ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಗಸ್ಟ್ 6 ರಂದು ಕರ್ತವ್ಯ ಭವನ ಉದ್ಘಾಟಿಸಲಿರುವ ಪ್ರಧಾನಮಂತ್ರಿ 


ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಟ್ಟುಗೂಡಿಸುವ ಮೂಲಕ ಕರ್ತವ್ಯ ಭವನ ದಕ್ಷತೆ, ನಾವೀನ್ಯತೆ ಮತ್ತು ಸಹಯೋಗವನ್ನು ಬೆಳೆಸಲಿದೆ

ಹೊಸ ಕಟ್ಟಡವು ಆಧುನಿಕ ಆಡಳಿತ ಮೂಲಸೌಕರ್ಯಕ್ಕೊಂದು ದೃಷ್ಟಾಂತವಾಗಲಿದೆ

ಶೂನ್ಯ-ವಿಸರ್ಜನೆ ತ್ಯಾಜ್ಯ ನಿರ್ವಹಣೆ, ಆಂತರಿಕ ಘನತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆಯ ನಿರ್ಮಾಣ ಸಾಮಗ್ರಿಗಳ ವ್ಯಾಪಕ ಬಳಕೆಯ ಮೂಲಕ ಪರಿಸರ ಪ್ರಜ್ಞೆಯನ್ನು ಉತ್ತೇಜಿಸುತ್ತದೆ

ಇಂಧನ ದಕ್ಷತೆ ಮತ್ತು ನೀರಿನ ನಿರ್ವಹಣೆಯ ಮೇಲೂ ಆದ್ಯ ಗಮನ ನೀಡಿದೆ

Posted On: 04 AUG 2025 5:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 6 ರಂದು ಮಧ್ಯಾಹ್ನ 12:15ರ ಸುಮಾರಿಗೆ ದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನಕ್ಕೆ ಭೇಟಿ ನೀಡಿ ಅದನ್ನು ಉದ್ಘಾಟಿಸಲಿದ್ದಾರೆ. ನಂತರ, ಪ್ರಧಾನ ಮಂತ್ರಿಗಳು ಸಂಜೆ 6:30ರ ಸುಮಾರಿಗೆ ಕರ್ತವ್ಯ ಪಥದ ಕುರಿತು ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದು ಪ್ರಧಾನಮಂತ್ರಿಯವರ ಆಧುನಿಕ, ದಕ್ಷ ಮತ್ತು ನಾಗರಿಕ ಕೇಂದ್ರಿತ ಆಡಳಿತದ ದೃಷ್ಟಿಕೋನಕ್ಕೆ ಸರ್ಕಾರದ ಬದ್ಧತೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಉದ್ಘಾಟನೆಯಾಗುತ್ತಿರುವ ಕರ್ತವ್ಯ ಭವನ - 03, ಕೇಂದ್ರೀಯ ಭವನದ ವಿಶಾಲ ರೂಪಾಂತರದ ಭಾಗವಾಗಿದೆ. ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಮತ್ತು ಚುರುಕಾದ ಆಡಳಿತವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿರುವ ರೀತಿಯಲ್ಲಿ ಸಜ್ಜುಗೊಳಿಸಿ ಅನುಷ್ಠಾನಿಸಲು ಹೊರಟಿರುವ ಸಾಮಾನ್ಯ ಕೇಂದ್ರ ಸಚಿವಾಲಯ ಕಟ್ಟಡಗಳಲ್ಲಿ ಇದು ಮೊದಲನೆಯದು.

ಈ ಯೋಜನೆಯು ಸರ್ಕಾರದ ವಿಶಾಲ ಆಡಳಿತ ಸುಧಾರಣಾ ಕಾರ್ಯಸೂಚಿಯನ್ನು ಸಾಕಾರಗೊಳಿಸುತ್ತದೆ. ಸಚಿವಾಲಯಗಳನ್ನು ಕೂಡಾ ಇದರಲ್ಲಿ ಸೇರಿಸುವ ಮೂಲಕ ಮತ್ತು ಅತ್ಯಾಧುನಿಕ ಮೂಲಸೌಕರ್ಯವನ್ನು ಅಳವಡಿಸಿಕೊಳ್ಳುವ ಮೂಲಕ, ಸಾಮಾನ್ಯ ಕೇಂದ್ರ ಸಚಿವಾಲಯವು ಅಂತರ-ಸಚಿವಾಲಯ ಸಮನ್ವಯವನ್ನು ಸುಧಾರಿಸುತ್ತದೆ, ನೀತಿ ಅನುಷ್ಠಾನವನ್ನು ವೇಗಗೊಳಿಸುತ್ತದೆ ಮತ್ತು ಸ್ಪಂದಿಸುವ ಆಡಳಿತಾತ್ಮಕ ಪರಿಸರ ವ್ಯವಸ್ಥೆಯನ್ನು ಬೆಳೆಸುತ್ತದೆ.

ಪ್ರಸ್ತುತ, ಅನೇಕ ಪ್ರಮುಖ ಸಚಿವಾಲಯಗಳು 1950 ಮತ್ತು 1970 ರ ನಡುವೆ ನಿರ್ಮಿಸಲಾದ ಶಾಸ್ತ್ರಿ ಭವನ, ಕೃಷಿ ಭವನ, ಉದ್ಯೋಗ ಭವನ ಮತ್ತು ನಿರ್ಮಾಣ ಭವನದಂತಹ ಹಳೆಯ ಕಟ್ಟಡಗಳಿಂದ ಕಾರ್ಯನಿರ್ವಹಿಸುತ್ತಿವೆ, ಇವು ಈಗ ರಾಚನಿಕವಾಗಿ ಹಳೆಯವು ಮತ್ತು ಅಸಮರ್ಥವಾಗಿವೆ. ಹೊಸ ಸೌಲಭ್ಯಗಳು ದುರಸ್ತಿ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತವೆ, ಉತ್ಪಾದಕತೆಯನ್ನು ಹೆಚ್ಚಿಸುತ್ತವೆ, ಉದ್ಯೋಗಿಗಳ ಯೋಗಕ್ಷೇಮವನ್ನು ಸುಧಾರಿಸುತ್ತವೆ ಮತ್ತು ಒಟ್ಟಾರೆ ಸೇವಾ ವಿತರಣೆಯನ್ನು ಹೆಚ್ಚಿಸುತ್ತವೆ.

ಕರ್ತವ್ಯ ಭವನ - 03 ನ್ನು ಪ್ರಸ್ತುತ ದೆಹಲಿಯಾದ್ಯಂತ ಹರಡಿರುವ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಟ್ಟುಗೂಡಿಸುವ ಮೂಲಕ ದಕ್ಷತೆ, ನಾವೀನ್ಯತೆ ಮತ್ತು ಸಹಯೋಗವನ್ನು ಬೆಳೆಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಎರಡು ನೆಲಮಾಳಿಗೆಗಳು ಮತ್ತು ಏಳು ಹಂತಗಳಲ್ಲಿ (ನೆಲ + 6 ಮಹಡಿಗಳು) ಸುಮಾರು 1.5 ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಅತ್ಯಾಧುನಿಕ ಕಚೇರಿ ಸಂಕೀರ್ಣವಾಗಲಿದೆ. ಇದು ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ, ಎಂ.ಎಸ್.ಎಂ.ಇ., ಡಿ.ಒ.ಪಿ.ಟಿ., ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿ.ಎಸ್.ಎ.) ಸಚಿವಾಲಯಗಳು/ಇಲಾಖೆಗಳ ಕಚೇರಿಗಳನ್ನು ಹೊಂದಿರುತ್ತದೆ.

ಹೊಸ ಕಟ್ಟಡವು ಐಟಿ-ಸಿದ್ಧ ಮತ್ತು ಸುರಕ್ಷಿತ ಕೆಲಸದ ಸ್ಥಳಗಳು, ಐಡಿ ಕಾರ್ಡ್ ಆಧಾರಿತ ಪ್ರವೇಶ ನಿಯಂತ್ರಣಗಳು, ಸಂಯೋಜಿತ ಎಲೆಕ್ಟ್ರಾನಿಕ್ ಕಣ್ಗಾವಲು ಮತ್ತು ಕೇಂದ್ರೀಕೃತ ಕಮಾಂಡ್ ವ್ಯವಸ್ಥೆಯನ್ನು ಒಳಗೊಂಡ ಆಧುನಿಕ ಆಡಳಿತ ಮೂಲಸೌಕರ್ಯಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ. ಡಬಲ್-ಗ್ಲೇಜ್ಡ್ ಮುಂಭಾಗಗಳು, ಮೇಲ್ಛಾವಣಿ ಸೌರಶಕ್ತಿ, ಸೌರ ಶಕ್ತಿಯ ಮೂಲಕ ಬಿಸಿ ನೀರಿನ ವ್ಯವಸ್ಥೆ, ಸುಧಾರಿತ ಎಚ್.ವಿ.ಎ.ಸಿ.(ತಾಪನ, ವಾತಾಯನ ಮತ್ತು ಹವಾನಿಯಂತ್ರಣ) ವ್ಯವಸ್ಥೆಗಳು ಮತ್ತು ಮಳೆನೀರು ಕೊಯ್ಲು ಒಳಗೊಂಡಿರುವ ಗೃಹ -4 (GRIHA-4) ರೇಟಿಂಗ್ ಗುರಿಯಾಗಿಸಿಕೊಂಡು ನಿರ್ಮಾಣವಾಗಿದ್ದು ಇದು ಸುಸ್ಥಿರತೆಯಲ್ಲಿಯೂ ಮುಂಚೂಣಿಯಲ್ಲಿರಲಿದೆ. 

