ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೇಶದ ಅಧಿಕೃತ ಭೇಟಿ ನಿಮಿತ್ತ ಘಾನಾಕ್ಕೆ ಆಗಮಿಸಿದ ಪ್ರಧಾನಮಂತ್ರಿ 

प्रविष्टि तिथि: 02 JUL 2025 8:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಘಾನಾ ದೇಶದ ಅಧಿಕೃತ ಪ್ರವಾಸದ ನಿಟ್ಟಿನಲ್ಲಿ ಇಂದು ಅಕ್ರಾಗೆ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಘಾನಾ ಅಧ್ಯಕ್ಷ ಘನತೆವೆತ್ತ ಶ್ರೀ ಜಾನ್ ಡ್ರಾಮಣಿ ಮಹಾಮಾ ಅವರು ದೇಶದ ವಿಶೇಷ ಆಚರಣೆಗಳ ಮೂಲಕ ವಿಧ್ಯುಕ್ತ ಸ್ವಾಗತ ನೀಡಿ ಸ್ವಾಗತಿಸಿದರು. ಅವರ ಈ ಸ್ವಾಗತವು ಎರಡು ರಾಷ್ಟ್ರಗಳ ನಡುವಿನ ಸ್ನೇಹದ ಬಲವಾದ ಮತ್ತು ಐತಿಹಾಸಿಕ ಬಂಧಗಳನ್ನು ಪ್ರತಿಬಿಂಬಿಸುತ್ತದೆ.

ಪ್ರಧಾನಮಂತ್ರಿಯವರ ಘಾನಾ ದೇಶದ ಅಧಿಕೃತ ಭೇಟಿಯು ಕಳೆದ ಮೂರು ದಶಕಗಳಲ್ಲಿ ಇಂತಹ ಮೊದಲ ಭೇಟಿಯಾಗಿದೆ. ಈ ಐತಿಹಾಸಿಕ ಭೇಟಿಯು ಭಾರತ ಮತ್ತು ಘಾನಾ ದೇಶಗಳ ನಡುವಿನ ಪಾಲುದಾರಿಕೆಯನ್ನು ಇನ್ನಷ್ಟು ಬಲಗೊಳಿಸುವತ್ತದೆ ಮತ್ತು ಆಫ್ರಿಕಾ ಹಾಗೂ ಜಾಗತಿಕ ದಕ್ಷಿಣ ಪಾಲುದಾರರೊಂದಿಗೆ ತನ್ನ ಒಪ್ಪಂದಗಳನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.

 

*****
 


(रिलीज़ आईडी: 2141678) आगंतुक पटल : 9
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam