ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕರಾಳ ಅಥವಾ ವಂಚಕ ಮಾದರಿಗಳ ಕುರಿತು ಪಾಲುದಾರರ ಜೊತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರ ಸಭೆ ಆಯೋಜನೆ


ಆಹಾರ, ಔಷಧ, ಪ್ರಯಾಣ, ಸೌಂದರ್ಯವರ್ಧಕಗಳು, ಚಿಲ್ಲರೆ(ಬಿಡಿ) ವ್ಯಾಪಾರ, ಬಟ್ಟೆ, ಎಲೆಕ್ಟ್ರಾನಿಕ್ಸ್ ವಲಯದ ಪ್ರಮುಖ ಇ-ಕಾಮರ್ಸ್ ಕಂಪನಿಗಳು ಸಭೆಯಲ್ಲಿ ಭಾಗವಹಿಸಲಿವೆ

Posted On: 26 MAY 2025 1:59PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು 2025 ಮೇ 28ರಂದು ನವದೆಹಲಿಯಲ್ಲಿ ನಡೆಯುವ ಉನ್ನತ ಮಟ್ಟದ ಪಾಲುದಾರರ ಸಭೆಯಲ್ಲಿ ಕರಾಳ ಅಥವಾ ವಂಚಕ ಮಾದರಿ(ಉತ್ಪನ್ನ)ಗಳ ಕುರಿತ ಗ್ರಾಹಕರ ಕಳವಳಗಳನ್ನು ಪರಿಹರಿಸಲಿದ್ದಾರೆ. ಹೆಚ್ಚುತ್ತಿರುವ ವಂಚಕ ಉತ್ಪನ್ನಗಳ ಸಮಸ್ಯೆಗಳನ್ನು ನಿಭಾಯಿಸಲು ಹೆಚ್ಚು ಪರಿಣಾಮಕಾರಿ ಪರಿಹಾರಗಳನ್ನು ಅನ್ವೇಷಿಸುವ ಗುರಿಯನ್ನು ಈ ಸಭೆ ಹೊಂದಿದೆ.

ಆಹಾರ, ಪ್ರಯಾಣ, ಸೌಂದರ್ಯವರ್ಧಕಗಳು, ಔಷಧ, ಚಿಲ್ಲರೆ ವ್ಯಾಪಾರ, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಪ್ರಮುಖ ಇ-ಕಾಮರ್ಸ್ ಕಂಪನಿಗಳು ಈ ಸಭೆಯಲ್ಲಿ ಭಾಗವಹಿಸಲಿವೆ. ಅಮೆಜಾನ್, ಫ್ಲಿಪ್ಕಾರ್ಟ್,  1ಎಮ್ ಜಿ.ಕಾಮ್(1mg.com), ಆಪಲ್, ಬಿಗ್ ಬಾಸ್ಕೆಟ್, ಮೀಶೋ, ಮೆಟಾ, ಮೇಕ್ ‌ ಮೈ ಟ್ರಿಪ್, ಪೇಟಿಎಂ, ಓಲಾ, ರಿಲಯನ್ಸ್ ರಿಟೇಲ್ ಲಿಮಿಟೆಡ್, ಸ್ವಿಗ್ಗಿ, ಜೊಮಾಟೊ, ಯಾತ್ರಾ, ಉಬರ್, ಟಾಟಾ, ಈಸ್ ಮೈ  ಟ್ರಿಪ್, ಕ್ಲಿಯರ್ ಟ್ರಿಪ್, ಇಂಡಿಯಾಮಾರ್ಟ್, ಇಂಡಿಗೊ ಏರ್ ಲೈನ್ಸ್, ಕ್ಸಿಗೊ, ಜಸ್ಟ್ ಡಯಲ್, ಮೆಡಿಕಾ ಬಜಾರ್, ನೆಟ್ ಮೆಡ್ಸ್, ಒಎನ್ ಡಿಸಿ, ಥಾಮಸ್ ಕುಕ್ ಮತ್ತು ವಾಟ್ಸಾಪ್ ಸೇರಿದಂತೆ ಪ್ರಮುಖ ಪಾಲುದಾರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಗ್ರಾಹಕರ ಹಕ್ಕುಗಳನ್ನು ಮುನ್ನಡೆಸುವಲ್ಲಿ ಮತ್ತು ಪಾರದರ್ಶಕ, ವಿಶ್ವಾಸಾರ್ಹ ಮಾರುಕಟ್ಟೆಯನ್ನು ಖಚಿತಪಡಿಸಲು ಉದ್ಯಮದ ಭಾಗವಹಿಸುವಿಕೆ ನಿರ್ಣಾಯಕವಾಗಿದೆ ಎಂಬ ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ನಂಬಿಕೆಯನ್ನು ಈ ಪಟ್ಟಿಯು ಬಲಪಡಿಸುತ್ತದೆ.

