ಪ್ರಧಾನ ಮಂತ್ರಿಯವರ ಕಛೇರಿ
ಜಿಪಿಡಿಆರ್‌ಆರ್ 2025ರಲ್ಲಿ ಜಾಗತಿಕ ವಿಪತ್ತು ಸ್ಥಿತಿಸ್ಥಾಪಕತ್ವ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಭಾರತ ಬದ್ಧತೆಯನ್ನು ಪುನರುಚ್ಚರಿಸುತ್ತದೆ
ಜಿಪಿಡಿಆರ್‌ಆರ್ 2025ರಲ್ಲಿ ಜಿ 20, ಡಬ್ಲ್ಯುಎಚ್‌ಒ ಮತ್ತು ಎಯು ಜೊತೆ ಡಾ.ಪಿ.ಕೆ.ಮಿಶ್ರಾ ಮಾತುಕತೆ
Posted On:
05 JUN 2025 8:27PM by PIB Bengaluru
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಇಂದು ಜಿನೀವಾದಲ್ಲಿ ನಡೆದ ವಿಪತ್ತು ಅಪಾಯ ತಗ್ಗಿಸುವ ಜಾಗತಿಕ ವೇದಿಕೆ (ಜಿಪಿಡಿಆರ್‌ಆರ್) 2025ರ ಅಂಚಿನಲ್ಲಿ ನಡೆದ ಜಿ20 ವಿಪತ್ತು ಅಪಾಯ ತಗ್ಗಿಸುವ (ಡಿಆರ್‌ಆರ್) ಕಾರ್ಯ ಗುಂಪಿನ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. ಚರ್ಚೆಯ ಸಮಯದಲ್ಲಿ, ಅಭಿವೃದ್ಧಿಯ ಅನಿವಾರ್ಯತೆಗಳ ಜೊತೆಗೆ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಜಾಗತಿಕ ವಿಪತ್ತು ಅಪಾಯ ತಗ್ಗಿಸುವ ಪ್ರಯತ್ನಗಳನ್ನು ಮುನ್ನಡೆಸುವಲ್ಲಿ ಜಿ20ಯ ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಮತ್ತು ಜಾಗತಿಕ ಸವಾಲುಗಳ ವಿರುದ್ಧ ಸಾಮೂಹಿಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಅವರು ಕರೆ ನೀಡಿದರು.
ಇಂದು ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ, ಡಾ. ಮಿಶ್ರಾ ಅವರು ಸ್ಥಿತಿಸ್ಥಾಪಕ ಭವಿಷ್ಯಕ್ಕಾಗಿ ಅಂತಾರಾಷ್ಟ್ರೀಯ ಪಾಲುದಾರಿಕೆಯನ್ನು ವಿಸ್ತರಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಎಯು ಆಯುಕ್ತ ಶ್ರೀ ಮೋಸೆಸ್ ವಿಲಾಕಾಟಿ ಮತ್ತು ಫ್ರಾನ್ಸ್ ಒಎನ್‌ಯು ಜಿನೀವಾದ ಸಿಡಿಆರ್‌ಐ ಸಹ-ಅಧ್ಯಕ್ಷ ಪ್ರತಿನಿಧಿಯ ಉಪಸ್ಥಿತಿಯಲ್ಲಿವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟದ (ಸಿಡಿಆರ್‌ಐ) ಹೊಸ ಸದಸ್ಯರಾಗಿ ಆಫ್ರಿಕನ್ ಯೂನಿಯನ್ (ಎಯು) ಅನ್ನು ಅವರು ಸ್ವಾಗತಿಸಿದರು. ಈ ಮೈಲಿಗಲ್ಲು 2023 ರಲ್ಲಿಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಎಯು ಶಾಶ್ವತ ಜಿ20 ಸದಸ್ಯರಾಗಿ ಐತಿಹಾಸಿಕ ಸೇರ್ಪಡೆಯನ್ನು ಅನುಸರಿಸುತ್ತದೆ.
ಮಿಶ್ರಾ ಅವರು ಜಿನೀವಾದಲ್ಲಿ ಜಿಪಿಡಿಆರ್‌ಆರ್ ಅಂಚಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಬ್ರೆಯೆಸಸ್ ಅವರನ್ನು ಭೇಟಿಯಾದರು. ಜಾಗತಿಕ ಸಾರ್ವಜನಿಕ ಆರೋಗ್ಯ ವಿಷಯಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಭಾರತದ ಸಹಯೋಗದ ಬಗ್ಗೆ ಅವರು ಚರ್ಚಿಸಿದರು. 2025 ರ ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಎರಡನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಗೆ ಭಾರತದ ಬೆಂಬಲವನ್ನು ಶ್ರೀ ಮಿಶ್ರಾ ಅವರು ಪುನರುಚ್ಚರಿಸಿದರು ಮತ್ತು ಗುಜರಾತ್‌ನ ಜಾಮ್ ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
*****
(Release ID: 2134408)
Read this release in:
Odia
,
Marathi
,
English
,
Urdu
,
Hindi
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam