ಪ್ರಧಾನ ಮಂತ್ರಿಯವರ ಕಛೇರಿ
ಜೂನ್ 20 ಮತ್ತು 21ರಂದು ಬಿಹಾರ, ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ಸಿವಾನ್‌ನಲ್ಲಿ ನೀರು, ರೈಲು ಮತ್ತು ವಿದ್ಯುತ್ ವಲಯ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಗಿನಿಯಾ ಗಣರಾಜ್ಯಕ್ಕೆ ರಫ್ತು ಮಾಡಲು ಮರ್ಹೌರಾ ಸ್ಥಾವರದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಲೋಕೋಮೋಟಿವ್‌ಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ
ಒಡಿಶಾ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಸಮಾರಂಭದ ಅಧ್ಯಕ್ಷತೆ ವಹಿಸಲಿರುವ ಪ್ರಧಾನಮಂತ್ರಿ
ಭುವನೇಶ್ವರದಲ್ಲಿ18,600 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ವಿಶಾಖಪಟ್ಟಣಂನಲ್ಲಿ ನಡೆಯಲಿರುವ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿರುವ ಪ್ರಧಾನಮಂತ್ರಿ
‘‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’’ ಎಂಬ ಐಡಿವೈ 2025 ವಿಷಯವು ವೈಯಕ್ತಿಕ ಮತ್ತು ಗ್ರಹಗಳ ಯೋಗಕ್ಷೇಮದ ನಡುವಿನ ಸಾಮರಸ್ಯವನ್ನು ಒತ್ತಿಹೇಳುತ್ತದೆ
Posted On:
19 JUN 2025 5:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 20 ಮತ್ತು 21ರಂದು ಬಿಹಾರ, ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರು ಜೂನ್ 20ರಂದು ಬಿಹಾರದ ಸಿವಾನ್‌ಗೆ ಭೇಟಿ ನೀಡಲಿದ್ದು, ಮಧ್ಯಾಹ್ನ 12 ಗಂಟೆಗೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ನಂತರ, ಅವರು ಒಡಿಶಾದ ಭುವನೇಶ್ವರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಸಂಜೆ 4:15 ಕ್ಕೆ ಒಡಿಶಾ ರಾಜ್ಯ ಸರ್ಕಾರದ ಒಂದು ವರ್ಷವನ್ನು ಪೂರ್ಣಗೊಳಿಸಿದ ರಾಜ್ಯ ಮಟ್ಟದ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅವರು 18,600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜೂನ್ 21ರಂದು ಬೆಳಗ್ಗೆ 6.30ಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬಿಹಾರದಲ್ಲಿ ಪ್ರಧಾನಮಂತ್ರಿ
ಬಿಹಾರದಲ್ಲಿಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಸಿವಾನ್ ನಲ್ಲಿಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ.
ಈ ಪ್ರದೇಶದಲ್ಲಿರೈಲ್ವೆ ಮೂಲಸೌಕರ್ಯವನ್ನು ಹೆಚ್ಚಿಸಲು, ಪ್ರಧಾನಮಂತ್ರಿ ಅವರು 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹೊಸ ವೈಶಾಲಿ-ಡಿಯೋರಿಯಾ ರೈಲ್ವೆ ಮಾರ್ಗ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಮತ್ತು ಈ ಮಾರ್ಗದಲ್ಲಿ ಹೊಸ ರೈಲು ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ. ಇದಲ್ಲದೆ, ಉತ್ತರ ಬಿಹಾರದಲ್ಲಿ ಸಂಪರ್ಕಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಅವರು ಮುಜಾಫರ್‌ಪುರ ಮತ್ತು ಬೆಟ್ಟಿಯಾ ಮೂಲಕ ಪಾಟಲೀಪುತ್ರ ಮತ್ತು ಗೋರಖ್ ಪುರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲಿದ್ದಾರೆ.
ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್ ದೃಷ್ಟಿಕೋನವನ್ನು ಮುಂದುವರಿಸುತ್ತಾ, ಗಿನಿಯಾ ಗಣರಾಜ್ಯಕ್ಕೆ ರಫು ಮಾಡಲು ಮರ್ಹೌರಾ ಸ್ಥಾವರದಲ್ಲಿನಿರ್ಮಿಸಲಾದ ಅತ್ಯಾಧುನಿಕ ಲೋಕೋಮೋಟಿವ್‌ಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಲಿದ್ದಾರೆ. ಇದು ಈ ಕಾರ್ಖಾನೆಯಲ್ಲಿ ತಯಾರಿಸಿದ ಮೊದಲ ರಫ್ತು ಲೋಕೋಮೋಟಿವ್ ಆಗಿದೆ. ಅವುಗಳು ಹೆಚ್ಚಿನ ಅಶ್ವಶಕ್ತಿಯ ಎಂಜಿನ್‌ಗಳು, ಸುಧಾರಿತ ಎಸಿ ಪ್ರೊಪಲ್ಷನ್ ಸಿಸ್ಟಮ್, ಮೈಕ್ರೊಪ್ರೊಸೆಸರ್ ಆಧಾರಿತ ನಿಯಂತ್ರಣ ವ್ಯವಸ್ಥೆಗಳು, ಎರ್ಗೊನಾಮಿಕ್ ಕ್ಯಾಬ್ ವಿನ್ಯಾಸಗಳು ಮತ್ತು ಪುನರುತ್ಪಾದಕ ಬ್ರೇಕಿಂಗ್‌ನಂತಹ ತಂತ್ರಜ್ಞಾನಗಳನ್ನು ಒಳಗೊಂಡಿವೆ.
ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನದ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಈ ಪ್ರದೇಶದ ಜನರ ಅಗತ್ಯಗಳನ್ನು ಪೂರೈಸಲು ನಮಾಮಿ ಗಂಗೆ ಯೋಜನೆಯಡಿ 1800 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಉದ್ಘಾಟಿಸಲಿದ್ದಾರೆ.
ಈ ಪಟ್ಟಣಗಳ ನಾಗರಿಕರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಗುರಿಯೊಂದಿಗೆ ಬಿಹಾರದಾದ್ಯಂತ ವಿವಿಧ ಪಟ್ಟಣಗಳಲ್ಲಿ3000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನೀರು ಸರಬರಾಜು, ನೈರ್ಮಲ್ಯ ಮತ್ತು ಎಸ್‌ಟಿಪಿಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಪ್ರದೇಶದಲ್ಲಿ ವಿದ್ಯುತ್ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಬಿಹಾರದಲ್ಲಿ500 ಮೆಗಾವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (ಬಿಇಎಸ್‌ಎಸ್) ಸಾಮರ್ಥ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಜಾಫರ್‌ಪುರ, ಮೋತಿಹರಿ, ಬೆಟ್ಟಿಯಾ, ಸಿವಾನ್ ಸೇರಿದಂತೆ ರಾಜ್ಯದ 15 ಗ್ರಿಡ್ ಸಬ್ ಸ್ಟೇಷನ್‌ಗಳಲ್ಲಿಸ್ವತಂತ್ರ ಬಿಇಎಸ್‌ಎಸ್ ಸ್ಥಾಪಿಸಲಾಗುತ್ತಿದೆ. ಪ್ರತಿ ಉಪಕೇಂದ್ರದಲ್ಲಿಅಳವಡಿಸಬೇಕಾದ ಬ್ಯಾಟರಿಯ ಸಾಮರ್ಥ್ಯವು 20ರಿಂದ 80 ಮೆಗಾವ್ಯಾಟ್ ನಡುವೆ ಇರುತ್ತದೆ. ಈಗಾಗಲೇ ಸಂಗ್ರಹವಾಗಿರುವ ವಿದ್ಯುತ್ತನ್ನು ಗ್ರಿಡ್‌ಗೆ ಪೂರೈಸುವ ಮೂಲಕ ವಿತರಣಾ ಕಂಪನಿಗಳು ದುಬಾರಿ ದರದಲ್ಲಿ ವಿದ್ಯುತ್ ಖರೀದಿಸುವುದನ್ನು ಇದು ಉಳಿಸುತ್ತದೆ.
ಪ್ರಧಾನಮಂತ್ರಿ ಅವರು ಬಿಹಾರದಲ್ಲಿ ಪಿಎಂಎವೈ ಯುನ 53,600ಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಪಿಎಂಎವೈಯು ಪೂರ್ಣಗೊಂಡ 6,600 ಕ್ಕೂ ಹೆಚ್ಚು ಮನೆಗಳ ಗೃಹ ಪ್ರವೇಶ ಸಮಾರಂಭದ ಅಂಗವಾಗಿ ಅವರು ಕೆಲವು ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಲಿದ್ದಾರೆ.
ಒಡಿಶಾದಲ್ಲಿ ಪ್ರಧಾನಮಂತ್ರಿ
ಒಡಿಶಾ ಸರ್ಕಾರ ಒಂದು ವರ್ಷ ಪೂರೈಸಿದ ಸ್ಮರಣಾರ್ಥ ಭುವನೇಶ್ವರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ವಹಿಸಲಿದ್ದಾರೆ.
ಒಡಿಶಾದ ಸಮಗ್ರ ಅಭಿವೃದ್ಧಿಯ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು 18,600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಕುಡಿಯುವ ನೀರು, ನೀರಾವರಿ, ಕೃಷಿ ಮೂಲಸೌಕರ್ಯ, ಆರೋಗ್ಯ ಮೂಲಸೌಕರ್ಯ, ಗ್ರಾಮೀಣ ರಸ್ತೆಗಳು ಮತ್ತು ಸೇತುವೆಗಳು, ರಾಷ್ಟ್ರೀಯ ಹೆದ್ದಾರಿಗಳ ವಿಭಾಗಗಳು ಮತ್ತು ಹೊಸ ರೈಲ್ವೆ ಮಾರ್ಗ ಸೇರಿದಂತೆ ನಿರ್ಣಾಯಕ ಕ್ಷೇತ್ರಗಳನ್ನು ಒಳಗೊಳ್ಳುತ್ತವೆ.
ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಜಿಲ್ಲೆಯ ಏಕೀಕರಣದ ಐತಿಹಾಸಿಕ ಕ್ಷ ಣವನ್ನು ಗುರುತಿಸುವ ಪ್ರಧಾನಮಂತ್ರಿ ಅವರು, ಮೊದಲ ಬಾರಿಗೆ ಬೌಧ್ ಜಿಲ್ಲೆಗೆ ರೈಲು ಸಂಪರ್ಕವನ್ನು ವಿಸ್ತರಿಸುವ ಹೊಸ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಶುದ್ಧ ಇಂಧನ ಮತ್ತು ಸುಸ್ಥಿರ ಸಾರಿಗೆಗೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಆಧುನಿಕ, ಪರಿಸರ ಸ್ನೇಹಿ ನಗರ ಚಲನಶೀಲತೆ ಜಾಲವನ್ನು ಬೆಂಬಲಿಸುವ ಕ್ಯಾಪಿಟಲ್ ರೀಜನ್ ಅರ್ಬನ್ ಟ್ರಾನ್ಸ್‌ಪೋರ್ಟ್(ಸಿಆರ್‌ಯುಟಿ) ವ್ಯವಸ್ಥೆಯಡಿ 100 ಎಲೆಕ್ಟ್ರಿಕ್ ಬಸ್‌ಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.
ಪ್ರಧಾನಮಂತ್ರಿ ಅವರು ಒಡಿಶಾ ವಿಷನ್ ಡಾಕ್ಯುಮೆಂಟ್‌ಅನ್ನು ಬಿಡುಗಡೆ ಮಾಡಲಿದ್ದಾರೆ. 2036 ರ ಹೆಗ್ಗುರುತು ವರ್ಷಗಳು (ಒಡಿಶಾ ಭಾರತದ ಮೊದಲ ಭಾಷಾವಾರು ರಾಜ್ಯವಾಗಿ 100 ವರ್ಷಗಳನ್ನು ಪೂರ್ಣಗೊಳಿಸಿದಾಗ) ಮತ್ತು 2047 (ಭಾರತವು 100 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಮಯದಲ್ಲಿ) ಸುತ್ತ ಸುತ್ತುವರೆದಿರುವ ಈ ದೃಷ್ಟಿಕೋನವು ಅಂತರ್ಗತ ಬೆಳವಣಿಗೆಗೆ ಮಹತ್ವಾಕಾಂಕ್ಷೆಯ ಮತ್ತು ಭವಿಷ್ಯಕ್ಕೆ ಸಿದ್ಧವಾದ ಮಾರ್ಗಸೂಚಿಯನ್ನು ರೂಪಿಸುತ್ತದೆ.
ಶ್ರೇಷ್ಠ ಒಡಿಯಾಗಳ ಕೊಡುಗೆಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಧಾನಮಂತ್ರಿ ಅವರು ‘ಬಾರಾಪುತ್ರ ಐತಿಹ್ಯ ಗ್ರಾಮ ಯೋಜನೆ’ ಉಪಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವಾಗ ಒಡಿಶಾದ ಪರಂಪರೆಯನ್ನು ಗೌರವಿಸುವ ವಸ್ತುಸಂಗ್ರಹಾಲಯಗಳು, ವ್ಯಾಖ್ಯಾನ ಕೇಂದ್ರಗಳು, ಪ್ರತಿಮೆಗಳು, ಗ್ರಂಥಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳ ಮೂಲಕ ಅವರ ಜನ್ಮಸ್ಥಳಗಳನ್ನು ಜೀವಂತ ಸ್ಮಾರಕಗಳಾಗಿ ಪರಿವರ್ತಿಸುವ ಗುರಿಯನ್ನು ಇದು ಹೊಂದಿದೆ.