ಪ್ರಮುಖ ಕೈಗಾರಿಕಾ ಸಂಸ್ಥೆಗಳು, ಹಾಗೆಯೇ ಸ್ವಯಂಸೇವಾ ಗ್ರಾಹಕ ಸಂಸ್ಥೆಗಳು (ವಿಸಿಒಗಳು) ಮತ್ತು ಪ್ರಮುಖ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು (ಎನ್ ಎಲ್ ಯುಗಳು) ಸಹ ಈ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿವೆ. ಅವರ ಒಳನೋಟಗಳು, ಸಂಶೋಧನೆ ಮತ್ತು ನಿಯಂತ್ರಕ ದೃಷ್ಟಿಕೋನಗಳು ದೃಢವಾದ ಮತ್ತು ಜಾರಿಗೊಳಿಸಬಹುದಾದ ಪರಿಹಾರಗಳನ್ನು ರೂಪಿಸುವಲ್ಲಿ ಅಮೂಲ್ಯವಾದ ಸಲಹೆಗಳನ್ನು ಒದಗಿಸುತ್ತವೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಗ್ರಾಹಕ ವ್ಯವಹಾರಗಳ ಇಲಾಖೆಯು ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಮತ್ತು ನ್ಯಾಯಯುತ ವ್ಯಾಪಾರ ಪದ್ಧತಿಗಳನ್ನು ಉತ್ತೇಜಿಸುವ ಅಚಲ ಬದ್ಧತೆಯಲ್ಲಿ, ಕರಾಳ ಅಥವಾ ವಂಚಕ ಮಾದರಿ(ಡಾರ್ಕ್ ಪ್ಯಾಟರ್ನ್)ಗಳ ಮೋಸದ ವ್ಯಾಪಾರ ಪದ್ಧತಿಯನ್ನು ನಿಗ್ರಹಿಸಲು ಪೂರ್ವಭಾವಿಯಾಗಿ ಕೆಲಸ ಮಾಡುತ್ತಿದೆ. ಗ್ರಾಹಕರಿಗೆ ಅನಿರೀಕ್ಷಿತ ಆಯ್ಕೆಗಳನ್ನು ಮಾಡುವಂತೆ ದಾರಿ ತಪ್ಪಿಸುವ ಅಥವಾ ಕುಶಲತೆಯಿಂದ ನಿರ್ವಹಿಸುವ ಮೋಸಗೊಳಿಸುವ ಬಳಕೆದಾರ ಇಂಟರ್‌ಫೇಸ್‌ ವಿನ್ಯಾಸಗಳನ್ನು ನಿಯಂತ್ರಿಸವುದು ಇದರ ಉದ್ದೇಶವಾಗಿದೆ. ಈ ವಂಚನೆಯ ವ್ಯಾಪಾರ ಪದ್ಧತಿಗಳು ಗ್ರಾಹಕರ ನಂಬಿಕೆಯನ್ನು ನಾಶ ಮಾಡುತ್ತವೆ, ನ್ಯಾಯಯುತ ಮಾರುಕಟ್ಟೆ ಚಲನಶೀಲತೆಯನ್ನು ವಿರೂಪಗೊಳಿಸುತ್ತವೆ ಮತ್ತು ಡಿಜಿಟಲ್ ವಾಣಿಜ್ಯದ ಸಮಗ್ರತೆಗೆ ಗಂಭೀರ ಬೆದರಿಕೆ ಒಡ್ಡುತ್ತಿವೆ.

