ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವೇವ್ಸ್‌ 2025 ಭಾರತದ ಸೃಜನಶೀಲ ನಾಯಕತ್ವವನ್ನು ಪ್ರದರ್ಶಿಸುತ್ತದೆ; 100ಕ್ಕೂ ಅಧಿಕ ದೇಶಗಳಿಂದ 1 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರು, 8,000 ಕೋಟಿ ರೂ.ಗಳ ತಿಳಿವಳಿಕೆ ಒಪ್ಪಂದಗಳಿಗೆ ಸಹಿ


ವೇವ್ಸ್‌ 2025ರಲ್ಲಿ ಭಾರತವು ಜಾಗತಿಕ ಸೃಜನಶೀಲ ಸಭೆಯನ್ನು ಆಯೋಜಿಸುತ್ತದೆ; ಉದ್ಯಮ ಮತ್ತು ಟೆಕ್‌ ನಾಯಕರೊಂದಿಗೆ 140ಕ್ಕೂ ಹೆಚ್ಚು ಅಧಿವೇಶನಗಳು ನಡೆದವು

ವೇವ್ಸ್‌ 2025 3,000ಕ್ಕೂ ಅಧಿಕ ಬಿ 2 ಬಿ ಸಭೆಗಳಿಗೆ ಅನುಕೂಲ ಮಾಡಿಕೊಟ್ಟಿತು; ಸ್ಕ್ರಿಪ್ಟ್‌, ಸಂಗೀತ ಮತ್ತು ಎವಿ ಹಕ್ಕುಗಳ ಮಾರುಕಟ್ಟೆಯನ್ನು ಹೆಚ್ಚಿಸಲಾಗಿದೆ

Posted On: 25 JUL 2025 6:11PM by PIB Bengaluru

ಭಾರತವನ್ನು ವಿಷಯ ರಚನೆಯ ಜಾಗತಿಕ ಕೇಂದ್ರವನ್ನಾಗಿ ಮಾಡುವ ಪ್ರಧಾನ ಮಂತ್ರಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್‌) 2025 ಅನ್ನು ಆಯೋಜಿಸಲಾಗಿದೆ. ಇದು ಸೃಷ್ಟಿಕರ್ತರು, ನೀತಿ ನಿರೂಪಕರು, ಉದ್ಯಮದ ನಾಯಕರು, ಮಾಧ್ಯಮ ವೇದಿಕೆಗಳು ಮತ್ತು ತಂತ್ರಜ್ಞಾನ ಪ್ರವರ್ತಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿತು.

ವೇವ್ಸ್‌ ಭಾರತೀಯ ಸೃಷ್ಟಿಕರ್ತರಿಗೆ ಹೊಸ ತಂತ್ರಜ್ಞಾನಗಳು, ಹೂಡಿಕೆದಾರರು, ಉತ್ಪಾದಕರು ಮತ್ತು ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ಒಂದು ವೇದಿಕೆಯನ್ನು ಒದಗಿಸಿತು. ಇದರಲ್ಲಿ100ಕ್ಕೂ ಹೆಚ್ಚು ದೇಶಗಳಿಂದ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ50 ಪೂರ್ಣ ಅಧಿವೇಶನಗಳು, 35 ಮಾಸ್ಟರ್‌ ಕ್ಲಾಸ್‌ಗಳು ಮತ್ತು ಜಾಗತಿಕ ಉದ್ಯಮದ ನಾಯಕರ ಭಾಗವಹಿಸುವಿಕೆಯೊಂದಿಗೆ 55 ವಿರಾಮವಿಲ್ಲದ ಸೆಷನ್‌ಗಳು ಸೇರಿದಂತೆ 140 ಕ್ಕೂ ಹೆಚ್ಚು ಸೆಷನ್‌ಗಳು ಜರುಗಿದವು.

ವೇವ್ಸ್‌ 2025ರ ಪ್ರಮುಖ ಲಕ್ಷಣಗಳು:

