ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಹೊಸ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಪೋರ್ಟಲ್ ಉದ್ಘಾಟಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ತನ್ನ ಒಸಿಐ ಕಾರ್ಡ್ ಹೊಂದಿರುವ ನಾಗರಿಕರಿಗೆ ವಿಶ್ವ ದರ್ಜೆಯ ವಲಸೆ ಸೌಲಭ್ಯಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ
ವಿದೇಶಿ ನಾಗರಿಕರ ನೋಂದಣಿಯನ್ನು ಸುಗಮಗೊಳಿಸಲು ನವೀಕೃತ ಬಳಕೆದಾರ ಇಂಟರ್ಫೇಸ್ ನೊಂದಿಗೆ ಪರಿಷ್ಕೃತ ಒಸಿಐ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ
ಭಾರತೀಯ ಮೂಲದ ನಾಗರಿಕರು ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಭಾರತಕ್ಕೆ ಬಂದಾಗ ಅಥವಾ ಇಲ್ಲಿ ವಾಸಿಸುವಾಗ ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನಾವು ಖಚಿತಪಡಿಸಿಕೊಳ್ಳಬೇಕು
ಕಳೆದ ದಶಕದಲ್ಲಿ ಗಮನಾರ್ಹ ತಾಂತ್ರಿಕ ಪ್ರಗತಿಗಳು ಮತ್ತು ಒಸಿಐ ಕಾರ್ಡ್ ಹೊಂದಿರುವವರಿಂದ ಪಡೆದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ಅಸ್ತಿತ್ವದಲ್ಲಿರುವ ಮಿತಿಗಳನ್ನು ಪರಿಹರಿಸಲು ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಪರಿಷ್ಕೃತ ಒಸಿಐ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ
ಹೊಸ ಪೋರ್ಟಲ್ ಅಸ್ತಿತ್ವದಲ್ಲಿರುವ 5 ಮಿಲಿಯನ್ ಗಿಂತಲೂ ಹೆಚ್ಚು ಒಸಿಐ ಕಾರ್ಡ್ ಹೊಂದಿರುವವರು ಮತ್ತು ಹೊಸ ಬಳಕೆದಾರರಿಗೆ ವರ್ಧಿತ ಕಾರ್ಯಕ್ಷಮತೆ, ಸುಧಾರಿತ ಭದ್ರತೆ ಮತ್ತು ಬಳಕೆದಾರ ಸ್ನೇಹಿ ಅನುಭವವನ್ನು ಒದಗಿಸುತ್ತದೆ
ಪರಿಷ್ಕೃತ ಒಸಿಐ ಪೋರ್ಟಲ್ ಅನ್ನು ಅಸ್ತಿತ್ವದಲ್ಲಿರುವ https://ociservices.gov.in ಯು ಆರ್ ಎಲ್ ನಲ್ಲಿ ಪ್ರವೇಶಿಸಬಹುದು
Posted On:
19 MAY 2025 6:34PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಹೊಸ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಪೋರ್ಟಲ್ ಅನ್ನು ಉದ್ಘಾಟಿಸಿದರು. ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕರು ಮತ್ತು ಗೃಹ ಸಚಿವಾಲಯದ (ಎಂ ಎಚ್ ಎ) ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ತನ್ನ ಒಸಿಐ ಕಾರ್ಡ್ ಹೊಂದಿರುವ ನಾಗರಿಕರಿಗೆ ವಿಶ್ವ ದರ್ಜೆಯ ವಲಸೆ ಸೌಲಭ್ಯಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಸಾಗರೋತ್ತರ ನಾಗರಿಕರಿಗೆ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ನವೀಕರಿಸಿದ ಬಳಕೆದಾರ ಇಂಟರ್ಫೇಸ್ ನೊಂದಿಗೆ ಪರಿಷ್ಕೃತ ಒಸಿಐ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಅನೇಕ ಭಾರತೀಯ ಮೂಲದ ನಾಗರಿಕರು ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ವಾಸಿಸುತ್ತಿದ್ದಾರೆ, ಅವರು ಭಾರತಕ್ಕೆ ಭೇಟಿ ನೀಡುವಾಗ ಅಥವಾ ಇಲ್ಲಿಯೇ ಉಳಿದಾಗ ಅವರಿಗೆ ಯಾವುದೇ ಅನಾನುಕೂಲತೆ ಎದುರಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ಶಾ ಒತ್ತಿ ಹೇಳಿದರು.
ಹೊಸ ಪೋರ್ಟಲ್ 5 ಮಿಲಿಯನ್ ಗಿಂತಲೂ ಹೆಚ್ಚು ಒಸಿಐ ಕಾರ್ಡ್ ದಾರರು ಮತ್ತು ಹೊಸ ಬಳಕೆದಾರರಿಗೆ ವರ್ಧಿತ ಕಾರ್ಯಕ್ಷಮತೆ, ಸುಧಾರಿತ ಭದ್ರತೆ ಮತ್ತು ಬಳಕೆದಾರ ಸ್ನೇಹಿ ಅನುಭವವನ್ನು ಒದಗಿಸುತ್ತದೆ. ಹೊಸ ಒಸಿಐ ಪೋರ್ಟಲ್ ಅಸ್ತಿತ್ವದಲ್ಲಿರುವ https://ociservices.gov.in. ಯು ಆರ್ ಎಲ್ ನಲ್ಲಿ ಲಭ್ಯವಿದೆ.
1955 ರ ಪೌರತ್ವ ಕಾಯ್ದೆಗೆ 2005 ರಲ್ಲಿ ತಿದ್ದುಪಡಿ ತರುವ ಮೂಲಕ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಯೋಜನೆಯನ್ನು ಪರಿಚಯಿಸಲಾಯಿತು. ಈ ಯೋಜನೆಯು ಭಾರತೀಯ ಮೂಲದ ವ್ಯಕ್ತಿಗಳು ಜನವರಿ 26, 1950 ರಂದು ಅಥವಾ ನಂತರ ಭಾರತದ ನಾಗರಿಕರಾಗಿದ್ದರೆ ಅಥವಾ ಆ ದಿನಾಂಕದಂದು ನಾಗರಿಕರಾಗಲು ಅರ್ಹರಾಗಿದ್ದರೆ ಭಾರತದ ಸಾಗರೋತ್ತರ ನಾಗರಿಕರನ್ನಾಗಿ ನೋಂದಾಯಿಸಲು ಅವಕಾಶ ನೀಡುತ್ತದೆ. ಆದಾಗ್ಯೂ, ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ನಾಗರಿಕರಾಗಿರುವ ವ್ಯಕ್ತಿಗಳು ಅಥವಾ ಅವರ ಪೋಷಕರು, ಅಜ್ಜ-ಅಜ್ಜಿಯರು ಅಥವಾ ಮುತ್ತಜ್ಜ - ಮುತ್ತಜ್ಜಿಯರು ಆ ದೇಶಗಳ ನಾಗರಿಕರಾಗಿದ್ದರೆ ಅವರು ಅರ್ಹರಲ್ಲ.