ಕರಾಳ ಅಥವಾ ವಂಚಕ ಮಾದರಿ(ಡಾರ್ಕ್ ಪ್ಯಾಟರ್ನ್)ಗಳನ್ನು ಎದುರಿಸಲು ಇಲಾಖೆ ಹಲವಾರು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಪಾಲುದಾರರ ವ್ಯಾಪಕ ಸಮಾಲೋಚನೆಯ ನಂತರ, ಇಲಾಖೆಯು 2023 ನವೆಂಬರ್ 30ರಂದು ವಂಚಕ ಮಾದರಿಗಳ ತಡೆಗಟ್ಟುವಿಕೆಯ ಕುರಿತು ಸಮಗ್ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು, ಇದರಲ್ಲಿ ತುರ್ತಾಗಿ ತಪ್ಪು ಹೇಳುವುದು(ಫಾಲ್ಸ್ ಅರ್ಜೆನ್ಸಿ), ಮೋಸದ ವ್ಯಾಪಾರ ಪದ್ಧತಿ(ಬಾಸ್ಕೆಟ್ ಸ್ನೀಕಿಂಗ್), ಮೋಸದ ಪರ್ಯಾಯ ಆಯ್ಕೆ(ಕನ್ಫರ್ಮ್ ಶೇಮಿಂಗ್), ಬಲವಂತದ ಖರೀದಿ ಕ್ರಮ(ಫೋರ್ಸ್ಡ್ ಆಕ್ಷನ್), ಮೋಸದ ಚಂದಾರರಿಕೆಗೆ ಒಡ್ಡುವುದು(ಸಬ್ಸ್ ಕ್ರಿಶ್ಚನ್ ಟ್ರ್ಯಾಪ್), ಇಂಟರ್‌ಫೇಸ್ ಹಸ್ತಕ್ಷೇಪ, (ಉತ್ಪನ್ನಗಳ ಅಕ್ರಮ ಜಾಹೀರಾತು(ಬೈಟ್ ಮತ್ತು ಸ್ವಿಚ್), ಉತ್ಪನ್ನಗಳ ದರ ಇಳಿಸಿ, ಹೆಚ್ಚಿಸುವ ವಂಚನೆ(ಡ್ರಿಪ್ ಪ್ರೈಸಿಂಗ್), ಮರೆಮಾಚಿದ(ಡಿಸ್ಗೈಸ್ಡ್) ಜಾಹೀರಾತು, ಅತೃಪ್ತ ಉತ್ಪನ್ನಗಳ ಕುರಿತು ನಿರಂತರ ಅಸಮಾಧಾನ(ನಾಗಿಂಗ್), ದಾರಿ ತಪ್ಪಿಸುವ ಪ್ರಶ್ನೆಗಳು(ಟ್ರಿಕ್ ಪ್ರಶ್ನೆ), ಚಂದಾದಾರಿಕೆ ಆಧರಿತ(ಸಾಸ್) ಬಿಲ್ಲಿಂಗ್ ಪದ್ಧತಿ ಮತ್ತು ವಂಚನೆಯ ಮಾಲ್ ವೇರ್ ಗಳು ಸೇರಿದಂತೆ ಇಂಕಾ ನರ್ಸ್ ನಲ್ಲಿ 13 ಪ್ರಮುಖ ವಂಚಕ ಮಾದರಿಗಳನ್ನು ಗುರುತಿಸಲಾಗಿದೆ.

ಇಲಾಖೆಯ ಪ್ರವರ್ತಕ ಉಪಕ್ರಮಗಳಲ್ಲಿ ಡಾರ್ಕ್ ಪ್ಯಾಟರ್ನ್ಸ್ ಬಸ್ಟರ್ ಹ್ಯಾಕಥಾನ್ 2023 ಕೂಡ ಒಂದಾಗಿದ್ದು, ಇದನ್ನು ಐಐಟಿ(ಭುವನೇಶ್ವರ) ಸಹಯೋಗದೊಂದಿಗೆ 2023 ಅಕ್ಟೋಬರ್ 26ರಂದು ಪ್ರಾರಂಭಿಸಲಾಯಿತು. ನಾವೀನ್ಯತೆಯ ಸವಾಲಾಗಿ  ರಾಷ್ಟ್ರವ್ಯಾಪಿ ಹರಡಿರುವ ವಂಚಕ ಮಾದರಿಗಳನ್ನು ಪತ್ತೆ ಹಚ್ಚಲು ಮತ್ತು ತಾಂತ್ರಿಕ ಪರಿಹಾರಗಳಾದ ಅಪ್ಲಿಕೇಶನ್ ಗಳು, ಬ್ರೌಸರ್ ವಿಸ್ತರಣೆಗಳು ಮತ್ತು ಕೃತಕ ಬುದ್ಧಿಮತ್ತೆ ಪರಿಕರಗಳನ್ನು ವಿನ್ಯಾಸಗೊಳಿಸುವಂತೆ ಐಐಟಿಗಳು, ಎನ್ಐಟಿಗಳು ಮತ್ತು ಇತರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ತಜ್ಞರನ್ನು ಆಹ್ವಾನಿಸಿತು. ಹ್ಯಾಕಥಾನ್ ನ ಫಲಿತಾಂಶಗಳ ಮೇಲೆ ಕಾರ್ಯ ನಿರ್ವಹಿಸುತ್ತಾ, ಇಲಾಖೆಯು ಐಐಟಿ(ಭುವನೇಶ್ವರ) ಸಹಯೋಗದೊಂದಿಗೆ 3 ಪ್ರಬಲ ಗ್ರಾಹಕ ಸಂರಕ್ಷಣಾ ಅಪ್ಲಿಕೇಶನ್  ಗಳನ್ನು ಅಭಿವೃದ್ಧಿಪಡಿಸಿದೆ, ಇವುಗಳನ್ನು 2024ರ ರಾಷ್ಟ್ರೀಯ ಗ್ರಾಹಕರ ದಿನದಂದು ಪ್ರಾರಂಭಿಸಲಾಯಿತು.

