ಉಕ್ಕು ಸಚಿವಾಲಯ
ಝೋಜಿಲಾ ಸುರಂಗಕ್ಕೆ ಎಸ್ ಎ ಐ ಎಲ್ ನಿಂದ (SAIL) 31,000 ಟನ್‌ಗಳಿಗೂ ಹೆಚ್ಚು ಉಕ್ಕು ಪೂರೈಕೆ, ರಾಷ್ಟ್ರ ನಿರ್ಮಾಣದಲ್ಲಿ ತನ್ನ ಪಾತ್ರವನ್ನು ಬಲಪಡಿಸುತ್ತಿದೆ
Posted On:
21 JUL 2025 12:54PM by PIB Bengaluru
ಭಾರತದ ಅತಿದೊಡ್ಡ ಉಕ್ಕು ತಯಾರಿಕಾ ಸಂಸ್ಥೆ, ಸಾರ್ವಜನಿಕ ವಲಯದ ಮಹಾರತ್ನ ಸಂಸ್ಥೆಯಾಗಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL), ಪ್ರತಿಷ್ಠಿತ ಝೋಜಿಲಾ ಸುರಂಗ ಯೋಜನೆಗೆ ಏಕೈಕ ಅತಿದೊಡ್ಡ ಉಕ್ಕಿನ ಪೂರೈಕೆದಾರ ಸಂಸ್ಥೆಯಾಗಿದೆ. ಮಹತ್ವಾಕಾಂಕ್ಷೆಯ, ನಿರ್ಮಾಣ ಹಂತದಲ್ಲಿರುವ ಈ ಯೋಜನೆಯು ಭಾರತದ ಅತಿ ಉದ್ದದ ರಸ್ತೆ ಸುರಂಗ ಮತ್ತು ಏಷ್ಯಾದ ಅತಿ ಉದ್ದದ ದ್ವಿಮುಖ ಸುರಂಗ ಮಾರ್ಗವಾಗಲಿದೆ.

ಈ ಮೂಲಸೌಕರ್ಯ ಉಪಕ್ರಮಕ್ಕೆ SAIL ನಿರ್ಣಾಯಕ ಪಾಲುದಾರನಾಗಿ ಸ್ಥಾನ ಪಡೆದಿದೆ, TMT ರೀ-ಬಾರ್‌ಗಳು, ಸ್ಟ್ರಕ್ಚರಲ್‌ಗಳು ಮತ್ತು ಪ್ಲೇಟ್‌ಗಳು ಸೇರಿದಂತೆ 31,000 ಟನ್‌ಗಳಿಗೂ ಹೆಚ್ಚು ಉಕ್ಕನ್ನು ಪೂರೈಸಿದೆ. ಈ ಯೋಜನೆಯು 2027 ರ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಂಪನಿಯ ನಿರಂತರ ಉಕ್ಕಿನ ಪೂರೈಕೆಯು ಅದರ ಅಚಲ ಬದ್ಧತೆಯನ್ನು ತೋರಿಸಿದೆ. ಝೋಜಿಲಾ ಸುರಂಗಕ್ಕೆ ಈ ಕೊಡುಗೆಯು SAIL ನ ದೀರ್ಘಕಾಲೀನ ರಾಷ್ಟ್ರ ನಿರ್ಮಾಣದ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಝೋಜಿಲಾ ಸುರಂಗದಂತಹ ಮೆಗಾ-ಯೋಜನೆಗಳು SAIL ನ ಉಕ್ಕಿನ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಮತ್ತು ನಿರಂತರವಾಗಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಇದು ಕಂಪನಿಯ ಗುಣಮಟ್ಟಕ್ಕೆ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಅದರ ಪ್ರಮುಖ ಪಾತ್ರಕ್ಕೆ ಸಾಕ್ಷಿಯಾಗಿದೆ.
11,578 ಅಡಿ ಎತ್ತರದಲ್ಲಿ ಕಾರ್ಯತಂತ್ರದ ದೃಷ್ಟಿಯಿಂದ ನೆಲೆಗೊಂಡಿರುವ ಈ ಯೋಜನೆ ಅತ್ಯಂತ ಸವಾಲಿನದ್ದಾಗಿದೆ. ಹಿಮಾಲಯನ್ ಭೂಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. 30 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಸುರಂಗ ಮಾರ್ಗವು ಶ್ರೀನಗರ ಮತ್ತು ಲೇಹ್ ನಡುವೆ ಡ್ರಾಸ್ ಮತ್ತು ಕಾರ್ಗಿಲ್ ಮೂಲಕ ಪ್ರಮುಖವಾದ ಸಂಪರ್ಕವನ್ನು ಒದಗಿಸುತ್ತದೆ. ಸುರಂಗವು ಭಾರತದ ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿಯ ನಿರ್ಣಾಯಕ ಭಾಗವಾಗಿದೆ, ನಿರ್ದಿಷ್ಟವಾಗಿ ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿ, ಮತ್ತು ಈ ಪ್ರದೇಶದಲ್ಲಿ ನಾಗರಿಕ ಮತ್ತು ಮಿಲಿಟರಿ ಚಲನಶೀಲತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ಈ ಯೋಜನೆಯು ಮೂಲಸೌಕರ್ಯ ಆಸ್ತಿ ಮಾತ್ರವಲ್ಲದೆ ಈ ಪ್ರದೇಶಕ್ಕೆ ಗಮನಾರ್ಹ ಆರ್ಥಿಕ ಅವಕಾಶವನ್ನು ಒದಗಿಸುತ್ತದೆ. ಚೆನಾಬ್ ರೈಲ್ವೆ ಸೇತುವೆ, ಅಟಲ್ ಸುರಂಗ, ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ, ಮತ್ತು ಧೋಲಾ ಸದಿಯಾ ಮತ್ತು ಬೋಗಿಬೀಲ್ ಸೇತುವೆಗಳು ಸೇರಿದಂತೆ ಭಾರತದ ಅತ್ಯಂತ ಪ್ರಸಿದ್ಧ ಮೂಲಸೌಕರ್ಯ ಯೋಜನೆಗಳಿಗೆ ಪಾಲುದಾರನಾಗಿ, ಪೂರೈಕೆದಾರನಾಗಿರುವ ಸೇಲ್ ಈಗ ಝೋಜಿಲಾ ಸುರಂಗಕ್ಕೆ ಪ್ರಮುಖ ಕೊಡುಗೆ ನೀಡಿದೆ. ತನ್ನ ವಿಶಾಲ ಪರಂಪರೆಗೆ ಮತ್ತೊಂದು ಪ್ರಮುಖ ಯೋಜನೆಯನ್ನು ಸೇರ್ಪಡೆ ಮಾಡಿಕೊಂಡಿದೆ.
*****
(Release ID: 2146768)