ಪ್ರಧಾನ ಮಂತ್ರಿಯವರ ಕಛೇರಿ
ಡಾ. ಎಂ.ಆರ್. ಶ್ರೀನಿವಾಸನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
20 MAY 2025 1:47PM by PIB Bengaluru
ಭಾರತದ ಪರಮಾಣು ಇಂಧನ ಕಾರ್ಯಕ್ರಮದ ಪ್ರಮುಖ ರೂವಾರಿ ಡಾ. ಎಂ.ಆರ್. ಶ್ರೀನಿವಾಸನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಾಪ ಸೂಚಿಸಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಭಾರತದ ಪರಮಾಣು ಇಂಧನ ಕಾರ್ಯಕ್ರಮದ ಪ್ರಮುಖ ರೂವಾರಿ ಡಾ. ಎಂ.ಆರ್. ಶ್ರೀನಿವಾಸನ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅತ್ಯಂತ ಮಹತ್ವದ ಪರಮಾಣು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಅದು ಇಂಧನ ವಲಯದಲ್ಲಿ ದೇಶ ಸ್ವಾವಲಂಬಿಯಾಗುವಲ್ಲಿ ಅಡಿಪಾಯವಾಗಿದೆ. ಪರಮಾಣು ಇಂಧನ ಆಯೋಗದ ಪ್ರೇರಣಾದಾಯಕ ನಾಯಕತ್ವಕ್ಕಾಗಿ ಅವರನ್ನು ಸ್ಮರಿಸಲಾಗುವುದು. ವೈಜ್ಞಾನಿಕ ಪ್ರಗತಿಯನ್ನು ಮುನ್ನಡೆಸಿದ್ದಕ್ಕಾಗಿ ಮತ್ತು ಅನೇಕ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಭಾರತ ಅವರಿಗೆ ಸದಾ ಚಿರಋಣಿಯಾಗಿರಲಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ವರ್ಗದವರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಓಂ ಶಾಂತಿ.”
*****
(Release ID: 2129892)
Read this release in:
Odia
,
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam