ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ʻಬಿಎಸ್ಎನ್ಎಲ್ʼನ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು, ಗ್ರಾಹಕರ ಅನುಭವ ಮತ್ತು ಆದಾಯ ಉತ್ಪಾದನೆ ಬಗ್ಗೆ ಒತ್ತಿ ಹೇಳಿದರು
Posted On:
28 JUL 2025 2:44PM by PIB Bengaluru

ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ನವದೆಹಲಿಯಲ್ಲಿ ʻಭಾರತ್ ಸಂಚಾರ್ ನಿಗಮ್ ಲಿಮಿಟೆಡ್ʼನ(ಬಿಎಸ್ಎನ್ಎಲ್) ಮುಖ್ಯ ಪ್ರಧಾನ ವ್ಯವಸ್ಥಾಪಕರೊಂದಿಗೆ(ಸಿಜಿಎಂ) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು. ಈ ಉನ್ನತ ಮಟ್ಟದ ಸಭೆಯು ʻಬಿಎಸ್ಎನ್ಎಲ್ʼನ ಕಾರ್ಯಾಚರಣೆಯ ಪ್ರಗತಿಯನ್ನು ಪರಿಶೀಲಿಸಿತು, ಪ್ರಾದೇಶಿಕ ಸವಾಲುಗಳನ್ನು ಚರ್ಚಿಸಿತು. ಜೊತೆಗೆ, ಕಂಪನಿಯ ಜಾಲ(ನೆಟ್ ವರ್ಕ್) ಹಾಗೂ ಸೇವಾ ವಿತರಣೆಯ ಮುಂದಿನ ಕಾರ್ಯತಂತ್ರದ ಬಗ್ಗೆ ಪರಿಶೀಲಿಸಿತು. ಸಂವಹನ ಖಾತೆ ಸಹಾಯಕ ಸಚಿವ ಶ್ರೀ ಪೆಮ್ಮಸಾನಿ ಚಂದ್ರಶೇಖರ್ ಮತ್ತು ದೂರಸಂಪರ್ಕ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಧಿವೇಶನಗಳ ನಡುವೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಸಿಂಧಿಯಾ ಅವರು, ಟೆಲಿಕಾಂ ಕ್ಷೇತ್ರದಲ್ಲಿ ʻಬಿಎಸ್ಎನ್ಎಲ್ʼನ ಪಾತ್ರವನ್ನು ಬಲಪಡಿಸುವುದು, ಮೂಲಸೌಕರ್ಯ ಜಾರಿಯನ್ನು ವೇಗಗೊಳಿಸುವುದು ಮತ್ತು ನಾಗರಿಕ ಕೇಂದ್ರಿತ ಸೇವಾ ವಿತರಣೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆಯ ವೇಳೆ ಗಮನ ಹರಿಸಲಾಯಿತು ಎಂದು ಹೇಳಿದರು.
