ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾಲ್ಡೀವ್ಸ್‌ಗೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿ: ಫಲಪ್ರದತೆಯ ಪಟ್ಟಿ

Posted On: 26 JUL 2025 7:19AM by PIB Bengaluru

 

ಕ್ರ.ಸಂ.

ಒಪ್ಪಂದ/ತಿಳುವಳಿಕಾ ಒಡಂಬಡಿಕೆ

1.

ಮಾಲ್ಡೀವ್ಸ್ ಗೆ 4,850 ಕೋಟಿ ರೂ.ಗಳ ಸಾಲ ಸೌಲಭ್ಯ (ಎಲ್‌ಒಸಿ) ವಿಸ್ತರಣೆ

2.

ಭಾರತ ಸರ್ಕಾರ ಒದಗಿಸಿದ ಸಾಲಸೌಲಭ್ಯಗಳ ಪೈಕಿ ಮಾಲ್ಡೀವ್ಸ್‌ನ ವಾರ್ಷಿಕ ಸಾಲ ಮರುಪಾವತಿ ಬಾಧ್ಯತೆಗಳನ್ನು ಕಡಿಮೆ ಮಾಡುವುದು

3.

ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ (ಐಎಂಎಫ್‌ಟಿಎ) ಮಾತುಕತೆಗಳ ಆರಂಭ

4.

ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

 

ಕ್ರ.ಸಂ.

ಉದ್ಘಾಟನೆ / ಹಸ್ತಾಂತರ

1.

ಭಾರತದ ಖರೀದಿದಾರರ ಸಾಲ ಸೌಲಭ್ಯಗಳ ಅಡಿಯಲ್ಲಿ ಹುಲ್ಹುಮಲೆಯಲ್ಲಿ 3,300 ಸಾಮಾಜಿಕ ವಸತಿ ಘಟಕಗಳ ಹಸ್ತಾಂತರ

2.

ಅಡ್ಡು ನಗರದಲ್ಲಿ ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆ ಯೋಜನೆಯ ಉದ್ಘಾಟನೆ

3.

ಮಾಲ್ಡೀವ್ಸ್‌ನಲ್ಲಿ 6 ಅಧಿಕ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

4.

72 ವಾಹನಗಳು ಮತ್ತು ಇತರ ಸಲಕರಣೆಗಳ ಹಸ್ತಾಂತರ

5.

ಎರಡು ʻಭೀಷ್ಮ್ ಹೆಲ್ತ್ ಕ್ಯೂಬ್ʼ ಸೆಟ್‌ಗಳ ಹಸ್ತಾಂತರ

6.

ಮಾಲೆಯಲ್ಲಿ ರಕ್ಷಣಾ ಸಚಿವಾಲಯದ ಕಟ್ಟಡದ ಉದ್ಘಾಟನೆ

 

ಕ್ರ.
ಸಂ

ತಿಳುವಳಿಕಾ ಒಡಂಬಡಿಕೆಗಳು/ ಒಪ್ಪಂದಗಳ ವಿನಿಮಯ

ಮಾಲ್ಡೀವ್ಸ್ ಕಡೆಯಿಂದ ಪ್ರತಿನಿಧಿ

ಭಾರತದ ಪ್ರತಿನಿಧಿ

1.

ಮಾಲ್ಡೀವ್ಸ್‌ಗೆ 4,850 ಕೋಟಿ ರೂ.ಗಳ ಸಾಲ ಸೌಲಭ್ಯಕ್ಕಾಗಿ ಒಪ್ಪಂದ

ಶ್ರೀ ಮೂಸಾ ಜಮೀರ್, ಹಣಕಾಸು ಮತ್ತು ಯೋಜನಾ ಸಚಿವರು

ಡಾ. ಎಸ್‌. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು

2.

ಭಾರತ ಸರ್ಕಾರ ಒದಗಿಸಿದ ಸಾಲ ಸೌಲಭ್ಯಗಳ ಪೈಕಿ ಮಾಲ್ಡೀವ್ಸ್‌ನ ವಾರ್ಷಿಕ ಸಾಲ ಮರುಪಾವತಿ ಬಾಧ್ಯತೆಗಳನ್ನು ಕಡಿಮೆ ಮಾಡುವ ತಿದ್ದುಪಡಿ ಒಪ್ಪಂದ

ಶ್ರೀ ಮೂಸಾ ಜಮೀರ್, ಹಣಕಾಸು ಮತ್ತು ಯೋಜನಾ ಸಚಿವರು

ಡಾ. ಎಸ್‌. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು

3.

ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಪರಾಮರ್ಶೆ ನಿಯಮಗಳು

ಶ್ರೀ ಮೊಹಮ್ಮದ್ ಸಯೀದ್, ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರು

ಡಾ.ಎಸ್‌ ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು

4.

ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ

ಶ್ರೀ ಅಹ್ಮದ್ ಶಿಯಾಮ್, ಮೀನುಗಾರಿಕೆ ಮತ್ತು ಸಾಗರ ಸಂಪನ್ಮೂಲ ಸಚಿವರು

ಡಾ. ಎಸ್‌. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು

5.

ಭಾರತದ ಭೂ ವಿಜ್ಞಾನ ಸಚಿವಾಲಯದ ಅಧೀನದ ʻಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆʼ (ಐಐಟಿಎಂ) ಮತ್ತು ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಮತ್ತು ಪರಿಸರ ಸಚಿವಾಲಯದ ಅಡಿಯ ʻಮಾಲ್ಡೀವ್ಸ್ ಹವಾಮಾನ ಸೇವೆಗಳ ಸಂಸ್ಥೆʼ (ಎಂಎಂಎಸ್) ನಡುವೆ ತಿಳಿವಳಿಕೆ ಒಪ್ಪಂದ

ಶ್ರೀ ಥೋರಿಕ್ ಇಬ್ರಾಹಿಂ, ಪ್ರವಾಸೋದ್ಯಮ ಮತ್ತು ಪರಿಸರ ಸಚಿವರು

ಡಾ. ಎಸ್‌. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು

6.

ಡಿಜಿಟಲ್ ರೂಪಾಂತರಕ್ಕಾಗಿ ಜನಸಂಖ್ಯಾ ಮಟ್ಟದಲ್ಲಿ ಜಾರಿಗೆ ತರಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಮಾಲ್ಡೀವ್ಸ್‌ನ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ತಂತ್ರಜ್ಞಾನ ಸಚಿವಾಲಯದ ನಡುವೆ

ತಿಳಿವಳಿಕೆ ಒಪ್ಪಂದ

ಶ್ರೀ ಅಲಿ ಇಹುಸಾನ್, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ತಂತ್ರಜ್ಞಾನ ಸಚಿವರು

ಡಾ. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು

7.

ಮಾಲ್ಡೀವ್ಸ್‌ನಿಂದ ʻಭಾರತೀಯ ಫಾರ್ಮಾಕೊಪಿಯಾʼ(ಐಪಿ) ಮಾನ್ಯತೆ ಕುರಿತ ತಿಳುವಳಿಕಾ ಒಡಂಬಡಿಕೆ

ಶ್ರೀ ಅಬ್ದುಲ್ಲಾ ನಜೀಮ್ ಇಬ್ರಾಹಿಂ, ಆರೋಗ್ಯ ಸಚಿವರು

ಡಾ. ಎಸ್‌. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು

8.

ಮಾಲ್ಡೀವ್ಸ್‌ನಲ್ಲಿ ಯುಪಿಐ ಕುರಿತು ಭಾರತದ ʻಎನ್‌ಸಿಪಿಐ ಇಂಟರ್ನ್ಯಾಷನಲ್ ಪೇಮೆಂಟ್ ಲಿಮಿಟೆಡ್ (ಎನ್ಐಪಿಎಲ್) ಮತ್ತು ಮಾಲ್ಡೀವ್ಸ್ ಮಾನಿಟರಿ ಅಥಾರಿಟಿ (ಎಂಎಂಎ) ನಡುವೆ ನೆಟ್‌ವರ್ಕ್-ಟು-ನೆಟ್‌ವರ್ಕ್‌ ಒಪ್ಪಂದ

ಅಬ್ದುಲ್ಲಾ ಖಲೀಲ್, ವಿದೇಶಾಂಗ ವ್ಯವಹಾರಗಳ ಸಚಿವರು

ಡಾ. ಎಸ್‌. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು

 

 

*****


(Release ID: 2148774)