ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆಯು (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ) ಆಗಸ್ಟ್, 2025 ರಿಂದ ಪ್ರಾರಂಭವಾಗುವ ಮೊದಲ ಬ್ಯಾಚ್‌ ಗಾಗಿ ಎವಿಜಿಸಿ-ಎಕ್ಸ್‌ ಆರ್‌ ನಲ್ಲಿ ಅತ್ಯಾಧುನಿಕ ಕೋರ್ಸ್‌ ಗಳನ್ನು ಪ್ರಕಟಿಸಿದೆ

Posted On: 15 JUL 2025 11:16AM by PIB Bengaluru

ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ (ಐಐಸಿಟಿ) ಈ ಆಗಸ್ಟ್‌ನಲ್ಲಿ ತನ್ನ ಮೊದಲ ಬ್ಯಾಚ್‌ ನ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಪ್ರಾರಂಭಿಸುತ್ತಿರುವುದರಿಂದ ಭಾರತದ ಉದಯೋನ್ಮುಖ ಡಿಜಿಟಲ್ ಮತ್ತು ಸೃಜನಶೀಲ ಆರ್ಥಿಕತೆಯು ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಿದೆ. ಸಂಸ್ಥೆಯು ಎವಿಜಿಸಿ-ಎಕ್ಸ್‌ ಆರ್‌ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ) ವಲಯದಲ್ಲಿ ಉದ್ಯಮ-ಚಾಲಿತ ಕೋರ್ಸ್‌ ಗಳ ಬಲವಾದ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ.

ಈ ಸಂಸ್ಥೆಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಮೇ 2025 ರಲ್ಲಿ ನಡೆದ ವಿಶ್ವ ಶ್ರವ್ಯ-ದೃಶ್ಯ ಮನರಂಜನಾ ಶೃಂಗಸಭೆಯಲ್ಲಿ (ವೇವ್ಸ್‌) ಘೋಷಿಸಿದ್ದರು. ಇದು ಪ್ರತಿಷ್ಠಿತ ಜಾಗತಿಕ ಪಾಲುದಾರಿಕೆಗಳು ಮತ್ತು ಉದ್ಯಮದ ದಿಗ್ಗಜರಿಂದ ಬೆಂಬಲಿತವಾಗಿದೆ. ಇದರ ಉದ್ಘಾಟನಾ ಶೈಕ್ಷಣಿಕ ಅಧಿವೇಶನವು ಗೇಮಿಂಗ್‌ ನಲ್ಲಿ ಆರು ವಿಶೇಷ ಕೋರ್ಸ್‌ ಗಳು, ನಿರ್ಮಾಣೋತ್ತರ (ಪೋಸ್ಟ್‌ಪ್ರೊಡಕ್ಷನ್‌) ದಲ್ಲಿ ನಾಲ್ಕು ಕೋರ್ಸ್‌ ಗಳು ಮತ್ತು ಅನಿಮೇಷನ್, ಕಾಮಿಕ್ಸ್ ಮತ್ತು ಎಕ್ಸ್‌ ಆರ್ ನಲ್ಲಿ ಎಂಟು ಕೋರ್ಸ್‌‌ ಗಳನ್ನು ಒಳಗೊಂಡಿದೆ.

ನಿರಂತರವಾಗಿ ವಿಕಸಿಸುತ್ತಿರುವ ಸೃಜನಶೀಲ ತಂತ್ರಜ್ಞಾನ ವಲಯದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳು ಸಜ್ಜುಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ಈ ಕಾರ್ಯಕ್ರಮಗಳನ್ನು ಉದ್ಯಮದ ಉನ್ನತ ಸಂಸ್ಥೆಗಳ ಸಹಯೋಗದೊಂದಿಗೆ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ.

ಐಐಸಿಟಿ ಇತ್ತೀಚೆಗೆ ಯುನೈಟೆಡ್ ಕಿಂಗ್‌ಡಂನ ಯಾರ್ಕ್ ವಿಶ್ವವಿದ್ಯಾಲಯದೊಂದಿಗೆ ಒಂದು ಮಹತ್ವದ ತಿಳುವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಿದೆ, ಇದು ಸಹಯೋಗದ ಸಂಶೋಧನೆ, ಅಧ್ಯಾಪಕರ ವಿನಿಮಯ ಮತ್ತು ಜಾಗತಿಕ ಪ್ರಮಾಣೀಕರಣ ಮಾರ್ಗಗಳಿಗೆ ದಾರಿ ಮಾಡಿಕೊಡುತ್ತದೆ. ಅದರ ಬಲವಾದ ಅಡಿಪಾಯಕ್ಕೆ ಸೇರ್ಪಡೆಯಾಗಿ, ಗೂಗಲ್, ಯೂಟ್ಯೂಬ್, ಅಡೋಬ್, ಮೆಟಾ, ಮೈಕ್ರೋಸಾಫ್ಟ್, ಎನ್‌ವಿಡಿಯಾ ಮತ್ತು ಜಿಯೋಸ್ಟಾರ್‌ ನಂತಹ ಪ್ರಮುಖ ಜಾಗತಿಕ ಕಂಪನಿಗಳು ಐಐಸಿಟಿಯೊಂದಿಗೆ ದೀರ್ಘಕಾಲೀನ ಸಹಯೋಗಕ್ಕೆ ಬದ್ಧತೆ ತೋರಿವೆ. ಅವರ ಸಹಯೋಗವು ಪಠ್ಯಕ್ರಮ ಅಭಿವೃದ್ಧಿ, ವಿದ್ಯಾರ್ಥಿವೇತನಗಳು, ಇಂಟರ್ನ್‌ಶಿಪ್‌, ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್ ಮತ್ತು ಉದ್ಯೋಗಾವಕಾಶಗಳನ್ನು ಒಳಗೊಂಡಿದೆ.