R0SZ.jpeg)
ಬೆಳವಣಿಗೆ ಮತ್ತು ಆಧುನೀಕರಣಕ್ಕೆ ಒತ್ತು
ಪರಿಶೀಲನಾ ಸಭೆಯ ವೇಳೆ ನಡೆದ ವ್ಯಾಪಕ ಚರ್ಚೆಗಳಲ್ಲಿ ʻಬಿಎಸ್ಎನ್ಎಲ್ʼನ ಬೆಳವಣಿಗೆಯ ಕಾರ್ಯತಂತ್ರ, ನೆಟ್ ವರ್ಕ್ ಕಾರ್ಯಕ್ಷಮತೆಯನ್ನು ಸುಧಾರಿಸುವುದು, ಗ್ರಾಹಕ ಸೇವಾ ವಿತರಣೆ ಮತ್ತು ಸಾಂಸ್ಥಿಕ ಆಧುನೀಕರಣದ ಬಗ್ಗೆ ಗಮನ ಕೇಂದ್ರೀಕರಿಸಲಾಯಿತು. ಈ ಸಮಗ್ರ ಸಂವಾದ ವೇಳೆ ಎಲ್ಲಾ ವ್ಯವಹಾರ ಘಟಕಗಳಲ್ಲಿ "ಆದಾಯ ಮೊದಲು" ಗುರಿಗಳ ಸ್ಪಷ್ಟ ಉದ್ದೇಶದೊಂದಿಗೆ ಗ್ರಾಹಕ-ಕೇಂದ್ರಿತ ಟೆಲಿಕಾಂ ಸೇವಾ ಪೂರೈಕೆದಾರನಾಗಿ ʻಬಿಎಸ್ಎನ್ಎಲ್ʼನ ಸ್ಥಾನವನ್ನು ಎತ್ತಿ ಹಿಡಿಯಲಾಯಿತು. ಈ ವೇದಿಕೆಯು ಪ್ರತಿ ಹಂತದಲ್ಲೂ ಈ ಆದ್ಯತೆಗಳನ್ನು ಮುನ್ನಡೆಸುವಲ್ಲಿ ʻಬಿಎಸ್ಎನ್ಎಲ್ʼನ ಉನ್ನತ ನಿರ್ವಹಣೆಯನ್ನು ಸರಿಹೊಂದಿಸಲು ಸಹಾಯ ಮಾಡಿತು, ಫಲಿತಾಂಶಗಳಿಗೆ ಉತ್ತರದಾಯಿತ್ವವನ್ನು ಒತ್ತಿ ಹೇಳಿತು.

ಗ್ರಾಹಕ-ಮೊದಲು ರೂಪಾಂತರ
ಬಿಎಸ್ಎನ್ಎಲ್ ತನ್ನ ಎಲ್ಲಾ ವಲಯಗಳು, ವ್ಯವಹಾರ ಪ್ರದೇಶಗಳು ಮತ್ತು ಘಟಕಗಳಲ್ಲಿ ಪ್ರಮುಖ ಸೇವಾ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದೆ. ತನ್ನ "ಗ್ರಾಹಕ ಮೊದಲು" ನೀತಿಯ ಭಾಗವಾಗಿ ಗ್ರಾಹಕರ ಜೊತೆ ಸಕ್ರಿಯ ತೊಡಗಿಸಿಕೊಳ್ಳುವಿಕೆ, ಸುಧಾರಿತ ಸೇವಾ ಪ್ರತಿಕ್ರಿಯೆ ಮತ್ತು ತ್ವರಿತ ಕುಂದುಕೊರತೆ ಪರಿಹಾರಕ್ಕೆ ʻಬಿಎಸ್ಎನ್ಎಲ್ʼ ಒತ್ತು ನೀಡುತ್ತಿದೆ.
ಪ್ರಮುಖ ಗಮನ ಕೇಂದ್ರೀಕರಿಸಲಾದ ಕ್ಷೇತ್ರಗಳು ಮತ್ತು ಫಲಿತಾಂಶಗಳು
ʻಸಿಜಿಎಂʼ ಸಭೆಯಲ್ಲಿ, ʻಬಿಎಸ್ಎನ್ಎಲ್ʼನ ವೃತ್ತ ಮುಖ್ಯಸ್ಥರಿಗೆ ಗ್ರಾಹಕರನ್ನು ತಲುಪಲು ಮತ್ತು ಸೇವೆಯ ಗುಣಮಟ್ಟ ಸುಧಾರಣೆಗಾಗಿ ಹಲವಾರು ಆದ್ಯತೆಯ ಕ್ಷೇತ್ರಗಳ ಬಗ್ಗೆ ವಿವರಿಸಲಾಯಿತು. ಗುರುತಿಸಲಾದ ವಿಶೇಷ ಗಮನದ ಕ್ಷೇತ್ರಗಳಲ್ಲಿ ಈ ಕೆಳಗಿನವು ಸೇರಿವೆ:
