ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ, ಸಿಎಪಿಎಫ್‌ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಸಿಬ್ಬಂದಿಗೆ ಅವರ ನಿವೃತ್ತಿಯ ದಿನದಂದು ಗೌರವ ಶ್ರೇಣಿಯನ್ನು ನೀಡುವ ಮಹತ್ವದ ನಿರ್ಧಾರವನ್ನು ಗೃಹ ಸಚಿವಾಲಯ ತೆಗೆದುಕೊಂಡಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಈ ಐತಿಹಾಸಿಕ ನಿರ್ಧಾರವು, ಕಾನ್‌ಸ್ಟೇಬಲ್‌ ಹುದ್ದೆಯಿಂದ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ನಿವೃತ್ತರಾಗುವ ಸಿಬ್ಬಂದಿಯ ಆತ್ಮಗೌರವ, ಹೆಮ್ಮೆ ಮತ್ತು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ

ಸಿಎಪಿಎಫ್‌ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಕಾನ್‌ಸ್ಟೇಬಲ್‌ನಿಂದ ಸಬ್‌-ಇನ್‌ಸ್ಪೆಕ್ಟರ್‌ವರೆಗಿನ ಸಿಬ್ಬಂದಿಗೆ ಸುದೀರ್ಘ ಮತ್ತು ಶ್ಲಾಘನೀಯ ಸೇವೆಯ ನಂತರ ನಿವೃತ್ತರಾಗುವ ಸಿಬ್ಬಂದಿಗೆ ಯಾವುದೇ ಹಣಕಾಸಿನ ಅಥವಾ ಪಿಂಚಣಿ ಪ್ರಯೋಜನಗಳಿಲ್ಲದೆ ಅವರ ಸೇವೆಯ ಕೊನೆಯ ದಿನದಂದು ಗೌರವ ಶ್ರೇಣಿ 1ರ ಮಟ್ಟದ ಉನ್ನತ ಶ್ರೇಣಿಯನ್ನು ನೀಡಲಾಗುವುದು

प्रविष्टि तिथि: 29 MAY 2025 6:25PM by PIB Bengaluru

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರ ಮಾರ್ಗದರ್ಶನದಲ್ಲಿ, ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌) ಮತ್ತು ಅಸ್ಸಾಂ ರೈಫಲ್ಸ್‌ (ಎಆರ್‌) ನಲ್ಲಿಅಧಿಕಾರಿ ಶ್ರೇಣಿಗಿಂತ ಕೆಳಗಿನ ಸಿಬ್ಬಂದಿಗೆ ಅವರ ನಿವೃತ್ತಿಯ ದಿನದಂದು ಗೌರವ ಶ್ರೇಣಿಯನ್ನು ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡ ಐತಿಹಾಸಿಕ ನಿರ್ಧಾರವು, ಕಾನ್‌ಸ್ಟೇಬಲ್‌ ಹುದ್ದೆಯಿಂದ ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯಿಂದ ನಿವೃತ್ತರಾಗುವ ಸಿಬ್ಬಂದಿಯ ಆತ್ಮಗೌರವ, ಹೆಮ್ಮೆ ಮತ್ತು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌) ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಅಧಿಕಾರಿ ಶ್ರೇಣಿಗಿಂತ ಕೆಳಗಿರುವ ಸಿಬ್ಬಂದಿಗೆ (ಕಾನ್‌ಸ್ಟೇಬಲ್‌ನಿಂದ ಸಬ್‌ ಇನ್‌ಸ್ಪೆಕ್ಟರ್‌ವರೆಗೆ) ದೀರ್ಘ ಮತ್ತು ಶ್ಲಾಘನೀಯ ಸೇವೆಯ ನಂತರ ನಿವೃತ್ತರಾಗುವವರಿಗೆ ಯಾವುದೇ ಹಣಕಾಸಿನ ಅಥವಾ ಪಿಂಚಣಿ ಪ್ರಯೋಜನಗಳಿಲ್ಲದೆ ಅವರ ಸೇವೆಯ ಕೊನೆಯ ದಿನದಂದು ಗೌರವ ಶ್ರೇಣಿ 1 ಮಟ್ಟದ ಉನ್ನತ ಶ್ರೇಣಿಯನ್ನು ನೀಡಲಾಗುವುದು.

ಗೌರವ ಶ್ರೇಣಿಯನ್ನು ನೀಡಲು ಮುಖ್ಯ ಅರ್ಹತಾ ಮಾನದಂಡಗಳು, ನಿಯಮಗಳು ಮತ್ತು ಷರತ್ತುಗಳು ಕೆಳಗಿನಂತಿವೆ:

ಅರ್ಹತಾ ಮಾನದಂಡಗಳು

1. ನಿವೃತ್ತಿಯ ಸಮಯದಲ್ಲಿಸಿಬ್ಬಂದಿ ಎಲ್ಲಾ ಬಡ್ತಿ ಮಾನದಂಡಗಳನ್ನು ಪೂರೈಸಬೇಕು.

2. ಸಿಬ್ಬಂದಿ ಉತ್ತಮ ಮತ್ತು ಶುದ್ಧ ಸೇವಾ ದಾಖಲೆಯನ್ನು ಹೊಂದಿರಬೇಕು.

3. ಕಳೆದ 5 ವರ್ಷಗಳ ಸಿಬ್ಬಂದಿಯ ಎಪಿಎಆರ್‌ (ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿ) ಮೌಲ್ಯಮಾಪನವು ಕನಿಷ್ಠ ‘ಉತ್ತಮ’ ಆಗಿರಬೇಕು.

4. ಕಳೆದ 5 ವರ್ಷಗಳಲ್ಲಿ ಸಿಬ್ಬಂದಿಗೆ ಯಾವುದೇ ದೊಡ್ಡ ಶಿಕ್ಷೆಯಾಗಿರಬಾರದು.

5. ಸಿಬ್ಬಂದಿಯ ಸಮಗ್ರತೆ ಸಂಶಯಾತೀತವಾಗಿರಬೇಕು.

6. ಇಲಾಖಾ ವಿಚಾರಣೆ ಮತ್ತು ವಿಚಕ್ಷಣಾ (ಡಿಇ / ವಿಜಿಲೆನ್ಸ್‌) ಅನುಮೋದನೆ ಕಡ್ಡಾಯವಾಗಿದೆ.

ನಿಯಮಗಳು ಮತ್ತು ಷರತ್ತುಗಳು

1. ಸಂಬಂಧಪಟ್ಟ ಕಮಾಂಡಿಂಗ್‌ ಅಧಿಕಾರಿಯ ಶಿಫಾರಸಿನ ಆಧಾರದ ಮೇಲೆ ಗೌರವ ಶ್ರೇಣಿಯನ್ನು ನೀಡಲಾಗುವುದು.

2. ಸಿಬ್ಬಂದಿಯ ನಿವೃತ್ತಿಯ ದಿನದಂದು ಗೌರವ ಶ್ರೇಣಿಯನ್ನು ನೀಡಲಾಗುವುದು.

3. ಗೌರವ ಶ್ರೇಣಿಯ ಜೊತೆಗೆ ಯಾವುದೇ ಹಣಕಾಸಿನ ಅಥವಾ ಪಿಂಚಣಿ ಪ್ರಯೋಜನಗಳನ್ನು ಸ್ವೀಕರಿಸಲಾಗುವುದಿಲ್ಲ.

4. ನೀಡಬೇಕಾದ ಶ್ರೇಣಿಯು ಸಿಬ್ಬಂದಿ ಯಾವ ವರ್ಗಕ್ಕೆ ಸೇರಿದೆಯೋ ಅಲ್ಲಿ ಮಾತ್ರ ಗೌರವ ಶ್ರೇಣಿಯನ್ನು ನೀಡಲಾಗುತ್ತದೆ.

5. ಗೌರವ ಶ್ರೇಣಿಯನ್ನು ನೀಡುವುದರಿಂದ ಸಿಬ್ಬಂದಿಯ ಅಂತರ-ಸೇವಾ ಹಿರಿತನದ ಮೇಲೆ ಪರಿಣಾಮ ಬೀರುವುದಿಲ್ಲ.

ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌) ಮತ್ತು ಅಸ್ಸಾಂ ರೈಫಲ್ಸ್‌ (ಎಆರ್‌) ನ ಅರ್ಹ ಸಿಬ್ಬಂದಿಗೆ ಕೆಳಗಿನಂತೆ ಗೌರವ ಶ್ರೇಣಿಗಳನ್ನು ನೀಡಲಾಗುವುದು:
 

ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳು (ಸಿಎಪಿಎಫ್‌ಗಳು)

ಅಸ್ಸಾಂ ರೈಫಲ್ಸ್‌ (ಎಆರ್‌)

ನಿವೃತ್ತ ಶ್ರೇಣಿ

ಗೌರವ ಶ್ರೇಣಿ

ನಿವೃತ್ತ ಶ್ರೇಣಿ

ಗೌರವ ಶ್ರೇಣಿ

ಕಾನ್‌ಸ್ಟೇಬಲ್‌

ಹೆಡ್‌ ಕಾನ್‌ಸ್ಟೇಬಲ್‌

ರೈಫಲ್‌ ಮ್ಯಾನ್‌

ಹವಿಲ್ದಾರ್‌

ಹೆಡ್‌ ಕಾನ್‌ಸ್ಟೇಬಲ್‌

ಸಹಾಯಕ ಸಬ್‌ಇನ್‌ಸ್ಪೆಕ್ಟರ್‌

ಹವಿಲ್ದಾರ್‌

ವಾರಂಟ್‌ ಅಧಿಕಾರಿ

ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌

ಸಬ್‌ ಇನ್‌ಸ್ಪೆಕ್ಟರ್‌

ವಾರಂಟ್‌ ಅಧಿಕಾರಿ

ನಯೀಬ್‌ ಸುಬೇದಾರ್‌

ಸಬ್‌ ಇನ್‌ಸ್ಪೆಕ್ಟರ್‌

ಇನ್‌ಸ್ಪೆಕ್ಟರ್‌

ನಯೀಬ್‌ ಸುಬೇದಾರ್‌

ಸುಬೇದಾರ್‌

 

 

*****


(रिलीज़ आईडी: 2132498) आगंतुक पटल : 21
इस विज्ञप्ति को इन भाषाओं में पढ़ें: Khasi , English , Urdu , Marathi , हिन्दी , Assamese , Gujarati , Tamil , Malayalam