ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಿಲಿಪೀನ್ಸ್ ಅಧ್ಯಕ್ಷರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ

Posted On: 05 AUG 2025 3:45PM by PIB Bengaluru

ಗೌರವಾನ್ವಿತರೇ,

 

ನಾನು ಭಾರತಕ್ಕೆ ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಇಂದು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಐತಿಹಾಸಿಕ ದಿನವಾಗಿದೆ. ನಾವು ಭಾರತ- ಪಿಲಿಪೀನ್ಸ್ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಯ ಮಟ್ಟಕ್ಕೆ ಎತ್ತರಿಸುತ್ತಿದ್ದೇವೆ. ಇದು ನಮ್ಮ ಸಂಬಂಧಗಳಿಗೆ ಹೊಸ ವೇಗ ಮತ್ತು ತೀವ್ರತೆಯನ್ನು ತಂದುಕೊಡುತ್ತದೆ ಮತ್ತು ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರಗಳಲ್ಲಿ ನಮ್ಮ ಸಹಕಾರ ಮತ್ತಷ್ಟು ಬಲವರ್ಧನೆಗೊಳ್ಳಲಿದೆ. ಕಳೆದ ಕೆಲವು ವರ್ಷಗಳಿಂದ, ವ್ಯಾಪಾರ, ರಕ್ಷಣೆ, ಸಾಗರ ಸಹಕಾರ, ಆರೋಗ್ಯ ರಕ್ಷಣೆ, ಭದ್ರತೆ, ಆಹಾರ ಭದ್ರತೆ, ಅಭಿವೃದ್ಧಿ ಪಾಲುದಾರಿಕೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ನಮ್ಮ ಸಂಬಂಧಗಳು ಪ್ರಗತಿಯನ್ನು ಸಾಧಿಸಿವೆ. ಮುಂದಿನ ಐದು ವರ್ಷಗಳಿಗಾಗಿ ನಾವು ಇಂದು ಕ್ರಿಯಾ ಯೋಜನೆಯನ್ನು ರೂಪಿಸುತ್ತಿರುವುದೂ ಸಹ ನಿಜಕ್ಕೂ ತೃಪ್ತಿಯ ವಿಷಯವಾಗಿದೆ.


ಗೌರವಾನ್ವಿತರೇ,


2027ರ ಜುಲೈವರೆಗೆ ಪಿಲಿಪೀನ್ಸ್, ಆಸಿಯಾನ್‌ನಲ್ಲಿ ಭಾರತದ ದೇಶ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದೆ. 2026 ರಲ್ಲಿ ನೀವು ಆಸಿಯಾನ್‌ನ ಅಧ್ಯಕ್ಷತೆಯನ್ನೂ ಸಹ ವಹಿಸಿಕೊಳ್ಳುತ್ತೀದ್ದೀರಿ. ಪಿಲಿಪೀನ್ಸ್ ನಾಯಕತ್ವದಲ್ಲಿ, ಭಾರತ-ಆಸಿಯಾನ್ ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತವೆ ಎಂಬ ವಿಶ್ವಾಸ ನಮಗಿದೆ. 


ಗೌರವಾನ್ವಿತರೇ,
 


ಈಗ ನಾವು ಒಟ್ಟಿಗೆ ಕುಳಿತಿರುವಾಗ, ಬಹುತೇಕ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ನಾವು ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ. ಆದ್ದರಿಂದ ನಾನು ಅವುಗಳನ್ನು ಅನಗತ್ಯವಾಗಿ ಪುನರಾವರ್ತಿಸಲು ಅಥವಾ ಪುನರುಚ್ಚರಿಸಲು ಬಯಸುವುದಿಲ್ಲ. ನಿಮ್ಮ ಆರಂಭಿಕ ಹೇಳಿಕೆಗಳಿಗಾಗಿ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ, ಇದು ಈ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯಲು ನಮಗೆ ಸಹಕಾರಿಯಾಗಲಿದೆ.

ಹಕ್ಕು ನಿರಾಕರಣೆ - ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****


(Release ID: 2152943)