• ಗ್ರಾಮೀಣ, ನಗರ, ಉದ್ಯಮ ಮತ್ತು ಚಿಲ್ಲರೆ ವಿಭಾಗಗಳಾದ್ಯಂತ ಗ್ರಾಹಕರೊಂದಿಗೆ ಮರುಸಂಪರ್ಕ
• ಮೊಬೈಲ್ ನೆಟ್ವರ್ಕ್ ಗಳು ಮತ್ತು ʻಫೈಬರ್-ಟು-ದಿ-ಹೋಮ್ʼನಲ್ಲಿ (FTTH) ಸೇವೆಯ ಗುಣಮಟ್ಟವನ್ನು (QoS) ಹೆಚ್ಚಿಸುವುದು
• ಬಿಲ್ಲಿಂಗ್, ಸೇವಾ ಪೂರೈಕೆ ಮತ್ತು ನೆಟ್ ವರ್ಕ್ ಸುಧಾರಣೆಯಲ್ಲಿ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವುದು
• ಪ್ರತಿ ಕಾರ್ಯಾಚರಣೆಯ ಮಟ್ಟದಲ್ಲಿ "ಆದಾಯ-ಮೊದಲು" ಗುರಿಗಳೊಂದಿಗೆ ಉತ್ತರದಾಯಿತ್ವವನ್ನು ಹೆಚ್ಚಿಸುವುದು
• ಸಂಪರ್ಕ, ವಿಪಿಎನ್ ಪರಿಹಾರಗಳು, ಗುತ್ತಿಗೆ ಲೈನ್ ಸೇವೆಗಳು ಮತ್ತು ಇತರ ಹೊಸ ವ್ಯಾಪಾರ ಅವಕಾಶಗಳಂತಹ ಉದ್ಯಮ ಸೇವೆಗಳ ವಿಸ್ತರಣೆ.
ಶ್ರೀ ಸಿಂಧಿಯಾ ಅವರು ʻಬಿಎಸ್ಎನ್ಎಲ್ʼನ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಗ್ರಾಹಕರ ಅನುಭವ ಹಾಗೂ ಆದಾಯ ಸೃಷ್ಟಿಯಲ್ಲಿ ದೊಡ್ಡ ಮಟ್ಟದ ಸುಧಾರಣೆಗಳನ್ನು ಸಾಧಿಸುವ ಮಹತ್ವವನ್ನು ಒತ್ತಿ ಹೇಳಿದರು.
ಹೊಸ ಸೇವಾ ಉಪಕ್ರಮಗಳು
ಪರಿಶೀಲನೆಯ ಭಾಗವಾಗಿ, ಸೇವಾ ಕೊಡುಗೆಗಳು ಮತ್ತು ಗ್ರಾಹಕರ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದಿಂದ ʻಬಿಎಸ್ಎನ್ಎಲ್ʼ ಇತ್ತೀಚೆಗೆ ಪ್ರಾರಂಭಿಸಿದ ಹಲವಾರು ಹೊಸ ಉಪಕ್ರಮಗಳನ್ನು ಎತ್ತಿ ತೋರಿಸಲಾಯಿತು. ಈ ಉಪಕ್ರಮಗಳಲ್ಲಿ ಇವು ಸೇರಿವೆ:
• ಬಹು ಟೆಲಿಕಾಂ ವಲಯಗಳಲ್ಲಿ 4ಜಿ ವಿಸ್ತರಣೆ ಮತ್ತು ಹೊರತರುವುದು
• ಮುಂದಿನ ಪೀಳಿಗೆಯ ಮಾಹಿತಿ-ಮನರಂಜನೆಗಾಗಿ ʻಎಫ್‌ಟಿಟಿಹೆಚ್ʼ ಗಾಗಿ 'ಐ ಎಫ್ ಟಿ ವಿ' ಪರಿಚಯ ಹಾಗೂ ಮೊಬೈಲ್ ಗ್ರಾಹಕರಿಗೆ ಬಿಐಟಿವಿ ಪರಿಚಯ
