ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪವಿತ್ರ ಪಿಪ್ರಹ್ವಾ ಅವಶೇಷಗಳು 127 ವರ್ಷಗಳ ನಂತರ ತವರಿಗೆ ವಾಪಸ್ - ಪ್ರಧಾನಮಂತ್ರಿ ಸ್ವಾಗತ

Posted On: 30 JUL 2025 2:44PM by PIB Bengaluru

ಭಗವಾನ್ ಬುದ್ಧನ ಪವಿತ್ರ ಪಿಪ್ರಹ್ವಾ ಅವಶೇಷಗಳು 127 ವರ್ಷಗಳ ನಂತರ ಭಾರತಕ್ಕೆ ಮರಳಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ. ಇದು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಮ್ಮೆ ಮತ್ತು ಸಂತೋಷದ ಕ್ಷಣ ಎಂದು ಅವರು ಬಣ್ಣಿಸಿದ್ದಾರೆ. 

ವಿಕಾಸವೂ ಹೌದು ಪರಂಪರೆಯೂ ಹೌದು (ವಿಕಾಸ್ ಭಿ ವಿರಾಸತ್ ಭಿ) ಹೇಳಿಕೆಯ ಚೈತನ್ಯವನ್ನು ಪ್ರತಿಬಿಂಬಿಸುವ ಭಗವಾನ್ ಬುದ್ಧನ ಬೋಧನೆಗಳಿಗೆ ಭಾರತದ ಅಗಾಧ ಗೌರವ ಹಾಗೂ ಅದರ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವ ರಾಷ್ಟ್ರದ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ. 

ಎಕ್ಸ್ ನ ಥ್ರೆಡ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ: 

“ನಮ್ಮ ಸಾಂಸ್ಕೃತಿಕ ಪರಂಪರೆಗೆ ಇದು ಆನಂದದ ದಿನ! 

ಭಗವಾನ್ ಬುದ್ಧನ ಪವಿತ್ರ ಪಿಪ್ರಾಹ್ವಾ ಅವಶೇಷಗಳು 127 ವರ್ಷಗಳ ನಂತರ ತವರಿಗೆ ಮರಳಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿಯಾಗಿದೆ. ಈ ಪವಿತ್ರ ಅವಶೇಷಗಳು ಭಗವಾನ್ ಬುದ್ಧ ಮತ್ತು ಅವರ ಉದಾತ್ತ ಬೋಧನೆಗಳೊಂದಿಗೆ ಭಾರತದ ನಿಕಟ ಸಂಬಂಧವನ್ನು ಎತ್ತಿ ತೋರಿಸುತ್ತವೆ. ಇದು ನಮ್ಮ ಅದ್ಭುತ ಸಂಸ್ಕೃತಿಯ ವಿವಿಧ ಅಂಶಗಳನ್ನು ಸಂರಕ್ಷಿಸುವ ಮತ್ತು ಸುಭದ್ರಗೊಳಿಸುವ ನಮ್ಮ ಬದ್ಧತೆಯ ನಿದರ್ಶನವೂ ಆಗಿದೆ. 
#VikasBhiVirasatBhi”

“ಪಿಪ್ರಾಹ್ವಾ ಅವಶೇಷಗಳನ್ನು 1898 ರಲ್ಲಿ ಪತ್ತೆ ಮಾಡಲಾಗಿತ್ತಾದರೂ ವಸಾಹತುಶಾಹಿ ಅವಧಿಯಲ್ಲಿ ಅದನ್ನು ಭಾರತದಿಂದ ತೆಗೆದುಕೊಂಡು ಹೋಗಲಾಯಿತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು. ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಹರಾಜಿನಲ್ಲಿ ಅವುಗಳನ್ನಿಟ್ಟಿದ್ದನ್ನು ನೋಡಿದಾಗ, ಅವು ತಾಯ್ನಾಡಿಗೆ ಮರಳುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಿದ್ದೇವೆ. ಈ ಪ್ರಯತ್ನದಲ್ಲಿ ಭಾಗಿಯಾಗಿರುವ ಎಲ್ಲರ ಕಾರ್ಯವನ್ನೂ ನಾನು ಮೆಚ್ಚುತ್ತೇನೆ.”

 

 

*****

 


(Release ID: 2150187)