  • ಜಾಗತಿಕ ಮಾಧ್ಯಮ ಸಂವಾದ: ಸರ್ಕಾರಿ ಮತ್ತು ಖಾಸಗಿ ವಲಯದ ಪ್ರತಿನಿಧಿಗಳು ಸೇರಿದಂತೆ ಪ್ರಮುಖ ಪಾಲುದಾರರು ಮಾಧ್ಯಮ ಮತ್ತು ಮನರಂಜನೆಯ ವಿಕಸನದ ಪಾತ್ರದ ಬಗ್ಗೆ ಚರ್ಚಿಸಿದರು. ಶಾಂತಿ ಮತ್ತು ಡಿಜಿಟಲ್‌ ಸೇರ್ಪಡೆಗಾಗಿ ಮಾಧ್ಯಮವನ್ನು ಉತ್ತೇಜಿಸಲು ವೇವ್ಸ್‌ ಘೋಷಣೆಯನ್ನು ಅಂಗೀಕರಿಸಲಾಯಿತು.
  • ವೇವ್‌ ಎಕ್ಸ್‌: ಎಂ ಇ ವಲಯದಲ್ಲಿ ಸ್ಟಾರ್ಟ್‌ಅಪ್‌ ನೇತೃತ್ವದ ನಾವೀನ್ಯತೆಗೆ ವೇದಿಕೆ. ಇದು ಎರಡು ದಿನಗಳ ಲೈವ್‌ ಪಿಚಿಂಗ್‌ ಕಾರ್ಯಕ್ರಮವನ್ನು ಒಳಗೊಂಡಿತ್ತು. ಅಲ್ಲಿ ಸ್ಟಾರ್ಟ್‌ಅಪ್‌ಗಳು ಹೂಡಿಕೆದಾರರಿಗೆ ಆಲೋಚನೆಗಳನ್ನು ಪ್ರಸ್ತುತಪಡಿಸಿದವು.
  • ವೇವ್ಸ್‌ ಬಜಾರ್‌: ಸ್ಕ್ರಿಪ್ಟ್‌ಗಳು, ಸಂಗೀತ, ಕಾಮಿಕ್ಸ್‌ ಮತ್ತು ಎವಿ ಹಕ್ಕುಗಳಿಗೆ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸುವ ಮೂಲಕ 3 ಸಾವಿರಕ್ಕೂ ಹೆಚ್ಚು ಬಿ 2 ಬಿ ಸಭೆಗಳನ್ನು ಸಕ್ರಿಯಗೊಳಿಸಿತು, ಹೊಸ ಆದಾಯದ ಸ್ಟ್ರೀಮ್‌ಗಳನ್ನು ರಚಿಸಿತು.
  • ಆರ್ಥಿಕ ಮತ್ತು ಕಾರ್ಯತಂತ್ರದ ಫಲಿತಾಂಶಗಳು: ಚಲನಚಿತ್ರ ನಗರಗಳು, ಸೃಜನಶೀಲ ತಂತ್ರಜ್ಞಾನ ಶಿಕ್ಷಣ ಮತ್ತು ಲೈವ್‌ ಮನರಂಜನಾ ಮೂಲಸೌಕರ್ಯಗಳಲ್ಲಿಹೂಡಿಕೆಗಾಗಿ 8 ಸಾವಿರ ಕೋಟಿ ರೂ.ಗಳ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
  • ಕ್ರಿಯೇಟ್‌ ಇನ್‌ ಇಂಡಿಯಾ ಚಾಲೆಂಜ್‌ (ಸಿಐಸಿ): ಅನಿಮೇಷನ್‌, ಗೇಮಿಂಗ್‌, ಎಆರ್‌ / ವಿಆರ್‌ ಮತ್ತು ಸಂಗೀತದಂತಹ 34 ಸೃಜನಶೀಲ ವಿಭಾಗಗಳಲ್ಲಿರಾಷ್ಟ್ರವ್ಯಾಪಿ ಮುಂದಿನ ಪೀಳಿಗೆಯ ಸೃಜನಶೀಲ ಪ್ರತಿಭಾನ್ವೇಷಣೆ. ಇದು ಪ್ರಪಂಚದಾದ್ಯಂತದ ಸೃಷ್ಟಿಕರ್ತರಿಂದ 1 ಲಕ್ಷಕ್ಕೂ ಹೆಚ್ಚು ನೋಂದಣಿಗಳನ್ನು ಆಕರ್ಷಿಸಿತು.
  • ಕ್ರಿಯೇಟೋಸ್ಪಿಯರ್‌: ಭಾರತದ ಮುಂದಿನ ಪೀಳಿಗೆಯ ಸೃಜನಶೀಲ ಪ್ರತಿಭೆಗಳನ್ನು ಬಿಂಬಿಸಲು ಮಾಸ್ಟರ್‌ಕ್ಲಾಸ್‌ಗಳು, ಸ್ಪರ್ಧೆಗಳು ಮತ್ತು ನೇರ ಪ್ರದರ್ಶನಗಳನ್ನು ಆಯೋಜಿಸಲಾಯಿತು.
  • ಭಾರತ್‌ ಪೆವಿಲಿಯನ್‌: ಇದು ಭಾರತದ ಮೃದು ಶಕ್ತಿ ಮತ್ತು ಸಾಂಸ್ಕೃತಿಕ ನಾಯಕತ್ವವನ್ನು ಜಾಗತಿಕವಾಗಿ ಬಿಂಬಿಸುವ ಮೂಲಕ ಭಾರತದ ಕಥೆ ಹೇಳುವ ಪರಂಪರೆಗೆ ಆಳವಾದ ಅನುಭವವನ್ನು ನೀಡಿತು.
  • 8ನೇ ರಾಷ್ಟ್ರೀಯ ಸಮುದಾಯ ರೆಡಿಯೊ ಸಮ್ಮೇಳನ: ಸಮುದಾಯ ಪ್ರಸಾರದಲ್ಲಿ ನಾವೀನ್ಯತೆ ಮತ್ತು ಒಳಗೊಳ್ಳುವಿಕೆಗಾಗಿ 12 ಕೇಂದ್ರಗಳು ರಾಷ್ಟ್ರೀಯ ಸಮುದಾಯ ರೆಡಿಯೊ ಪ್ರಶಸ್ತಿಗಳನ್ನು ಪಡೆದವು.

ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ.ಎಲ್‌. ಮುರುಗನ್‌ ಅವರು ಇಂದು ಲೋಕಸಭೆಯಲ್ಲಿಈ ಮಾಹಿತಿಯನ್ನು ಹಂಚಿಕೊಂಡರು.

 

*****
 


(Release ID: 2148684)