ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
Posted On:
09 JUL 2025 7:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮೀಬಿಯಾಗೆ ಅಧಿಕೃತ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷರಾದ ಮಾನ್ಯ ನೆಟುಂಬೊ ನಂದಿ-ದೈತ್ವಾ ಅವರು ಪ್ರಧಾನಮಂತ್ರಿಯವರಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ – “ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್” ಅನ್ನು ಪ್ರದಾನ ಮಾಡಿದರು. ಪ್ರಧಾನಮಂತ್ರಿ ಮೋದಿ ಅವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ನಾಯಕರಾಗಿದ್ದಾರೆ.
ಪ್ರಧಾನಮಂತ್ರಿ ಅವರು ಈ ಗೌರವವನ್ನು ಭಾರತದ 140 ಕೋಟಿ ಜನರಿಗೆ ಹಾಗೂ ಭಾರತ ಮತ್ತು ನಮೀಬಿಯಾ ನಡುವಿನ ಐತಿಹಾಸಿಕ ಮತ್ತು ದೀರ್ಘಕಾಲೀನ ಸಂಬಂಧಗಳಿಗೆ ಅರ್ಪಿಸಿದ್ದಾರೆ. ಈ ಪ್ರಶಸ್ತಿ ನೀಡಿದ್ದಕ್ಕಾಗಿ ನಮೀಬಿಯಾದ ಅಧ್ಯಕ್ಷ ನಂದಿ-ದೈತ್ವಾ ಮತ್ತು ಅಲ್ಲಿನ ಜನರಿಗೆ ಪ್ರಧಾನಮಂತ್ರಿಗಳು ತಮ್ಮ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿರುವುದು ಭಾರತ ಮತ್ತು ನಮೀಬಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಮೈಲಿಗಲ್ಲಾಗಿದೆ ಮತ್ತು ಈ ವಿಶೇಷ ದ್ವಿಪಕ್ಷೀಯ ಪಾಲುದಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎರಡೂ ದೇಶಗಳ ಯುವ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದೆ.
*****
(Release ID: 2143601)
Read this release in:
Odia
,
English
,
Khasi
,
Urdu
,
Marathi
,
Hindi
,
Assamese
,
Gujarati
,
Tamil
,
Telugu
,
Malayalam