ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಜೋ ಬಿಡೆನ್ ಅವರು ಶೀಘ್ರವಾಗಿ ಗುಣಮುಖರಾಗಲಿ ಮತ್ತು ಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ ಪ್ರಧಾನಮಂತ್ರಿ

Posted On: 19 MAY 2025 2:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಶ್ರೀ ಜೋ ಬಿಡನ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಅವರು ಶೀಘ್ರವಾಗಿ ಮತ್ತು ಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. 

"ನಮ್ಮ ಆಲೋಚನೆಗಳು ಡಾ. ಜೋ ಬಿಡೆನ್ ಮತ್ತು ಅವರ ಕುಟುಂಬದೊಂದಿಗೆ ಇವೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ಎಕ್ಸ್ ತಾಣದ ತಮ್ಮ ಖಾತೆಯಲ್ಲಿ ಈ ರೀತಿಯ ಸಂದೇಶ ತಿಳಿಸಿದ್ದಾರೆ:

"@JoeBiden ಅವರ ಆರೋಗ್ಯದ ಬಗ್ಗೆ ಅರಿಯಲು ಮನದಾಳದಲ್ಲಿ ತೀವ್ರವಾದ ಕಾಳಜಿಯಿದೆ. ಶೀಘ್ರ ಮತ್ತು ಪೂರ್ಣ ಚೇತರಿಕೆಗಾಗಿ ಅವರಿಗೆ ನಮ್ಮ ಶುಭ ಹಾರೈಕೆಗಳನ್ನು ತಿಳಿಸಿ ಬಯಸುತ್ತೇನೆ. ನಮ್ಮ ಆಲೋಚನೆಗಳು ಡಾ. ಜೋ ಬಿಡೆನ್ ಮತ್ತು ಅವರ ಕುಟುಂಬದೊಂದಿಗೆ ಇವೆ."

 

 

*****


(Release ID: 2129845)