ಕೃಷಿ ಸಚಿವಾಲಯ
ರೈತರಿಗೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಂದೇಶ
ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಶ್ರೀ ಚೌಹಾಣ್ ರೈತರಿಗೆ ಕರೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಆಗಸ್ಟ್ 2ರಂದು ವಾರಣಾಸಿಯಲ್ಲಿ 20ನೇ ಕಂತು ಬಿಡುಗಡೆ
Posted On:
30 JUL 2025 3:04PM by PIB Bengaluru
ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಂಬರುವ ಆಗಸ್ಟ್ 2 ರಂದು ನಡೆಯಲಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಬಿಡುಗಡೆಯ ಕಾರ್ಯಕ್ರಮದ ಸಿದ್ಧತೆ ಕುರಿತು ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ದೇಶಾದ್ಯಂತ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ವೀಡಿಯೊ ಸಂದೇಶವನ್ನೂ ಸಹ ಬಿಡುಗಡೆ ಮಾಡಿದರು.
ಕೇಂದ್ರ ಕೃಷಿ ಸಚಿವರು ತಮ್ಮ ವಿಡಿಯೋ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ. “ನನ್ನ ರೈತ ಸಹೋದರ ಮತ್ತು ಸಹೋದರಿಯರೇ ಎಲ್ಲರಿಗೂ ಶುಭಾಶಯಗಳು. ಮುಂಗಾರು ಬೆಳೆ ಋತುಮಾನವು ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ಮಧ್ಯೆ, ಇನ್ನೂ ಒಳ್ಳೆಯ ಸುದ್ದಿ ಇದೆ ಅದೆಂದರೆ- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆಗೆ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ನಿಮ್ಮನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದ್ದರಿಂದ, ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮಗಳಲ್ಲಿಎಲ್ಲರೂ ಭಾಗವಹಿಸಬೇಕು ಎಂದು ನಿಮ್ಮೆಲ್ಲರನ್ನು ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ. ಈ ಕಾರ್ಯಕ್ರಮ ನಿಮ್ಮ ಗ್ರಾಮಗಳಲ್ಲಿನ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ (ಕೆವಿಕೆಗಳು), ಐಸಿಎಆರ್ ಸಂಸ್ಥೆಗಳಲ್ಲಿ, ಕೃಷಿ ವಿಶ್ವವಿದ್ಯಾಲಯಗಳಲ್ಲಿ, ಮಾರುಕಟ್ಟೆ ಪ್ರಾಂಗಣಗಳಲ್ಲಿ ಮತ್ತು ಪಿಎಸಿಎಸ್ ಪ್ರಧಾನ ಕಚೇರಿಗಳಲ್ಲಿ ನಡೆಯಲಿವೆ. ದಯಮಾಡಿ ಹತ್ತಿರದ ಕಾರ್ಯಕ್ರಮ ಎಲ್ಲಿ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಿ ಮತ್ತು ಹಾಜರಾಗಲು ಮರೆಯದಿರಿ. ಪ್ರಧಾನಮಂತ್ರಿ ಅವರ ಭಾಷಣವನ್ನು ಆಲಿಸಿ. ಖಂಡಿತವಾಗಿ ನಾನೂ ಸಹ ಹಾಜರಾಗುತ್ತೇನೆ - ನೀವು ಸಹ ಭಾಗವಹಿಸಬೇಕೆಂದು ನಾನು ಕರೆ ನೀಡುತ್ತಿದ್ದೇನೆ. ಧನ್ಯವಾದಗಳು’’.
*****
(Release ID: 2150150)
Read this release in:
English
,
Urdu
,
Hindi
,
Nepali
,
Marathi
,
Bengali-TR
,
Assamese
,
Manipuri
,
Punjabi
,
Gujarati
,
Malayalam