ಹಣಕಾಸು ಸಚಿವಾಲಯ
azadi ka amrit mahotsav

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ರೂ. 40 ಕೋಟಿ ಮೌಲ್ಯದ 4 ಕೆಜಿಗೂ ಹೆಚ್ಚು ಕೊಕೇನ್ ಅನ್ನು ಡಿ.ಆರ್.ಐ. ವಶಪಡಿಸಿಕೊಂಡಿದೆ; ಒಬ್ಬರನ್ನು ಬಂಧಿಸಲಾಗಿದೆ

Posted On: 19 JUL 2025 10:45AM by PIB Bengaluru

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿ.ಆರ್.ಐ) ಬೆಂಗಳೂರು ವಲಯ ಘಟಕದ ಅಧಿಕಾರಿಗಳು ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸುತ್ತಾ, 18.07.2025ರ ಮುಂಜಾನೆ ದೋಹಾದಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ಪುರುಷ ಪ್ರಯಾಣಿಕನನ್ನು ತಡೆದರು.

ಪ್ರಯಾಣಿಕನ ಸಾಮಾನುವಸ್ತುಗಳನ್ನು ಅವರು ಎಚ್ಚರಿಕೆಯಿಂದ ಪರಿಶೀಲಿಸಿದಾಗ, ಪ್ರಯಾಣಿಕರು ಅಸಾಧಾರಣವಾಗಿ ಭಾರದ ಎರಡು ಸೂಪರ್ ಹೀರೋ ಕಾಮಿಕ್ಸ್/ ನಿಯತಕಾಲಿಕ ಪುಸ್ತಕಗಳನ್ನು ಅಸಹಜ ರೀತಿಯಲ್ಲಿ ಹೊತ್ತೊಯ್ಯುತ್ತಿರುವುದು ಕಂಡುಬಂತು. ನಿಯತಕಾಲಿಕೆಗಳ ಮುಖಪುಟದಲ್ಲಿ ಮರೆಮಾಡಲಾಗಿರುವ ಬಿಳಿ ಪುಡಿಯನ್ನು ಅಧಿಕಾರಿಗಳು ಎಚ್ಚರಿಕೆಯಿಂದ ವಶಪಡಿಸಿಕೊಂಡರು.

ಪುಡಿಯಲ್ಲಿ ಕೊಕೇನ್ ಇರುವುದು ಪತ್ತೆಯಾಗಿದೆ. ಒಟ್ಟು 4,006 ಗ್ರಾಂ (4 ಕೆಜಿಗಿಂತ ಹೆಚ್ಚು) ತೂಕದ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ರೂ. 40 ಕೋಟಿ  ಮೌಲ್ಯವನ್ನು ಹೊಂದಿರುವ ಕೊಕೇನ್ ಅನ್ನು ಎನ್.ಡಿ.ಪಿ.ಎಸ್. ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ನಂತರ ಪ್ರಯಾಣಿಕನನ್ನು ಎನ್.ಡಿ.ಪಿ.ಎಸ್. ಕಾಯ್ದೆ, 1985 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಯಿತು ಮತ್ತು 18.07.2025 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

 

*****
 


(Release ID: 2146093)