ರಾಜ್ಯದಲ್ಲಿಸಮೃದ್ಧಿ ಮತ್ತು ಸ್ವಾವಲಂಬನೆಯ ಸಂಕೇತವಾಗಿ 16.50 ಲಕ್ಷಕ್ಕೂ ಹೆಚ್ಚು ಲಕ್ಷಾದಿಪತಿ ದೀದಿಗಳನ್ನು ಉತ್ತೇಜಿಸುತ್ತಿರುವ ಪ್ರಧಾನಮಂತ್ರಿ ಅವರು, ರಾಜ್ಯದಾದ್ಯಂತದ ಮಹಿಳಾ ಸಾಧಕರನ್ನು ಸನ್ಮಾನಿಸಲಿದ್ದಾರೆ.
ಆಂಧ್ರಪ್ರದೇಶದಲ್ಲಿ ಪ್ರಧಾನಮಂತ್ರಿ
11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿಪ್ರಧಾನಮಂತ್ರಿ ಅವರು ವಿಶಾಖಪಟ್ಟಣಂನಿಂದ ರಾಷ್ಟ್ರೀಯ ಆಚರಣೆಯ ನೇತೃತ್ವ ವಹಿಸಲಿದ್ದಾರೆ. ಅವರು ವಿಶಾಖಪಟ್ಟಣಂನ ಕಡಲತೀರದಲ್ಲಿ ಸಾಮಾನ್ಯ ಯೋಗ ಪೋ›ಟೋಕಾಲ್ (ಸಿವೈಪಿ) ಅಧಿವೇಶನದಲ್ಲಿ ಸುಮಾರು 5 ಲಕ್ಷ ಭಾಗವಹಿಸುವವರೊಂದಿಗೆ ಭಾಗವಹಿಸಲಿದ್ದಾರೆ. ಭಾರತದಾದ್ಯಂತ 3.5 ಲಕ್ಷ ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿಯೋಗ ಸಂಗಮ್ ಕಾರ್ಯಕ್ರಮಗಳು ನಡೆಯಲಿವೆ. ಈ ವರ್ಷ, ಕುಟುಂಬದೊಂದಿಗೆ ಯೋಗ ಮತ್ತು ಯೋಗ ಅನ್ ಪ್ಲಗ್ಡ್ ಅಡಿಯಲ್ಲಿಯುವ ಕೇಂದ್ರಿತ ಉಪಕ್ರಮಗಳಂತಹ ವಿಶೇಷ ಸ್ಪರ್ಧೆಗಳನ್ನು ಮೈಗೌ ಮತ್ತು ಮೈಭಾರತ್ ನಂತಹ ವೇದಿಕೆಗಳಲ್ಲಿಪ್ರಾರಂಭಿಸಲಾಗಿದೆ, ಇದು ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.
ಈ ವರ್ಷದ ಘೋಷವಾಕ್ಯವು ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಮಾನವ ಮತ್ತು ಗ್ರಹಗಳ ಆರೋಗ್ಯದ ಪರಸ್ಪರ ಸಂಬಂಧವನ್ನು ಬಿಂಬಿಸುತ್ತದೆ ಮತ್ತು ಭಾರತದ ಸರ್ವೇ ಸಂತು ನಿರಾಮಯ (ಎಲ್ಲರೂ ರೋಗದಿಂದ ಮುಕ್ತರಾಗಲಿ) ತತ್ವದಲ್ಲಿ ಬೇರೂರಿರುವ ಸಾಮೂಹಿಕ ಯೋಗಕ್ಷೇಮದ ಜಾಗತಿಕ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತದೆ. 2015ರಲ್ಲಿಪ್ರಾರಂಭವಾದಾಗಿನಿಂದ, ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಜೂನ್ 21ಅನ್ನು ಐಡಿವೈ ಆಗಿ ಆಚರಿಸುವ ಭಾರತದ ಪ್ರಸ್ತಾಪವನ್ನು ಅಂಗೀಕರಿಸಿದಾಗಿನಿಂದ, ಪ್ರಧಾನಿ ಅವರು ನವದೆಹಲಿ, ಚಂಡೀಗಢ, ಲಕ್ನೋ, ಮೈಸೂರು, ನ್ಯೂಯಾರ್ಕ್ (ಯುಎನ್ ಪ್ರಧಾನ ಕಚೇರಿ) ಮತ್ತು ಶ್ರೀನಗರ ಸೇರಿದಂತೆ ವಿವಿಧ ಸ್ಥಳಗಳಿಂದ ಆಚರಣೆಗಳ ನೇತೃತ್ವ ವಹಿಸಿದ್ದಾರೆ. ಐಡಿವೈ ಅಂದಿನಿಂದ ಪ್ರಬಲ ಜಾಗತಿಕ ಆರೋಗ್ಯ ಆಂದೋಲನವಾಗಿ ವಿಕಸನಗೊಂಡಿದೆ.
*****
(Release ID: 2137911)
Read this release in:
Assamese
,
Bengali
,
Odia
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Tamil
,
Telugu
,
Malayalam