ಅಸ್ತಿತ್ವದಲ್ಲಿರುವ ಒಸಿಐ ಸೇವೆಗಳ ಪೋರ್ಟಲ್ ಅನ್ನು 2013 ರಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು ಪ್ರಸ್ತುತ ವಿದೇಶದಲ್ಲಿರುವ 180 ಕ್ಕೂ ಹೆಚ್ಚು ಭಾರತೀಯ ಮಿಷನ್ ಗಳು ಹಾಗೂ 12 ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗಳಲ್ಲಿ (FRRO) ಕಾರ್ಯನಿರ್ವಹಿಸುತ್ತಿದೆ, ದಿನಕ್ಕೆ ಸುಮಾರು 2000 ಅರ್ಜಿಗಳನ್ನು ಪ್ರಕ್ರಿಯೆಗೊಳಿಸುತ್ತಿದೆ. ಕಳೆದ ದಶಕದಲ್ಲಿ ಗಮನಾರ್ಹ ತಾಂತ್ರಿಕ ಪ್ರಗತಿಗಳು ಮತ್ತು ಒಸಿಐ ಕಾರ್ಡ್ ದಾರರಿಂದ ಪಡೆದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ಅಸ್ತಿತ್ವದಲ್ಲಿರುವ ಮಿತಿಗಳನ್ನು ಪರಿಹರಿಸಲು ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಪರಿಷ್ಕರಿಸಿದ ಒಸಿಐ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಹೊಸ ಒಸಿಐ ಪೋರ್ಟಲ್ ಹಲವಾರು ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳನ್ನು ಹೊಂದಿದೆ, ಅವುಗಳೆಂದರೆ:
- ಬಳಕೆದಾರರ ಸೈನ್-ಅಪ್ ಮತ್ತು ನೋಂದಣಿ ಮೆನುವಿನ ಪ್ರತ್ಯೇಕತೆ
- ನೋಂದಣಿ ನಮೂನೆಗಳಲ್ಲಿ ಬಳಕೆದಾರರ ಪ್ರೊಫೈಲ್ ವಿವರಗಳ ಸ್ವಯಂ ಭರ್ತಿ
- ಪೂರ್ಣಗೊಂಡ ಮತ್ತು ಭಾಗಶಃ ಭರ್ತಿ ಮಾಡಿದ ಅರ್ಜಿಗಳನ್ನು ಪ್ರದರ್ಶಿಸುವ ಡ್ಯಾಶ್‌ಬೋರ್ಡ್
- FRRO ಗಳಲ್ಲಿ ಸಲ್ಲಿಸಿದವರಿಗೆ ಸಂಯೋಜಿತ ಆನ್‌ಲೈನ್ ಪಾವತಿ ಗೇಟ್‌ವೇ
- ಅರ್ಜಿ ಹಂತಗಳಲ್ಲಿ ತಡೆರಹಿತ ನ್ಯಾವಿಗೇಷನ್
- ಅರ್ಜಿ ಪ್ರಕಾರವನ್ನು ಆಧರಿಸಿ ಅಪ್‌ಲೋಡ್ ಮಾಡಲು ಅಗತ್ಯವಾದ ದಾಖಲೆಗಳ ವರ್ಗೀಕರಣ
- ಸಲ್ಲಿಸುವ ಮೊದಲು ಯಾವುದೇ ಹಂತದಲ್ಲಿ ಅರ್ಜಿದಾರರಿಗೆ ತಿದ್ದುಪಡಿಯ ಆಯ್ಕೆ
- ಪೋರ್ಟಲ್ ನಲ್ಲಿ ಸಂಯೋಜಿತ ಎಫ್ ಎ ಕ್ಯೂ
- ಅಂತಿಮ ಸಲ್ಲಿಕೆಯ ಮೊದಲು ಮಾಹಿತಿಯನ್ನು ಪರಿಶೀಲಿಸಲು ಅರ್ಜಿದಾರರಿಗೆ ಜ್ಞಾಪನೆ
- ಆಯ್ದ ಅರ್ಜಿ ಪ್ರಕಾರವನ್ನು ಆಧರಿಸಿ ಅರ್ಹತಾ ಮಾನದಂಡಗಳು ಮತ್ತು ಅಗತ್ಯ ದಾಖಲೆಗಳ ಪ್ರದರ್ಶನ
- ಅರ್ಜಿದಾರರ ಫೋಟೋಗಳು ಮತ್ತು ಸಹಿಗಳನ್ನು ಅಪ್‌ಲೋಡ್ ಮಾಡಲು ಅಂತರ್ನಿರ್ಮಿತ ಇಮೇಜ್ ಕ್ರಾಪಿಂಗ್ ಸಾಧನ
ತಾಂತ್ರಿಕ ವೈಶಿಷ್ಟ್ಯಗಳು:
- ಮೂಲಸೌಕರ್ಯ ಆಧುನೀಕರಣ
- ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಅಂದರೆ ರೆಡ್ ಹ್ಯಾಟ್ 9 ನಲ್ಲಿ ಬಹು ವೆಬ್ ಸರ್ವರ್ ಗಳು ಮತ್ತು ಲೋಡ್ ಬ್ಯಾಲೆನ್ಸರ್ ನೊಂದಿಗೆ ಹೆಚ್ಚಿನ ಲಭ್ಯತೆ.
- ಸಾಫ್ಟ್‌ವೇರ್ ಮತ್ತು ಪ್ಲಾಟ್‌ಫಾರ್ಮ್ ಅಪ್‌ಗ್ರೇಡ್ ಗಳು
- ಫ್ರೇಮ್‌ವರ್ಕ್ ಅಪ್‌ಡೇಟ್ ಗಳು: ಬಹು ಸಾಧನ ಹೊಂದಾಣಿಕೆಗಾಗಿ ಜೆಡಿಕೆ, ಸ್ಟ್ರಟ್ಸ್ 2.5.30 ಮತ್ತು ಬೂಟ್ ಸ್ಟ್ರ್ಯಾಪ್ 5.3.0 ನ ಇತ್ತೀಚಿನ ಆವೃತ್ತಿಗಳಿಗೆ ಪರಿವರ್ತನೆ.
- ಹೆಚ್ಚಿನ ಭದ್ರತಾ ಶಿಷ್ಟಾಚಾರಗಳು
- ಎಸ್ ಎಸ್ ಎಲ್/ಟಿ ಎಲ್ ಎಸ್ ಎನ್‌ಕ್ರಿಪ್ಶನ್: ಡೇಟಾ ಗೌಪ್ಯತೆ ಮತ್ತು ರಕ್ಷಣೆಯನ್ನು ಖಚಿತಪಡಿಸುತ್ತದೆ
- ನಿಯಮಿತ ನುಗ್ಗುವಿಕೆ ಪರೀಕ್ಷೆ ಮತ್ತು ಪ್ಯಾಚ್ ನಿರ್ವಹಣೆ
- ಪ್ರಕ್ರಿಯೆ ಆಟೋಮೇಷನ್ ಏಕೀಕರಣ
- ಪ್ರಕ್ರಿಯೆ ಆಟೋಮೇಷನ್: ಬ್ಯಾಕೆಂಡ್ ಕಾರ್ಯಾಚರಣೆಗಳು ಮತ್ತು ಕೆಲಸದ ಹರಿವುಗಳನ್ನು ಸುವ್ಯವಸ್ಥಿತಗೊಳಿಸುವುದು.
- ಡೇಟಾ ನಿರ್ವಹಣೆ
- ಡೇಟಾ ಸಂಗ್ರಹಣೆ ಮತ್ತು ಪ್ರವೇಶವನ್ನು ಕೇಂದ್ರೀಕರಿಸುವುದು ಮತ್ತು ಅತ್ಯುತ್ತಮಗೊಳಿಸುವುದು.
- ಬಳಕೆದಾರ ಅನುಭವ (UX) ವರ್ಧನೆಗಳು
- ಪ್ರತಿಕ್ರಿಯಾತ್ಮಕ ವೆಬ್ ವಿನ್ಯಾಸ: ಎಲ್ಲಾ ಸಾಧನಗಳಿಗೆ ಹೊಂದುವಂತೆ ಮಾಡಲಾಗಿದೆ.
- ವೇಗವಾದ ಲೋಡ್ ಸಮಯಗಳು ಮತ್ತು ಮೊಬೈಲ್ ಆಪ್ಟಿಮೈಸೇಶನ್
- ಸೈಬರ್ ಭದ್ರತಾ ವರ್ಧನೆಗಳು
- ಮಲ್ಟಿ-ಅಂಶಗಳ ದೃಢೀಕರಣ (ಎಂ ಎಫ್ ಎ)
- ಸರ್ವರ್ ಗಟ್ಟಿಯಾಗಿಸುವಿಕೆ ಮತ್ತು ಇತ್ತೀಚಿನ ಎವಿ ಏಕೀಕರಣ.
*****
(Release ID: 2129756)
Read this release in:
English
,
Urdu
,
Marathi
,
Hindi
,
Assamese
,
Punjabi
,
Gujarati
,
Odia
,
Tamil
,
Telugu
,
Malayalam