• ಬಿಎಸ್ಎನ್ಎಲ್ ರಾಷ್ಟ್ರೀಯ ವೈ-ಫೈ ರೋಮಿಂಗ್ (ಗ್ರಾಹಕರಿಗೆ ರಾಷ್ಟ್ರವ್ಯಾಪಿ ವೈ-ಫೈ ರೋಮಿಂಗ್ ಸೇವೆ)
• ಉದ್ಯಮ ಮತ್ತು ಸರ್ಕಾರಿ ಗ್ರಾಹಕರಿಗೆ ಸೂಕ್ತವಾದ ಬಿಎಸ್ಎನ್ಎಲ್ ವಿಪಿಎನ್ ಸೇವೆಗಳು ಮತ್ತು ಸಂಯೋಜಿತ ಪ್ಯಾಕೇಜ್‌ಗಳು
• ನಿರ್ಣಾಯಕ ಮೂಲಸೌಕರ್ಯದಲ್ಲಿ ಹೆಚ್ಚಿನ ವಿಶ್ವಾಸಾರ್ಹ ಸಂಪರ್ಕಕ್ಕಾಗಿ ʻಸಿಎನ್‌ಪಿಎನ್ʼ ಯೋಜನೆಗಳು (ಖಾಸಗಿ ನೆಟ್ ವರ್ಕ್ ಉಪಕ್ರಮಗಳು)
• ಸ್ಪ್ಯಾಮ್-ಫ್ರೀ ನೆಟ್ ವರ್ಕ್,(Spam-Free Network)- ನೈಜ ಸಮಯದಲ್ಲಿ ಹಗರಣ ಮತ್ತು ಸ್ಪ್ಯಾಮ್(ಕಿರಿಕಿರಿ ಉಂಟುಮಾಡವ ಸಂದೇಶಗಳು) ಸಂವಹನಗಳನ್ನು ತೊಡೆದುಹಾಕಲು ನವೀನ ರೀತಿಯ ಪರಿಹಾರ
• ಬಿಬಿಎ (ಬಿಎಸ್ಎನ್ಎಲ್ ಬಿಸಿನೆಸ್ ಅಸೋಸಿಯೇಟ್) ಗಾಗಿ ಆನ್ ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ, ಇದು ವಿದ್ಯಾವಂತ ಯುವಕರಿಗೆ ಬಿಎಸ್ಎನ್ಎಲ್ ಮಾರಾಟ ಚಾನೆಲ್‌ನಲ್ಲಿ ತೊಡಗಿಸಿಕೊಳ್ಳಲು ಮತ್ತು ಮಾರಾಟ ಕಮಿಷನ್ ಗಳಿಸಲು ಅನುವು ಮಾಡಿಕೊಡುತ್ತದೆ.
ಡಿಜಿಟಲ್ ಸಶಕ್ತ ಭಾರತದತ್ತ
ಯೋಜನೆಗಳನ್ನು ಕಾರ್ಯಗತಗೊಳಿಸುವತ್ತ ಬಲವಾದ ಗಮನ ಹರಿಸುವುದರೊಂದಿಗೆ, ʻಬಿಎಸ್ಎನ್ಎಲ್ʼ ಈಗ ಡಿಜಿಟಲ್ ಸಶಕ್ತ, ಸೇವಾ ಆಧಾರಿತ ಮತ್ತು ಆರ್ಥಿಕವಾಗಿ ಸುಸ್ಥಿರ ಟೆಲಿಕಾಂ ಆಪರೇಟರ್ ಆಗಲು ಹೆಚ್ಚು ಉತ್ಸಾಹದಿಂದ ಮುನ್ನಡೆಯುತ್ತಿದೆ. ದೇಶಾದ್ಯಂತ ಆಧುನಿಕ ದೂರಸಂಪರ್ಕ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸುವ ಮೂಲಕ "ಭಾರತ್" ಅನ್ನು ಸಂಪರ್ಕಿಸಲು ಮತ್ತು ಸಬಲೀಕರಣಗೊಳಿಸಲು ಕಂಪನಿಯು ಬದ್ಧವಾಗಿದೆ.

VAPC.jpeg)
*****
(Release ID: 2149371)
Visitor Counter : 2