ಪ್ರಧಾನ ಮಂತ್ರಿಯವರ ಕಛೇರಿ
ಸ್ಕಿಲ್ ಇಂಡಿಯಾ ಮಿಷನ್ ಮೂಲಕ ಕೌಶಲ್ಯಪೂರ್ಣ ಮತ್ತು ಸ್ವಾವಲಂಬಿ ಯುವ ಪಡೆಯನ್ನು ಸೃಷ್ಟಿಸುವ ಸರ್ಕಾರದ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದ್ದಾರೆ
Posted On:
15 JUL 2025 9:14PM by PIB Bengaluru
ಸ್ಕಿಲ್ ಇಂಡಿಯಾ ಮಿಷನ್ 10 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಈ ಮಿಷನ್ ಮೂಲಕ ಕೌಶಲ್ಯಪೂರ್ಣ ಮತ್ತು ಸ್ವಾವಲಂಬಿ ಯುವ ಪಡೆಯನ್ನು ಸೃಷ್ಟಿಸುವ ಸರ್ಕಾರದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಸ್ಕಿಲ್ ಇಂಡಿಯಾ ಮಿಷನ್ ದೇಶಾದ್ಯಂತ ಲಕ್ಷಾಂತರ ಜನರನ್ನು ಸಬಲೀಕರಣಗೊಳಿಸುವ ಒಂದು ಪರಿವರ್ತನಾ ಉಪಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
MyGovIndia ಮತ್ತು ಕೇಂದ್ರ ಸಚಿವರಾದ ಶ್ರೀ ಜಯಂತ್ ಸಿಂಗ್ ಅವರ ಸಾಮಾಜಿಕ ಮಾಧ್ಯಮ ʼಎಕ್ಸ್ʼ ಪೋಸ್ಟ್ ಗೆ ಪ್ರಧಾನಮಂತ್ರಿ ಪ್ರತಿಕ್ರಿಯಿಸಿದ್ದಾರೆ:
"ನಮ್ಮ ಯುವಜನರನ್ನು ಕೌಶಲ್ಯಪೂರ್ಣ ಮತ್ತು ಸ್ವಾವಲಂಬಿಗಳನ್ನಾಗಿ ಮಾಡುವ ನಮ್ಮ ಸಂಕಲ್ಪವನ್ನು ಸ್ಕಿಲ್ ಇಂಡಿಯಾ ಬಲಪಡಿಸುತ್ತಿದೆ.
#SkillIndiaAt10"
"ಸ್ಕಿಲ್ ಇಂಡಿಯಾ ಉಪಕ್ರಮವು ಅಸಂಖ್ಯಾತ ಜನರಿಗೆ ಪ್ರಯೋಜನವನ್ನು ನೀಡಿದೆ, ಅವರಿಗೆ ಹೊಸ ಕೌಶಲ್ಯಗಳನ್ನು ಒದಗಿಸಿದೆ ಮತ್ತು ಹೊಸ ಅವಕಾಶಗಳನ್ನು ತೆರೆಯುತ್ತಿದೆ. ಮುಂಬರುವ ದಿನಗಳಲ್ಲಿ, ಜಾಗತಿಕ ಅತ್ಯುತ್ತಮ ಅಭ್ಯಾಸಗಳಿಗೆ ಅನುಗುಣವಾಗಿ ನಮ್ಮ ಯುವಜನತೆಯನ್ನು ಹೊಸ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವತ್ತ ನಾವು ಗಮನಹರಿಸುತ್ತೇವೆ, ಇದರಿಂದ ನಾವು ವಿಕಸಿತ ಭಾರತದ ನಮ್ಮ ಕನಸನ್ನು ನನಸಾಗಿಸಬಹುದು.
#SkillIndiaAt10"
*****
(Release ID: 2145066)
Visitor Counter : 2
Read this release in:
English
,
Urdu
,
Marathi
,
Hindi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam