 ಕೋಟಿ ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ, ಭಾರತೀಯ ಯುವಕರಿಗೆ ಸುವರ್ಣಾವಕಾಶವನ್ನು ಒದಗಿಸುತ್ತದೆ ಮತ್ತು ಸ್ವಾವಲಂಬಿ ಭಾರತದತ್ತ ಪ್ರಯಾಣವನ್ನು ಬಲಪಡಿಸುತ್ತದೆ ಎಂದು ಅಮಿತ್‌ ಶಾ ಅವರು ಹೇಳಿದ್ದಾರೆ.

ಸಣ್ಣ ಉದ್ಯಮಗಳನ್ನು ಸಬಲೀಕರಣಗೊಳಿಸುವ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣದತ್ತ ಮೋದಿ ಸರ್ಕಾರ ದೃಢವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದ್ದಾರೆ. ಕೆಂಪು ಕೋಟೆಯ ಕೊತ್ತಲಗಳಿಂದ, ಪ್ರಧಾನಮಂತ್ರಿ ಮೋದಿ ರಾಷ್ಟ್ರಕ್ಕೆ ದೀಪಾವಳಿ ಉಡುಗೊರೆಯಾಗಿ ʻಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆʼಗಳನ್ನು ಘೋಷಿಸಿದರು. ಈ ಸುಧಾರಣೆಗಳು ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುವುದಲ್ಲದೆ, ದೈನಂದಿನ ಅಗತ್ಯ ವಸ್ತುಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ, ಇದು ಭಾರತೀಯ ಆರ್ಥಿಕತೆಗೆ ಹೊಸ ಉತ್ತೇಜನವನ್ನು ನೀಡುತ್ತದೆ. ಈ ಪ್ರಯತ್ನವು ಭಾರತದ ಆರ್ಥಿಕ ಪರಾಕ್ರಮವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಅದನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಅಮಿತ್‌ ಶಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು 'ಮಿಷನ್ ಸುದರ್ಶನ ಚಕ್ರ'ಕ್ಕೆ ಚಾಲನೆ ನೀಡುವ ಮೂಲಕ ಐತಿಹಾಸಿಕ ಘೋಷಣೆ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. ಈ ಯೋಜನೆಯ ಅಡಿಯಲ್ಲಿ, 2035ರ ವೇಳೆಗೆ, ಮಹತ್ವದ ರಾಷ್ಟ್ರೀಯ ತಾಣಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಕ್ತಿಯುತ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಸಜ್ಜುಗೊಳಿಸಲಾಗುವುದು. ಈ ಯೋಜನೆಯು ಶತ್ರುಗಳ ದಾಳಿಯನ್ನು ತಟಸ್ಥಗೊಳಿಸುವುದು ಮಾತ್ರವಲ್ಲದೆ ʻಸುದರ್ಶನ ಚಕ್ರʼದಂತೆ ಪರಿಣಾಮಕಾರಿ ಪ್ರತಿದಾಳಿಗಳನ್ನು ನಡೆಸುವ ಗುರಿಯನ್ನು ಹೊಂದಿದೆ. ಈ ಕ್ರಮವು ರಾಷ್ಟ್ರೀಯ ಭದ್ರತೆಯನ್ನು ಅವಿಭಾಜ್ಯವಾಗಿಸುವಲ್ಲಿ ಮತ್ತು ಶತ್ರುಗಳ ವಿರುದ್ಧ ಉದ್ದೇಶಿತ ದಾಳಿಗಳನ್ನು ಸಕ್ರಿಯಗೊಳಿಸುವಲ್ಲಿ ಒಂದು ಮೈಲುಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಮೋದಿ ಅವರು ತಮ್ಮ ಐತಿಹಾಸಿಕ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ರಾಷ್ಟ್ರ ನಿರ್ಮಾಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌.ಎಸ್.ಎಸ್) 100 ವರ್ಷಗಳ ಶ್ರೀಮಂತ ಇತಿಹಾಸ ಮತ್ತು ಕೊಡುಗೆಗಳನ್ನು ಶ್ಲಾಘಿಸಿದರು. ದೇಶದ 100 ವರ್ಷಗಳ ಪ್ರಗತಿಯ ಪ್ರಯಾಣಕ್ಕೆ ಸಾಟಿಯಿಲ್ಲದ ಕೊಡುಗೆಗಳನ್ನು ನೀಡಿದ ಎಲ್ಲಾ ಸ್ವಯಂಸೇವಕರಿಗೆ ಗೌರವ ಸಲ್ಲಿಸಿದರು. ಕಳೆದ ಶತಮಾನದಿಂದ, ಸೇವೆ, ಸಮರ್ಪಣೆ, ಸಂಘಟನೆ ಮತ್ತು ಶಿಸ್ತಿನಿಂದ ವೈಯಕ್ತಿಕ ಅಭಿವೃದ್ಧಿಯ ಮೂಲಕ ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ʻಆರ್‌.ಎಸ್‌.ಎಸ್‌ʼ ಪೂರೈಸಿದೆ ಎಂದು ಗೃಹ ಸಚಿವರಾದ ಅಮಿತ್‌ ಶಾ ಅವರು ಹೇಳಿದ್ದಾರೆ.

https://x.com/AmitShah/status/1956252785881526453?t=XKzgGSaKk_wEKK2KBxwENw&s=08

 

*****


(Release ID: 2156922)