ಈ ಸೌಲಭ್ಯವು ಶೂನ್ಯ-ವಿಸರ್ಜನೆ ತ್ಯಾಜ್ಯ ನಿರ್ವಹಣೆ, ಆಂತರಿಕ ಘನತ್ಯಾಜ್ಯ ಸಂಸ್ಕರಣೆ, ಇ-ವಾಹನ ಚಾರ್ಜಿಂಗ್ ಕೇಂದ್ರಗಳು ಮತ್ತು ವ್ಯಾಪಕವಾಗಿ ಮರುಬಳಕೆಯ ನಿರ್ಮಾಣ ಸಾಮಗ್ರಿಗಳ ಬಳಕೆಯ ಮೂಲಕ ಪರಿಸರ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.

ಶೂನ್ಯ-ವಿಸರ್ಜನೆ ಕ್ಯಾಂಪಸ್‌ ಆಗಿರುವ ಕರ್ತವ್ಯ ಭವನವು ನೀರಿನ ಅಗತ್ಯಗಳ ಪ್ರಮುಖ ಭಾಗವನ್ನು ಪೂರೈಸಲು ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುತ್ತದೆ. ಕಟ್ಟಡವು ಮರುಬಳಕೆಯ ನಿರ್ಮಾಣ ಸಾಮಗ್ರಿ ಮತ್ತು ಕಟ್ಟಡಗಳನ್ನು ಕೆಡಹುವಾಗ ಲಭ್ಯವಾದ ತ್ಯಾಜ್ಯವನ್ನು ಕಲ್ಲು ಮತ್ತು ನೆಲಗಟ್ಟಿನ ಬ್ಲಾಕ್‌ಗಳಲ್ಲಿ ಬಳಸಿದೆ. ಮೇಲ್ಮಣ್ಣಿನ ಬಳಕೆ ಮತ್ತು ರಾಚನಿಕ ಹೊರೆ/ಕಟ್ಟಡದ ಭಾರ ಕಡಿಮೆ ಮಾಡಲು ಹಗುರವಾದ ವಸ್ತುಗಳಿಂದ ಒಳ ವಿಭಾಗಗಳನ್ನು (ಪಾರ್ಟಿಶನ್) ನಿರ್ಮಾಣ ಮಾಡಲಾಗಿದೆ ಮತ್ತು ಇದು ಆಂತರಿಕ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ.

ಇಂಧನ ಬಳಕೆ 30%ರಷ್ಟು ಕಡಿಮೆ ಇರುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಕಟ್ಟಡವನ್ನು ತಂಪಾಗಿಡಲು ಮತ್ತು ಹೊರಗಿನ ಶಬ್ದವನ್ನು ಕಡಿಮೆ ಮಾಡಲು ಇದು ವಿಶೇಷ ಗಾಜಿನ ಕಿಟಕಿಗಳನ್ನು ಹೊಂದಿದೆ. ಇಂಧನ ಉಳಿಸುವ ಎಲ್‌.ಇ.ಡಿ ದೀಪಗಳು, ಅಗತ್ಯವಿಲ್ಲದಿದ್ದಾಗ ದೀಪಗಳನ್ನು ನಂದಿಸುವಂತಹ (ಆಫ್ ಮಾಡುವ) ಸಂವೇದಕಗಳು, ವಿದ್ಯುತ್ ಉಳಿಸುವ ಸ್ಮಾರ್ಟ್ ಲಿಫ್ಟ್‌ಗಳು ಮತ್ತು ವಿದ್ಯುತ್ ಬಳಕೆಯನ್ನು ನಿರ್ವಹಿಸಲು ಸುಧಾರಿತ ವ್ಯವಸ್ಥೆ - ಇವೆಲ್ಲವೂ ಇಂಧನ/ಶಕ್ತಿಯನ್ನು ಉಳಿಸಲು ಸಹಾಯ ಮಾಡುತ್ತವೆ. ಕರ್ತವ್ಯ ಭವನ - 03 ರ ಛಾವಣಿಯ ಮೇಲಿನ ಸೌರ ಫಲಕಗಳು ಪ್ರತಿ ವರ್ಷ 5.34 ಲಕ್ಷ ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸುತ್ತವೆ. ಸೌರ ವಾಟರ್ ಹೀಟರ್‌ಗಳು ದೈನಂದಿನ ಬಿಸಿನೀರಿನ ಅಗತ್ಯದ ಕಾಲು ಭಾಗಕ್ಕಿಂತ ಹೆಚ್ಚಿನದನ್ನು ಪೂರೈಸುತ್ತವೆ. ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸಹ ಒದಗಿಸಲಾಗಿದೆ.

 

*****
 


(Release ID: 2152316)