ಇಲಾಖೆಯು ವ್ಯಾಪಕ ಗ್ರಾಹಕ ಜಾಗೃತಿ ಅಭಿಯಾನಗಳನ್ನು ನಡೆಸಿದೆ. ಅಲ್ಲದೆ, ವಂಚನೆಯ ಅಭ್ಯಾಸಗಳನ್ನು ಗುರುತಿಸಲು ಮತ್ತು ನಿರುತ್ಸಾಹಗೊಳಿಸಲು ಇ-ಕಾಮರ್ಸ್ ವೇದಿಕೆಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಿದೆ. ಇ-ಕಾಮರ್ಸ್ ನಲ್ಲಿ ಗ್ರಾಹಕ ರಕ್ಷಣೆಗೆ ಸಮಗ್ರ ಕಾರ್ಯ ವಿಧಾನವನ್ನು ಖಚಿತಪಡಿಸಿಕೊಳ್ಳಲು ಇಲಾಖೆಯು ಇ-ಕಾಮರ್ಸ್ ವೇದಿಕೆಗಳು, ನೀತಿ ಚಿಂತಕರ ಚಾವಡಿಗಳು ಮತ್ತು ಗ್ರಾಹಕ ಸಂಸ್ಥೆಗಳೊಂದಿಗೆ ನಿರಂತರ ಸಂವಾದದಲ್ಲಿ ತೊಡಗಿಸಿಕೊಂಡಿದೆ.

ಗ್ರಾಹಕರ ರಕ್ಷಣೆ ಮತ್ತು ವ್ಯವಹಾರ ಮಾಡುವ ಸುಲಭತೆ ಪರಸ್ಪರ ಪ್ರತ್ಯೇಕವಲ್ಲ, ಬದಲಾಗಿ, ಅವು ಪೂರಕ ಗುರಿಗಳಾಗಿವೆ ಎಂದು ಇಲಾಖೆ ಒತ್ತಿಹೇಳುತ್ತಿದೆ. ಈ ಪಾಲುದಾರರ ಸಭೆಯು ಆಡಳಿತಕ್ಕೆ ಇಲಾಖೆಯ ಪ್ರಗತಿಪರ ಭಾಗವಹಿಸುವಿಕೆಯ ವಿಧಾನವನ್ನು ಉದಾಹರಣೆಯಾಗಿ ತೋರಿಸುತ್ತದೆ. ಇದು ವ್ಯವಹಾರಗಳಿಗೆ ಎಲ್ಲರಿಗೂ  ಸಮಾನ ಅವಕಾಶ ಉತ್ತೇಜಿಸುವಾಗ ನಿಯಂತ್ರಕ ಪರಿಸರ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ.

ಇಂತಹ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು ಬೆಳೆಸುವ ಮೂಲಕ, ಗ್ರಾಹಕ ವ್ಯವಹಾರಗಳ ಇಲಾಖೆಯು, ಅತ್ಯುನ್ನತವಾದ ಗ್ರಾಹಕರ ಸುರಕ್ಷತೆ ಮತ್ತು ಡಿಜಿಟಲ್ ಮಾರುಕಟ್ಟೆಗಳು ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ನಿಯಂತ್ರಿಸಲ್ಪಡುವ ಭವಿಷ್ಯವನ್ನು ಮುನ್ನಡೆಸುತ್ತಿದೆ.

 

*****


(Release ID: 2131312)