ಐಐಸಿಟಿಯ ಸಿಇಒ ಡಾ. ವಿಶ್ವಾಸ್ ದೇವುಸ್ಕರ್, "ವಿಶ್ವ ದರ್ಜೆಯ ಪ್ರತಿಭೆಗಳನ್ನು ಪೋಷಿಸುವ ಮೂಲಕ ಭಾರತವನ್ನು ಎವಿಜಿಸಿ-ಎಕ್ಸ್‌ ಆರ್‌ ವಲಯದಲ್ಲಿ ಜಾಗತಿಕ ಶಕ್ತಿ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಭಾರತದ ಕ್ರಿಯಾತ್ಮಕ ಸೃಜನಶೀಲ ಸಾಮರ್ಥ್ಯದಲ್ಲಿ ಬೇರೂರಿರುವ ಈ ಕೋರ್ಸ್‌ ಗಳನ್ನು ಜಾಗತಿಕ ಮಾನದಂಡಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ವಿವರವಾದ ಪಠ್ಯಕ್ರಮವನ್ನು ಈ ತಿಂಗಳ ಕೊನೆಯಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ " ಎಂದು ಹೇಳಿದರು.

ಐಐಸಿಟಿಯ ಆಡಳಿತ ಮಂಡಳಿಯಲ್ಲಿ ಶ್ರೀ ಸಂಜಯ್ ಜಾಜು, ಶ್ರೀ ವಿಕಾಸ್ ಖರ್ಗೆ, ಶ್ರೀಮತಿ ಸ್ವಾತಿ ಮ್ಹಾಸೆ, ಶ್ರೀ ಚಂದ್ರಜಿತ್ ಬ್ಯಾನರ್ಜಿ, ಶ್ರೀ ಆಶಿಶ್ ಕುಲಕರ್ಣಿ, ಶ್ರೀ ಮನ್ವೇಂದ್ರ ಶುಕುಲ್ ಮತ್ತು ಶ್ರೀ ರಾಜನ್ ನವನಿ ಇದ್ದಾರೆ. ಆಡಳಿತ ಮಂಡಳಿಯ ಸದಸ್ಯರಲ್ಲಿ ಶ್ರೀ ಮುಂಜಾಲ್ ಶ್ರಾಫ್, ಶ್ರೀ ಚೈತನ್ಯ ಚಿಚ್ಲಿಕರ್, ಶ್ರೀ ಬಿರೇನ್ ಘೋಷ್, ಶ್ರೀ ಭೂಪೇಂದ್ರ ಕೈಂಥೋಲಾ ಮತ್ತು ಶ್ರೀ ಗೌರವ್ ಬ್ಯಾನರ್ಜಿ ಇದ್ದಾರೆ.

ಜಾಗತಿಕ ಎವಿಜಿಸಿ-ಎಕ್ಸ್‌ ಆರ್‌ ಉದ್ಯಮವು ವೇಗವಾಗಿ ಬೆಳೆಯುವ ನಿರೀಕ್ಷೆಯೊಂದಿಗೆ, ಐಐಸಿಟಿಯ ಸಮಗ್ರ ಪಠ್ಯಕ್ರಮವು ಭವಿಷ್ಯಕ್ಕೆ-ಸಿದ್ಧವಾದ ಪ್ರತಿಭಾ ಸಮೂಹವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಅದು ಭಾರತದ ಸೃಜನಶೀಲ ಆರ್ಥಿಕತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಮತ್ತು ದೇಶವನ್ನು ತಲ್ಲೀನಗೊಳಿಸುವ ಮತ್ತು ಡಿಜಿಟಲ್ ಕಂಟೆಂಟ್ ತಂತ್ರಜ್ಞಾನಗಳಲ್ಲಿ ನಾಯಕನಾಗಿ ಸ್ಥಾಪಿಸುತ್ತದೆ.‌

 

*****


(Release ID: 2144834)