ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿಗಳಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ನಾಳೆ ರಾಷ್ಟ್ರವನ್ನುದ್ದೇಶಿಸಿ ಭಾಷಣ
Posted On:
13 AUG 2025 6:36PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ನಾಳೆ (2025ರ ಆಗಸ್ಟ್ 14 ರಂದು) ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಆಕಾಶವಾಣಿಯ ಎಲ್ಲಾ ರಾಷ್ಟ್ರೀಯ ಜಾಲಗಳಲ್ಲಿ ಮತ್ತು ದೂರದರ್ಶನದ ಎಲ್ಲಾ ವಾಹಿನಿಗಳಲ್ಲಿ ರಾತ್ರಿ 7 ಗಂಟೆಯಿಂದ (19:00 hrs) ಈ ಭಾಷಣ ಬಿತ್ತರವಾಗಲಿದೆ. ಮೊದಲಿಗೆ ಹಿಂದಿಯಲ್ಲಿ ನಂತರ ಇಂಗ್ಲೀಷ್ ಅವತರಣಿಕೆ ಪ್ರಸಾರವಾಗಲಿದೆ. ಭಾಷಣದ ಹಿಂದಿ ಮತ್ತು ಇಂಗ್ಲೀಷ್ ಪ್ರಸಾರದ ನಂತರ ದೂರದರ್ಶನದ ಪ್ರಾದೇಶಿಕ ವಾಹಿನಿಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಿರಲಿದೆ. ಆಕಾಶವಾಣಿಯು ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು ರಾತ್ರಿ 11:30ಕ್ಕೆ ಆಯಾ ಪ್ರಾದೇಶಿಕ ಜಾಲಗಳಲ್ಲಿ ಪ್ರಸಾರ ಮಾಡಲಿದೆ.
*****
(Release ID: 2156223)