ಪ್ರಧಾನ ಮಂತ್ರಿಯವರ ಕಛೇರಿ
ಡಿಜಿಟಲ್ ಇಂಡಿಯಾ ಉಪಕ್ರಮದ 10 ವರ್ಷಗಳನ್ನು ಶ್ಲಾಘಿಸಿರುವ ಪ್ರಧಾನಮಂತ್ರಿ
Posted On:
01 JUL 2025 9:40AM by PIB Bengaluru
ಡಿಜಿಟಲ್ ಇಂಡಿಯಾ ಉಪಕ್ರಮವು ಯಶಸ್ವಿಯಾಗಿ 10 ವರ್ಷ ಪೂರ್ಣಗೊಳಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ದಶಕದ ನಂತರ, ಈ ಉಪಕ್ರಮವು ಅಸಂಖ್ಯಾತ ಜನರನ್ನು ತಲುಪಿದ್ದು ಸಬಲೀಕರಣದ ಹೊಸ ಯುಗಕ್ಕೆ ನಾಂದಿ ಹಾಡಿದೆ. ಈ ಪಯಣಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ. "140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪದಿಂದ ಭಾರತವು ಡಿಜಿಟಲ್ ಪಾವತಿಗಳಲ್ಲಿ ಅಪಾರ ಪ್ರಗತಿ ಸಾಧಿಸಿದೆ" ಎಂದು ಶ್ರೀ ಮೋದಿ ಅವರು ಬಣ್ಣಿಸಿದ್ದಾರೆ.
MyGovIndia ದ ಥ್ರೆಡ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡು ಪ್ರಧಾನಮಂತ್ರಿ ಅವರು ಹೀಗೆ ಬರೆದಿದ್ದಾರೆ:
"ನಾವು #10YearsOfDigitalIndia ಆಚರಿಸುತ್ತಿರುವ ಇಂದು ಐತಿಹಾಸಿಕ ದಿನ!
ನಮ್ಮ ದೇಶವನ್ನು ತಾಂತ್ರಿಕವಾಗಿ ಮುಂದುವರಿದ ಸಮಾಜವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಹಾಗೂ ಡಿಜಿಟಲ್ ಸಬಲೀಕರಣಕ್ಕಾಗಿ ಹತ್ತು ವರ್ಷಗಳ ಹಿಂದೆ ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಲಾಯಿತು.
ಈ ಉಪಕ್ರಮವು ಒಂದು ದಶಕದ ನಂತರ, ಅಸಂಖ್ಯಾತ ಜನರನ್ನು ತಲುಪಿದ್ದು ಸಬಲೀಕರಣದ ಹೊಸ ಯುಗಕ್ಕೆ ನಾಂದಿ ಹಾಡಿರುವ ಪಯಣಕ್ಕೆ ನಾವು ಸಾಕ್ಷಿಯಾಗಿದ್ದೇವೆ. 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪದಿಂದ ಭಾರತವು ಡಿಜಿಟಲ್ ಪಾವತಿಗಳಲ್ಲಿ ಅಪಾರ ಪ್ರಗತಿ ಸಾಧಿಸಿದೆ. ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳು ಸಹ ಈ ಉಪಕ್ರಮದ ಪ್ರಯೋಜನ ಪಡೆದಿವೆ.
ಡಿಜಿಟಲ್ ರೂಪಾಂತರ ಮತ್ತು ಅದರ ಪ್ರಮಾಣದ ಒಂದು ನೋಟವನ್ನು ಈ ಥ್ರೆಡ್ ನೀಡುತ್ತದೆ!"
*****
(Release ID: 2141060)
Read this release in:
Assamese
,
English
,
Urdu
,
Marathi
,
Hindi
,
Nepali
,
Bengali
,
Bengali-TR
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam